
ಆರ್ ಆರ್ ಆರ್, ಕಾಶ್ಮೀರ್ ಫೈಲ್ಸ್ ಸಿನಿಮಾಗಳನ್ನು ಹಿಂದಿಕ್ಕಿ ಆಸ್ಕರ್‌ಗೆ ಭಾರತದಿಂದ ಅಧಿಕೃತವಾಗಿ ಎಂಟ್ರಿ ಕೊಟ್ಟ ಚೆಲ್ಲೋ ಶೋ ಸಿನಿಮಾದ ಬಗ್ಗೆ ಹೊಸ ವಿವಾದ ಸೃಷ್ಟಿಯಾಗಿದೆ. ಅಲ್ಲದೇ ಈ ಸಿನಿಮಾ ಆಯ್ಕೆ ಮಾಡಿದ ಜ್ಯೂರಿಗಳ ವಿರುದ್ಧವು ಅಸಮಾಧಾನದ ಹೊಗೆಯಾಡುತ್ತಿದೆ. ಗುಜರಾತಿ ಭಾಷೆಯ ಚೆಲ್ಲೋ ಶೋ ಸಿನಿಮಾ 2023ನೇ ಅಕಾಡೆಮಿ ಅವಾರ್ಡ್‌ಗೆ ಅಧಿಕೃತವಾಗಿ ಆಯ್ಕೆಯಾಗಿದೆ. ಚೆಲ್ಲೋ ಶೋ ಆಯ್ಕೆ ಅನೇಕರಿಗೆ ಅಚ್ಚರಿ ಮೂಡಿಸಿತ್ತು. ಅನೇಕರು ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಆಸ್ಕರ್‌ಗೆ ಆಯ್ಕೆಯಾಗಲಿ ಎಂದು ಅಭಿಯಾನ ಮಾಡಿದ್ದರು. ಇನ್ನು ಕೆಲವರು ವಿವೇಕ್ ಅಗ್ನಿಹೋತ್ರಿ ಅವರ ದಿ ಕಾಶ್ಮೀರ್ ಫೈಲ್ಸ್ ಹೋಗಲಿ ಎಂದು ಅಭಿಯಾನ ಮಾಡಿದ್ದರು. ಆದರೆ ಈ ಎರಡು ಸಿನಿಮಾಗಳ ಚರ್ಚೆಯ ನಡುವೆ ಗುಜರಾತಿ ಸಿನಿಮಾ ಆಯ್ಕೆಯಾಗಿರುವುದು ಅಚ್ಚರಿ ಮೂಡಿಸಿತ್ತು. ಇದೀಗ ಈ ಸಿನಿಮಾದ ಬಗ್ಗೆ ಹೊಸ ವಿವಾದ ಹುಟ್ಟಿಕೊಂಡಿದೆ.
ಚೆಲ್ಲೋ ಶೋ (Chhello Show) ಸಿನಿಮಾ ಭಾರತದ ಚಿತ್ರವೇ ಅಲ್ಲ ಎಂದು ‘ಫೆಡರೇಷನ್ ಆಫ್ ವೆಸ್ಟರ್ನ್ ಇಂಡಿಯಾ ಸಿನಿ ಎಂಪ್ಲಾಯೀಸ್’ (FWICE) ಆರೋಪ ಮಾಡಿದೆ. ಅಲ್ಲದೆ ಭಾರತದ ಫಿಲ್ಮ್ ಫೆಡರೇಷನ್ಗೆ ಪತ್ರ ಬರೆದು ಆಸ್ಕರ್ ಆಯ್ಕೆಯನ್ನು ಪುನರ್ ಪರಿಶೀಲನೆ ಮಾಡುವಂತೆ ಮನವಿ ಮಾಡಿದೆ. ಪ್ಯಾನ್ ನಳಿನ್ ಸಾರಥ್ಯದಲ್ಲಿ ಮೂಡಿಬಂದ ಚೆಲ್ಲೋ ಶೋ ವಿದೇಶಿ ಚಿತ್ರ, ಭಾರತದ ಸಿನಿಮಾವಲ್ಲ, 95 ನೇ ಅಕಾಡೆಮಿ ಅವಾರ್ಡ್‌ಗೆ ಭಾರತದಿಂದ ಪ್ರವೇಶ ಆಗಲು ಅರ್ಹವಲ್ಲ ಎನ್ನುವ ಓರಪ ಕೇಳಿಬಂದಿದೆ.
FWICE ಅಧ್ಯಕ್ಷ ಬಿಎನ್ ತಿವಾರಿ ಮಾತನಾಡಿ, 'ಈ ಚಲನಚಿತ್ರವು ಭಾರತೀಯ ಚಲನಚಿತ್ರವಲ್ಲ ಮತ್ತು ಆಯ್ಕೆ ಪ್ರಕ್ರಿಯೆಯೂ ಸರಿಯಾಗಿಲ್ಲ. RRR ಮತ್ತು ಕಾಶ್ಮೀರ ಫೈಲ್ಸ್‌ನಂತಹ ಹಲವಾರು ಭಾರತೀಯ ಚಲನಚಿತ್ರಗಳು ಇದ್ದವು ಆದರೆ ಜ್ಯೂರಿ ಸಿದ್ಧಾರ್ಥ್ ರಾಯ್ ಖರೀದಿಸಿದ ವಿದೇಶಿ ಚಲನಚಿತ್ರವನ್ನು ಆಯ್ಕೆ ಮಾಡಿದ್ದಾರೆ' ಎಂದು ಹೇಳಿದ್ದಾರೆ.
Oscars 2023ಗೆ ಅಧಿಕೃತ ಪ್ರವೇಶವಾಗದ RRR ಚಿತ್ರ: ಅಭಿಮಾನಿಗಳ ಆಕ್ರೋಶ
ಮರು ಆಯ್ಕೆ ಪ್ರಕ್ರಿಯೆ ನಡೆಯಬೇಕೆಂದು ತಿವಾರಿ ಒತ್ತಾಯ ಮಾಡಿದ್ದಾರೆ. 'ಈಗಿರುವ ಜ್ಯೂರಿಗಳನ್ನು ತೆಗೆದುಹಾಕಬೇಕು. ಈ ಜ್ಯೂರಿಗಳು ಹಲವು ವರ್ಷಗಳಿಂದ ಇದ್ದಾರೆ. ಇಲ್ಲಿರುವ ಅನೇಕರು ಚಿತ್ರವನ್ನೇ ನೋಡುವುದಿಲ್ಲ. ವೋಟಿಂಗ್ ಮೂಲಕ ಸಿನಿಮಾ ಆಯ್ಕೆ ಮಾಡುತ್ತಾರೆ. ಅತ್ಯಧಿಕ ಚಿತ್ರಗಳನ್ನು ರಿಲೀಸ್ ಮಾಡುವ ಭಾರತ ಚಿತ್ರರಂಗದ ಬಗ್ಗೆ ಚೆಲ್ಲೋ ಶೋ ಆಯ್ಕೆ ತಪ್ಪು ಕಲ್ಪನೆ ಮೂಡುವಂತೆ ಮಾಡುತ್ತದೆ’ಎಂದು ತಿವಾರಿ ಹೇಳಿದ್ದಾರೆ. ಈ ಬಗ್ಗೆ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ ಅವರಿಗೆ ಪತ್ರ ಬರೆಯುವುದಾಗಿ ಹೇಳಿದ್ದಾರೆ.
RRR ಅಲ್ಲ, The Kashmir Files ಕೂಡ ಅಲ್ಲ, ಗುಜರಾತಿ ಚಿತ್ರ ಚೆಲ್ಲೋ ಶೋ ಆಸ್ಕರ್‌ಗೆ ಭಾರತದ ಅಧಿಕೃತ ಎಂಟ್ರಿ!
ಚೆಲ್ಲೋ ಶೋ ಎಂದರೆ 'ಕೊನೆಯ ಸಿನಿಮಾ ಶೋ’ ಎಂದರ್ಥ. ನಿರ್ದೇಶಕ ಪ್ಯಾನ್ ನಳಿನ್ ತಮ್ಮ ಬಾಲ್ಯದ ಅನುಭವಗಳನ್ನು ಇಟ್ಟುಕೊಂಡು ಈ ಸಿನಿಮಾ ಮಾಡಿದ್ದಾರೆ. ಸದ್ಯ ಈ ಸಿನಿಮಾದ ವಿರುದ್ಧ ಆರೋಪ ಕೇಳಿಬರುತ್ತಿರುವ ಹಿನ್ನಲೇ ಪುನರ್ ಪರಿಶೀಲನೆ ಮಾಡುತ್ತಾರಾ ಅಥವಾ ಚೆಲ್ಲೋ ಶೋ ಆಸ್ಕರ್ ಅಂಗಲದಲ್ಲಿ ಇರುತ್ತಾ ಕಾದುನೋಡಬೇಕು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.