Humaira Asghar's Death: ಸತ್ತು 9 ತಿಂಗಳು ಕಳೆದರೂ ಗೊತ್ತಾಗೇ ಇಲ್ಲ: ವಿಚಾರಿಸಿಕೊಳ್ಳುವ ಒಂದು ಜೀವವೂ ಇರಲಿಲ್ವಾ ಈ ನಟಿಗೆ

Published : Jul 11, 2025, 03:59 PM ISTUpdated : Jul 11, 2025, 04:10 PM IST
humaira asghar ali

ಸಾರಾಂಶ

ಕೆಲ ದಿನಗಳ ಹಿಂದೆ ಶವವಾಗಿ ಪಾಕಿಸ್ತಾನಿ ನಟಿ ಹುಮೈರಾ ಅಸ್ಗರ್  ಅವರು ಸಾವನ್ನಪ್ಪಿ 9 ತಿಂಗಳುಗಳೇ ಕಳೆದಿದ್ದವು ಎಂಬ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ.

ಕರಾಚಿ: ಪಾಕಿಸ್ತಾನಿ ಕಿರುತೆರೆ ನಟಿ ಹುಮೈರಾ ಅಸ್ಗರ್ ಅವರ ಶವ ಇತ್ತೀಚೆಗೆ ಅವರು ವಾಸವಾಗಿದ್ದ ಬಾಡಿಗೆ ಮನೆಯಲ್ಲಿ ಪತ್ತೆಯಾಗಿತ್ತು. ಹುಮೈರಾ 2024ರಿಂದ ಮನೆ ಬಾಡಿಗೆ ಕಟ್ಟುತ್ತಲ್ಲೇ ಇಲ್ಲ ಎಂದು ಆಕೆ ವಾಸವಿದ್ದ ಮನೆಯ ಮಾಲೀಕರು ದೂರು ನೀಡಿದ ನಂತರ ಕೋರ್ಟ್ ಆಕೆಯ ಮನೆ ತೆರವಿಗೆ ಆದೇಶ ನೀಡಿತ್ತು. ಈ ಆದೇಶದ ನಂತರ ಪೊಲೀಸರು ಆಕೆ ಇದ್ದ ಬಾಡಿಗೆ ಮನೆಗೆ ಹೋಗಿ ಮನೆ ಬಾಗಿಲು ಒಡೆದು ನೋಡಿದಾಗ ಆಕೆ ಸಾವನ್ನಪ್ಪಿರುವುದು ಬೆಳಕಿಗೆ ಬಂದಿತ್ತು. ಆಕೆಯ ಶವ ಪತ್ತೆಯಾದ ಸಮಯದಲ್ಲಿ ಆಕೆ ಸತ್ತು ಎರಡು ವಾರಗಳು ಕಳೆದಿದೆ ಎಂದು ಪ್ರಾಥಮಿಕವಾಗಿ ಅಧಿಕಾರಿಗಳು ಹೇಳಿದ್ದರು. ಆದರೆ ಈಗ ಆಕೆಯ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ಆಕೆ 9 ತಿಂಗಳ ಹಿಂದೆಯೇ ಸಾವನ್ನಪ್ಪಿದ್ದಾಳೆ ಎಂದು ಹೇಳಿದ್ದು ಅನೇಕರನ್ನು ಆಘಾತಕ್ಕೀಡು ಮಾಡಿದೆ.

ಆಕೆಯ ಶವ ಸಿಕ್ಕ ವಿಚಾರ ತಿಳಿಯುತ್ತಿದ್ದಂತೆ ಆಕೆಯ ತಂದೆ ಹಾಗೂ ಸೋದರ ಆಕೆಯ ಶವವನ್ನು ಏನು ಬೇಕಾದರೂ ಮಾಡಿ ನಮಗೆ ಮಾತ್ರ ಬೇಡ ಎಂದಿದ್ದರು. ಆದರೆ ನಟಿಯಾಗಿದ್ದ ಆಕೆಗೆ ಒಬ್ಬರೇ ಒಬ್ಬರು ಕಷ್ಟಸುಖ ವಿಚಾರಿಸುವ ಸ್ನೇಹಿತರು ಇರಲಿಲ್ಲವೇ ಸತ್ತು 9 ತಿಂಗಳು ಕಳೆಯುವವರೆಗೂ ಒಬ್ಬರಿಗೂ ಆಕೆಯ ಸಾವಿನ ಬಗ್ಗೆ ತಿಳಿದಿಲ್ಲ ಎಂಬುದು ವಿಚಿತ್ರವೆನಿಸಿದೆ.

ಹುಮೈರಾ ಅಸ್ಗರ್ ಶವವು ಕೊಳೆತ ನಂತರದ ಹಂತದಲ್ಲಿತ್ತು ಹೀಗಾಗಿ ಕಳೆದ ವರ್ಷದ ಆಕ್ಟೋಬರ್‌ನಲ್ಲಿಯೇ ಸಾವನ್ನಪ್ಪಿರಬಹುದು ಎಂದು ಆಕೆಯ ಮರಣೋತ್ತರ ಪರೀಕ್ಷೆ ನಡೆಸಿದ ಕರಾಚಿಯ ಪೊಲೀಸ್ ಶಸ್ತ್ರಚಿಕಿತ್ಸಕ ಸುಮೈಯಾ ಸೈಯದ್ ಹೇಳಿದ್ದು, ಇದು ನಟಿ ಎಷ್ಟೊಂದು ಒಂಟಿಯಾಗಿದ್ದಳು ಎಂಬುದನ್ನು ಸೂಚಿಸುತ್ತಿದೆ. ಕಳೆದ ಮಂಗಳವಾರ ಜುಲೈ 8 ರಂದು ಆಕೆಯ ಶವ ಆಕೆ ವಾಸವಿದ್ದ ಅಪಾರ್ಟ್‌ಮೆಂಟ್‌ನಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು.

ವೈದ್ಯರ ಮರಣೋತ್ತರ ವರದಿಯ ನಂತರ ತನಿಖೆ ನಡೆಸುತ್ತಿರುವ ಅಧಿಕಾರಿಗಳು ಆಕೆ 9 ತಿಂಗಳ ಹಿಂದೆಯೇ ಸಾವನ್ನಪ್ಪಿದ್ದಾರೆ ಎಂದು ಹೇಳುತ್ತಿದ್ದಾರೆ.

ಆಕೆಯ ಫೋನ್ ಕರೆ ವಿವರದ ಪ್ರಕಾರ ಆಕೆ ಕೊನೆಯದಾಗಿ 2024 ರ ಅಕ್ಟೋಬರ್‌ನಲ್ಲಿ ಕೊನೆಯದಾಗಿ ಕರೆ ಮಾಡಿದ್ದಾಳೆ ಎಂದು ಉಪ ಪೊಲೀಸ್ ಮಹಾನಿರ್ದೇಶಕ ಸೈಯದ್ ಅಸಾದ್ ರಜಾ ತಿಳಿಸಿದ್ದಾರೆ. ಆಕೆಯ ನೆರೆಹೊರೆಯವರು ಸೆಪ್ಟೆಂಬರ್ ಅಥವಾ ಅಕ್ಟೋಬರ್‌ನಲ್ಲಿ ಕೊನೆಯ ಬಾರಿಗೆ ಆಕೆಯನ್ನು ನೋಡಿದ್ದಾಗಿ ಹೇಳಿಕೊಂಡಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಅಲ್ಲದೇ ಕರೆಂಟ್ ಬಿಲ್‌ ಕಟ್ಟಡ ಕಾರಣ ಅಕ್ಟೋಬರ್ 2024 ರಲ್ಲಿಯೇ ಆಕೆಯ ಮನೆಯವ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿತ್ತು. ಅಪಾರ್ಟ್‌ಮೆಂಟ್‌ಗೆ ಬೇರೆ ವಿದ್ಯುತ್ ಸಂಪರ್ಕಗಳಿರಲಿಲ್ಲ.

ಹುಮೈರಾ ಅವರ ದೇಹವು ಒಂಬತ್ತು ತಿಂಗಳ ಹಳೆಯದಾಗಿರಬಹುದು. ಅವರು ಬಹುಶಃ ತಮ್ಮ ಕೊನೆಯ ಯುಟಿಲಿಟಿ ಬಿಲ್‌ಗಳನ್ನು ಪಾವತಿಸಿದ ನಂತರ ಅಕ್ಟೋಬರ್ 2024 ರಲ್ಲಿ ಅವರ ವಿದ್ಯುತ್ ಸಂಪರ್ಕ ಕಡಿತಗೊಂಡ ನಂತರ ಸಾವನ್ನಪ್ಪಿರಬಹುದು ಅವರ ಮನೆಯಲ್ಲಿ ನಂತರ ಯಾವುದೇ ಮೇಣದ ಬತ್ತಿ ಕೂಡ ಇರಲಿಲ್ಲ ಎಂದು ಸ್ಥಳೀಯ ನಿವಾಸಿಯೊಬ್ಬರು ಹೇಳಿದ್ದಾರೆ. ಹಾಗೆಯೇ ಆಕೆಯ ಮನೆಯಲ್ಲಿ ಆಹಾರವೂ ಕೂಡ ಅವಧಿ ಮೀರಿದೆ. ಆಕೆ ಬಳಸುತ್ತಿದ್ದ ಜಾರ್‌ಗಳು ತುಕ್ಕು ಹಿಡಿದಿದ್ದವು. ಆರು ತಿಂಗಳ ಹಿಂದೆಯೇ ಆಹಾರ ಅವಧಿ ಮೀರಿತ್ತು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಆಕೆಯ ಮಹಡಿಯಲ್ಲಿರುವ ಇನ್ನೊಂದು ಅಪಾರ್ಟ್‌ಮೆಂಟ್ ಖಾಲಿಯಾಗಿತ್ತು, ಹೀಗಾಗಿ ನೆರೆಹೊರೆಯವರಿಗೆ ಯಾವುದೇ ವಾಸನೆಯನ್ನು ಬಂದಿಲ್ಲ ಹಾಗೂ ಆ ಮನೆಗೆ ಫೆಬ್ರವರಿಯಲ್ಲಿ ಕೆಲವು ನಿವಾಸಿಗಳು ಬಂದಾಗ ಕೊಳೆತ ವಾಸನೆ ಆಗಲೇ ಕಡಿಮೆಯಾಗಿ ಬಾರದೇ ಹೋಗಿರಬಹುದು. ಮನೆಯಲ್ಲಿನ ನೀರಿನ ಪೈಪ್‌ಗಳು ಒಣಗಿ ತುಕ್ಕು ಹಿಡಿದಿದ್ದವು ಎಂದು ಅಧಿಕಾರಿಗಳು ಹೇಳಿದ್ದಾರೆ. ಒಟ್ಟಿನಲ್ಲಿ ಕುಟುಂಬದವರು ಆಕೆ ಬಿಡಿ ಆಕೆಯ ಶವವನ್ನು ಬೇಡ ಎಂದಿದ್ದಾರೆ. ಆದರೆ ಕುಟುಂಬ ತೊರೆದಿದ್ದ ನಟಿಗೆ ಕಷ್ಟ ಸುಖ ಹೇಳಿಕೊಳ್ಳುವುದಕ್ಕಾದರೂ ಒಬ್ಬರೇ ಒಬ್ಬರು ಸ್ನೇಹಿತರು ಇರಲಿಲ್ವಾ ಅನ್ನೋದು ಅಚ್ಚರಿ ಮೂಡಿಸ್ತಿದೆ.

32 ವರ್ಷದ ಹುಮೈರಾ ಪಾಕಿಸ್ತಾನದ ಚಾನೆಲ್ ARYಯ ರಿಯಾಲಿಟಿ ಶೋ ತಮಾಷ ಘರ್‌ನಲ್ಲಿ ಭಾಗವಹಿಸಿದ ನಂತರ ಫೇಮಸ್ ಆಗಿದ್ದರು. ಜುಲೈ 8ರಂದು ಅವರ ಕರಾಚಿ ಪೊಲೀಸರು ಅವರ ಮನೆಯ ಬಾಗಿಲು ಮುರಿದು ಒಳ ಹೋದಾಗ ಅವರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. 2024 ರಿಂದ ಹುಮೈರಾ ಮನೆ ಬಾಡಿಗೆ ಪಾವತಿಸಿಲ್ಲ ಎಂದು ಮನೆ ಮಾಲೀಕರು ಆರೋಪಿಸಿದ ನಂತರ, ಸ್ಥಳೀಯ ಕೋರ್ಟ್‌ ಅವರ ಅಪಾರ್ಟ್ಮೆಂಟ್ ಖಾಲಿ ಮಾಡುವಂತೆ ಆದೇಶಿಸಿದ ನಂತರ ಪೊಲೀಸರು ಮನೆಗೆ ಭೇಟಿ ನೀಡಿದಾಗ ಘಟನೆ ಬೆಳಕಿಗೆ ಬಂದಿತ್ತು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?
ಹೀರೋ ಆಗುವ ಮುನ್ನ ಶಾಕ್ ಕೊಟ್ಟ ಅಕೀರಾ ನಂದನ್: ರೇಣು ದೇಸಾಯಿ ಫೋನ್ ಮಾಡಿದಾಗ ಪವನ್ ನಕ್ಕಿದ್ದೇಕೆ?