ಡೈರೆಕ್ಟರ್ ಜಾರ್ಜ್ ಥಾಮಸ್ ಅವರನ್ನು ಲವ್ ಮಾಡಿ ಮದುವೆ ಆಗಿಯೇಬಿಟ್ಟರು. ಈ ಕಾರಣಕ್ಕೇ ಅವರು ಹಿಂದೂ ಧರ್ಮದಿಂದ ಕ್ರಿಶ್ಚಿಯನ್ ಧರ್ಮಕ್ಕೆ ತಮ್ಮನ್ನು ಕನ್ವರ್ಟ್ ಮಾಡಿಕೊಂಡರು. ಆದರೆ, ಅಲ್ಲೂ ಕೂಡ ಅವರಿಗೆ ಶಾಕ್ ಕಾದಿತ್ತು.
ಸಿನಿಮಾರಂಗದಲ್ಲಿ ಕೆಲವು ತಾರೆಯರು ಬೇರೆಬೇರೆ ಕಾರಣಕ್ಕೆ ತಮ್ಮ ಧರ್ಮವನ್ನು ಬದಲಾಯಿಸಿದ್ದಾರೆ. ಅದು ಧಮೇಂದ್ರ ಇರಬಹುದು, ಅಮೃತಾ ಸಿಂಗ್ ಅಥವಾ ಶರ್ಮಿಳಾ ಟಾಗೋರ್ ಇರಬಹುದು. ಆದರೆ ಈ ಹೀರೋಯಿನ್ ತನ್ನ ಧರ್ಮ ಬದಲಾಯಿಸಿದ್ದು ಮದುವೆ ಕಾರಣಕ್ಕೆ, ಇನ್ಯಾವುದೇ ಕಾರಣಕ್ಕೆ ಅಲ್ಲವೇ ಅಲ್ಲ. ಹೌದು, ಸೂಪರ್ ಸ್ಟಾರ್‌ಗಳಾದ ನಟ ಕಮಲ್ ಹಾಸನ್ ಹಾಗು ರಜನಿಕಾಂತ್ ಸೇರಿದಂತೆ ಘಟಾನುಘಟಿ ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಂಡಿರುವ ಖ್ಯಾತ ನಟಿ, ಮದುವೆ ಕಾರಣಕ್ಕೆ ಧರ್ಮವನ್ನೇ ಬದಲಾಯಿಸಿಕೊಂಡವರು.
ಆದರೆ, ಮದುವೆ ಬಳಿಕ ಫ್ಯಾಮಿಲಿಯಲ್ಲಿ ಖುಷಿ ಕಾಣಲಾಗದೇ ಕಂಗಾಲಾಗಿ, ಕಷ್ಟಗಳ ಸರಮಾಲೆಯನ್ನೇ ಎದುರಿಸಿ ಡಿವೋರ್ಸ್ ಮಾಡಿಕೊಂಡು ಒಂಟಿ ಜೀವನ ನಡೆಸಿದವರು. ಈ ನಟಿ ಬೇರಾರೂ ಅಲ್ಲ, ಶ್ರೀವಿದ್ಯಾ. 800ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದರೂ, ಸ್ಟಾರ್ ನಟಿಯಾಗಿದ್ದರೂ ಶ್ರೀವಿದ್ಯಾ (Srividya) ವೈಯಕ್ತಿಕ ಜೀವನದಲ್ಲಿ ಫೇಲ್ ಆಗಿ ಜೀವನದಲ್ಲಿ ಕೊರಗಿ ಕೊರಗಿ ಕೊನೆಗೆ 2006ರಲ್ಲಿ ಇಹಲೋಕ ತ್ಯಜಿಸಿದ ನಟಿ ಶ್ರೀವಿದ್ಯಾ. ಭಾರೀ ಬಡತನದಲ್ಲಿ ಹುಟ್ಟಿ, 13ನೇ ವಯಸ್ಸಿನ್ಲಲೇ ಕುಟುಂಬದ ಬಡತನ ನೀಗಿಸಲು ಸಿನಿಮಾ ನಟನೆ ಮಾಡಿ ಜೀವನ ಸಾಗಿಸಿದವರು.
ಬರ್ತಿದೆ ಲಾಕ್ ಡೌನ್ ಕಥೆ, ಪ್ರಕಾಶ್ ರಾಜ್ ಪ್ರೆಸೆಂಟ್ ಮಾಡ್ತಿದಾರೆ ಕೊರೋನಾ ನೋವಿನ ಕಥೆ 'ಫೋಟೋ'
24 ಜುಲೈ 1953ರಲ್ಲಿ ಚೆನ್ನೈನಲ್ಲಿ ಜನಿಸಿದ ಶ್ರೀವಿದ್ಯಾ ತಮಿಳಿನ ನಾಯ್ಡು ಕುಟುಂಬಕ್ಕೆ ಸೇರಿದವರು. ತಮಿಳು ಸಿನಿಮಾರಂಗದ ಹಾಸ್ಯನಟ ಕೃಷ್ಣಮೂರ್ತಿ ಹಾಗು ಕರ್ನಾಟಿಕ್ ಸಂಗೀತದ ಹಾಡುಗಾರ್ತಿ ಎಂಎಲ್ ವಾಸಂತಕುಮಾರಿ ಅವರು ನಟಿ ಶ್ರೀ ವಿದ್ಯಾ ಪೋಷಕರು. ಅವರು ಚಿಕ್ಕ ಮಗುವಾಗಿದ್ದಾಗಲೇ ಮುಖದ ಮಾಂಸಖಂಡಕ್ಕೆ ಆದ ರೋಗದಿಂದ ತಂದೆ ನಟನೆ ಬಿಟ್ಟುಬಿಟ್ಟರು. ಇದರಿಂದ ನಟಿಯ ಕುಟುಂಬ ಹಣಕಾಸಿನ ಸಮಸ್ಯೆ ಎದುರಿಸುವಂತಾಯಿತು. ಹೀಗಾಗಿ ತಮ್ಮ 13ನೇ ವಯಸ್ಸಿಗೇ ಶ್ರೀವಿದ್ಯಾ ದುಡಿಯಲು ಶುರುಮಾಡಿದರು.
ಮದ್ವೆಗೂ ಮೊದ್ಲು ಬ್ಯಾಂಕಾಕ್‌ಗೆ ಹೋಗೋದು ತಪ್ಪು ಎಂದಿದ್ದ ಪೃಥ್ವಿ ಅಂಬಾರ್; ಕಾರಣ ಕೇಳಿದ್ರೆ ಶಾಕ್ ಆಗ್ತೀರಾ!
1967ರಲ್ಲಿ ನಟ ಶಿವಾಜಿ ಗಣೇಶನ್ ಎದುರು ನಟಿಸುವ ಮೂಲಕ ಶ್ರೀವಿದ್ಯಾ ತಮ್ಮ ನಟನಾ ಕೆರಿಯರ್ ಶುರು ಮಾಡಿದರು. ಬಳಿಕ ಅವರು ಮಲಯಾಳಂ ಚಿತ್ರರಂಗಕ್ಕೆ ಡಾನ್ಸರ್ ಆಗಿ ಪರಿಚಯವಾದರು. 1972ರಲ್ಲಿ ಜೈ ಶಂಕರ್ ಎದುರು 'ಡೆಲ್ಲಿ ಟು ಮದ್ರಾಸ್' ಸಿನಿಮಾದಲ್ಲಿ ನಟಿಸಿದರು. 1980-80ರ ನಡುವೆ ಶ್ರೀವಿದ್ಯಾ ತಮಿಳು ಚಿತ್ರರಂಗದಲ್ಲಿ ಬಹಳಷ್ಟು ಸಿನಿಮಾದಲ್ಲಿ ನಟಿಸುವ ಮೂಲಕ ಸ್ಟಾರ್ ನಟಿಯಾಗಿ ಮೆರೆದರು. ನಟರಾದ ರಜನಿಕಾಂತ್ ಮತ್ತು ಕಮಲ್ ಹಾಸನ್ ಅವರೊಂದಿಗೆ 'ಅಪೂರ್ವ ರಾಗಂಗಳ್' ಚಿತ್ರದಲ್ಲಿ ನಟಿಸಿದರು.
ಸಕ್ಸಸ್ ಆಕಸ್ಮಿಕವಾಗಿ ಸಿಗುತ್ತದೆ ಹೊರತೂ ನಮ್ಮ ಪ್ರಯತ್ನದಿಂದಲ್ಲ; ಶಾರುಖ್ ಮಾತಿನ ಮರ್ಮವೇನು?
ಅಪೂರ್ವ ರಾಗಂಗಳ್ ಸಿನಿಮಾ ನಟನೆ ವೇಳೆ ಶ್ರೀವಿದ್ಯಾ ನಟ ಕಮಲ್ ಹಾಸನ್ ಜತೆ ಲವ್‌ಗೆ ಬಿದ್ದರು. ಆದರೆ ಅವರ ತಾಯಿ ಈ ಪ್ರೇಮಕ್ಕೆ ವಿರೋಧ ವ್ಯಕ್ತಪಡಿಸಿ ಅವರಿಬ್ಬರ ಲವ್ ಹಾಗೂ ಮದುವೆ ಆಗುವುದನ್ನು ತಪ್ಪಿಸಿದರು. ಬಳಿಕ ಕಮಲ್ ಹಾಸನ್ ಅವರು ವಾಣಿ ಗಣಪತಿ ಅವರನ್ನು ಲವ್ ಮಾಡಿ ಮದುವೆಯಾದರು. ಶ್ರೀವಿದ್ಯಾ ತಮಗೆ ಹಲವು ಸಿನಿಮಾಗಳಲ್ಲಿ ನಾಯಕಿಯಾಗಿ ಅವಕಾಶ ನೀಡಿದ್ದ ಭರತನ್ ಅವರನ್ನು ಲವ್ ಮಾಡಿದರು. ಆದರೆ, ಆ ಪ್ರೇಮ ಕೂಡ ತುಂಬಾ ದಿನ ನಿಲ್ಲಲಿಲ್ಲ. ಭರತನ್ ಲಲಿತಾ ಅವರನ್ನು ಮದುವೆಯಾಗುವ ಮೂಲಕ ಮತ್ತೆ ಶ್ರೀವಿದ್ಯಾ ಒಂಟಿಯಾದರು.
ಕನ್ನಡ ಭಾಷೆ ಬಗ್ಗೆ ಗುರುಪ್ರಸಾದ್ ಹೇಳಿದ್ದೇನು; ಅಪಭ್ರಂಶವಿಲ್ಲದೇ ಮಾತನಾಡುವ ಬಗ್ಗೆ ಏನಂದ್ರು?
ಆದರೆ, ನಟಿ ಶ್ರೀವಿದ್ಯಾ ಲವ್ ಮಾಡುವ ತಮ್ಮ ಚಟವನ್ನು ಬಿಡಲಿಲ್ಲ. ತಾವು ನಟಿಸಿದ ಟಿಕ್ಕನಲ್ (Teekkanal)ಸಿನಿಮಾದ ಅಸಿಸ್ಟಂಟ್ ಡೈರೆಕ್ಟರ್ ಜಾರ್ಜ್ ಥಾಮಸ್ (George Thomas) ಅವರನ್ನು ಲವ್ ಮಾಡಿ ಮದುವೆ ಆಗಿಯೇಬಿಟ್ಟರು. ಈ ಕಾರಣಕ್ಕೇ ಅವರು ಹಿಂದೂ ಧರ್ಮದಿಂದ ಕ್ರಿಶ್ಚಿಯನ್ ಧರ್ಮಕ್ಕೆ ತಮ್ಮನ್ನು ಕನ್ವರ್ಟ್ ಮಾಡಿಕೊಂಡರು. ಆದರೆ, ಅಲ್ಲೂ ಕೂಡ ಅವರಿಗೆ ಶಾಕ್ ಕಾದಿತ್ತು. ಹೌಸ್ ವೈಫ್ ಅಗಿ ಲೈಫ್ ಲೀಡ್ ಮಾಡಲು ಬಯಸಿದ್ದ ನಟಿ ಶ್ರೀವಿದ್ಯಾ ಅವರಿಗೆ ಗಂಡ ಮತ್ತೆ ಸಿನಿಮಾ ನಟನೆ ಕಂಟಿನ್ಯೂ ಮಾಡಲು ಒತ್ತಾಯ ಮಾಡತೊಡಗಿದರು. ಆಗಲೇ ತಾವು ಮೋಸ ಹೋಗಿದ್ದು ಅವರಿಗೆ ಗೊತ್ತಾಯಿತು.
ನಮ್ಮಂಥವರಿಗೆಲ್ಲ ಮಕ್ಕಳು ಇರಬಾರದು ಎಂದಿದ್ದರಂತೆ ನಟಿ ಕಲ್ಪನಾ; ಯಾರಿಗೆ, ಯಾಕೆ ಹಾಗೆ ಹೇಳಿದ್ರು?
ಬಳಿಕ ನಟಿ ಶ್ರೀವಿದ್ಯಾ ಅವರು ಗಂಡ ಜಾರ್ಜ್ ಥಾಮಸ್ ಅವರಿಂದ ಡಿವೋರ್ಸ್ ಪಡೆದು ಒಂಟಿ ಜೀವನವನ್ನು ಪ್ರಾರಂಭಿಸಿದರು. ಆದರೆ, 2003ರಲ್ಲಿ ಅವರಿಗೆ ಬ್ರೆಸ್ಟ್ ಕ್ಯಾನ್ಸರ್ ಪತ್ತೆಯಾಗಿ ಶ್ರೀವಿದ್ಯಾ ಟ್ರೀಟ್‌ಮೆಂಟ್‌ಗೆ ಒಳಗಾಗಬೇಕಾಯಿತು. ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ 3 ವರ್ಷಗಳ ಸತತ ಹೋರಾಟದ ನಂತರ 2006ರಲ್ಲಿ ಕ್ಯಾನ್ಸರ್ ಕಾಯಿಲೆಗೆ ಸೋತು ಶರಣಾಗಿ ನಟಿ ಶ್ರೀವಿದ್ಯಾ ಕೊನೆಯುಸಿರೆಳೆದರು. ಒಟ್ಟಿನಲ್ಲಿ, ಬರೋಬ್ಬರಿ 800 ಸಿನಿಮಾಗಳಲ್ಲಿ ನಟಿಸಿ ಸ್ಟಾರ್ ನಟಿ ಎನಿಸಿದ್ದ ಶ್ರೀವಿದ್ಯಾ, ಇಷ್ಟಪಟ್ಟು ಆಗಿದ್ದ ಮದುವೆಯಿಂದಲೇ ಕಷ್ಟಪಟ್ಟು ಕೊನೆಗೆ ಕ್ಯಾನ್ಸರ್‌ಗೆ ಬಲಿಯಾದರು.
ಕುಬೇರನಾದ್ರೂ ಚೆನ್ನೈನಲ್ಲಿ ಭಿಕ್ಷೆ ಬೇಡುತ್ತಿರುವ ಧನುಷ್; ಪಕ್ಕದಲ್ಲಿ ರಶ್ಮಿಕಾ ಮಂದಣ್ಣ ಯಾಕೆ ಗುರೂ?