ಆಸ್ಕರ್ನಲ್ಲಿ 87 ವರ್ಷಗಳ ದಾಖಲೆ ಮುರಿದ 22 ವರ್ಷದ ಗಾಯಕಿ. ಏನಿವರ ವಿಶೇಷತೆ? ಆಸ್ಕರ್ ಪಡೆದ ವಿಜೇತರ ಫುಲ್ ಡಿಟೇಲ್ಸ್ ಇಲ್ಲಿದೆ...
ಸಿನಿ ಜಗತ್ತಿನ ಉನ್ನತ ಪ್ರಶಸ್ತಿ ಎನಿಸಿಕೊಂಡಿರುವ ಆಸ್ಕರ್ನ ಕಾರ್ಯಕ್ರಮಕ್ಕೆ ಅದ್ಧೂರಿಯಾಗಿರುವ ತೆರೆ ಬಿದ್ದಿದೆ. 96ನೇ ಸಾಲಿನ ಆಸ್ಕರ್ ಅವಾರ್ಡ್ನಲ್ಲಿ ಹಲವಾರು ಸಿನಿ ದಿಗ್ಗಜರು ಪ್ರಶಸ್ತಿ ಪಡೆದುಕೊಂಡಿದ್ದಾರೆ. ಪ್ರತಿಯೊಬ್ಬ ಸಿನಿಮಾ ತಾರೆಯರು ಸೇರಿದಂತೆ ಚಿತ್ರ ನಿರ್ದೇಶಕರ ಪಾಲಿಗೆ ಕನಸಿನ ಕೂಸು ಈ ಪ್ರಶಸ್ತಿ. ಈ ಬಾರಿಯ ಆಸ್ಕರ್ನಲ್ಲಿ 22 ವರ್ಷದ ಗಾಯಕಿಯೊಬ್ಬಳು 87 ವರ್ಷಗಳ ಇತಿಹಾಸವನ್ನು ಮುರಿದು ದಾಖಲೆ ಬರೆದಿದ್ದಾರೆ. ಈಕೆ ಹೆಸರು ಬಿಲ್ಲಿ ಎಲಿಶ್. 22 ವರ್ಷದ ಬಿಲ್ಲಿ ಎರಡು ಆಸ್ಕರ್ ಪ್ರಶಸ್ತಿ ಪಡೆಯುವ ಮೂಲಕ ಅತ್ಯಂತ ಕಿರಿಯ ಆಸ್ಕರ್ ಪ್ರಶಸ್ತಿ ವಿಜೇತೆ ಎನ್ನುವ ಸಾಲಿಗೆ ಸೇರಿದ್ದಾರೆ. ಡೇನಿಯಲ್ ಕ್ರೇಗ್ ನಟಿಸಿದ 'ಜೇಮ್ಸ್ ಬಾಂಡ್' ಚಿತ್ರದಲ್ಲಿ 'ನೋ ಟೈಮ್ ಟು ಡೈ' ಹಾಡಿಗಾಗಿ ಬಿಲ್ಲಿ ಎಲಿಶ್ ಅವರಿಗೆ ಆಸ್ಕರ್ ಪ್ರಶಸ್ತಿ ಸಿಕ್ಕಿದೆ. ಈ ಮೂಲಕ ಬಿಲ್ಲಿ ಎಲಿಶ್ ಎರಡನೇ ಆಸ್ಕರ್ ಪ್ರಶಸ್ತಿಯನ್ನು ಗೆದ್ದು 87 ವರ್ಷ ಹಳೆಯ ದಾಖಲೆಯನ್ನು ಮುರಿದ್ದಾರೆ.
ಅಂದಹಾಗೆ ಈ ಕಾರ್ಯಕ್ರಮ ನಡೆದಿದ್ದು, ಅಮೆರಿಕದ ಲಾಸ್ ಏಂಜಲಿಸ್‌ನಲ್ಲಿ. ಈ ಬಾರಿಯ ಇನ್ನೊಂದು ವಿಶೇಷ ಎಂದರೆ, ಕ್ರಿಸ್ಟೋಫರ್ ನೋಲನ್ ಅವರ 'ಓಪನ್‌ಹೈಮರ್' ಚಿತ್ರಕ್ಕೆ 7 ಆಸ್ಕರ್ ಪ್ರಶಸ್ತಿಗಳನ್ನು ಪಡೆದಿರುವುದು. ಈ ಚಿತ್ರದಲ್ಲಿ ನಟಿಸಿರುವ ಪಾತ್ರ ಮಾಡಿರೋ ರಾಬರ್ಟ್ ಡೌನೆಗೆ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಸಿಕ್ಕಿದೆ. ಹಾಲಿವುಡ್ ನ ಬಹುಮುಖ ನಟ ಈ ಹಿಂದೆ 2 ಬಾರಿ ಆಸ್ಕರ್ ಗೆ ನಾಮನಿರ್ದೇಶನಗೊಂಡಿದ್ದರಾದರೂ ಇದು ಮೊದಲ ಆಸ್ಕರ್ ಪ್ರಶಸ್ತಿಯಾಗಿದೆ. 1993 ರಲ್ಲಿ ರಾಬರ್ಟ್ ಮೊದಲ ಬಾರಿಗೆ ಚಾಪ್ಲಿನ್ ಸಿನಿಮಾದ ನಟನೆಗಾಗಿ ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದರು. 2008 ರಲ್ಲಿ ಟ್ರಾಪಿಕ್ ಥಂಡರ್ ಸಿನಿಮಾದಲ್ಲಿ ಪೋಷಕ ನಟನೆಗಾಗಿ ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದರು. ಇದೇ ಚಿತ್ರದ ಕ್ರಿಸ್ಟೋಫರ್ ನೋಲನ್‌ಗೆ ನಿರ್ದೇಶಕ ಪ್ರಶಸ್ತಿ, ಸಿನಿಮಾ ಪ್ರಶಸ್ತಿ, ಛಾಯಾಗ್ರಹಣ, ಸಂಕಲನ ಪ್ರಶಸ್ತಿ, ಒರಿಜಿನಲ್ ಸ್ಕೋರ್ ಪ್ರಶಸ್ತಿಗಳು ಸಿಕ್ಕಿವೆ.
ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಚಿತ್ರದಲ್ಲಿ ಚಂದನ್ ಶೆಟ್ಟಿಯ ಗೆಟಪ್ ಹೇಗಿದೆ? ಫ್ಯಾನ್ಸ್ ಕಾತರಕ್ಕೆ ಬಿತ್ತು ತೆರೆ
ಸಂಪೂರ್ಣ ಬೆತ್ತಲಾಗಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಆಗಮಿಸುವ ಮೂಲಕ WWE ಸೂಪರ್ ಸ್ಟಾರ್ ಜಾನ್ ಸೀನಾ ಅವರು ಜಾಗತಿಕ ಸಿನಿಮಾ ಸ್ಟಾರ್‌ಗಳನ್ನು ಅಚ್ಚರಿಗೆ ದೂಡಿದ ಘಟನೆ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಡೆದಿದೆ. ಆಸ್ಕರ್ ಅಕಾಡೆಮಿಯ 96ನೇ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬೆಸ್ಟ್ ಕಾಸ್ಟ್ಯೂಮ್ ಪ್ರಶಸ್ತಿ ನೀಡಲು ರೆಸ್ಲರ್ ಜಾನ್ ಸೀನಾರನ್ನು ಕರೆಸಲಾಗಿತ್ತು. ಆದರೆ ಇವರು ಯಾವುದೇ ಕಾಸ್ಟ್ಯೂಮ್ ಇಲ್ಲದೇ ಹುಟ್ಟುಡುಗೆಯಲ್ಲಿ ಸಮಾರಂಭಕ್ಕೆ ಆಗಮಿಸುವ ಮೂಲಕ ಸಿನಿಮಾಗಳಲ್ಲಿ ಅರೆಬರೆ ದೇಹ ಪ್ರದರ್ಶನ ಮಾಡುವ ಹಾಲಿವುಡ್ ನಟ ನಟಿಯರು ಸೇರಿದಂತೆ ಕಾರ್ಯಕ್ರಮದಲ್ಲಿದ್ದ ಎಲ್ಲರನ್ನು ಅಚ್ಚರಿಗೆ ದೂಡಿದರು.
ಇನ್ನುಳಿದಂತೆ ಯಾವೆಲ್ಲಾ ಚಿತ್ರಗಳಿಗೆ ಅತ್ಯುತ್ತಮ ಎನ್ನುವ ಪ್ರಶಸ್ತಿ ಸಿಕ್ಕಿದೆ ಎನ್ನುವ ಲಿಸ್ಟ್ ಇಲ್ಲಿದೆ...
ಸಿನಿಮಾ- ಓಪನ್‌ಹೈಮರ್
ನಟ- ಸಿಲ್ಲಿಯನ್ ಮರ್ಫಿ (ಓಪನ್‌ಹೈಮರ್)
ನಟಿ- ಎಮ್ಮಾ ಸ್ಟೋನ್ (ಪೂರ್ ಥಿಂಗ್ಸ್)
ನಿರ್ದೇಶಕ- ಕ್ರಿಸ್ಟೋಫರ್ ನೋಲನ್ (ಓಪನ್‌ಹೈಮರ್)
ಪೋಷಕ ನಟ- ಜೂನಿಯರ್ ರಾಬರ್ಟ್ ಡೌನೆ (ಓಪನ್‌ಹೈಮರ್)
ಪೋಷಕ ನಟಿ- ದಿ ಹೋಲ್ಡೋವರ್ಸ್
ಅಡಪ್ಟೆಡ್ ಚಿತ್ರಕಥೆ- ಅಮೆರಿಕನ್ ಫಿಕ್ಷನ್
ಒರಿಜಿನಲ್ ಚಿತ್ರಕಥೆ- ಅನಟಮಿ ಆಪ್ ಎ ಫಾಲ್
ಅನಿಮೇಟೆಡ್ ಸಿನಿಮಾ- ದಿ ಬಾಯ್ ಆ್ಯಂಡ್ ದಿ ಹೆರೊನ್
ಅನಿಮೇಟೆಡ್ ಶಾರ್ಟ್- ವಾರ್ ಈಸ್ ಓವರ್!
ಅಂತಾರಾಷ್ಟ್ರೀಯ ಫೀಚರ್- ದಿ ಝೋನ್ ಆಫ್ ಇಂಟರೆಸ್ಟ್
ಸಾಕ್ಷ್ಯಚಿತ್ರ ಫೀಚರ್- 20 ಡೇಸ್ ಇನ್ ಮರಿಪೊಲ್
ಸಾಕ್ಷ್ಯಚಿತ್ರ ಶಾರ್ಟ್- ದಿ ಲಾಸ್ಟ್ ರಿಪೇರ್ ಶಾಪ್
ಒರಿಜಿನಲ್ ಸಂಗೀತ- ಓಪನ್‌ಹೈಮರ್
ಒರಿಜಿನಲ್ ಹಾಡು- ವಾಟ್ ವಾಸ್ ಈ ಮೇಡ್ ಫಾರ್? (ಬಾರ್ಬಿ)
ಸೌಂಡ್- ದಿ ಝೋನ್ ಆಫ್ ಇಂಟರೆಸ್ಟ್
ನಿರ್ಮಾಣ ವಿನ್ಯಾಸ- ಪೂರ್ ಥಿಂಗ್ಸ್
ಲೈವ್ ಆಕ್ಷನ್ ಶಾರ್ಟ್- ದಿ ವಂಡರ್‌ಫುಲ್ ಸ್ಟೋರಿ ಆಫ್ ಹೆನ್ರಿ ಶುಗರ್
ಛಾಯಾಗ್ರಹಣ- ಓಪನ್‌ಹೈಮರ್
ಪ್ರಸಾದನ & ಕೇಶವಿನ್ಯಾಸ- ಪೂರ್ ಥಿಂಗ್ಸ್
ವಸ್ತ್ರ ವಿನ್ಯಾಸ- ಪೂರ್ ಥಿಂಗ್ಸ್
ವಿಶುವಲ್ ಎಫೆಕ್ಟ್ಸ್- ಗಾಡ್‌ಜಿಲ್ಲಾ ಮೈನಸ್ ಒನ್
ಸಂಕಲನ- ಓಪನ್‌ಹೈಮರ್
ನನ್ ಮಕ್ಕಳು ಓಡೋಗಿ ಮದ್ವೆಯಾಗ್ಲಪ್ಪಾ ಎಂದ ನಟಿ ಟ್ವಿಂಕಲ್ ಖನ್ನಾ! ಇದರ ಹಿಂದಿದೆ ಇಂಟರೆಸ್ಟಿಂಗ್ ಕಾರಣ...