Rachel Ann Mullins: ಶಾರುಖ್ ಖಾನ್ ಅಂದ್ರೆ ಯಾರು ಎಂದು ಕೇಳಿದ್ದ 'ಪಠಾಣ್'​ ನಟಿ!

By Suvarna News  |  First Published Jan 29, 2023, 4:22 PM IST

ಶಾರುಖ್​ ಖಾನ್​ ಅಭಿನಯದ ಪಠಾಣ್​ ಚಿತ್ರ ಸೂಪರ್ ಹಿಟ್​ ಆಗಿದೆ. ಆದರೆ ಈ ಚಿತ್ರದಲ್ಲಿ ನಟಿಸಿರುವ ಹಾಲಿವುಡ್​ ನಟಿ ರಾಚೆಲ್ ಆನ್ ಮುಲ್ಲಿನ್ಸ್ ಅವರು ಶಾರುಖ್​ ಕುರಿತು ಕುತೂಹಲದ ಮಾಹಿತಿ ಹಂಚಿಕೊಂಡಿದ್ದಾರೆ. ಏನದು?
 


ಪಠಾಣ್​ ಚಿತ್ರದ ಮೂಲಕ ನಾಲ್ಕು ವರ್ಷಗಳ ಬಳಿಕ ಬಣ್ಣ ಹಚ್ಚಿದ ಶಾರುಖ್​ ಖಾನ್​ ಇದೀಗ ಭರ್ಜರಿ ಯಶಸ್ಸು ಗಳಿಸಿದ್ದಾರೆ. ಪಠಾಣ್​ (Pathaan) ಚಿತ್ರ ಬಾಕ್ಸ್​ ಆಫೀಸ್​ನಲ್ಲಿ ಕೊಳ್ಳೆ ಹೊಡೆದಿರುವುದು ಮಾತ್ರವಲ್ಲದೇ ಭರ್ಜರಿ ಕಲೆಕ್ಷನ್​ ಕೂಡ ಮಾಡಿದೆ. ಇದಾಗಲೇ ಹಲವಾರು ದಾಖಲೆಗಳನ್ನು ಉಡೀಸ್​ ಮಾಡಿ ಮೆರೆಯುತ್ತಿದೆ. ಬೈಕಾಟ್​ ಬಿಸಿ, ಚಿತ್ರ ಬಿಡುಗಡೆಗೂ ಮುನ್ನಲೇ ಲೀಕ್​ ಆಗಿದ್ದರೂ ಚಿತ್ರ ಸಕ್ಸಸ್​ ಕಂಡಿದ್ದು, ಅಭಿಮಾನಿಗಳು ದುಬಾರಿ ಟಿಕೆಟ್​ ಖರೀದಿಸಿಯೂ ಚಿತ್ರ ನೋಡಲು ಮುಗಿಬೀಳುತ್ತಿದ್ದಾರೆ. ಕೆಲವು ವಿದೇಶಗಳಲ್ಲಿಯೂ ಪಠಾಣ್​ ಯಶಸ್ಸು ಗಳಿಸುತ್ತಿದ್ದು ಶಾರುಖ್​ ಖಾನ್​ (Shah Rukh Khan) ಅವರ ಕೀರ್ತಿ ಹೆಚ್ಚುತ್ತಲೇ ಸಾಗಿದೆ. ಕಿಂಗ್​ ಖಾನ್​ (King Khan) ಎಂದೇ ಪ್ರಸಿದ್ಧರಾಗಿರುವ ಶಾರುಖ್​ ಯಾರು ಎಂದು ತಿಳಿಯದವರಿಗೂ ಪಠಾಣ್​ ಚಿತ್ರದಿಂದ ಅವರ ಮಹಿಮೆ ಗೊತ್ತಾಗತೊಡಗಿದೆ.

ಆದರೆ ಕುತೂಹಲದ ಸಂಗತಿಯೊಂದು ಇದೀಗ ಹೊರಬಿದ್ದಿದೆ. ಅದೇನೆಂದರೆ ಈ ಚಿತ್ರದಲ್ಲಿ ಸಹನಟಿಯಾಗಿ ನಟಿಸಿರುವ ಹಾಲಿವುಡ್​ ತಾರೆ ರಾಚೆಲ್ ಆನ್ ಮುಲ್ಲಿನ್ಸ್ ( Rachel Ann Mullins) ಅವರಿಗೆ ಶಾರುಖ್​ ಖಾನ್​ ಯಾರು ಎಂದೇ ತಿಳಿದಿರಲಿಲ್ಲವಂತೆ. ಚಿತ್ರಕ್ಕೆ ಒಪ್ಪಿಕೊಳ್ಳುವ ಮೊದಲು ಶಾರುಖ್​ ಖಾನ್​ ಯಾರು ಎಂದು ತಮಗೆ ತಿಳಿದಿರಲಿಲ್ಲ ಎಂದು ಪಠಾಣ್​ನ ನಟಿ ಸಂದರ್ಶನವೊಂದರಲ್ಲಿ ಹೇಳಿಕೆ ನೀಡಿದ್ದಾರೆ. ದೀಪಿಕಾ ಪಡುಕೋಣೆ (Deepika Padukone) ಯಾರು ಎಂದು ತಮಗೆ ತಿಳಿದಿತ್ತು. ಚಿತ್ರಕ್ಕೆ ಸಹಿ ಹಾಕುವ ಮೊದಲು ಈ ಚಿತ್ರದಲ್ಲಿ ದೀಪಿಕಾ ಇರುವ ಬಗ್ಗೆ ಅರಿತಿದ್ದೆ. ಅವರು ಈ ಚಿತ್ರದ ನಾಯಕಿ ಎಂದು ತಿಳಿದಾಗ ಚಿತ್ರ ಚೆನ್ನಾಗಿ ಓಡುತ್ತದೆ ಎಂದು ತಿಳಿದುಕೊಂಡಿದ್ದೆ. ಆದರೆ ನಾಯಕರಾಗಿರುವ ಶಾರುಖ್​ ಖಾನ್​ ಮಾತ್ರ ಯಾರು ಎಂದೇ ನನಗೆ ತಿಳಿದಿರಲಿಲ್ಲ ಎಂದು ನಟಿ ಹೇಳಿದ್ದಾರೆ. 

Tap to resize

Latest Videos

undefined

Urfi Javed: ಶಾರುಖ್​ ಖಾನ್​ ಎರಡನೇ ಹೆಂಡ್ತಿಯಾಗಲು ಉರ್ಫಿ ಸಿದ್ಧ , ಏನಿದು ಹೊಸ ವಿಷ್ಯ?

ಅಂದಹಾಗೆ, ಹಾಲಿವುಡ್​ನ ನಟಿಯಾಗಿರುವ ರಾಚೆಲ್​ ಇದಾಗಲೇ ಹಲವಾರು ಸೂಪರ್​ಹಿಟ್​ ಚಿತ್ರಗಳನ್ನು ನೀಡಿದ್ದಾರೆ. ಪಠಾಣ್​ ಮೂಲಕ ಬಾಲಿವುಡ್​ಗೆ ಎಂಟ್ರಿ ಕೊಟ್ಟಿದ್ದಾರೆ. ಹಾಲಿವುಡ್​ನ ಹ್ಯಾಪಿ ಎಂಡಿಂಗ್ಸ್ ಮತ್ತು ದಿ ಲೀಗ್‌ನಂತಹ ಶೋಗಳಲ್ಲಿ ರಾಚೆಲ್ ಹೆಚ್ಚು ಹೆಸರುವಾಸಿಯಾಗಿದ್ದಾರೆ. ಅವರು ನೈಬರ್ಸ್ ಮತ್ತು ದಿ ಎಂಟೂರೇಜ್ ಮೂವಿ ಸೇರಿದಂತೆ ಹಾಲಿವುಡ್ (Hollywood) ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.  ಪಠಾಣ್‌ನಲ್ಲಿ ಈಕೆಯದ್ದು ರಷ್ಯಾದ ಗೂಢಚಾರ ಆಲಿಸ್ ಪಾತ್ರ. ಈಗ ಪಠಾಣ್​ ಯಶಸ್ಸಿನ ಬಳಿಕ ಮಾಧ್ಯಮದವರು ನಡೆಸಿದ ಸಂದರ್ಶನದಲ್ಲಿ ಪಾಲ್ಗೊಂಡು ಕೆಲವೊಂದು ಅನಿಸಿಕೆಗಳನ್ನು ಶೇರ್​ ಮಾಡಿದ್ದಾರೆ. 
'ನನಗೆ ಬಂದು ಪಾತ್ರ ನಿರ್ವಹಿಸಲು ಕೇಳಿದಾಗ ಒಪ್ಪಿಕೊಂಡಿದ್ದೆ. ಆದರೆ  ಪಠಾಣ್ ಬಗ್ಗೆಯೂ  ನನಗೆ ತಿಳಿದಿರಲಿಲ್ಲ. ಗೊತ್ತಿದ್ದದ್ದು ಕೇವಲ ಇದರಲ್ಲಿನ ನಾಯಕಿ ದೀಪಿಕಾ ಮಾತ್ರ. ಶಾರುಖ್ ಖಾನ್ ಬಗ್ಗೆ ನಂತರ ತಿಳಿದುಕೊಂಡೆ. ಶಾರುಖ್​ ಅಂದ್ರೆ ಯಾರು ಎಂದು ಸಹಾಯಕ ನಿರ್ದೇಶಕರೊಬ್ಬರನ್ನು (Director) ಕೇಳಿದ್ದೆ. ಆಗ ಅವರು ಶಾರುಖ್ ದೊಡ್ಡ ನಟ ಎಂದರು. ಕೊನೆಗೆ ತುಂಬಾ  ಅಚ್ಚರಿಯಾದದ್ದು ಏನೆಂದರೆ, ನಮ್ಮಿಬ್ಬರ ಹುಟ್ಟುಹಬ್ಬ ಕೂಡ ಒಂದೇ ದಿನ ಎಂದು ತಿಳಿಯಿತು. ನಾನು ಮುಂಬೈನ ಯಶ್ ರಾಜ್ ಸ್ಟುಡಿಯೋದಲ್ಲಿ ಶೂಟಿಂಗ್ ಮಾಡುತ್ತಿದ್ದಾಗ ವಾರ್ಡ್‌ರೋಬ್ ಟ್ರಂಕ್‌ಗಳಲ್ಲಿ (Wardroab Trunk) ದೀಪಿಕಾ ಪಡುಕೋಣೆ ಅವರ ಹೆಸರನ್ನು ನೋಡಿದ್ದೆ. ಆಗ ಈ ಚಿತ್ರ  ತುಂಬಾ ಚೆನ್ನಾಗಿದ್ದಿರಬಹುದು ಎಂದು ಎನ್ನಿಸಿತ್ತು. ದೀಪಿಕಾ ಅಪ್ರತಿಮ ಸುಂದರಿ' ಎಂದು ರಾಚೆಲ್​ ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ಬಾಲಿವುಡ್ ಬಗ್ಗೆ ಮಾತನಾಡಿದ ಅವರು, 'ಬಾಲಿವುಡ್​ ನಟಿಯರು ತುಂಬ ಸ್ಮಾರ್ಟ್​ ಇರ್ತಾರೆ. ಹಾಲಿವುಡ್​ಗೆ ಹೋಲಿಸುವುದಾದರೆ  ಬಾಲಿವುಡ್ಡೇ ಸೂಪರು ಎಂದು ನನ್ನ ಅನಿಸಿಕೆ. ಎರಡರ ನಡುವೆ ತುಂಬಾ  ವ್ಯತ್ಯಾಸವಿದೆ. ಬಾಲಿವುಡ್‌ನಲ್ಲಿ ಎಲ್ಲರೂ ಸೂಪರ್​ ಆಗಿ ಡಾನ್ಸ್​ ಮಾಡ್ತಾರೆ, ಮಾತ್ರವಲ್ಲದೇ ಬಹುತೇಕ ಎಲ್ಲರೂ ಹಾಡಬಲ್ಲರು. ಮಾಡರ್ನ್ ಬಾಲಿವುಡ್ ಹಳೆಯ ಹಾಲಿವುಡ್‌ನಂತಿದೆ. ಸದ್ಯ ನನಗೆ ಹಾಲಿವುಡ್​ನಲ್ಲಿ ಹೇಳಿಕೊಳ್ಳುವಷ್ಟು ಕೆಲಸ ಇಲ್ಲ. ಆದರೆ ನನಗೆ ಬಾಲಿವುಡ್​ ಗೌರವ ತಂದು ಕೊಟ್ಟಿದೆ. ಎಲ್ಲಿ  ಗೌರವ ಸಿಗತ್ತೋ ಅಲ್ಲಿ ಹೋಗಿ ಕೆಲಸ ಮಾಡಬೇಕೆಂದು ನಂಬಿದವಳು ನಾನು.  ಹಾಲಿವುಡ್‌ನಲ್ಲಿ  ಬಾಗಿಲು ನನ್ನ ಮಟ್ಟಿಗೆ ಸದ್ಯ ಕ್ಲೋಸ್​ ಆಗಿದ್ದರೂ  ಬಾಲಿವುಡ್‌ ನನ್ನನ್ನು ಸ್ವಾಗತಿಸಿದೆ. ನಾನು ಇಲ್ಲಿಯೇ ಚೆನ್ನಾಗಿದ್ದೇನೆ' ಎಂದಿದ್ದಾರೆ ರಾಚೆಲ್.

Anushka Shetty: ಅನುಷ್ಕಾ ಶೆಟ್ಟಿ ಸಿಗ್ತಾರೆಂದು 51 ಲಕ್ಷ ಟೋಪಿ ಹಾಕಿಸ್ಕೊಂಡ ಖ್ಯಾತ ನಿರ್ಮಾಪಕ!

 ನನಗೆ ಈ ಸಿನಿಮಾಕ್ಕೆ ಆಡಿಷನ್ (audition) ಕೊಡಿ ಅಂತ ಹೇಳಲು ಫೋನ್ ಮಾಡಿದಾಗ ನಾನು ಮಾಲ್ಡೀವ್ಸ್‌ನಲ್ಲಿದ್ದೆ. ಆಮೇಲೆ ಮುಂಬೈಗೆ ಬಂದು ಕಾಸ್ಟ್ಯೂಮ್ (constume) ನೋಡಿಕೊಂಡು ಆಡಿಷನ್ ಕೊಟ್ಟೆ, ಆಯ್ಕೆ ಆದೆ. ಈಗ ಪಠಾಣ್ ಸಿನಿಮಾಕ್ಕೆ ವಿಶ್ವದಾದ್ಯಂತ ಸಿಗುತ್ತಿರುವ ಪ್ರತಿಕ್ರಿಯೆ ತುಂಬ ಖುಷಿ ಕೊಟ್ಟಿದೆ" ಎಂದು ನಟಿ ಖುಷಿಯಿಂದ ಹೇಳಿಕೊಂಡಿದ್ದಾರೆ. 

click me!