ದಕ್ಷಿಣ ಭಾರತದ ಪ್ರಸಿದ್ಧ ನಟಿ ಸಮಂತಾ ಡೇಟಿಂಗ್ ಸುದ್ದಿ ವೈರಲ್ ಆಗಿದೆ. ನಟಿ, ನಿರ್ದೇಶಕರೊಬ್ಬರನ್ನು ಡೇಟ್ ಮಾಡ್ತಿದ್ದಾರೆ ಎನ್ನಲಾಗಿದೆ. ರೆಡ್ಡಿಟ್ ಪೋಸ್ಟ್ ನಲ್ಲಿ ಇದಕ್ಕೆ ಪುಷ್ಠಿ ಸಿಕ್ಕಿದ್ದು, ಕೆಲ ಅಭಿಮಾನಿಗಳು ಸಮಂತಾ ಕೆಲಸವನ್ನು ಖಂಡಿಸಿದ್ದಾರೆ.
ದಕ್ಷಿಣ ಭಾರತದ ಪ್ರಸಿದ್ಧ ನಟಿ ಸಮಂತಾ ರುತ್ ಪ್ರಭು, ಪತಿ ನಾಗ ಚೈತನ್ಯ ಅವರಿಂದ ಬೇರ್ಪಟ್ಟ ನಂತ್ರ ವೈಯಕ್ತಿಕ ವಿಷ್ಯಕ್ಕೆ ಸುದ್ದಿಯಲ್ಲಿರ್ತಾರೆ. ಈಗ ಮತ್ತೆ ಸಮಂತಾ ಚರ್ಚೆಗೆ ಬಂದಿದ್ದಾರೆ. ಅವರ ಬಗ್ಗೆ ಒಂದು ಗಂಭೀರ ಆರೋಪ ಕೇಳಿ ಬಂದಿದೆ. ನಿರ್ದೇಶಕ ರಾಜ್ ಜೊತೆ ಸಮಂತಾ ಡೇಟ್ ಮಾಡ್ತಿದ್ದಾರೆ ಎಂಬ ಸುದ್ದಿಯಿತ್ತು. ಅದಕ್ಕೆ ಪುಷ್ಟಿ ನೀಡುವ ಪೋಸ್ಟ್ ಒಂದು ವೈರಲ್ ಆಗಿದೆ. ರಾಜ್ ಗೆ ಈಗಾಗಲೇ ಮದುವೆಯಾಗಿದ್ದು, ಸಮಂತಾ, ರಾಜ್ ದಾಂಪತ್ಯಕ್ಕೆ ಕೊಳ್ಳಿ ಇಟ್ಟಿದ್ದಾರೆ ಎಂಬ ಬಿಸಿ ಬಿಸಿ ಚರ್ಚೆ ಶುರುವಾಗಿದೆ.
ಗುರುವಾರ ರೆಡ್ಡಿಟ್ (Reddit) ಪೋಸ್ಟ್ ನಲ್ಲಿ ಸಮಂತಾ (Samantha), ಖ್ಯಾತ ನಿರ್ದೇಶಕ ಸಮಂತಾ ಜೊತೆ ಡೇಟ್ ಮಾಡ್ತಿದ್ದಾರೆ ಎನ್ನಲಾಗಿದೆ. ನಿರ್ದೇಶಕ ರಾಜ್, ಪತ್ನಿಯಿಂದ ದೂರವಿದ್ದಾರೆ ಎಂಬ ವಿಷ್ಯವನ್ನೂ ಪೋಸ್ಟ್ ನಲ್ಲಿ ಹೇಳಲಾಗಿದೆ. ವಿಚ್ಛೇದಿತ (Divorced) ನಟಿ ಈಗ ಮತ್ತೊಂದು ಮನೆಯನ್ನು ಹಾಳು ಮಾಡಿದ್ದಾರೆ ಎಂದು ಪೋಸ್ಟ್ ನಲ್ಲಿ ಹೇಳಲಾಗಿದ್ದಲ್ಲದೆ ಬಲ್ಲ ಮೂಲಗಳಿಂದ ಈ ವಿಷ್ಯ ಬಹಿರಂಗವಾಗಿದೆ ಎಂದು ರೆಡ್ಡಿಟ್ ಪೋಸ್ಟ್ ನಲ್ಲಿ ಬರೆಯಲಾಗಿದೆ.
undefined
ನಟ ಯಶ್ ಸಾಧನೆ ನನಗೆ ಸ್ಫೂರ್ತಿ, ಸುದೀಪ್ ವ್ಯಕ್ತಿತ್ವ ನನಗೆ ಮಾದರಿ: ನಟಿ ಮಾನ್ಯ ಗೌಡ
ಏನು ಆರೋಪಗಳಿದ್ದವೋ ಅದು ಸತ್ಯ. ಸಮಂತಾ, ನಿರ್ದೇಶಕ ರಾಜ್ ಜೊತೆ ಡೇಟ್ ಮಾಡ್ತಿದ್ದಾರೆ. ನನ್ನ ಒಬ್ಬ ಸ್ನೇಹಿತರು ಇವರ ಬಳಿ ಕೆಲಸ ಮಾಡ್ತಿದ್ದು, ಅವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಸ್ತ್ರೀವಾದ, ಆಧ್ಯಾತ್ಮಿಕತೆ, ತತ್ವಶಾಸ್ತ್ರದ ಬಗ್ಗೆ ಮಾತನಾಡುವ ಮಹಿಳೆ ಸಮಂತಾ, ಯಾರೋ ಒಬ್ಬರ ಮದುವೆಯನ್ನು ಮುರಿಯಲು ಮುಂದಾಗ್ತಾರೆ ಅಂದ್ರೆ ಅದನ್ನು ನಂಬಲು ಸಾಧ್ಯವಿಲ್ಲ. ರಾಜ್ ಈಗ ತನ್ನ ಹೆಂಡತಿಯೊಂದಿಗೆ ವಾಸಿಸುತ್ತಿಲ್ಲ ಎಂದು ಪೋಸ್ಟ್ ಹಂಚಿಕೊಳ್ಳಲಾಗಿದೆ.
ರೆಡ್ಡಿಟ್ ಪೋಸ್ಟ್ ಗೆ ಅನೇಕರು ಪ್ರತಿಕ್ರಿಯೆ ನೀಡಿದ್ದಾರೆ. ಬಳಕೆದಾರರೊಬ್ಬರು ಈ ಪೋಸ್ಟ್ ಸತ್ಯ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಹೌದು, ರಾಜ್ ಪತ್ನಿ ಶ್ಯಾಮಲಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಬಗ್ಗೆ ಸುಳಿವು ನೀಡಿದ್ದಾರೆ. ನೀವು ಯಾವ ರಾಜ್ ಅಂತ ಕೇಳಿದ್ರೆ, ರಾಜ್ ನಿಡಿಮೋರಿ ಎಂದು ಕಮೆಂಟ್ ಮಾಡಿದ್ದಾರೆ.
ಯಾರೋ ಸಮಂತ ಮದುವೆ ಮುರಿದ್ರು, ಈಗ ಸಮಂತ ಇನ್ನೊಬ್ಬರ ಮದುವೆ ಮುರಿಯುತ್ತಿದ್ದಾರೆ ಎಂದು ಮತ್ತೊಬ್ಬ ಬಳಕೆದಾರರು ಕಮೆಂಟ್ ಮಾಡಿದ್ದಾರೆ. ಪ್ರತಿ ಬಾರಿ ಮಹಿಳೆಯರನ್ನೇ ಏಕೆ ದೂಷಿಸಲಾಗುತ್ತದೆ. ಆತ ಕೂಡ ವಿವಾಹಿತ. ಆತ ಬೇರೆಯವರ ಜೊತೆ ಡೇಟ್ ಮಾಡ್ತಿದ್ದಾನೆ ಅಂದ್ಮೇಲೆ ಇದ್ರಲ್ಲಿ ಇಬ್ಬರದ್ದೂ ತಪ್ಪಿದೆ. ಬರೀ ಸಮಂತಾ ತಪ್ಪನ್ನು ಏಕೆ ಹೇಳ್ತೀರಿ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.
ಸಮಂತಾ ರುತು ಪ್ರಭು ಹಲವಾರು ವರ್ಷಗಳ ಕಾಲ ನಾಗ ಚೈತನ್ಯ ಜೊತೆ ಡೇಟ್ ಮಾಡಿದ್ದರು. ನಂತ್ರ 2017ರಲ್ಲಿ ಇವರಿಬ್ಬರ ಮದುವೆ ನಡೆದಿತ್ತು. ಮದುವೆಯಾದ ನಾಲ್ಕೇ ವರ್ಷಕ್ಕೆ ಇಬ್ಬರು ದೂರವಾಗುವ ನಿರ್ಧಾರ ತೆಗೆದುಕೊಂಡಿದ್ದರು. ಅವರ ವಿಚ್ಛೇದನಕ್ಕೆ ಕಾರಣ ತಿಳಿದಿಲ್ಲ. ವೈಯಕ್ತಿಕ ವಿವಾದದ ಮಧ್ಯೆಯೇ ಸಮಂತಾ ಕೆಲಸದಲ್ಲಿ ಬ್ಯುಸಿಯಿದ್ದಾರೆ.
ಫೆರ್ಗಿ, ದಿ ಫ್ಯಾಮಿಲಿ ಮ್ಯಾನ್, ಗನ್ಸ್ ಮತ್ತು ಗುಲಾಬ್ ಸಿರೀಸ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಶೋರ್ ಇನ್ ದಿ ಸಿಟಿ, ಗೋ ಗೋವಾ ಗಾನ್, ಹ್ಯಾಪಿ ಎಂಡಿಂಗ್, ಎ ಜಂಟಲ್ಮ್ಯಾನ್ ಮತ್ತು ಸ್ತ್ರೀ ಸಿನಿಮಾ ನಿರ್ದೇಶನ ಮಾಡಿದ್ದಾರೆ.
ಭೀಮ ಸಿನಿಮಾ ಯಾಕೆ ನೋಡಬೇಕು..?: ದುನಿಯಾ ವಿಜಯ್ ಏನ್ ಹೇಳ್ತಾರೆ!
37 ವರ್ಷದ ಸಮಂತಾ ಏನೂ ಮಾಡಿದ್ರೂ ಇತ್ತೀಚಿಗೆ ಸುದ್ದಿಯಾಗ್ತಾರೆ. ಸಂದರ್ಶನವೊಂದರಲ್ಲಿ ಆಹಾರಕ್ಕಿಂತ ಸೆಕ್ಸ್ ಮುಖ್ಯ ಎಂಬ ಹೇಳಿಕೆ ನೀಡಿದ್ದ ಅವರ ವಿಡಿಯೋ ಈಗ ಮತ್ತೆ ವೈರಲ್ ಆಗಿದೆ. ಒಂದು ಕಾಲದಲ್ಲಿ ಸರಿಯಾಗಿ ಊಟಕ್ಕೂ ಕಷ್ಟಪಟ್ಟಿದ್ದ ಸಮಂತಾ ಬಳಿ ಈಗ ನೂರು ಕೋಟಿಗೂ ಹೆಚ್ಚು ಆಸ್ತಿ ಇದೆ.