ಮೊದಲು ನಮ್ಮ ಹಾಡನ್ನು ಕದಿಯೋದನ್ನ ನಿಲ್ಲಿಸಿ; ಕರಣ್ ಜೋಹರ್‌ಗೆ ಪಾಕ್ ಗಾಯಕನಿಂದ ಖಡಕ್ ಎಚ್ಚರಿಕೆ

Published : Jun 05, 2022, 04:03 PM IST
ಮೊದಲು ನಮ್ಮ ಹಾಡನ್ನು ಕದಿಯೋದನ್ನ ನಿಲ್ಲಿಸಿ; ಕರಣ್ ಜೋಹರ್‌ಗೆ ಪಾಕ್ ಗಾಯಕನಿಂದ ಖಡಕ್ ಎಚ್ಚರಿಕೆ

ಸಾರಾಂಶ

ಪಾಕಿಸ್ತಾನದ ಖ್ಯಾತ ಗಾಯಕ ಅಬ್ರಾರ್-ಉಲ್-ಹಕ್ ಬಾಲಿವುಡ್ ಖ್ಯಾತ ನಿರ್ಮಾಪಕ, ನಿರ್ದೇಶಕ ಕರಣ್ ಜೋಹರ್ ವಿರುದ್ಧ ಆಕ್ರೋಶ ಹೊರಹಾಕಿದ್ದು ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ. ತಮ್ಮ ಹಾಡುಗಳನ್ನು ಕದಿಯುತ್ತಿದ್ದಾರೆ ಎಂದು ಪಾಕ್ ಗಾಯಕ ಅಬ್ರಾರ್ ಆರೋಪ ಮಾಡಿದ್ದಾರೆ.

ಪಾಕಿಸ್ತಾನದ ಖ್ಯಾತ ಗಾಯಕ ಅಬ್ರಾರ್-ಉಲ್-ಹಕ್(Abrar-ul-Haq) ಬಾಲಿವುಡ್ ಖ್ಯಾತ ನಿರ್ಮಾಪಕ, ನಿರ್ದೇಶಕ ಕರಣ್ ಜೋಹರ್(Karan Johar) ವಿರುದ್ಧ ಆಕ್ರೋಶ ಹೊರಹಾಕಿದ್ದು ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ. ತಮ್ಮ ಹಾಡುಗಳನ್ನು ಕದಿಯುತ್ತಿದ್ದಾರೆ ಎಂದು ಪಾಕ್ ಗಾಯಕ ಅಬ್ರಾರ್ ಆರೋಪ ಮಾಡಿದ್ದಾರೆ. ಕರಣ್ ಜೋಹರ ನಿರ್ಮಾಣದ ಜಗ್ ಜಗ್ ಜಿಯೋ(jug jug jeeyo) ಸಿನಿಮಾದಲ್ಲಿ ತಮ್ಮ ಹಾಡನ್ನು ಬಳಸಿಕೊಂಡಿದ್ದಾರೆ ಎಂದು ಕರಣ್ ಜೋಹರ್ ಮತ್ತು ಟಿ ಸೀರಿಸ್ ವಿರುದ್ಧ ಕಾನೂನು ಕ್ರಮ ಕೈಕೊಳ್ಳುವುದಾಗಿ ಪಾಕ್ ಗಾಯಕ ಅಬ್ರಾರ್ ಎಚ್ಚರಿಕೆ ನೀಡಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಗಾಯಕ ಅಬ್ರಾರ್ 'ಮೊದಲು ನಮ್ಮ ಹಾಡುಗಳನ್ನು ಕದಿಯುವುದನ್ನು ನಿಲ್ಲಿಸಿ' ಎಂದು ಹೇಳಿದ್ದಾರೆ. ಜಗ್ ಜಗ್ ಜಿಯೋ ಸಿನಿಮಾದ ಹಾಡು ರಿಲೀಸ್ ಆದ ಬಳಿಕ ವಿವಾದ ಜೋರಾಗಿದೆ. ಈ ಸಿನಿಮಾದಲ್ಲಿ ವರುಣ್ ಧವನ್, ಕಿಯಾರಾ ಅಡ್ವಾಣಿ, ಅನಿಲ್ ಕಪೂರ್, ನೀತು ಕಪೂರ್ ಸೇರಿದಂತೆ ದೊಡ್ಡ ತಾರಾಬಳಗವೇ ಸಿನಿಮಾದಲ್ಲಿ ಇದೆ. ಅಂದಹಾದೆ ಬಹುನಿರೀಕ್ಷೆಯ ಸಿನಿಮಾ ಇದೇ ತಿಂಗಳು ಜೂನ್ 24ಕ್ಕೆ ತೆರೆಗೆ ಬರಲು ಸಜ್ಜಾಗಿದೆ.

ವಿಡಿಯೋ ಬೈಟ್‌ನಲ್ಲಿ ಅಬ್ರಾರ್, 'ಹಾಡು ಕದ್ದಿದ್ದಕ್ಕಾಗಿ ಯಾಕೇ ನೀವು ಕರಣ್ ಜೋಹರ್ ಮತ್ತು ಟಿ ಸೀರಿಸ್ ವಿರುದ್ಧ ಕೋರ್ಟ್‌ಗೆ ಹೋಗಿಲ್ಲ ಎಂದು ಅನೇಕ ಅಭಿಮಾನಿಗಳು ನನ್ನನ್ನು ಕೇಳುತ್ತಿದ್ದಾರೆ. ಇದಕ್ಕೆ ಉತ್ತರ ಹೌದು, ನಾನು ಈಗ ಕೋರ್ಟ್‌ಗೆ ಹೋಗುತ್ತಿದ್ದೇನೆ, ಚಿಂತಿಸಬೇಡಿ. ಸಿನಿಮಾ ಹಿಟ್ ಆಗುತ್ತದೆ ಎನ್ನುವ ಕಾರಣಕ್ಕೆ ಕ್ರೆಡಿಟ್ ನೀಡಿದ್ದಾರೆ. ಆದರೆ ನಾನು ಹೇಳುತ್ತಿದ್ದೇನೆ. ನಾನು ನಿಮಗೆ ಹಾಡನ್ನು ಕೊಟ್ಟಿಲ್ಲ. ನನ್ನ ಹಾಡಿನ ಹಕ್ಕನ್ನು ಯಾರಿಗೂ ನೀಡಿಲ್ಲ. ನಾನು ನನ್ನ ಹಾಡನ್ನು ಮರಳಿ ಪಡೆಯುತ್ತಿದ್ದೇನೆ. ನಾನು ಕೋರ್ಟ್‌ನಲ್ಲಿ ನಿಮ್ಮನ್ನು ಭೇಟಿಯಾಗುತ್ತೇನೆ' ಎಂದು ಹೇಳಿದ್ದಾರೆ. 

ಕರಣ್ ಬರ್ತಡೇ ಪಾರ್ಟಿಯಲ್ಲಿ ಭಾಗಿಯಾಗಿದ್ದ 55 ಮಂದಿಗೆ ಕೊರೊನಾ ಪಾಸಿಟಿವ್? ವಿಷಯ ಮುಚ್ಚಿಟ್ಟ ಸ್ಟಾರ್ಸ್

ವಿಡಿಯೋವನ್ನು ಕರಣ್ ಜೋಹರ್ ಮತ್ತು ಟಿ ಸೀರಿಸ್‌ಗೆ ಶೇರ್ ಮಾಡಿದ್ದಾರೆ. ಈ ಮೊದಲು ಸಹ ಗಾಯಕ ಅಬ್ರಾರ್, ಕರಣ್ ವಿರುದ್ದ ಆರೋಪ ಮಾಡಿದ್ದರು. ಈ ಬಗ್ಗೆ ಟ್ವೀಟ್ ಮಾಡಿ, 'ನಾನು ನನ್ನ ನಾಚ್ ಪಂಜಾಬನ್ ಹಾಡನ್ನು ಯಾವುದೇ ಭಾರತೀಯ ಸಿನಿಮಾಗೆ ಮಾರಾಟ ಮಾಡಿಲ್ಲ. ಕರಣ್ ಅಂತಹ ನಿರ್ಮಾಪಕರು ಹಾಡುಗಳನ್ನು ಕಾಪಿ ಮಾಡಬಾರದು. ಕರಣ್ ಕಾಪಿ ಮಾಡುತ್ತಿರುವ 6ನೇ ಹಾಡು ಇದಾಗಿದೆ' ಎಂದು ಹೇಳಿದ್ದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಟಿ ಸೀರಿಸ್, 'ನಾವು ಯಾವುದೇ ಹಾಡನ್ನು ಕದ್ದಿಲ್ಲ. ಜಗ್ ಜಗ್ ಜಿಯೋ ಸಿನಿಮಾದ ನಾಚ್ ಪಂಜಾಬನ್ ಹಾಡನ್ನು ಕಾನೂನು ಬದ್ಧವಾಗಿ ಬಳಸಿಕೊಂಡಿರುವುದಾಗಿ' ಹೇಳಿಕೆ ಬಿಡುಗಡೆ ಮಾಡಿತ್ತು. ಇದೀಗ ಮತ್ತೆ ಗಾಯಕ ಅಬ್ರಾರ್ ಆರೋಪ ಮಾಡುತ್ತಿದ್ದು ಕರಣ್ ವಿರುದ್ಧ ಕೋರ್ಟ್ ಮೆಟ್ಟಿಲೇರುವುದಾಗಿ ಹೇಳಿದ್ದಾರೆ.

ಕರಣ್ ಜೋಹರ್‌ ಬರ್ತ್‌ಡೇಗೆ ಬಂದು ಟ್ರೋಲ್ ಆದ ಮಲೈಕಾ; ವಿಡಿಯೋ ವೈರಲ್

ಜಗ್ ಜಗ್ ಜಿಯೋ ನಿರ್ದೇಶಕ ರಾಜ್ ಮಹ್ತಾ ಸಾರಥ್ಯದಲ್ಲಿ ಮೂಡಿಬಂದಿದೆ. ಕರಣ್ ಜೋಹರ್ ಧರ್ಮ ಪ್ರೋಡಕ್ಷನ್ ಮತ್ತು ವಿಯಾಕಾಮ್ 18 ಸ್ಟುಡಿಯೋ ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಮುಸ್ಲಿಂ ಆಗಿ ಮತಾಂತರವಾದ್ರಾ ಬಾಲಿವುಡ್‌ನ ಪ್ರಖ್ಯಾತ ನಟಿಯ ಸಹೋದರಿ? ಬುರ್ಖಾ, ಹಿಜಾಬ್‌ ಧರಿಸಿ ಮಸೀದಿ ಪ್ರವೇಶ!
'ಕಾಂತಾರ' ದೈವಕ್ಕೆ ರಣವೀರ್ ಸಿಂಗ್ ಅವಮಾನ: ಕೂಡಲಸಂಗಮದಲ್ಲಿ ಸಪ್ತಮಿ ಗೌಡ ಎಂಥ ಮಾತು ಹೇಳಿದ್ರು ನೋಡಿ!