ತೆಲುಗು ನಟ ನರೇಶ್ ಮತ್ತು ಪವಿತ್ರಾ ಲಕೋಶ್ ನಟನೆಯ ಮತ್ತೆ ಮದುವೆ ಸಿನಿಮಾ ಒಟಿಟಿಗೆ ಬರ್ತಿದೆ. ಇದೇ ತಿಂಗಳು ಜೂನ್ 23ಕ್ಕೆ ರಿಲೀಸ್ ಆಗುತ್ತಿದೆ.
ತೆಲುಗಿನ ನಟ ನರೇಶ್ ಕೃಷ್ಣ ಹಾಗೂ ನಟಿ ಪವಿತ್ರಾ ಲೋಕೇಶ್ ಅಭಿನಯದ 'ಮತ್ತೆ ಮದುವೆ' ಸಿನಿಮಾ ಒಟಿಟಿ ಎಂಟ್ರಿಗೆ ಮುಹೂರ್ತ ಫಿಕ್ಸ್ ಆಗಿದೆ. ಇತ್ತೀಚಿಗಷ್ಟೆ ಮತ್ತೆ ಮದುವೆ ಸಿನಿಮಾ ಚಿತ್ರಮಂದಿರಕ್ಕೆ ಎಂಟ್ರಿ ಕೊಟ್ಟಿತ್ತು. ಕನ್ನಡದಲ್ಲಿ ಈ ಸಿನಿಮಾ ಜೂನ್ 9ಕ್ಕೆ ರಿಲೀಸ್ ಆಗಿತ್ತು. ತೆಲುಗಿನಲ್ಲಿ ಮೇ 26ಕ್ಕೆ ರಿಲೀಸ್ ಆಗಿತ್ತು. ತೆಲುಗಿನಲ್ಲಿ ಮಳ್ಳಿ ಪೆಳ್ಳಿ ಟೈಟಲ್ ನಲ್ಲಿ ಸಿನಿಮಾ ರಿಲೀಸ್ ಆಗಿತ್ತು. ನರೇಶ್ ಮತ್ತು ಪವಿತ್ರಾ ಜೋಡಿಯ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಕನ್ನಡ ಸಿನಿಪ್ರಿಯರು ಹಾಗೂ ಸಿನಿತಾರೆಯರು ಮೆಚ್ಚಿದ್ದ ನರೇಶ್ ಹಾಗೂ ಪವಿತ್ರಾ ಲೋಕೇಶ್ ಸಿನಿಮಾ ಒಟಿಟಿಗೆ ಬರ್ತಿದೆ.
ಅಮೇಜಾನ್ ಪ್ರೈಮ್ ನಲ್ಲಿ ಮತ್ತೆ ಮದುವೆ ಸಿನಿಮಾ ಸ್ಟ್ರೀಮಿಂಗ್ ಆಗುತ್ತಿದೆ. ಚಿತ್ರಮಂದಿರಗಳಲ್ಲಿ ಮಿಸ್ ಮಾಡಿಕೊಂಡವರು ಮೊಬೈಲ್ ನಲ್ಲೇ ಜೂನ್ 23ಕ್ಕೆ ಸಿನಿಮಾ ನೋಡಬಹುದು. ನರೇಶ್ ಅವರ ತಾಯಿ, ಹಿರಿಯ ನಟಿ, ನಿರ್ದೇಶಕಿ ವಿಜಯಾ ನಿರ್ಮಲಾ ಅವರು 1973ರಲ್ಲಿ 'ಸೂಪರ್ ಸ್ಟಾರ್' ಕೃಷ್ಣ ಅವರ ಜತೆಗೂಡಿ ವಿಜಯ ಕೃಷ್ಣ ಮೂವೀಸ್ ಆರಂಭಿಸಿದ್ದರು. ಆ ಬ್ಯಾನರ್‌ಗೆ ಭರ್ತಿ 50 ವರ್ಷ ತುಂಬಿದೆ. ಆ ಹಿನ್ನೆಲೆಯಲ್ಲಿ ಆ ಬ್ಯಾನರ್ ಮೂಲಕ ಮತ್ತೆ ಮದುವೆ ಸಿನಿಮಾವನ್ನು ನರೇಶ್ ನಿರ್ಮಾಣ ಮಾಡಿದ್ದರು.
Matte Maduve Review: ನಟ, ನಟಿಯ ಲವ್ವು, ಲೈಫು ಮತ್ತು ಮೀಡಿಯಾ ಹೈಪು
ಮತ್ತೆ ಮದುವೆ ಚಿತ್ರಕ್ಕೆ ಎಂ. ಎಸ್. ರಾಜು, ಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಜಯಸುಧ ಮತ್ತು ಶರತ್ ಬಾಬು ಚಿತ್ರದ ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಿದ್ದರು. ವನಿತಾ ವಿಜಯಕುಮಾರ್, ಅನನ್ಯ ನಾಗೆಲ್ಲ, ರೋಶನ್, ರವಿವರ್ಮ, ಅನ್ನಪೂರ್ಣ, ಭದ್ರಂ, ಯುಕ್ತ, ಪ್ರವೀಣ್ ಯಂಡಮುರಿ, ಮಧು ಹಾಗೂ ಇನ್ನಿತರರು ಮತ್ತೆ ಮದುವೆಯ ಭಾಗವಾಗಿದ್ದರು. ಬೋಲ್ಡೆಸ್ಸ್ ಜೋಡಿಯ ಫ್ಯಾಮಿಲಿ ಎಂಟರ್ಟೈನ್ಮೆಂಟ್ ಕಹಾನಿಯನ್ನು ಥಿಯೇಟರ್ ನಲ್ಲಿ ನೋಡಲು ಆಗದೇ ಇರುವವರು ಅಮೇಜಾನ್ ನಲ್ಲಿ ನೋಡಬಹುದು.
ನಾವು ಮಕ್ಕಳನ್ನು ಪಡೆಯಬಹುದು ಆದರೇ...: ಮಗು ಮಾಡಿಕೊಳ್ಳುವ ಬಗ್ಗೆ ಪವಿತ್ರಾ-ನರೇಶ್ ನೇರ ಮಾತು
ಮಳ್ಳಿ ಪೆಳ್ಳಿ ಸಿನಿಮಾದಲ್ಲಿ ತಮ್ಮದೆ ಜೀವನದ ಕಥೆ ಹೇಳಿದ್ದಾರೆ. ಇಲ್ಲಿ ಪವಿತ್ರಾ ಲೋಕೇಶ್ ಅವರ ಮಾಜಿ ಪತಿ ಸುಚೇಂದ್ರ ಪ್ರಸಾದ್ ಮತ್ತು ನರೇಶ್ ಮಾಜಿ ಪತ್ನಿ ರಮ್ಯಾ ಅವರನ್ನು ವಿಲನ್ ರೀತಿ ತೋರಿಸಲಾಗಿದೆ. ಈ ಸಿನಿಮಾ ಅವರದ್ದೇ ಕಥೆ ಎಂದು ಗೊತ್ತಿದ್ದರೂ ಎಲ್ಲಿಯೂ ಇಬ್ಬರೂ ತಮ್ಮದೆ ಜೀವನದ ಕಥೆ ಎಂದು ಬಹಿರಂಗವಾಗಿ ಹೇಳಿಕೊಂಡಿಲ್ಲ.