ಪವನ್ ಕಲ್ಯಾಣ್ ಅನ್ನ ಕೊನಿಡೇಲಾ 13 ವರ್ಷಗಳ ದಾಂಪತ್ಯ ಅಂತ್ಯ, ಡಿವೋರ್ಸ್‌ಗೆ ನಿಜವಾದ ಕಾರಣಗಳೇನು?

Published : Nov 10, 2026, 11:11 AM ISTUpdated : Nov 10, 2026, 11:30 AM IST
Pawan Kalyan and Anna Konidela divorce

ಸಾರಾಂಶ

ಆಂಧ್ರಪ್ರದೇಶದ ಡಿಸಿಎಂ ಪವನ್ ಕಲ್ಯಾಣ್ ಹಾಗೂ ಪತ್ನಿ ಅನ್ನಾ ಲೆಜ್ನೆವಾ ದಾಂಪತ್ಯ ಕೊನೆಗೊಳಿಸುವುದಾಗಿ ಜಂಟಿಯಾಗಿ ಘೋಷಿಸಿದ್ದು, ಅಭಿಮಾನಿಗಳಲ್ಲಿ ಆಘಾತ ಮೂಡಿಸಿದೆ. ಅನ್ಯೋನ್ಯವಾಗಿದ್ದ ಈ ದಂಪತಿ ಏಕಾಏಕಿ ವಿಚ್ಛೇದನದ ನಿರ್ಧಾರಕ್ಕೆ ಬಂದಿರುವುದು ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

ಪವನ್ ಕಲ್ಯಾಣ್(Pawan Kalyan) ಅನ್ನ ಕೊನಿಡೇಲಾ(Anna Konidela) ಅವರ ವಿಚ್ಛೇದನ ನಿರ್ಧಾರ ಹೊರಬಿಳುತ್ತಿದ್ದಂತೆ ಟಾಲಿವುಡ್‌ನಲ್ಲಿ ಬಿರುಗಾಳಿ ಎಬ್ಬಿಸಿದೆ. ಪವನ್ ಕಲ್ಯಾಣ್ ಅವರ ಈ ನಿರ್ಧಾರಿಂದಾಗಿ ಅವರ ಅಭಿಮಾನಿಗಳು, ನೆಟಿಜನ್ ಗಳು ಭಾವುಕರಾಗಿದ್ದಾರೆ.

ಹೌದು ಪ್ರಸ್ತುತ ಆಂಧ್ರಪ್ರದೇಶ ಉಪಮುಖ್ಯಮಂತ್ರಿ ಆಗಿರುವ ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರ ಪತ್ನಿ ಅನ್ನಾ ಲೆಜಿನೋವಾ ಕೊನಿಡೇಲಾ ಅವರೊಂದಿಗಿನ ದಾಂಪತ್ಯ ಕೊನೆಗೊಳಿಸುವುದಾಗಿ ಘೋಷಣೆ ಮಾಡಿದ್ದಾರೆ. ಈ ಬೆಳವಣಿಗೆ ಅಭಿಮಾನಿಗಳಿಗೆ ಶಾಕ್ ಮೂಡಿಸಿದೆ. ಈ ಬಗ್ಗೆ ನಿನ್ನೆ(ನವೆಂಬರ್ 9,ಸೋಮವಾರ) ದೀಪಾವಳಿಯ ಸಂಭ್ರಮದ ನಡುವೆಯೇ ಪವನ್ ಮತ್ತು ಪತ್ನಿ ಇಬ್ಬರೂ ಜಂಟಿಯಾಗಿ ಘೋಷಿಸಿರುವುದು ನೆಟಿಜನ್, ಫ್ಯಾನ್ಸ್ ಬೆಚ್ಚಿಬಿದ್ದಿದ್ದಾರೆ. ಏಕಿಂತ ನಿರ್ಧಾರ? ಎಲ್ಲವೂ ಚೆನ್ನಾಗಿತ್ತಲ್ಲ? ಎಂದು ಪ್ರಶ್ನಿಸಿದ್ದಾರೆ. ನಿನ್ನೆ ರಾತ್ರಿಯಿಂದ ಅಭಿಮಾನಿಗಳು ನೆಟಿಜನ್‌ಗಳು ಪವನ್ ಕಲ್ಯಾಣ್ ಅನ್ನ ಕೊನಿಡೆಲಾ ದಾಂಪತ್ಯ ಮುರಿದುಬಿಳಲು ನಿಜವಾದ ಕಾರಣಗಳೇನು ಎಂದು ಹುಡುಕಲಾರಂಭಿಸಿದ್ದಾರೆ. #Pawankalyan ಮತ್ತು #Divorce ಎಂಬ ಟ್ಯಾಗ್‌ಗಳು 'X' ನಲ್ಲಿ ಟ್ರೆಂಡಿಂಗ್ ಆಗಿವೆ.

ಹಾಗಾದರೆ ಪವನ್ ಕಲ್ಯಾಣ್ ಡೈವೋರ್ಸ್ ನಿರ್ಧಾರಕ್ಕೆ ನಿಜವಾದ ಕಾರಣಗಳೇನು?

ಪವನ್ ಮತ್ತು ಅನಾ ಕೊನಿಡೇಲಾ ತುಂಬಾ ಆತ್ಮೀಯರಾಗಿದ್ದರು. ಇತ್ತೀಚೆಗೆ ಚುನಾವಣೆಯಲ್ಲಿ ಪವನ್ ಕಲ್ಯಾಣ ಗೆದ್ದಾಗಲು, ಚುನಾವಣೆ ಸಂದರ್ಭದಲ್ಲೂ ಪತಿಯ ಜೊತೆಗೆ ಖುಷಿಯಿಂದ ಹೆಜ್ಜೆ ಹಾಕಿದ್ದವರು. ಆದರೆ ಇದಕ್ಕಿದ್ದಂತೆ ಏಕಾಏಕಿ ಡೈವೋರ್ಸ್ ನಿರ್ಧಾರ ಏಕೆ ಘೋಷಣೆ ಮಾಡಿದರು ಅನ್ನೋದೀಗ ಅಭಿಮಾನಿಗಳಿಗೆ ಶಾಕ್ ಆಗಿದೆ.

ಪವನ್ ಕಲ್ಯಾಣ್ ರಾಜಕೀಯ, ಹೋರಾಟ, ಪ್ರತಿಭಟನೆಗಳೆಂದು ಬ್ಯುಸಿಯಾಗಿದ್ದಾಗಲೂ ಪತ್ನಿ ಅವರನ್ನು ಸಂಪೂರ್ಣವಾಗಿ ಬೆಂಬಲಿಸಿದ್ದರು. ಮೈತ್ರಿ ಗೆದ್ದು ಪವನ್ ಕಲ್ಯಾಣ್ ಉಪಮುಖ್ಯಮಂತ್ರಿಯಾದಾಗ ಹೆಚ್ಚು ಸಂತೋಷ ಪಟ್ಟವರು ಅನ್ನಾ ಕೊನಿಡೇಲಾ ಅವರೇ. ಅಂದು ಗೆದ್ದ ಖುಷಿಯಲ್ಲಿ ಇಬ್ಬರೂ ಮೆಗಾಸ್ಟಾರ್ ಚಿರಂಜೀವಿ ಅವರ ಬಳಿಗೆ ಹೋಗಿ ಆಶೀರ್ವಾದ ಪಡೆದಿದ್ದರು. ಆಗಿನ ಆ ಸುಂದರ ಕ್ಷಣಗಳನ್ನು ಅಭಿಮಾನಿಗಳು ಇಂದು ಮತ್ತೆ ಹಂಚಿಕೊಳ್ಳುತ್ತಿದ್ದಾರೆ.

ಇನ್ನೊಂದು ವಿಷಯ ಹೇಳಬೇಕು. ಅದೇನೆಂದರೆ ಪವನ್ ಕಲ್ಯಾಣ್ ಅವರ ಮಗ ಮಾರ್ಕ್ ಶಂಕರ್ ಬೆಂಕಿ ಅವಘಡದಿಂದ ಬದುಕುಳಿದಿದ್ದು ಪವಾಡ. ಆ ಘಟನೆಯಿಂದ ಚೇತರಿಸಿಕೊಂಡ ನಂತರ ಪವನ್-ಅನ್ನಾ ಇಬ್ಬರೂ ತಿರುಮಲಕ್ಕೆ ಹೋಗಿ ಪೂಜೆ ಸಲ್ಲಿಸಿದರು. ಹಿಂದೂ ಸಂಪ್ರದಾಯ ಮತ್ತು ಸಂಸ್ಕೃತಿಯನ್ನು ಅನುಸರಿಸಿ ಅಂದು ತಿರುಪತಿಯಲ್ಲಿ ಕೂದಲು ಮುಡಿ ಕೊಟ್ಟು ತಲೆ ಬೋಳಿಸಿಕೊಂಡು ಭಗವಂತನನ್ನ ಬೇಡಿದ್ದರು, ಭಕ್ತರಿಗೆ ಅನ್ನದಾನ ಮಾಡಿದ್ದರು. ಅಷ್ಟೊಂದು ಅನೋನ್ಯವಾಗಿದ್ದ ದಂಪತಿಗಳು ಇದೀಗ ಏಕಾಏಕಿ ಡೈವೋರ್ಸ್ ನಿರ್ಧಾರಕ್ಕೆ ಬಂದಿದ್ದೇಕೆ? ಬರಲು ಹೇಗೆ ಸಾಧ್ಯ? ದಾಂಪತ್ಯದಲ್ಲಿ ಅಂತಹದ್ದೇನಾಯ್ತು ಎಂಬ ಅಚ್ಚರಿ ಪ್ರಶ್ನೆಗಳು ಎದ್ದಿವೆ. ಹಳೆಯ ವಿಡಿಯೋಗಳು ವೈರಲ್ ಆಗುತ್ತಿವೆ.

ಅನಾ ಲೆಜಿನೋವಾ ಹೆಸರು ಬದಲಾವಣೆ

ಇತ್ತೀಚೆಗೆ ಇನ್‌ಸ್ಟಾಗ್ರಾಮ್ ಖಾತೆ ತೆರೆದಿರುವ ಅನಾ ಲೆಜಿನೋವಾ... ತಮ್ಮ ಹೆಸರನ್ನು ಅನಾ ಕೊನಿಡೇಲಾ ಎಂದು ಬದಲಾಯಿಸಿಕೊಂಡಿದ್ದಾರೆ. ಮೆಗಾಸ್ಟಾರ್ ಚಿರು ತಮ್ಮ ಹುಟ್ಟುಹಬ್ಬದಂದು ಸ್ಪೆಷಲ್ ವಿಶ್ ಸಂದೇಶ ಕಳಿಸಿದ್ದರು. ಪತ್ನಿಗೆ ಕುಟುಂಬದ ಬಗ್ಗೆಯೂ ಅಪಾರ ಗೌರವವಿತ್ತು. ಇದಕ್ಕೆ ಸಾಕ್ಷಿ ಎಂಬಂತೆ ಅವರ ಹಿಂದಿನಿಂದಲೂ ಪವನ್ ಜೊತೆಗಿನ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದರು. ಆದರೆ ಡೈವೋರ್ಸ್ ಘೋಷಣೆ ಮಾಡುವ ಸಮಯದಲ್ಲಿ ಅನಾ ಕೊನಿಡೇಲಾ ಅವರ ಇನ್‌ಸ್ಟಾಗ್ರಾಮ್ ಅಕೌಂಟ್ ಕಾಣಿಸಲೇ ಇಲ್ಲ! ಡೈವೋರ್ಸ್ ಖಚಿತವಾಗುತ್ತಿದ್ದಂತೆ ಖಾತೆ ನಿಷ್ಕ್ರಿಯಗೊಳಿಸಿದರೇ ಎಂದು ನೆಟಿಜನ್ ಅವರ ಇನ್‌ಸ್ಟಾ ಅಕೌಂಟ್ ಹುಡುಕಲಾರಂಭಿಸಿದ್ದಾರೆ.

ಪವನ್-ಅನ್ನಾ ಡೈವೋರ್ಸ್ ಅಭಿಮಾನಿಗಳಿಗೆ ಶಾಕ್

ಪವನ್ ಕಲ್ಯಾಣ್ ರಾಜಕೀಯದಲ್ಲಿ ಬ್ಯುಸಿಯಾಗಿದ್ದರು ಯಾವಾಗಲೂ ಪತ್ನಿಯೊಂದಿಗೆ ಪ್ರೀತಿಯಿಂದಲೇ ಇರುತ್ತಿದ್ದರು. ಎಷ್ಟೇ ಬ್ಯುಸಿ ಶೆಡ್ಯುಲ್ ಇದ್ದಾಗಲೂ ಪತ್ನಿ, ಮಕ್ಕಳಿಗಾಗಿ ಸಮಯ ಕೊಡುತ್ತಿದ್ದರು. ಚುನಾವಣೆಯಲ್ಲಿ ಗೆದ್ದು ಉಪಮುಖ್ಯಮಂತ್ರಿ ಹುದ್ದೆಗೇರಿದ ಮೇಲೂ ಕುಟುಂಬವನ್ನು ನಿರ್ಲಕ್ಷಿಸಲಿಲ್ಲ. ಪತ್ನಿ ಅನ್ನಾ ಕೂಡ ಪತಿ ಪವನ್ ಕಲ್ಯಾಣ್ ಅವರನ್ನ ಎಲ್ಲ ರೀತಿಯಲ್ಲೂ ಬೆನ್ನಿಗೆ ನಿಂತು ಬೆಂಬಲಿಸಿದರು. ಪವನ್ ಕಲ್ಯಾಣ್ ಮೇಲೆ ತುಂಬಾ ಪ್ರೀತಿ, ಗೌರವ ತೋರಿಸಿದ್ದ ಅನ್ನಾ.. ಇಂಥ ವಿಶಿಷ್ಠ ಗುಣದಿಂದಲೇ ಅವರು ಪವನ್ ಅಭಿಮಾನಿಗಳು ಅರಾಧಿಸುತ್ತಿದ್ದರು.

ಪವನ್ ಕಲ್ಯಾಣ್ ಅನ್ನಾ ಡೈವೋರ್ಸ್ ತಡೆಯಲು ನಾವು ಯಾರು?

ಆದರೆ ಇದೀಗ ಏಕಾಏಕಿ ಸೋಮವಾರ ರಾತ್ರಿ ಜಂಟಿಯಾಗಿ ಡೈವೋರ್ಸ್ ಘೋಷಿಸಿದಾಗ ಅಭಿಮಾನಿಗಳಿಗೆ ಅದನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. 'ದೇವರೇ, ಈ ಡೈವೋರ್ಸ್ ವಿಚಾರ ಸುಳ್ಳಾಗಲಿ..' ಎಂದು ಬೇಡುತ್ತಿದ್ದಾರೆ. ಆದರೆ ಇನ್ನು ಕೆಲವರು 'ಇದು ಅವರ ವೈಯಕ್ತಿಕ ವಿಷಯ. ದಾಂಪತ್ಯದಲ್ಲಿ ಏನು ವಿರಸ ಮೂಡಿದೆಯೋ ಅವರಿಗೆ ಗೊತ್ತು. ಹೀಗಾಗಿ ಒಪ್ಪಿಗೆ ಮೂಲಕ ಡೈವೋರ್ಸ್ ಆಗುತ್ತಿದ್ದರೆ ಆಗಲಿ ಬಿಡಿ, ಅದನ್ನು ನಿರ್ಣಯಿಸಲು ನಾವ್ಯಾರು?' ಎಂದು ಕಾಮೆಂಟ್ ಮಾಡುತ್ತಿದ್ದಾರೆ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಪವನ್ ಕಲ್ಯಾಣ್ ಆಸ್ತಿ-ಪಾಸ್ತಿ: 2026ರಲ್ಲಿ ಎಷ್ಟು ಕೋಟಿ ರೂ. ಒಡೆಯ? ತೆಲುಗು ಸೂಪರ್‌ಸ್ಟಾರ್ ಬಳಿ ಇರುವ ಐಷಾರಾಮಿ ಕಾರುಗಳು ಯಾವುವು?
ಮುರಿದುಹೋಯ್ತು 'ಧುರಂಧರ್ 2' ದಾಖಲೆ; ರಣಬೀರ್-ಯಶ್ 'ರಾಮಾಯಣ' ಅಬ್ಬರಕ್ಕೆ ಹಳೆಯ ದಾಖಲೆ ಪುಡಿಪುಡಿ!