
ಸೂಪರ್ ಸ್ಟಾರ್ ರಜನಿಕಾಂತ್‌ಗೆ 75ರ ಸಂಭ್ರಮ!
ಭಾರತೀಯ ಸಿನಿರಂಗದ ಸಾರ್ವಕಾಲಿಕ ಸೂಪರ್ ಸ್ಟಾರ್ ರಜನಿಕಾಂತ್ (Rajinikanth) ಅವರಿಗೆ ಇಂದು (12 December) ಹುಟ್ಟುಹಬ್ಬದ ಸಂಭ್ರಮ. ತಲೈವಾ 75ನೇ ವಸಂತಕ್ಕೆ ಕಾಲಿಟ್ಟಿದ್ದು, ಅವರ ಸಿನಿಜರ್ನಿಗೆ 50 ವರ್ಷ ತುಂಬಿದೆ. ಫ್ಯಾನ್ಸ್ ಈ ಸ್ಪೆಷಲ್ ಮೂಮೆಂಟ್ ನ ಸೆಲೆಬ್ರೇಟ್ ಮಾಡ್ಲಿಕ್ಕೆ ಪಡೆಯಪ್ಪ ಸಿನಿಮಾ ರೀ ರಿಲೀಸ್ ಆಗಿದೆ.
ಸೂಪರ್ ಸ್ಟಾರ್ ರಜನಿ 75ನೇ ಹುಟ್ಟುಹಬ್ಬ..! ತಲೈವಾ ಸಿನಿ ಕರಿಯರ್ಗೆ 50ರ ಸಂಭ್ರಮ..!
ಯೆಸ್ ಇಂಡಿಯನ್ ಸಿನಿಇಂಡಸ್ಟ್ರಿ ಸಾರ್ವಕಾಲಿಕ ಸೂಪರ್ ಸ್ಟಾರ್ ರಜನಿಕಾಂತ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಇದು ತಲೈವಾ 75ನೇ ಹುಟ್ಟುಹಬ್ಬ. ನೆನಪಿರಲಿ ಈಗಲೂ ರಜನಿಕಾಂತ್ ಭಾರತದಲ್ಲಿ ಅತಿಹೆಚ್ಚು ಸಂಭಾವನೆ ಪಡೆಯೋ ಸೂಪರ್ ಸ್ಟಾರ್. ರಜನಿ ನಟನೆಯ ಜೈಲರ್-2 ಮುಂದಿನ ವರ್ಷ ತೆರೆಗೆ ಬರ್ತಾ ಇದೆ. ಕಮಲ್ ಹಾಸನ್ ಜೊತೆಗೆ ಮತ್ತೊಂದು ಸಿನಿಮಾ ಕೂಡ ಶುರುವಾಗ್ತಾ ಇದೆ.
ಇದು ರಜನಿಕಾಂತ್ ಸಿನಿಕರೀಯರ್ ನ ಸುವರ್ಣ ವರ್ಷವೂ ಹೌದು. ಇಂಥಾ ಸ್ಪೆಷಲ್ ಟೈಂನಲ್ಲಿ ತಲೈವಾ ಒಂದು ಮರೆಯದ ಗಿಫ್ಟ್ ಕೊಟ್ಟಿದ್ದಾರೆ. ಪಡೆಯಪ್ಪ ಸಿನಿಮಾ ತೆರೆಕಂಡು 25 ವರ್ಷ ತುಂಬಿದ್ದು, ಪಡೆಯಪ್ಪನ ಸ್ಟೈಲ್ನಲ್ಲೇ ರಜನಿ ಫ್ಯಾನ್ಸ್ ಎದುರು ಎಂಟ್ರಿ ಕೊಟ್ಟಿದ್ದಾರೆ.
ನಿಮಗೆಲ್ಲಾ ಗೊತ್ತಿರೋ ಹಾಗೆ ಪಡೆಯಪ್ಪ ರಜನಿಕಾಂತ್ ಕರೀಯರ್ ನ ಬಿಗ್ಗೆಸ್ಟ್ ಹಿಟ್ ಸಿನಿಮಾಗಳಲ್ಲಿ ಒಂದು. 1999ರ ಯುಗಾದಿ ಹಬ್ಬದ ದಿನ ತೆರೆಗೆ ಬಂದಿದ್ದ ಈ ಸಿನಿಮಾ ತಮಿಳುನಾಡಿನಾದ್ಯಂತ ಜಯಭೇರಿ ಬಾರಿಸಿತ್ತು. ಹೆಣ್ಣುಮಕ್ಕಳು ಈ ಸಿನಿಮಾ ನೋಡಲಿಕ್ಕೆ ಚಿತ್ರಮಂದಿರಗಳ ಗೇಟ್ಗಳನ್ನೇ ಮುರಿದುಹಾಕಿದ್ರು.
ಸ್ಟೈಲಿಶ್ ಪಡೆಯಪ್ಪನಾಗಿ ರಜನಿಕಾಂತ್, ದುರಂಹಕಾರದ ಹೆಣ್ಣು ನೀಲಾಂಬರಿ ಪಾತ್ರದಲ್ಲಿ ರಮ್ಯಾ ಕೃಷ್ಣ, ಸೌಮ್ಯ ಸ್ವಭಾವದ ವಸುಂಧರಾ ಪಾತ್ರದಲ್ಲಿ ನಟಿ ಸೌಂದರ್ಯ ಅಮೋಘವಾಗಿ ನಟಿಸಿದ್ರು. ಕೆ.ಎಸ್ ರವಿಕುಮಾರ್ ಡೈರೆಕ್ಟ್ ಮಾಡಿದ್ದ ಈ ಸಿನಿಮಾ ಬರೊಬ್ಬರಿ 86 ಚಿತ್ರಮಂದಿರಗಳಲ್ಲಿ ಶತದಿನೋತ್ಸವ ಆಚರಿಸಿತ್ತು. ಆವತ್ತಿಗೆ ತಮಿಳು ಚಿತ್ರರಂಗದಲ್ಲಿ ಅತಿಹೆಚ್ಚು ಕಲೆಕ್ಷನ್ ಮಾಡಿದ್ದ ಚಿತ್ರ ಅನ್ನೋ ದಾಖಲೆ ಬರೆದಿತ್ತು.
ತಲೈವಾ ಬರ್ತ್ಡೇಗೆ ಪಡೆಯಪ್ಪ ರೀ-ರಿಲೀಸ್; ಪಡೆಯಪ್ಪ-2 ಸ್ಕ್ರಿಪ್ಟ್ ರೆಡಿ ಮಾಡ್ತಿರುವ ತಲೈವಾ
ಯೆಸ್ ಇಂದು ಪಡೆಯಪ್ಪ ಸಿನಿಮಾ ರಜನಿ ಬರ್ತ್‌ಡೇ ಪ್ರಯುಕ್ತ ರೀ ರಿಲೀಸ್ ಆಗಿದೆ. ಹೊಸ ತಂತ್ರಜ್ಞಾನದಲ್ಲಿ ಸಿನಿಮಾವನ್ನ ರೆಡಿಮಾಡಿದ್ದು ಫ್ಯಾನ್ಸ್ ಬಿಗ್ ಸ್ಕ್ರೀನ್ ಮೇಲೆ ಪಡೆಯಪ್ಪನನ್ನ ನೋಡಲಿದ್ದಾರೆ.
ಇನ್ನೂ ಮತ್ತೊಂದು ಖುಷಿ ವಿಷ್ಯ ಅಂದ್ರೆ ಪಡೆಯಪ್ಪ-2 ಬರುತ್ತೆ ಅನ್ನೋ ಖುಷ್ ಖಬರ್ನ ಖುದ್ದು ರಜನಿಕಾಂತ್ ಹಂಚಿಕೊಂಡಿದ್ದಾರೆ. ಪಡೆಯಪ್ಪ ಸಿನಿಮಾದ ಕ್ಲೈಮ್ಯಾಕ್ಸ್ನಲ್ಲಿ ನೀಲಾಂಬರಿ ಸಾಯುವ ಮುನ್ನ ಮುಂದಿನ ಜನ್ಮದಲ್ಲಾದ್ರೂ ನಿನ್ನ ಮೇಲೆ ಸೇಡು ತೀರಿಸಿಕೊಳ್ತಿನಿ ಅಂತ ಹೇಳ್ತಾಳೆ. ಸೋ ನೀಲಾಂಬರಿಯ ಮರುಜನ್ಮದ ಕಥೆಯನ್ನಿಟ್ಟುಕೊಂಡು ಪಡೆಯಪ್ಪ 2 ಸ್ಕ್ರಿಪ್ಟ್ ಶುರುಮಾಡಿದ್ದಾರಂತೆ. ಸ್ಕ್ರಿಪ್ಟ್ ರಂಜನೀಯವಾಗಿ ಮೂಡಿಬಂದರೆ ಸೀಕ್ವೆಲ್ ಮಾಡ್ತಿವಿ ಅಂತ ಖುದ್ದು ಪಡೆಯಪ್ಪನೇ ಅನೌನ್ಸ್ ಮಾಡಿದ್ದಾರೆ. ಸೋ ಈ ಸಾರಿ ಬರ್ತ್‌ಡೇ ಪ್ರಯುಕ್ತ ಫ್ಯಾನ್ಸ್ಗೆ ರಜನಿ ಡಬಲ್ ಗಿಫ್ಟ್ ಕೊಟ್ಟಿದ್ದಾರೆ ಸೂಪರ್ ಸ್ಟಾರ್.
ಹೆಚ್ಚಿನ ಮಾಹಿತಿಗೆ ಸಿನಿಮಾ ಹಂಗಾಮ ವಿಡಿಯೋ ನೋಡಿ...
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.