ಕರ್ನಾಟಕ ನನ್ನ ಅಣ್ಣನ ಮನೆ.. 'ಅಖಂಡ 2'ನಲ್ಲಿ ಬಾಲಯ್ಯ ಡೈಲಾಗ್‌ಗೆ ಶಿಳ್ಳೆ-ಚಪ್ಪಾಳೆ ಜೈಜೈ ಘೋಷ!

Published : Dec 12, 2025, 03:57 PM IST
Balakrishna Aadhi Pinishetty

ಸಾರಾಂಶ

ಅಖಂಡ 2 ಸಿನಿಮಾ ಭರ್ಜರಿ ಓಪನಿಂಗ್ ಪಡೆದು ಯಶಸ್ವೀ ಪ್ರದರ್ಶನ ಕಾಣುತ್ತಿದೆ. ಥಿಯೇಟರ್‌ಗಳಲ್ಲಿ ಕನ್ನಡದ ಡೈಲಾಗ್, ಕನ್ನಡದ ಹಾಡು ಕೇಳಿ ಅಲ್ಲಿರುವ, ನೋಡುತ್ತಿರುವ ಕನ್ನಡಿಗರ ಕಣ್ಣಲ್ಲಿ ಆನಂದಭಾಷ್ಪ ಹರಿಯುತ್ತದೆ ಎಂಬುದನ್ನು ಮತ್ತೆ ಹೇಳಬೇಕಿಲ್ಲ. ಇಂದು ಕನ್ನಡ ಸಿನಿಮಾಗಳು ವಿಶ್ವಮಟ್ಟದಲ್ಲಿ ರಾರಾಜಿಸುತ್ತಿವೆ

ಬಾರಿಸಿದೆ ಕನ್ನಡ ಡಿಂಡಿಮ!

'ಬಾರಿಸು ಕನ್ನಡ ಡಿಂಡಿಮವಾ.. ಓ ಕರ್ನಾಟಕ ಹೃದಯ ಶಿವಾ..' ಎಂಬ ಹಾಡಿನ ಹಿನ್ನೆಲೆಯಲ್ಲಿ ತೆಲುಗು ಸ್ಟಾರ್ ನಟ ಬಾಲಯ್ಯ (Balakrishna) ಸಿನಿಮಾ 'ಅಖಂಡ 2'ನಲ್ಲಿ ಭಾರೀ ಫೈಟಿಂಗ್‌ ಒಂದು ನಡೆಯುತ್ತದೆ. ಅದಕ್ಕೆ ಥಿಯೇಟರ್‌ಗಳಲ್ಲಿ ಶಿಳ್ಳೆ, ಚಪ್ಪಾಳೆಗಳ ಸುರಿಮಳೆಯೇ ಆಗುತ್ತಿದೆ. ಅದಕ್ಕೂ ಮೊದಲು ನಾಯಕ ಬಾಲಯ್ಯ ಹಾಗೂ ವಿಲನ್ ಆದಿ ಪಿನಿಶೆಟ್ಟಿ ನಡುವೆ ಮಾತಿನ ಚಕಮಕಿ ನಡೆಯುತ್ತದೆ. ಬೋಯಪಾಟಿ ಶ್ರೀನು ನಿರ್ದೇಶನದ ಈ ಚಿತ್ರದಲ್ಲಿ ಆದಿ ಪಿನಿಶೆಟ್ಟಿ (Aadhi Pinishetty) ಅವರು ನಂದಮೂರಿ ಬಾಲಕೃಷ್ಣ ಎದುರು ಮುಖ್ಯ ವಿಲನ್ ಅಗಿ ಅಬ್ಬರಿಸಿದ್ದಾರೆ. ಅವರಿಬ್ಬರ ಕಾಂಬಿನೇಶನ್‌ನಲ್ಲಿ ಕನ್ನಡದ ಡೈಲಾಗ್‌ಗಳು ಮೂಡಿಬಂದಿದ್ದು, ಅದು ಥೀಯೇಟರ್‌ಗಳಲ್ಲಿ ಕನ್ನಡದ ಬಾವುಟವನ್ನು ವಿಶ್ವಮಟ್ಟದಲ್ಲಿ ತೆಲುಗು ಸಿನಿಮಾದಲ್ಲಿ ಮತ್ತೊಮ್ಮೆ ಹಾರಿಸಿದೆ.

'ಅಖಂಡ 2' ಸಿನಿಮಾ ಇದೀಗ ತೆರೆಯ ಮೇಲೆ ಅಬ್ಬರಿಸುತ್ತಿದೆ

ಹೌದು, ಬಾಲಯ್ಯ ಅಬ್ಬರದ, ಅತ್ಯಂತ ಸಮರ್ಥ ನಟನೆಯ 'ಅಖಂಡ 2' ಸಿನಿಮಾ ಇದೀಗ ತೆರೆಯ ಮೇಲೆ ಅಬ್ಬರಿಸುತ್ತಿದೆ. 'ನಾನು ಕನ್ನಡಿಗ ಕಣೋ.. ನೋಡ್ತೀನಿ ನಿನ್ ಸಂಗ್ತಿ' ಎಂದು ಖಳನಾಯಕ ಆದಿ ಹೇಳುತ್ತಿದ್ದಂತೆ, ನಾಯಕ ಬಾಲಯ್ಯ ಅವರೆದುರು ತೊಡೆತಟ್ಟಿ ನಿಲ್ಲುತ್ತಾರೆ. ಕನ್ನಡದ ಬಗ್ಗೆ ಬಹಳಷ್ಟು ಹೆಮ್ಮೆಯ ಮಾತುಗಳನ್ನು ಪುಂಖಾನುಪುಂಖವಾಗಿ ಹೇಳತೊಡಗುತ್ತಾರೆ. ವಿಜಯನಗರ ಸಾಮ್ರಾಜ್ಯದ ಕೃಷ್ಣದೇವರಾಯ ಹಾಗೂ ಕನ್ನಡದ ದೊಡ್ಮನೆ ಡಾ ರಾಜ್‌ಕುಮಾರ್ ಅವರ ದೊಡ್ದತನದ ಬಗ್ಗೆ ಹೇಳುತ್ತ ಬಾಲಯ್ಯ, ಕನ್ನಡದ ಗುಣಗಾನ ಮಾಡುತ್ತಿದ್ದರೆ ಇಡೀ ಥಿಯೇಟರ್‌ ಆ ಕ್ಷಣದಲ್ಲಿ ಕನ್ನಡಮಯ ಎನ್ನಿಸುವಂತಿದೆ.. (ವಿಡಿಯೋ ನೋಡಿ)

ಬೋಯಪಟಿ ಶ್ರೀನು ನಿರ್ದೇಶನದಲ್ಲಿ ಬಾಲಯ್ಯ ಮತ್ತು ಗಾಡ್ ಆಫ್ ಮಾಸಸ್ ಎಂಬ ಹೆಸರುಗಳಿಂದ ನಂದಮೂರಿ ಬಾಲಕೃಷ್ಣ ನಟಿಸಿರುವ 'ಅಖಂಡ 2' ಸಿನಿಮಾ ಇಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. 'ಅಖಂಡ' ಚಿತ್ರದ ಮುಂದುವರಿದ ಭಾಗ ಬಾಲಯ್ಯ ಮತ್ತು ಗಾಡ್ ಆಫ್ ಮಾಸಸ್ ಎಂಬ ಹೆಸರುಗಳಿಂದ ಖ್ಯಾತರಾದ ನಂದಮೂರಿ ಬಾಲಕೃಷ್ಣ ಅವರ 'ಅಖಂಡ ' ಸಿನಿಮಾ ಇಂದು ಬಿಡುಗಡೆಯಾಗಿದೆ.

ಬಾಲಕೃಷ್ಣ ಜೊತೆ ಆದಿ ಪಿನಿಶೆಟ್ಟಿ ಫೈಟ್

ಈ ತೆಲುಗು ಚಿತ್ರ ಮೊದಲು ಡಿಸೆಂಬರ್ 5 ರಂದು ಬಿಡುಗಡೆಯಾಗಬೇಕಿತ್ತು, ಆದರೆ ಹಣಕಾಸಿನ ಸಮಸ್ಯೆಯಿಂದ ಕೊನೆ ಕ್ಷಣದಲ್ಲಿ ಮುಂದೂಡಲಾಗಿತ್ತು. ಸಮಸ್ಯೆ ಬಗೆಹರಿದ ನಂತರ, ಈಗ ತೆರೆಗೆ ಬಂದಿದೆ. ಇದು ನಿರ್ದೇಶಕ ಬೋಯಪಟಿ ಶ್ರೀನು ಅವರ 2021ರ 'ಅಖಂಡ' ಚಿತ್ರದ ಮುಂದುವರಿದ ಭಾಗವಾಗಿದೆ. ನಂದಮೂರಿ ಬಾಲಕೃಷ್ಣ ಜೊತೆಗೆ, ಸಂಯುಕ್ತಾ ಮೆನನ್, ಆದಿ ಪಿನಿಶೆಟ್ಟಿ, ಹರ್ಷಾಲಿ ಮಲ್ಹೋತ್ರಾ, ಶಾಶ್ವತ ಚಟರ್ಜಿ ಮುಂತಾದ ನಟರು ಈ ಚಿತ್ರದಲ್ಲಿ ನಟಿಸಿದ್ದಾರೆ.

ಸದ್ಯಕ್ಕೆ ಈ ಅಖಂಡ 2 ಸಿನಿಮಾ ಭರ್ಜರಿ ಓಪನಿಂಗ್ ಪಡೆದು ಯಶಸ್ವೀ ಪ್ರದರ್ಶನ ಕಾಣುತ್ತಿದೆ. ಥಿಯೇಟರ್‌ಗಳಲ್ಲಿ ಕನ್ನಡದ ಡೈಲಾಗ್, ಕನ್ನಡದ ಹಾಡು ಕೇಳಿ ಅಲ್ಲಿರುವ, ನೋಡುತ್ತಿರುವ ಕನ್ನಡಿಗರ ಕಣ್ಣಲ್ಲಿ ಆನಂದಭಾಷ್ಪ ಹರಿಯುತ್ತದೆ ಎಂಬುದನ್ನು ಮತ್ತೆ ಹೇಳಬೇಕಿಲ್ಲ. ಇಂದು ಕನ್ನಡ, ಕನ್ನಡ ಸಿನಿಮಾಗಳು ವಿಶ್ವಮಟ್ಟದಲ್ಲಿ ರಾರಾಜಿಸುತ್ತಿರುವ ಸಮಯದಲ್ಲಿ ಪರಭಾಷೆಯ ಸಿನಿಮಾಗಳಲ್ಲಿ ಕೂಡ ಕನ್ನಡದ ಬಗ್ಗೆ ಮಾತನ್ನಾಡುತ್ತಿರುವ ಸಂಗತಿ ಕನ್ನಡಗರಿಗೆ ಹೆಮ್ಮೆಯ ಗರಿ ಮೂಡಿಸುತ್ತಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

2025ರಲ್ಲಿ ಸಿನಿಮಾ ಇಲ್ಲದಿದ್ದರೂ ಪ್ರಭಾಸ್ ಕ್ರೇಜ್ ಟಾಪ್: 4000 ಕೋಟಿ ಬ್ಯುಸಿನೆಸ್ ಮಾಡುತ್ತಿರುವ ರೆಬೆಲ್ ಸ್ಟಾರ್!
ಅವಕಾಶ ಕಳೆದುಕೊಳ್ಳುವ ಭಯ ನನ್ನನ್ನು ಕಾಡಿತ್ತು: ಸೋಲಿನ ಭೀತಿ ಬಗ್ಗೆ ರಹಸ್ಯ ಬಿಚ್ಚಿಟ್ಟ ಪ್ರಿಯಾಂಕಾ ಚೋಪ್ರಾ