ಹಿಜಾಬ್ ತೆಗೆಯದೇ ಆಹಾರ ತಿನ್ನುತ್ತಿರುವ ಫೋಟೋವೊಂದನ್ನು ದಂಗಲ್ ನಟಿ ಝೈರಾ ವಾಸಿಮ್ ತಮ್ಮ ಟ್ವೀಟರ್ ಹ್ಯಾಂಡಲ್‌ನಲ್ಲಿ ಶೇರ್ ಮಾಡಿಕೊಂಡಿದ್ದು, Personal Choice ಬಗ್ಗೆ ಚರ್ಚೆ ಹುಟ್ಟು ಹಾಕಿದೆ.
'ದಂಗಲ್' (Dangal) ಖ್ಯಾತಿಯ ಝೈರಾ ವಾಸಿಮ್ ಕೆಲವು ವರ್ಷಗಳ ಹಿಂದೆ ಬಾಲಿವುಡ್ ತೊರೆದು ಧಾರ್ಮಿಕ ಮಾರ್ಗವನ್ನು ಅನುಸರಿಸುತ್ತಿದ್ದರೂ, ಅವರು ವಿವಿಧ ವಿಷಯಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಈ ಹಿಂದೆ ಇವರ ಹೆಸರು ಬಹಳ ಸದ್ದು ಮಾಡಿದ್ದು, ಕರ್ನಾಟಕದ ಹಿಜಾಬ್ ವಿವಾದ ಭುಗಿಲೆದ್ದ ಸಂದರ್ಭದಲ್ಲಿ. ಶಾಲಾ-ಕಾಲೇಜುಗಳ ತರಗತಿಯಲ್ಲಿ ಹಿಜಾಬ್ ಧರಿಸಬಾರದು ಎಂದು ಆದೇಶ ಹೊರಡಿಸಿದ್ದಾಗ ಅದರ ವಿರುದ್ಧ ದನಿ ಎತ್ತಿದ್ದರು ಝೈರಾ. ಶಾಲಾ-ಕಾಲೇಜುಗಳಲ್ಲಿ ಹಿಜಾಬ್ (Hijab) ಅನ್ನು ನಿಷೇಧಿಸಿರುವುದು ಮಹಿಳೆಯರಿಗೆ ಅನ್ಯಾಯವಾಗಿದೆ ಎಂದು ಹೇಳಿದ್ದರು. ಕರ್ನಾಟಕ ಶಾಲೆಗಳಲ್ಲಿ ಹಿಜಾಬ್ ನಿಷೇಧವನ್ನು ಟೀಕಿಸುವ ಸುದೀರ್ಘ ಪೋಸ್ಟ್ ಅನ್ನು ಅವರು ಹಂಚಿಕೊಂಡಿದ್ದರು. ಫೇಸ್ಬುಕ್ನಲ್ಲಿ ಬರೆದಿದ್ದ ಸುದೀರ್ಘ ಟಿಪ್ಪಣೆ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಕಳೆದ ವರ್ಷದ ಜನವರಿ 1 ರಂದು ಉಡುಪಿಯ ಸರ್ಕಾರಿ ಪಿಯು ಕಾಲೇಜಿನ ಆರು ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ತಮ್ಮ ಕಾಲೇಜಿಗೆ ಪ್ರವೇಶಿಸಲು ಅನುಮತಿಸಲಿಲ್ಲ ಎಂಬ ಸುದ್ದಿ ಬಂದಾಗಿನಿಂದಲೂ ಕರ್ನಾಟಕದ ವಿರುದ್ಧ ದನಿ ಎತ್ತಿದ್ದರು ಈ ನಟಿ.
ಅವರು ಹಿಜಾಬ್ ಧರಿಸುವುದನ್ನು "ದೇವರು ತನ್ನ ಮೇಲೆ ವಿಧಿಸಿದ ಬಾಧ್ಯತೆಯನ್ನು ಪೂರೈಸುವುದು" ಎಂದಿದ್ದ ಝೈರಾ (Zaira Wasim), 'ನಾನು, ಹಿಜಾಬ್ ಧರಿಸುವ ಮಹಿಳೆಯ ಪರವಾಗಿ ಇರುತ್ತೇನೆ. ಮಹಿಳೆಯರನ್ನು ತಡೆಯುವ ಮತ್ತು ಕಿರುಕುಳ ನೀಡುತ್ತಿರುವ ಈ ಸಂಪೂರ್ಣ ವ್ಯವಸ್ಥೆಯನ್ನು ವಿರೋಧಿಸುತ್ತೇನೆ. ಮುಸ್ಲಿಂ ಹುಡುಗಿಯರು ಹಿಜಾಬ್ ಧರಿಸುವುದನ್ನು ಬ್ಯಾನ್ ಮಾಡಿ ಅವರ ಶಿಕ್ಷಣಕ್ಕೆ ಅನ್ಯಾಯ ಮಾಡಲಾಗುತ್ತಿದೆ. ಮುಸ್ಲಿಂ ಮಹಿಳೆಯರ ವಿರುದ್ಧ ಈ ಪಕ್ಷಪಾತವನ್ನು ಜೋಡಿಸುವುದು ನಾನು ಒಪ್ಪುವುದಿಲ್ಲ' ಎಂದು ಕರ್ನಾಟಕ ಸರ್ಕಾರವನ್ನು ಕಟುವಾಗಿ ಟೀಕಿಸಿದ್ದರು ನಟಿ ಝೈರಾ.
Hijab Row: ಹಿಜಾಬ್ ಆಯ್ಕೆಯಲ್ಲ, ಕಟ್ಟುಪಾಡು: ದಂಗಲ್ ಖ್ಯಾತಿಯ ಝೈರಾ
ಇಂತಿಪ್ಪ ಝೈರಾ, ಇದೀಗ ಮತ್ತೆ ಸಾಮಾಜಿಕ ಜಾಲತಾಣದ (Social Media) ಮೂಲಕ ಗಮನ ಸೆಳೆಯುತ್ತಿದ್ದಾರೆ. ಅವರ ಟ್ವೀಟ್ ಎಲ್ಲರ ಗಮನ ಸೆಳೆದಿದ್ದು, ಚರ್ಚೆಗೆ ಒಳಗಾಗಿದೆ. ಟ್ವೀಟ್ನಲ್ಲಿ ಅವರು, 'ಈಗಷ್ಟೇ ಮದುವೆಗೆ ಹಾಜರಾಗಿದ್ದೇನೆ. ಸರಿಯಾಗಿ ತಿಂದೆ. ಸಂಪೂರ್ಣವಾಗಿ ತಿನ್ನುವ ಆಯ್ಕೆ ನನ್ನದು, ಅದನ್ನು ನಾನು ಖುಷಿ ಪಟ್ಟಿದ್ದೇನೆ. ನನ್ನ ಸುತ್ತಲಿರುವವರೆಲ್ಲರೂ ನಾನು ನಿಖಾಬ್ ತೆಗೆಯುವಂತೆ ನನ್ನನ್ನು ಕೆಣಕುತ್ತಿದ್ದರು. ಆದರೆ ನಾನು ಹಾಗೆ ಮಾಡಲಿಲ್ಲ. ನಿಖಾಬ್ ಜೊತೆಗೇ ಊಟ ಸವಿದೆ. ಇದು ನನ್ನ ಹಕ್ಕು' ಎಂದಿದ್ದಾರೆ. ಈ ರೀತಿ ಮಾಡಿರುವುದು ನನಗೆ ತುಂಬಾ ಸಂತೋಷ ತಂದಿದೆ ಎಂದಿದ್ದಾರೆ.
ಅಮೀರ್ ಖಾನ್ ಅಭಿನಯದ 'ದಂಗಲ್' ಚಿತ್ರದೊಂದಿಗೆ ಬಾಲಿವುಡ್ಗೆ (Bollywood) ಪ್ರವೇಶಿಸಿದ್ದರು ನಟಿ ಝೈರಾ. ಝೈರಾ ತಮ್ಮ 16ನೇ ವಯಸ್ಸಿನಲ್ಲಿ ಬಾಲಿವುಡ್ಗೆ ಪ್ರವೇಶಿಸಿದ್ದರು. ಅವರು ಅದರ ನಂತರ ಎರಡು ಚಲನಚಿತ್ರಗಳಲ್ಲಿ ನಟಿಸಿದರು - ಸೀಕ್ರೆಟ್ ಸೂಪರ್‌ಸ್ಟಾರ್ (Secret Superstar) ಮತ್ತು ದಿ ಸ್ಕೈ ಈಸ್ ಪಿಂಕ್. ಆದರೆ ನಂತರ 2019 ರಲ್ಲಿ 18 ನೇ ವಯಸ್ಸಿನಲ್ಲಿ ನಟನೆಯಿಂದ ನಿವೃತ್ತರಾದರು. ನಿರ್ಧಾರದ ಬಗ್ಗೆ ಮಾತನಾಡುತ್ತಾ ಅವರು, ತಮ್ಮ ನಟನಾ ವೃತ್ತಿಯು ನನ್ನ ಧಾರ್ಮಿಕ ನಂಬಿಕೆಗಳು ಮತ್ತು ನಂಬಿಕೆಯೊಂದಿಗೆ ಘರ್ಷಣೆಯಾಗುತ್ತಿದೆ. ಆದ್ದರಿಂದ ನಟನೆಯನ್ನು ತೊರೆಯುತ್ತಿದ್ದೇನೆ ಎಂದಿದ್ದರು. ಸಮಯ ಸಿಕ್ಕಾಗಲೆಲ್ಲಾ ಹಿಜಾಬ್ ಪರವಾಗಿ ವಾದಿಸುತ್ತಿರುವ ನಟಿ, ಹಿಜಾಬ್ ಇಸ್ಲಾಂನ ಒಂದು ಬಾಧ್ಯತೆ, ಆಯ್ಕೆಯಲ್ಲ ಎಂದು ಹೇಳುತ್ತಿರುತ್ತಾರೆ. ನಾನು ಕೃತಜ್ಞತೆ ಮತ್ತು ನಮ್ರತೆಯಿಂದ ಹಿಜಾಬ್ ಧರಿಸಿಸುತ್ತೇನೆ. ಕೇವಲ ಧಾರ್ಮಿಕ ಬದ್ಧತೆಯನ್ನು ನಿರ್ವಹಿಸುವುದಕ್ಕಾಗಿ ಮಹಿಳೆಯರನ್ನು ನಿಲ್ಲಿಸಿ ಕಿರುಕುಳ (Harassment) ನೀಡುತ್ತಿರುವ ಈ ಸಂಪೂರ್ಣ ವ್ಯವಸ್ಥೆಯನ್ನು ವಿರೋಧಿಸುತ್ತೇನೆ ಎನ್ನುತ್ತಾರೆ. ಮುಸ್ಲಿಂ ಮಹಿಳೆಯರಿಗೆ ಶಿಕ್ಷಣ ಹಾಗೂ ಹಿಜಬ್ ನಡುವೆ ಆಯ್ಕೆಯಾಗಿಸುವಂತೆ ಮಾಡಿರುವುದು ಅನ್ಯಾಯ. ಇದೆಲ್ಲವನ್ನೂ ಸಬಲೀಕರಣ ಹೆಸರಿನಲ್ಲಿ ಮಾಡಲಾಗುತ್ತಿದೆ. ಆದರೆ ಇದು ಮುಸ್ಲಿಮ್ ಮಹಿಳೆಗೆ (Muslim Women) ಪಕ್ಷಪಾತವಾಗಿದೆ ಎನ್ನುವುದು ಅವರ ಧೋರಣೆ. ಇದೀಗ ಹಿಜಾಬ್ ಧರಿಸಿ ಊಟ ಮಾಡುವುದು ಸಂತಸ ತರುತ್ತಿದೆ ಎಂದಿದ್ದಾರೆ.
ಧರ್ಮಕ್ಕಾಗಿ ನಟನೆ ಬಿಟ್ಟ ನಟಿ ಝೈರಾಳಿಂದ ಫ್ಯಾನ್ಸ್‌ಗೆ ಹೊಸ ರಿಕ್ವೆಸ್ಟ್
Just attended a wedding. Ate exactly like this. Purely my choice. Even when everyone around me kept nagging me that I take the niqab off. I didn’t.
We don’t do it for you. Deal with it. https://t.co/Gu9AXQka8v