ಸೊಂಟದಿಂದ ನಿರ್ದೇಶಕರನ್ನು ಸುಸ್ತು ಮಾಡಿದ್ರಂತೆ ಮಂದಿರಾ ಬೇಡಿ! DDLJ ಕಥೆ ಹೇಳಿದ ನಟಿ

By Suchethana D  |  First Published Jun 18, 2024, 8:44 PM IST

ಸೊಂಟದಿಂದ ನಿರ್ದೇಶಕರನ್ನು ಸುಸ್ತು ಮಾಡಿದ್ರಂತೆ ಮಂದಿರಾ ಬೇಡಿ! DDLJ ಕಥೆ ಹೇಳಿದ ನಟಿ ಹೇಳಿದ್ದೇನು? 
 


 1995 ರಲ್ಲಿ ಬಿಡುಗಡೆಯಾದ ಶಾರುಖ್ ಖಾನ್ ಮತ್ತು ಕಾಜೋಲ್ ಅವರ ರೊಮ್ಯಾಂಟಿಕ್ ಬಾಲಿವುಡ್ ಚಲನಚಿತ್ರ, ದಿಲ್​ವಾಲೆ ದುಲ್ಹನಿಯಾ ಲೇ ಜಾಯೇಂಗೆ (DDLJ). ಅದನ್ನು  ಕ್ಲಾಸಿಕ್ ಎಂದು ಪರಿಗಣಿಸಲಾಗಿದೆ.ಆದಿತ್ಯ ಚೋಪ್ರಾ ನಿರ್ದೇಶನದ ಈ ಚಿತ್ರದಲ್ಲಿ ತಾರಾ ಬಳಗದ ನಟನೆಯಿಂದ ಹಿಡಿದು ಚಿತ್ರದ ಧ್ವನಿಪಥದ ಸುಮಧುರ ಬೀಟ್‌ಗಳವರೆಗೆ ಎಲ್ಲವೂ  ಇಂದಿಗೂ ಸಿನಿಪ್ರಿಯರ ಮನದಲ್ಲಿ ನೆಲೆಯೂರಿದೆ.  ಇತ್ತೀಚೆಗೆ, DDLJ ನಲ್ಲಿ ಪ್ರಿಯಾ  ಆಗಿ ನಟಿಸಿರುವ ನಟಿ ಮಂದಿರಾ ಬೇಡಿ,  ಚಿತ್ರದ ಸೆಟ್‌ಗಳಿಂದ ಕುತೂಹಲದ ಮಾಹಿತಿಯನ್ನು ಶೇರ್​ ಮಾಡಿಕೊಂಡಿದ್ದಾರೆ.  ಅದು ಡಿಡಿಎಲ್​ಜೆ ಹಾಡಿನ  ಹಾಡಿನ ಚಿತ್ರೀಕರಣದ ಅನುಭವ ಇದಾಗಿದೆ. 

ಹ್ಯೂಮನ್ಸ್ ಆಫ್ ಬಾಂಬೆಗೆ ನೀಡಿರುವ ಸಂದರ್ಶನದಲ್ಲಿ, ಮಂದಿರಾ ಬೇಡಿ ಈ ಚಿತ್ರದ ಮೊದಲ ನಾಲ್ಕು ಭಯಾನಕ ದಿನಗಳನ್ನು ನೆನಪಿಸಿಕೊಂಡಿದ್ದಾರೆ.  ಆ ಹಾಡಿನ ಸಮಯದಲ್ಲಿ ಆಗಿರುವ ದೊಡ್ಡ ಪೇಚಾಟವನ್ನು  ಬಹಿರಂಗಪಡಿಸಿದ್ದಾರೆ.  ನನಗೇನೂ ಕ್ಯಾಮೆರಾದ ಭಯವಿರಲಿಲ್ಲ. ಆದರೆ ಆ ಡ್ಯಾನ್ಸ್​ ನನಗೆ ಮಾಡಲು ಸಾಧ್ಯವೇ ಆಗಿರಲಿಲ್ಲ. ಏಕೆಂದರೆ ಅದು ಸೊಂಟದ ವಿಷ್ಯವಾಗಿತ್ತು ಎಂದಿದ್ದಾರೆ.  ಅವರ ಮಾತಿನಲ್ಲಿಯೇ ಹೇಳುವುದಾದರೆ, "ಶೂಟಿಂಗ್​ನ ಮೊದಲ ನಾಲ್ಕು ದಿನಗಳಲ್ಲಿ ಭಯಾನಕವಾಗಿತ್ತು. ಏಕೆಂದರೆ  'ಮೆಹೆಂದಿ ಲಗಾ ಕೆ ರಖನಾ ಹಾಡಿನ ಶೂಟಿಂಗ್ ಆರಂಭಿಸಿದಾಗ ನನಗೆ ನಡುಕ ಹುಟ್ಟಿತ್ತು. ಏಕೆಂದರೆ,  ಸೊಂಟ ಬಳುಕಿಸಲು ನನಗೆ ಬರುತ್ತಿರಲಿಲ್ಲ ಎಂದಿದ್ದಾರೆ.

Tap to resize

Latest Videos

ಇನ್ಮುಂದೆ ಕತ್ತಲು ಕಡಿಮೆ, ಹಗಲು ಹೆಚ್ಚಂತೆ: ವಿಜ್ಞಾನಿಗಳಿಂದ ಬಯಲಾಯ್ತು ಸತ್ಯ!
 
 ನೃತ್ಯ ನಿರ್ದೇಶಕರು ಬಯಸಿದಂತೆ ಸೊಂಟವನ್ನು ಬಳುಕಿಸಲು ನನ್ನಿಂದ ಸಾಧ್ಯವೇ ಆಗಲಿಲ್ಲ.  ಹೀಗಾಗಿ, ಖ್ಯಾತ ಬಾಲಿವುಡ್ ನೃತ್ಯ ಸಂಯೋಜಕ, ದಿವಂಗತ ಸರೋಜ್ ಖಾನ್ ಅವರು ನನ್ನ ನೃತ್ಯದ ಚಲನೆಯನ್ನು ಸನ್ನಿ ಡಿಯೋಲ್‌ಗೆ ಹೋಲಿಸಿದರು. ಏನು ಮಾಡಿದರೂ  ಸೊಂಟ ಸರಿ ಮಾಡಲು ಆಗಲೇ ಇಲ್ಲ. ಸುಸ್ತಾಗಿ ಹೋದೆ. ಆದರೆ ಏನು ಮಾಡಿದರೂ ಅದು ಸಾಧ್ಯವಾಗಲಿಲ್ಲ. ಹಣಕ್ಕಾಗಿ ನಾನು ನನ್ನ ಸೊಂಟ ಬಳುಕಿಸಲು ಟ್ರೈ ಮಾಡಲು ಹೋಗಲಿಲ್ಲ. ಸರೋಜ್​ ಖಾನ್​ ಅವರು  ನೀವು ಸನ್ನಿ ಡಿಯೋಲ್‌ನಂತೆ ನಿಮ್ಮ ಭುಜಗಳನ್ನು ಅಲ್ಲಾಡಿಸುತ್ತಿದ್ದೀರಿ. ನೀವು ನಿಮ್ಮ ಸೊಂಟವನ್ನು ಅಲ್ಲಾಡಿಸಬೇಕು ಎಂದು ಎಷ್ಟೇ ಹೇಳಿದರೂ ಕೊನೆಗೂ ಸಾಧ್ಯವಾಗಲಿಲ್ಲ ಎಂದಿದ್ದಾರೆ.  

ಆದರೆ ನೃತ್ಯಕ್ಕೆ ಇದು ಬೇಕೇ ಆಗಿತ್ತು. ಈ ಹಿನ್ನೆಲೆಯಲ್ಲಿ ಅಲ್ಪ ಸ್ವಲ್ಪ ಸೊಂಟ ಬಳಕಿಸುವಲ್ಲಿ ಮಂದಿರಾ ಬೇಡಿ ಯಶಸ್ವಿಯಾದರಂತೆ! ಅಂದಹಾಗೆ, 1994 ರಿಂದ ಆಗಸ್ಟ್ 1995 ರವರೆಗೆ ಭಾರತ, ಲಂಡನ್ ಮತ್ತು ಸ್ವಿಟ್ಜರ್ಲೆಂಡ್‌ನಲ್ಲಿ ಈ ಚಿತ್ರದ ಶೂಟಿಂಗ್​  ಮಾಡಲಾಯಿತು.  

ಜಾತಕ ತೋರಿಸೋದಕ್ಕಿಂತ, ಮದುವೆಗೂ ಮುಂಚೆ ಈ 2 ಮೆಡಿಕಲ್ ಟೆಸ್ಟ್ ಮಾಡಿಸಿ!

click me!