ರಾವಣನ ಎಂಟ್ರಿ, ಜಟಾಯು ಯುದ್ಧ, ರಾಮಾಯಣ ಸಿನಿಮಾವನ್ನು ದೃಶ್ಯಕಾವ್ಯವಾಗಿಸಿದ 7 ಅದ್ಭುತ ಕ್ಷಣ

Published : Nov 08, 2026, 05:38 PM IST
Ramayana’s Visual Magic

ಸಾರಾಂಶ

ರಾಮಾಯಾಣ ಸಿನಿಮಾ ವೀಕೆಂಡ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿ ಸಾಗುತ್ತಿದೆ. ಈ ಸಿನಿಮಾದ 7 ಅದ್ಭುತ ಕ್ಷಣಗಳು ಮತ್ತೆ ಮತ್ತೆ ನೋಡಬೆಕನಿಸುತ್ತದೆ. ಇದೇ 7 ಕ್ಷಣಗಳಿಂದ ಸನಿಮಾ ಮಹಾಕಾವ್ಯವಾಗಿ ಪ್ರೇಕ್ಷಕರ ಮನದಲ್ಲಿ ಅಚ್ಚಳಿಯದೆ ಉಳಿಯುತ್ತದೆ.

ಬೆಂಗಳೂರು (ನ.08) ರಾಮಾಯಣ ಸಿನಿಮಾ ದೇಶ ವಿದೇಶಗಳಲ್ಲಿ ಅಬ್ಬರಿಸುತ್ತಿದೆ. ಭಾರತೀಯರಿಗೆ ರಾಮಾಯಣ ಪ್ರತಿಯೊಂದು ಘಟನೆಗಳು ಗೊತ್ತಿದೆ. ಸೀರಿಯರ್, ಸಿನಿಮಾ, ನಾಟಕ, ಯಕ್ಷಗಾನ ಸೇರಿದಂತೆ ಹಲವು ರೂಪದಲ್ಲಿ ರಾಮಾಯಣ ಕತೆಗಳನ್ನು ನೋಡಿದ್ದೇವೆ, ಕೇಳಿದ್ದೇವೆ. ಇದರ ನಡುವೆ ಬಿಡುಗಡೆಯಾದ ರಾಮಾಯಣ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದೆ. 4000 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಾಣವಾದ ಈ ಸಿನಿಮಾದ ಕೆಲ ಅದ್ಭುತ ಕ್ಷಣಗಳು ಸಿನಿಮಾವನ್ನು ಮಹಾಕಾವ್ಯವನ್ನಾಗಿಸಿದೆ.

1. ರಾವಣನ ಎಂಟ್ರಿ ಮತ್ತು 10 ತಲೆ ರಹಸ್ಯ

ಸಿನಿಮಾದಲ್ಲಿ ರಾವಣನನ್ನು ಕೇವಲ ನಕಾರಾತ್ಮಕ ವಿಲನ್ ಆಗಿ ತೋರಿಸದೆ, ಆತನ ಗತಕಾಲ ಹಾಗೂ ಆತನ ಮಹತ್ವಾಕಾಂಕ್ಷೆಗಳನ್ನು ನಿತೀಶ್ ತಿವಾರಿ ಅನಾವರಣಗೊಳಿಸಿದ್ದಾರೆ. ಯಶ್ ಅಭಿನಯದ ರಾವಣನ ಎಂಟ್ರಿ ಮತ್ತು 'ಶಿವ ತಾಂಡವ' ದೃಶ್ಯ ಅದ್ಭುತವಾಗಿ ಮೂಡಿಬಂದಿದೆ. ರಾವಣನ 10 ತಲೆಗಳನ್ನು ಕೇವಲ ದೃಶ್ಯಕ್ಕಾಗಿ ಬಳಸದೆ, ಆತನೊಳಗಿನ 10 ವಿಭಿನ್ನ ಮನಸ್ಥಿತಿಗಳ ಧ್ವನಿಯಾಗಿ ಧ್ವನಿಸಿರುವುದು ಅತ್ಯಂತ ಆಕರ್ಷಕವಾಗಿದೆ.

2. ಕಣ್ಣುಕೋರೈಸುವ VFX ಹಾಗೂ ಜಟಾಯು ಸಾಹಸ

ಸಿನಿಮಾದ ದೃಶ್ಯ ವೈಭವಕ್ಕೆ ಉನ್ನತ ದರ್ಜೆಯ ವಿಎಫ್‌ಎಕ್ಸ್ (ಗ್ರಾಫಿಕ್ಸ್) ಬಲ ತುಂಬಿದೆ. ದೂಷಣರ ವಿರುದ್ಧ ಶ್ರೀರಾಮನ ಯುದ್ಧ, ಇಂದ್ರನ ಜೊತೆ ರಾವಣನ ಸಂಘರ್ಷ ಹಾಗೂ ವೈಕುಂಠ ಲೋಕದ ಚಿತ್ರಣ ಪ್ರೇಕ್ಷಕರನ್ನು ರೋಮಾಂಚನಗೊಳಿಸುತ್ತದೆ. ವಿಶೇಷವಾಗಿ, ಪುಷ್ಪಕ ವಿಮಾನದಿಂದ ಸೀತೆಯನ್ನು ರಕ್ಷಿಸಲು ಜಟಾಯು ನಡೆಸುವ ವೈಮಾನಿಕ ಯುದ್ಧ ದೃಶ್ಯಕಾವ್ಯಕ್ಕೆ ಅತ್ಯುತ್ತಮ ಸಾಕ್ಷಿಯಾಗಿದೆ.

3. ಅಸಹಾಯಕಿ ಅಲ್ಲ ಸೀತೆ

ಸಾಯಿ ಪಲ್ಲವಿ ಅಭಿನಯದ ಸೀತೆಯ ಪಾತ್ರವನ್ನು ಕೇವಲ ಅಪಹರಣಕ್ಕೊಳಗಾಗುವ ದುರ್ಬಲ ನಾರಿಯಾಗಿ ತೋರಿಸಿಲ್ಲ. ರಾಮ-ಲಕ್ಷ್ಮಣರ ಜೊತೆ ರಕ್ಕಸರ ವಿರುದ್ಧ ಹೆಗಲಿಗೆ ಹೆಗಲು ಕೊಟ್ಟು ಹೋರಾಡುವ ಮಹಿಳೆಯಾಗಿ ತೋರಿಸಲಾಗಿದೆ. ಇಷ್ಟೇ ಅಲ್ಲ ಕೃಷಿ ಹಾಗೂ ಮೂಲಿಕೆ ಚಿಕಿತ್ಸೆ ಬಲ್ಲ ಧೀರ ಸೀತೆಯಾಗಿ ಬಿಂಬಿಸಲಾಗಿದೆ. ರಾವಣ ಆಕೆಯನ್ನು ಅಪಹರಿಸಿದಾಗ ಸೀತೆ ಕಣ್ಣೀರಿಡದೆ, ನಿನ್ನ ಸಂಹಾರಕ್ಕೆ ನನ್ನ ರಾಮ ಬಂದೇ ಬರುತ್ತಾನೆ ಎಂದು ಧೈರ್ಯದಿಂದ ಸಾರುವ ದೃಶ್ಯ ಶ್ರೇಷ್ಠವಾಗಿದೆ.

4. ತರಲೆ ಜತೆಗೆ ಭಕ್ತಿ ತುಂಬಿದ ಲಕ್ಷ್ಮಣ:

ರವಿ ದುಬೆ ಅಭಿನಯದ ಲಕ್ಷ್ಮಣನ ಪಾತ್ರ ಪ್ರೇಕ್ಷಕರ ಮನಸ್ಸಿಗೆ ಹತ್ತಿರವಾಗುತ್ತದೆ. ಶ್ರೀರಾಮನ ರಕ್ಷಣೆಗೆ ಸದಾ ಸಿದ್ಧನಿರುವ ಲಕ್ಷ್ಮಣ, ಸ್ವಯಂವರದ ವೇಳೆ ತರಲೆಯಾಗಿ ನಗಿಸುವುದರ ಜೊತೆಗೆ ಕೈಕೇಯಿಯ ನಿರ್ಧಾರಕ್ಕೆ ಆಕ್ರೋಶಗೊಳ್ಳುವ ಸಂದರ್ಭಗಳಿವೆ. ಲಕ್ಷ್ಮಣ ರೇಖೆ' ಎಳೆಯುವ ಅಭಿನಯ, ಸನ್ನಿವೇಶ ಉತ್ತಮವಾಗಿದೆ.

5. ಶ್ರೀರಾಮನ ವನವಾಸದ ಭಾವನಾತ್ಮಕ ಕ್ಷಣಗಳು:

ರಾಜ್ಯವನ್ನು ತ್ಯಜಿಸಿ ವನವಾಸಕ್ಕೆ ತೆರಳುವ ಸಂದರ್ಭದಲ್ಲಿ ರಣಬೀರ್ ಕಪೂರ್ ನೀಡುವ ಸೈಲೆಂಟ್ ಎಕ್ಸ್‌ಪ್ರೆಶನ್‌ಗಳು ಪ್ರೇಕ್ಷಕರ ಕಣ್ಣಲ್ಲಿ ನೀರು ತರಿಸುತ್ತವೆ. ಮಗನಾಗಿ ತಂದೆಯ ಮಾತಿಗೆ ಬದ್ಧನಾಗುವ ಮತ್ತು ದೇವರೆನಿಸಿಕೊಂಡವನ ಒಳಗಿನ ಮಾನವೀಯ ಭಾವನೆಗಳನ್ನು ರಣಬೀರ್ ಸೂಕ್ಷ್ಮವಾಗಿ ಅಭಿನಯಿಸಿದ್ದಾರೆ.

6. ಸೂಕ್ಷ್ಮ ಸನ್ನಿವೇಶಗಳು ಮತ್ತು ಶ್ರೀರಾಮನ ಏಕಪತ್ನಿ ವ್ರತ:

ಸೀತೆಯನ್ನಷ್ಟೇ ಮದುವೆಯಾಗುವುದಾಗಿ ಜನಕ ಮಹಾರಾಜನಿಗೆ ಶ್ರೀರಾಮ ಮಾತು ಕೊಡುವಾಗ, ಕ್ಯಾಮೆರಾ ಕೌಶಲ್ಯಾ ದೇವಿಯತ್ತ ತಿರುಗುತ್ತದೆ. ತಂದೆಯ ಬಹುಪತ್ನಿತ್ವದಿಂದ ತಾಯಿ ಪಟ್ಟ ಕಷ್ಟವನ್ನು ನೋಡಿ ಬೆಳೆದ ರಾಮ, ಏಕಪತ್ನಿ ವ್ರತದ ಪ್ರತಿಜ್ಞೆ ಕೈಗೊಂಡ ಎಂಬ ಸಣ್ಣ ಸನ್ನಿವೇಶ ಕಥೆಯ ಆಳವನ್ನು ತೋರಿಸುತ್ತದೆ.

7. ಸನ್ನಿ ಡಿಯೋಲ್ 'ಹನುಮಾನ್' ಸರ್ಪ್ರೈಸ್

ಚಿತ್ರದ ಕೊನೆಯ ಪೋಸ್ಟ್-ಕ್ರೆಡಿಟ್ ದೃಶ್ಯದಲ್ಲಿ ಸನ್ನಿ ಡಿಯೋಲ್ ಹನುಮಂತನಾಗಿ ಕಾಣಿಸಿಕೊಳ್ಳುವ ಮೂಲಕ ಮುಂದಿನ ಭಾಗಕ್ಕೆ (Ramayana Part 2) ಬಿಗ್ ಹೈಪ್ ನೀಡಿದ್ದಾರೆ. ರಾಮಾಯಣದ ಎರಡನೇ ಭಾಗವು 2028ರ ದೀಪಾವಳಿ ಹಬ್ಬಕ್ಕೆ ರಿಲೀಸ್ ಆಗಲಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ಧನುಷ್ ಸರ್ ನಡೆದಾಡಿದರೆ ವಿಭೂತಿ ಪರಿಮಳ ಬರುತ್ತೆ': ನಟನ ವರ್ಣಿಸಿದ್ಯಾಕೆ ಗೊತ್ತಾ ಶ್ರೀಲೀಲಾ?
ಮೊದಲ ತಮಿಳು ಸಿನಿಮಾದಲ್ಲೇ ದುನಿಯಾ ವಿಜಯ್‌ಗೆ ಸಿಕ್ತು ಭರ್ಜರಿ ಪ್ರತಿಕ್ರಿಯೆ: ಆ ಪಾತ್ರ ಎಂಥದ್ದು?