ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಮತ್ತು ಆಮ್ ಆದ್ಮಿ ಪಕ್ಷದ ಸಂಸದ ರಾಘವ್ ಚಡ್ಡಾ ಅವರ ಮದುವೆಗೆ ಕ್ಷಣಗಣನೆ ಆರಂಭವಾಗಿದ್ದು, ಸಕಲ ಸಿದ್ಧತೆ ನಡೆಯುತ್ತಿದೆ.
ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಅವರು ಆಮ್ ಆದ್ಮಿ ಪಕ್ಷದ ನಾಯಕ ಮತ್ತು ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಅವರ ಮದುವೆಗೆ ಕೌಂಟ್ಡೌನ್ ಶುರುವಾಗಿದೆ. ಬರುವ 23 ಮತ್ತು 24 ರಂದು ಲೀಲಾ ಪ್ಯಾಲೇಸ್ ಮತ್ತು ದಿ ಒಬೆರಾಯ್ ಉದಯವಿಲಾಸ್‌ನಲ್ಲಿ ನಡೆಯಲಿದೆ. 30ನೇ ತಾರೀಖಿನಂದು ತಾಜ್ ಚಂಡೀಗಢದಲ್ಲಿ ರಿಸೆಪ್ಷನ್ ನಡೆಯಲಿದ್ದು, ಅದರ invitation card ವೈರಲ್ ಆಗಿದೆ. ಸರೋವರದ ಮೇಲೆ ನಿರ್ಮಿಸಲಾದ ಐಷಾರಾಮಿ ಹೋಟೆಲ್‌ನಲ್ಲಿ ಈ ಮದುವೆ ನಡೆಯಲಿದೆ. ಈ ಹೋಟೆಲ್ನ ದಿನದ ಬಾಡಿಗೆ ಗರಿಷ್ಠ 10 ಲಕ್ಷದವರೆಗೆ ಇದೆ. ಈ ಐಷಾರಾಮಿ ಹೋಟೆಲ್‌ನಲ್ಲಿ ಮದುವೆ ನಡೆಯಲಿದೆ. ಪರಿಣಿತಿ ಚೋಪ್ರಾ ಅವರ ಸೋದರ ಸಂಬಂಧಿ ಪ್ರಿಯಾಂಕಾ ಚೋಪ್ರಾ ಮತ್ತು ಅವರ ಪತಿ ನಿಕ್ ಜೋನಾಸ್ ವಿವಾಹದ ಭಾಗವಾಗಲಿದ್ದಾರೆ ಎನ್ನಲಾಗಿದೆ. ಇದಲ್ಲದೆ, ಅದ್ದೂರಿ ವಿವಾಹದಲ್ಲಿ ಎಎಪಿ ಮುಖ್ಯಸ್ಥ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಪಂಜಾಬ್ ಕೌಂಟರ್ ಭಗವಂತ್ ಮಾನ್ ಮತ್ತು ಇತರರು ಭಾಗವಹಿಸುವ ಸಾಧ್ಯತೆ ಇದೆ.
ಕಳೆದ ಮೇ 13 ರಂದು ದೆಹಲಿಯಲ್ಲಿ ನಿಶ್ಚಿತಾರ್ಥ (Engagement) ಮಾಡಿಕೊಂಡಿದ್ದ ಈ ಜೋಡಿಯ ಮದುವೆಗಾಗಿ ಫ್ಯಾನ್ಸ್ ಕಾತರದಿಂದ ಕಾಯುತ್ತಿದ್ದರು. ಎಂಗೇಜ್ಮೆಂಟ್ಗೂ ಮೊದಲು ಈ ಪ್ರೇಮ ಪಕ್ಷಿಗಳು ಸ್ವಲ್ಪ ಸಮಯದವರೆಗೆ ಪರಸ್ಪರ ಡೇಟಿಂಗ್ ನಡೆಸುತ್ತಿದ್ದಾರೆ ಎಂದು ಹಲವು ತಿಂಗಳುಗಳಿಂದ ಸುದ್ದಿಯಾಗಿದ್ದರೂ, ಜೋಡಿ ಮಾತ್ರ ಇದರ ಬಗ್ಗೆ ತುಟಿಕ್ ಪಿಟಿಕ್ ಎಂದಿರಲಿಲ್ಲ. ನಂತರ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ಎಲ್ಲರ ಕುತೂಹಲಕ್ಕೆ ತೆರೆ ಎಳೆದಿದ್ದರು.
undefined
ನಟಿ ಪರಿಣಿತಿ- ಸಂಸದ ರಾಘವ್ ರಿಸೆಪ್ಷನ್ ಕಾರ್ಡ್ ವೈರಲ್: ಪ್ರೀತಿಯ ಬಗ್ಗೆ ಮದುಮಗ ಮೌನ!
ಇದೀಗ, ಮದುವೆಗೂ ಮುನ್ನದ ದೆಹಲಿಯ ಚಡ್ಡಾ ಮನೆಯಲ್ಲಿ ಮದುವೆಯ ಪೂರ್ವದ ಹಬ್ಬಗಳು ಪ್ರಾರಂಭವಾಗಿವೆ. ಎಎಪಿ ನಾಯಕನ ನಿವಾಸದಲ್ಲಿ ಸೊಗಸಾದ ಅಲಂಕಾರಗಳಿಂದ ಅಲಂಕರಿಸಲ್ಪಟ್ಟಿದ್ದು, ಸಡಗರದ ಸಿದ್ಧತೆಗಳು ನಡೆಯುತ್ತಿವೆ. ಇದರ ವಿಡಿಯೋ ವೈರಲ್ ಆಗಿದೆ. ಈಗ ವೈರಲ್ ಆಗಿರೋ ವಿಡಿಯೋದಲ್ಲಿ ನೋಡುವಂತೆ ಪರಿಣಿತಿಯ ಮುಂಬೈ ಮನೆ ಕೂಡ ಅಲಂಕರಿಸಲ್ಪಟ್ಟಿದೆ. ವರದಿಗಳ ಪ್ರಕಾರ, ಮದುವೆಯ ಪೂರ್ವದ ಸಂಪ್ರದಾಯ ಪದ್ಧತಿಗಳು ನಡೆಯಲಿವೆ. ಇವುಗಳಲ್ಲಿ 'ಅರ್ದಾಸ್', 'ಶಾಬಾದ್ ಕೀರ್ತನೆ', ಭಕ್ತಿ ಗೀತೆ ಹಾಡುವಿಕೆ ಸೇರಿದಂತೆ ಸಾಂಪ್ರದಾಯಿಕ ಸಮಾರಂಭಗಳು ನಡೆಯಲಿವೆ. ಮದುವೆಯನ್ನು ಇನ್ನಷ್ಟು ಕುತೂಹಲಗೊಳಿಸಲು ಎರಡೂ ಕುಟುಂಬಗಳು ಮೋಜಿನ ಕ್ರಿಕೆಟ್ ಪಂದ್ಯವನ್ನೂ ಆಯೋಜಿಸಿವೆ.
ಬಳಿಕ ಉದಯಪುರದ ಲೀಲಾ ಪ್ಯಾಲೇಸ್‌ನಲ್ಲಿ ವಿವಾಹ ಮಹೋತ್ಸವಗಳು ಮತ್ತು ಆಚರಣೆಗಳು ನಡೆಯಲಿವೆ. ಆಪ್ತ ಸ್ನೇಹಿತರು ಮತ್ತು ಕುಟುಂಬ ಸದಸ್ಯರು ಮಾತ್ರ ಅಲ್ಲಿ ಸೇರಲಿದ್ದಾರೆ. ಹಳದಿ ಶಾಸ್ತ್ರ, ಮೆಹಂದಿ ಮತ್ತು ಸಂಗೀತವು ಸೆಪ್ಟೆಂಬರ್ 23 ರಂದು ಪ್ರಾರಂಭವಾಗಲಿದೆ. ಮದುವೆಯ ನಂತರ, ಹರಿಯಾಣದ ಗುರುಗ್ರಾಮ್‌ನಲ್ಲಿ ಆರತಕ್ಷತೆ ನಡೆಯಲಿದ್ದು, ಈ ಮದುವೆಗೆ 200 ಕ್ಕೂ ಹೆಚ್ಚು ಅತಿಥಿಗಳು ಮತ್ತು 50 ಕ್ಕೂ ಹೆಚ್ಚು ವಿವಿಐಪಿ ಅತಿಥಿಗಳಿಗೆ ಅವಕಾಶ ಕಲ್ಪಿಸಲು ವ್ಯವಸ್ಥೆ ಮಾಡಲಾಗಿದೆ. ಇಬ್ಬರ ವಿವಾಹವು ಪಂಜಾಬಿ ಶೈಲಿಯಲ್ಲಿ ನಡೆಯಲಿದೆ ಎಂದು ಮೂಲಗಳು ಹೇಳಿವೆ. ಕೆಲ ದಿನಗಳ ಹಿಂದೆ ಪರಿಣಿತಿ ಚೋಪ್ರಾ ಮತ್ತು ರಾಘವ್ ಚಡ್ಡಾ ಉಜ್ಜಯಿನಿಯ ಮಹಾಕಾಲ್ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು. ಸೀರೆಯುಟ್ಟ ಪರಿಣಿತಿ ಅಪ್ಪಟ ಗೃಹಿಣಿಯಂತೆಯೇ ವಿಡಿಯೋದಲ್ಲಿ ಕಂಗೊಳಿಸುತ್ತಿದ್ದರೆ, ರಾಘವ್ ಚಡ್ಡಾ ಅವರೂ ರಾಜಕಾರಣಿ ಹೊರತಾಗಿ ಪಂಚೆತೊಟ್ಟು ಮಂದಿರಲ್ಲಿ ಕಾಣಿಸಿಕೊಂಡಿದ್ದರು. ಇಬ್ಬರೂ ಮಾಲೆ ಧರಿಸಿ ಕುಂಕುಮ ಹಚ್ಚಿಕೊಂಡು ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವುದು ಹಾಗೂ ನಂತರ ಹೊರಕ್ಕೆ ಬಂದಿರುವ ದೃಶ್ಯ ವೈರಲ್ ಆಗಿದ್ದವು.
ಸರೋವರದ ಮೇಲಿನ ಐಷಾರಾಮಿ ಹೋಟೆಲ್‌ನಲ್ಲಿ ನಟಿ ಪರಿಣಿತಿ- ರಾಘವ್ ಮದ್ವೆಗೆ ಡೇಟ್ ಫಿಕ್ಸ್