Palash Sen: ಸಂಗೀತವನ್ನು ಕಾಂಡೋಮ್‌ಗೆ ಹೋಲಿಸಿದ ಖ್ಯಾತ ಗಾಯಕ

By Suvarna NewsFirst Published Nov 6, 2021, 10:55 AM IST
Highlights
  • Palash Sen: ಸಂಗೀತವನ್ನು(Music) ಕಾಂಡೋಮ್‌ಗೆ(Condom) ಹೋಲಿಸಿದ ಗಾಯಕ
  • ಸಂಗೀತದ ಕುರಿತು ಮಾತನಾಡಿದ ಖ್ಯಾತ ಗಾಯಕ(Singer)

ಖ್ಯಾತ ಗಾಯಕ ಪಾಲಾಶ್ ಸೆನ್(Palash Sen) ಅವರು ಸಂಗೀತವನ್ನು ಕಾಂಡೋಮ್‌ಗೆ(Condom) ಹೋಲಿಸಿ ಮಾತನಾಡಿದ್ದಾರೆ. ಸಂಗೀತ(Music) ಗುಣಮಟ್ಟದ ಬಗ್ಗೆ ಮಾತನಾಡಿದ ಅವರು ಸಂಗೀತವನ್ನು ಕಾಂಡೋಮ್‌ನಂತೆಯೇ ಬಳಸಿ ಎಸೆಯಲಾಗುತ್ತಿದೆ ಎಂದು ಹೇಳಿದ್ದಾರೆ.

ವಾಣಿಜ್ಯೀಕರಣದಿಂದಾಗಿ ಸಂಗೀತದ ಗುಣಮಟ್ಟ ನಶಿಸುತ್ತಿದೆ. ಇದೆಲ್ಲವೂ ನಡೆಯುತ್ತಿರುವುದು ವಾಣಿಜ್ಯೀಕರಣದ ಪ್ರಭಾವದಿಂದ ಎಂದಿದ್ದಾರೆ. ನೀವು ಹೋಗಿ ಖರೀದಿಸುತ್ತೀರಿ, ಬಳಸುತ್ತೀರಿ, ಎಸೆಯುತ್ತೀರಿ, ಈ ಎಲ್ಲಾ ಸಿಸ್ಟಮ್ ಸೇರಿ ಸಂಗೀತ ಎನ್ನುವುದು ಕಾಂಡೋಮ್ ಆಗಿದೆ ಎಂದು 56 ವರ್ಷದ ಗಾಯಕ ಅಭಿಪ್ರಾಯಪಟ್ಟಿದ್ದಾರೆ.

Aryan Khan Drug Case; ತನಿಖಾಧಿಕಾರಿ ಸ್ಥಾನದಿಂದ ಸಮೀರ್ ವಾಂಖೆಡೆಗೆ ಕೊಕ್!

ಈಗ ಮೆರಿಟ್ ಎನ್ನುವುದು ಮುಖ್ಯವೇ ಅಲ್ಲ. ನೀವೊಂದು ರೇಡಿಯೋ ಕೊಳ್ಳಬಹುದಾದರೆ, ಫೇಸ್‌ಬುಕ್, ರೆಡಿಯೋ, ಮೀಡಿಯಾಗಳಲ್ಲಿ ಹಾಡು ಕೇಳಬಹುದು. ನಿಜವಾಗಿಯೂ ಉತ್ತಮ ಹಾಡನ್ನು ಹೊಂದಿರುವ ಯಾರನ್ನೂ ನೀವು ತಲುಪಬಹುದು. ಅದು ದೊಡ್ಡ ಚಿಂತೆಯ ವಿಷಯ. ಭಾರತದಲ್ಲಿ ಬಾಲಿವುಡ್(Bollywood) ಸಂಗೀತ ಮಾತ್ರ ಇದೆ ಎಂದು ನೀವು ಏಕೆ ಭಾವಿಸುತ್ತೀರಿ? ಏಕೆಂದರೆ ಬಾಲಿವುಡ್‌ನಲ್ಲಿ ಬೇಕಾದಷ್ಟು ಹಣವಿದೆ, ಅದನ್ನು ಖರೀದಿಸಲು ಅವರ ಬಳಿ ಹಣವಿದೆ. ಆದರೆ ಅಂತಿಮವಾಗಿ ಇದು ಉತ್ತಮ ಸಂಗೀತವಲ್ಲ. ನೀವು ಖರೀದಿಸುವ ಸಂಗೀತ ಅಷ್ಟೆ. ಇದು ನಿಜವಾಗಿಯೂ ಬಹಳ ದೊಡ್ಡ ಚಿಂತೆಯಾಗಿದೆ ಎಂದು ಹೇಳಿದ್ದಾರೆ.

ಬಾಲಿವುಡ್‌ನಲ್ಲಿ ಐಡಿಯಾಗಳಿಲ್ಲ:

ಬಾಲಿವುಡ್‌ನಲ್ಲಿ ಐಡಿಯಾಗಳಿಲ್ಲ. ಹಳೆಯ ಹಾಡುಗಳನ್ನೇ ಮತ್ತೆ ಮತ್ತೆ ಹೊಸದಾಗಿ ಮಾಡುತ್ತಿದೆ. ಈಗ ಮಾಡಿರೋ ಹಾಡುಗಳೆಲ್ಲವೂ ಒಂದೇ ರೀತಿ ಕೇಳಿಸುತ್ತದೆ. ಯಾವ ವ್ಯತ್ಯಾಸವೂ ಕಾಣಿಸುವುದಿಲ್ಲ. ಎಷ್ಟು ವ್ಯೂಸ್ ಸಿಕ್ಕಿತೆಂಬ ವಿಚಾರವೇ ಮುಖ್ಯ. 500 ಮಿಲಿಯನ್ ವ್ಯೂಸ್ ಬಂದರೆ ಸಾಕಲ್ಲ.. ಆದರೆ ಈ 500, 800 ವ್ಯೂಗಳು ಸಿಗೋದು ಹೇಗೆ ? ನಮಗೆಲ್ಲರಿಗೂ ಗೊತ್ತು. ಇದೆಲ್ಲವೂ ಹಣದ ಪ್ರಭಾವ. ಇತ್ತೀಚೆಗೆ ಒಬ್ಬ ಕಲಾವಿದ ತನ್ನ ಹಾಡಿನ ಮೊದಲ ದಿನ 25 ಲಕ್ಷ ಖರ್ಚು ಮಾಡಿದ. ನಾನವನ ಹೆಸರನ್ನು ಹೇಳುವುದಿಲ್ಲ. ಇದು ನಿಜಕ್ಕೂ ಬೇಸರದ ಸಂಗತಿ ಎಂದಿದ್ದಾರೆ.

ಪ್ರತಿಭೆಗಳಿಗೆ ಅವಕಾಶವಿಲ್ಲ:

ಹಣದ ಶಕ್ತಿಯಿಂದ, ಪ್ರಭಾವದಿಂದಾಗಿ ಪ್ರತಿಭೆಗಳು ಅವಕಾಶ ವಂಚಿತರಾಗುತ್ತಿದ್ದಾರೆ. ಯಾರಲ್ಲೋ ಒಳ್ಳೆಯ ಹಾಡಿದೆ, ಅದು ಎಲ್ಲರಿಗೂ ತಲುಪುಬೇಕಾಗಿರುವಂತದ್ದು ಎಂದಾದರೆ ಅದು ಎಂದಿಗೂ ಜನರನ್ನು ತಲುಪುವುದಿಲ್ಲ. ಆದರೆ ಕೆಲವು ಕೆಟ್ಟ ಕೆಟ್ಟ ಹಾಡು ತಲುಪುತ್ತದೆ. ಜಾಹೀರಾತನ್ನು ಖರೀದಿಸುತ್ತಾರೆ. ನಾನು ಹೇಳುತ್ತಿರುವುದು ಕೇಳಿದರೆ ನಾನು ಹಳೆಕಾಲದಲದವನು ಎನಿಸಬಹುದು. ಆದರೆ ನಾನು ಅಂತಿಮವಾಗಿ ಸಂಗೀತ, ಪುಸ್ತಕಗಳನ್ನು ಬರೆಯುವುದು, ಕಲೆ, ಪವಿತ್ರವಾದದ್ದು ಎಂದು ಭಾವಿಸುತ್ತೇನೆ ಎಂದಿದ್ದಾರೆ.

ಪಲಾಶ್ ಸೇನ್ ಭಾರತೀಯ ಖ್ಯಾತ ಗಾಯಕ, ಗೀತರಚನೆಕಾರ, ಸಂಗೀತಗಾರ, ಸಂಯೋಜಕ ಮತ್ತು ನಟನಾಗಿದ್ದು, ಭಾರತದ ರಾಕ್/ಪಾಪ್ ಬ್ಯಾಂಡ್ ಯುಫೋರಿಯಾದ ಸಂಸ್ಥಾಪಕರಾಗಿದ್ದಾರೆ.

ಕಾಲೇಜಿನಲ್ಲಿದ್ದಾಗ, ಪಲಾಶ್ ತನ್ನ ಬ್ಯಾಂಡ್ ಯುಫೋರಿಯಾವನ್ನು ಸ್ಥಾಪಿಸಿದ್ದರು. ಕಾಲೇಜು ದಿನಗಳಿಂದಲೇ ಹಾಡುಗಳನ್ನು ಕಂಪೋಸ್ ಮಾಡಲು ಆರಂಭಿಸಿದ್ದ ಅವರು ಇಂಗ್ಲೀಷಿನಲ್ಲಿ ಬರೆಯುತ್ತಿದ್ದರು. ಅವರ ಮೊದಲ ಸಂಯೋಜನೆಯು 'ಹೆವನ್ ಆನ್ ದಿ ಸೆವೆಂತ್ ಫ್ಲೋರ್' ಎನ್ನಲಾಗಿದೆ. ಕಾಲೇಜು ಮುಗಿದ ನಂತರ, ಪಲಾಶ್ ಡಿಜೆ ಭಾದುರಿಯನ್ನು ಭೇಟಿಯಾದರು. ಅವರ ಸ್ನೇಹವು ಪ್ರಾರಂಭವಾಯಿತು.

ಅಂದಿನಿಂದ ಇಬ್ಬರೂ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ. ಪಲಾಶ್ ಡಿಜೆಯನ್ನು ಯುಫೋರಿಯಾದ ಬೆನ್ನೆಲುಬು ಎಂದು ಪರಿಗಣಿಸುತ್ತಾರೆ. ಯುಫೋರಿಯಾದ ಮೊದಲ ಬಿಡುಗಡೆಯಾದ, 'ಧೂಮ್ ಪಿಚುಕ್ ಧೂಮ್,' ಒಂದು ಪ್ರಮುಖ ಹಿಟ್ ಮತ್ತು ವಿಶ್ವಾದ್ಯಂತ ವಿಮರ್ಶಕರಿಂದ ಪ್ರಶಂಸೆ ಪಡೆಯಿತು.

ಹಿಂದಿ ಜಾನಪದ ಭಾಷೆಯಲ್ಲಿ ಹಾಡಲಾದ 'ಮೇರಿ' ಎಂಬುದು ಬಹಳ ಪ್ರಸಿದ್ಧವಾದ ಏಕಗೀತೆಯಾಗಿದೆ. ಐದು ಯಶಸ್ವಿ ಸ್ಟುಡಿಯೋ ಆಲ್ಬಮ್‌ಗಳು, ಒಂದು ಸಂಕಲನ ಮತ್ತು 17 ಸಂಗೀತ ವೀಡಿಯೋಗಳೊಂದಿಗೆ ಯುಫೋರಿಯಾ ಅತಿದೊಡ್ಡ ಭಾರತೀಯ ಬ್ಯಾಂಡ್ ಆಯಿತು.

click me!