ಪಠಾಣ್​ ಬಳಿಕ ಜಾನ್‌​ ಅಬ್ರಹಾಂಗೆ ಏನಾಯ್ತು? ಎರಡು ಚಿತ್ರ ಬೇಡ್ವೇ ಬೇಡ​ ಎಂದ ನಟ!

By Suvarna NewsFirst Published Apr 16, 2023, 5:48 PM IST
Highlights

ಪಠಾಣ್​ ಚಿತ್ರದ ಭರ್ಜರಿ ಯಶಸ್ಸಿನ ಬಳಿಕ ಜಾಬ್​ ಅಬ್ರಹಾಂ ಎರಡು ದೊಡ್ಡ ಚಿತ್ರಗಳನ್ನು ರಿಜೆಕ್ಟ್​  ಮಾಡಿದ್ದಾರೆ. ಇದಕ್ಕೆ ಕಾರಣ ಕುತೂಹಲವಾಗಿದೆ. 
 

ನಟ ಜಾನ್ ಅಬ್ರಹಾಂ ಅವರ ಬ್ಲಾಕ್‌ಬಸ್ಟರ್ (Blockbuster) ಚಿತ್ರ ಪಠಾಣ್ ಇತ್ತೀಚೆಗೆ ಬಿಡುಗಡೆಯಾದ ನಂತರ, ಅವರ ಮುಂದಿನ ಚಿತ್ರಗಳ ಬಗ್ಗೆ ಫ್ಯಾನ್ಸ್​ ಕಾತರದಿಂದ ಕಾಯುತ್ತಿದ್ದಾರೆ. ನಿರ್ಮಾಪಕ ಆದಿತ್ಯ ಚೋಪ್ರಾ ಅವರ ಯಶ್ ರಾಜ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾದ ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ 500 ಕೋಟಿ ರೂಪಾಯಿಗಳನ್ನು ಗಳಿಸಿದೆ. ಸಿದ್ಧಾರ್ಥ್ ಆನಂದ್ ನಿರ್ದೇಶನದ ಈ ಚಿತ್ರದಲ್ಲಿ ಸೂಪರ್ ಸ್ಟಾರ್ ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ನಾಯಕ- ನಾಯಕಿಯಾಗಿದ್ದರೆ,  ಜಾನ್ ಅಬ್ರಹಾಂ  ಖಳನಾಯಕನಾಗಿ ಮಿಂಚಿದ್ದಾರೆ.  ಈ ಚಿತ್ರದಲ್ಲಿ ನಾಯಕನಷ್ಟೇ ಮೇನ್​ ಕ್ಯಾರೆಕ್ಟರ್​ನಲ್ಲಿ ಖಳನಾಯಕನಾಗಿ  ಜಾನ್ ಅಬ್ರಹಾಂ (John Abraham) ಅಭಿಮಾನಿಗಳ ಚಪ್ಪಾಳೆ ಗಿಟ್ಟಿಸಿದ್ದಾರೆ.  ಪಠಾಣ್ ಸಿನಿಮಾದ ಬಂಪರ್ ಸಕ್ಸಸ್​ನಲ್ಲಿ ಶಾರುಖ್ ಖಾನ್ ಅವರಿಗೆ ಸಿಗುವಷ್ಟೇ ಶ್ರೇಯಸ್ಸು   ಜಿಮ್ ಪಾತ್ರಧಾರಿ ಜಾನ್​ ಅವರಿಗೂ ಸಲ್ಲುತ್ತದೆ ಎನ್ನುವುದು ಎಲ್ಲರಿಗೂ ತಿಳಿದ ವಿಷಯವೇ. 

ಇದೀಗ ಈ ಚಿತ್ರದ ಬಂಪರ್ ಸಕ್ಸಸ್ (Success) ನಂತರ ಜಾನ್ ಅಬ್ರಹಾಂ ದೊಡ್ಡ ನಿರ್ಧಾರ ತೆಗೆದುಕೊಂಡಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.  ಇದೀಗ ಬರುತ್ತಿರುವ  ವರದಿಗಳ ಪ್ರಕಾರ, ಚಿತ್ರನಟ ಜಾನ್ ಅಬ್ರಹಾಂ ಈಗ ಕೇವಲ ಆ್ಯಕ್ಷನ್ ಎಂಟರ್‌ಟೈನರ್ ಚಿತ್ರಗಳನ್ನು ಮಾಡಲು ಮನಸ್ಸು ಮಾಡಿದ್ದಾರೆ. ಈ ಕಾರಣದಿಂದ ಚಿತ್ರನಟ ಸಾಜಿದ್ ಖಾನ್ ಅವರ ಕಾಮಿಡಿ ಚಿತ್ರವನ್ನು 100% ತಿರಸ್ಕರಿಸಿದ್ದಾರೆ ಎಂದು ಕೇಳಿಬರುತ್ತಿದೆ. ವರದಿಗಳ ಪ್ರಕಾರ, ಈಗ ಜಾನ್ ಅಬ್ರಹಾಂ ಆ್ಯಕ್ಷನ್ ಚಿತ್ರಗಳ ಮೇಲೆ ಕೇಂದ್ರೀಕರಿಸಲು ಬಯಸಿದ್ದಾರೆ. ಇದರಿಂದಾಗಿ ಅವರು '100 ಪರ್ಸೆಂಟ್​' ಚಿತ್ರ ಮಾತ್ರವಲ್ಲದೆ 'ಆವಾರಾ ಪಾಗಲ್ ದೀವಾನಾ 2' ಮಾಡದಿರಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

Latest Videos

'ಜಾನ್ ತಮ್ಮ ತಂಡವನ್ನು ವೈವಿಧ್ಯಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಅವರು ಸಾಜಿದ್ ಖಾನ್ ಅವರ '100 ಪರ್ಸೆಂಟ್​' ಚಿತ್ರಕ್ಕೆ ಸಹಿ ಹಾಕಿದ್ದರು. ವಾಸ್ತವವಾಗಿ, ಅವರು 'ಆವರಾ ಪಾಗಲ್ ದೀವಾನಾ 2' (Awara Pagal Deewanan2) ಗಾಗಿ ಅಂತಿಮ ಮಾತುಕತೆಯಲ್ಲಿದ್ದರು. ಆದರೆ ಪಠಾಣ್ ಯಶಸ್ಸು ಅದೆಲ್ಲವನ್ನೂ ಬದಲಾಯಿಸಿತು. ಈಗ ಜಾನ್ ಕಾಮಿಡಿ ಚಿತ್ರಗಳನ್ನು ಮಾಡುವ ಮೂಡ್ ನಲ್ಲಿಲ್ಲ. ಅವರು 100% ರಷ್ಟು ಹಿಂದೆ ಸರಿದಿದ್ದಾರೆ ಮತ್ತು ಅವರಾ ಪಾಗಲ್ ದೀವಾನಾ 2 ನ ಮಾತುಕತೆಗಳು ಹಿನ್ನಲೆಯಲ್ಲಿವೆ ಎನ್ನಲಾಗಿದೆ.  

ನಾನೊಬ್ಬ ಕೆಟ್ಟ ತಂದೆ... ಮಗನ ಎದುರು ಭಾವುಕರಾದ ನಟ Mithun Chakraborty

ವರದಿಗಳನ್ನು ನಂಬುವುದಾದರೆ, ಜಾನ್ ಅಬ್ರಹಾಂ ಪ್ರಸ್ತುತ ಉತ್ತಮ ಆಕ್ಷನ್ ಸ್ಕ್ರಿಪ್ಟ್‌ಗಳು ಮತ್ತು ಥ್ರಿಲ್ಲರ್ ಚಿತ್ರಗಳ ಮೇಲೆ ಕೇಂದ್ರೀಕರಿಸಿದ್ದಾರೆ.   'ಹುಡುಕಾಟ ಆನ್ ಆಗಿದೆ ಮತ್ತು ಜಾನ್ ಈ ತಿಂಗಳ ಅಂತ್ಯದ ವೇಳೆಗೆ 1 ಅಥವಾ 2 ಚಲನಚಿತ್ರಗಳನ್ನು ಲಾಕ್ ಮಾಡುತ್ತಾರೆ. ಜಿಮ್‌ನ (Jym) ಸ್ಪಿನ್ ಆಫ್ ಪಾತ್ರದ ಬಗ್ಗೆಯೂ ಚರ್ಚೆ ಇದೆ. ಚಿತ್ರ ನಿರ್ಮಾಣ ಹಂತಕ್ಕೆ ಬರಲು ಸುಮಾರು 2 ವರ್ಷ ಬೇಕು. ಯಶ್ ರಾಜ್ ಫಿಲಂಸ್ ಮತ್ತು ಜಾನ್ ಈ ಬಗ್ಗೆ ಮಾತನಾಡಿದ್ದಾರೆ ಎನ್ನಲಾಗಿದೆ. 

'ಶ್ರೀರಾಮ'ನೇ ಸ್ಮೋಕ್​ ಮಾಡಿದಾಗ... ಕಹಿ ಘಟನೆ ನೆನಪಿಸಿಕೊಂಡ ನಟ Arun Govil

ಅಂದಹಾಗೆ ಜಾನ್​ ಅಬ್ರಹಾಂ ಅವರು,  ನಟನ ಜೊತೆ ರೂಪದರ್ಶಿ ಕೂಡ. ಹಲವಾರು ಜಾಹೀರಾತುಗಳು ಮತ್ತು ಕಂಪೆನಿಗಳಿಗೆ ಮಾಡೆಲಿಂಗ್ ಮಾಡಿದ್ದಾರೆ.  ಜಿಸ್ಮ್‌ (2003) ಚಿತ್ರದೊಂದಿಗೆ ಚಲನಚಿತ್ರ ರಂಗಕ್ಕೆ ಪ್ರವೇಶಿಸಿದ ಅವರು  ಫಿಲ್ಮ್‌ಫೇರ್ ಅತ್ಯುತ್ತಮ ಪ್ರಥಮ ಪ್ರವೇಶ ಪ್ರಶಸ್ತಿಗೆ ನಾಮನಿರ್ದೇಶಗೊಂಡಿದ್ದರು.  ಇದರ ನಂತರ  ವಾಣಿಜ್ಯವಾಗಿ ಯಶಸ್ಸು ಗಳಿಸಿದ ಚಿತ್ರವೆಂದರೆ ಧೂಮ್‌ (2004). ಧೂಮ್‌ ಚಿತ್ರದಲ್ಲಿ ನೆಗೆಟಿವ್​ ರೋಲ್​ ಮತ್ತು  ಜಿಂದಾ (2006) ಚಿತ್ರಕ್ಕಾಗಿ  ಎರಡು ಫಿಲ್ಮ್‌ಫೇರ್ ಪ್ರಶಸ್ತಿಗಳಿಗೆ ನಾಮನಿರ್ದೇಶನಗೊಂಡಿದ್ದರು.  ಅವರು ನಂತರ ಪ್ರಮುಖ ವಿಮರ್ಶಾತ್ಮಕ ಯಶಸ್ಸು ಗಳಿಸಿದ ವಾಟರ್ (2005) ಚಿತ್ರದಲ್ಲಿ ಕಾಣಿಸಿಕೊಂಡರು.  ಬಬೂಲ್ (2006) ಚಿತ್ರಕ್ಕಾಗಿ ಅತ್ಯುತ್ತಮ ಪೋಷಕ ನಟನೆಗಾಗಿ ಫಿಲ್ಮ್‌ಫೇರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡರು.

click me!