ಒಬ್ರು ಕಥೆ ಮಾತ್ರ ಕೇಳ್ಬೇಡಿ; ಡಿವೋರ್ಸ್‌ ಪ್ರಶ್ನಿಸಿದ ನಿರೂಪಕನಿಗೆ ಕ್ಲಾಸ್ ತೆಗೆದುಕೊಂಡ ನಿಹಾರಿಕಾ ಮಾಜಿ ಪತಿ ಚೈತನ್ಯ!

Published : Jan 29, 2024, 12:06 PM ISTUpdated : Jan 29, 2024, 12:14 PM IST
ಒಬ್ರು ಕಥೆ ಮಾತ್ರ ಕೇಳ್ಬೇಡಿ; ಡಿವೋರ್ಸ್‌ ಪ್ರಶ್ನಿಸಿದ ನಿರೂಪಕನಿಗೆ ಕ್ಲಾಸ್ ತೆಗೆದುಕೊಂಡ ನಿಹಾರಿಕಾ ಮಾಜಿ ಪತಿ ಚೈತನ್ಯ!

ಸಾರಾಂಶ

ಮೊದಲ ಸಲ ಡಿವೋರ್ಸ್‌ ಬಗ್ಗೆ ಮೌನ ಮುರಿದ ನಿಹಾರಿಕಾ ಕೊನಿಡೆಲಾ. ಡಿವೋರ್ಸ್‌ ಬಗ್ಗೆ ಮಾತನಾಡಿದ ನಿಹಾರಿಕಾ, ಗರಂ ಆದ ಮಾಜಿ ಪತಿ. 

ತೆಲುಗು ಚಿತ್ರರಂಗದ ಖ್ಯಾತ ನಿರ್ಮಾಪಕ ಹಾಗೂ ನಟ ನಾಗಬಾಬು ಪುತ್ರಿ ನಟಿ  ನಿಹಾರಿಕಾ ಕೊನಿಡೆಲಾ ಮತ್ತು ಉದ್ಯಮಿ ಚೈತನ್ಯಾ ಜೆವಿ ಡಿಸೆಂಬರ್ 9,2020ರಂದು ಉದೈಪುರ್‌ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಈ ಅದ್ಧೂರಿ ಅರೇಂಜ್ಡ್‌ ಮ್ಯಾರೇಜ್‌ಗೆ ಜುಲೈ 2023ರಂದು ಬಿಗ್ ಬ್ರೇಕ್ ಬಿದಿತ್ತು. ಸುಮಾರು 2 ವರ್ಷಗಳ ಕಾಲ ಸಂಸಾರ ಮಾಡಿ ಇದ್ದಕ್ಕಿದ್ದಂತೆ ಡಿವೋರ್ಸ್‌ ಪಡೆಯಲು ಕಾರಣವೇನು ಎಂದು ನಿಹಾರಿಕಾ ಈಗ ರಿವೀಲ್ ಮಾಡಿದ್ದಾರೆ. 

ಮಾನಸಿಕ ನೆಮ್ಮದಿ, ಖುಷಿಯಾಗಿರಬೇಕು, ಹೆಚ್ಚಿಗೆ ಕೆಲಸ ಮಾಡಬೇಕು, ಫೋಷಕರೇ ಸಪೋರ್ಟ್‌ ಮಾಡಿದ್ದು, ಪೋಷಕರನ್ನು ನೋಡಿಕೊಳ್ಳಬೇಕು ಹಾಗೂ ಮತ್ತೆ ಪ್ರೀತಿ ಅಥವಾ ಮದುವೆಯಾಗುವ ಮನಸ್ಸು ಇದೆ. ಹೀಗೆ ಸಾಕಷ್ಟು ವಿಚಾರಗಳ ಬಗ್ಗೆ ಬಹಿರಂಗವಾಗಿ ನಿಹಾರಿಕಾ ಮಾತನಾಡಿದ ಪಾಡ್‌ಕಾಸ್ಟ್‌ಗೆ ಮಾಜಿ ಪತಿ ಚೈತನ್ಯಾ ಪ್ರತಿಕ್ರಿಯೆ ನೀಡಿದ್ದಾರೆ.

ಈ ಚಿಂದಿ ಬಟ್ಟೆಗೆ 14 ಸಾವಿರ; ಹಿಗ್ಗಾಮುಗ್ಗಾ ಟ್ರೋಲ್ ಆದ ನಿಹಾರಿಕಾ ಕೊನಿಡೆಲಾ!

ನಿಖಿಲ್‌ ಮತ್ತು ನಿಹಾರಿಕಾ ಸಂದರ್ಶನವನ್ನು ಚೈತನ್ಯಾ ನೋಡಿಲ್ಲವಾದರೂ ವೀಕ್ಷಿಸಿದವರು ಕೊಟ್ಟ ಕಾಮೆಂಟ್‌ಗಳನ್ನು ಗಮನಸಿಗೆ ನಿಖಿಲ್‌ ಪೋಸ್ಟ್‌ಗೆ ಚೈತನ್ಯಾ ಕಾಮೆಂಟ್ ಮಾಡಿದ್ದರು. 'ಇತ್ತೀಚಿಗೆ ನಿಹಾರಿಕಾ ಕೊನಿಡೆಲಾ ವಿರುದ್ಧ ಹರಿದಾಡುತ್ತಿರುವ ನೆಗೆಟಿವ್ ಕಾಮೆಂಟ್‌ಗಳನ್ನು ದೂರ ಮಾಡಲು ನೀವು ಪಡುತ್ತಿರುವ ಶ್ರಮವನ್ನು ಮೆಚ್ಚುವೆ. ವೈಯಕ್ತಿಕ ಜೀವನದಲ್ಲಿ ಬಗ್ಗೆ ಖಂಡಿತಾ ಟೀಕೆಗಳನ್ನು ಎದುರಿಸುವುದು ಸುಲಭದ ಮಾತಲ್ಲ.ಸಾಮಾಜಿಕ ಜಾಲತಾಣವನ್ನು ಬಳಸಿಕೊಂಡು ಪ್ರಚಾರ ತೆಗೆದುಕೊಳ್ಳುವುದನ್ನು ನಿಲ್ಲಿಸಬೇಕು ಇರದಿಂದ ಈ ಮದುವೆ ಮುರಿದ್ದು ಬೀಳಲು ಕಾರಣ ಮತ್ತು ಅಪರಾಧಿ ಅನ್ನೋ ಪಟ್ಟ ಕೊಡುವುದು ತಡೆಯಬಹುದು. ಈ ರೀತಿ ನೀವು ಮಾಡುತ್ತಿರುವುದು ಎರಡನೇ ಸಲ. ಈ ಘಟನೆಯಿಂದ ನಮ್ಮಿಬ್ಬರಿಗೂ ಆಗಿರುವ ಪ್ರಾಸೆಸ್‌, ನೋವು ಮತ್ತು ಹೀಲಿಂಗ್ ಇಬ್ಬರಿಗೂ ಒಂದೇ ಆಗಿದೆ' ಎಂದು ಚೈತನ್ಯಾ ಕಾಮೆಂಟ್ ಮಾಡಿದ್ದಾರೆ.

'ಇಷ್ಟು ದಿನ ಡಿವೋರ್ಸ್‌ ಬಗ್ಗೆ ಮಾತನಾಡದೇ ಇರಲು ಕಾರಣವಿದೆ ಅದು ಬಿಟ್ಟು ಪದೇ ಪದೇ ಒಂದು ಸೈಡ್ ಸ್ಟೋರಿ ಮಾತ್ರ ಕೇಳಿಸಿಕೊಂಡಿದ್ದೀರಾ. ಇದರಿಂದ ನೋವಾಗಿರುವ ಮನಸ್ಸು ಮತ್ತಷ್ಟು ನೋವಾಗುತ್ತದೆ. ನೋವನ್ನು ಹಂಚಿಕೊಳ್ಳಬೇಕು ನಾವು ಹೀಲ್‌ ಆಗುತ್ತಿರುವುದನ್ನು ಹೇಳಿಕೊಂಡಷ್ಟು ಸಮಾಧಾನವಾಗುತ್ತದೆ. ಮುಂದಿನ ದಿನಗಳಲ್ಲಿ ಸಂದರ್ಶನ ಮಾಡುವ ಉದ್ದೇಶವಿದ್ದರೆ ಅಲ್ಲಿ ನಂಬಿಕೆ ಹಾಗೆ ಹೀಗೆ ಎಂದು ಒಬ್ಬರಿಂದ ಪದಗಳನ್ನು ಕೇಳುವ ಬದಲು ನೀವು ಇಡೀ ವಂಶವನ್ನು ಕರೆಸಿ ಸಂದರ್ಶನ ಮಾಡಿ ಆಗ ಜನರಿಗೆ ಸಂಪೂರ್ಣವಾಗಿ ಎರಡು ಕಡೆಯ ಕಥೆ ಅರ್ಥವಾಗಲಿದೆ ಎಂದು ಚೈತನ್ಯಾ ಹೇಳಿದ್ದಾರೆ.

ನಿಹಾರಿಕಾ ಧರಿಸಿರುವ ಚಪ್ಪಲಿ ಸಿಕ್ಕಾಪಟ್ಟೆ ದುಬಾರಿ; ಚಿರಂಜೀವಿ ಮನೆಯಲ್ಲಿ ದುಡ್ಡಿಗೆ ಬೆಲೆ ಇಲ್ಲ ಎಂದ ನೆಟ್ಟಿಗರು

'ಸಂಪೂರ್ಣ ಮಾಹಿತಿ ಗೊತ್ತಿಲ್ಲದೆ ಎರಡು ಕಡೆ ಏನಾಗಿದೆ ಎಂದು ತಿಳಿದುಕೊಳ್ಳದೆ ಕಾಮೆಂಟ್ ಮಾಡುವುದು ಸರಿಯಲ್ಲ. ಪರೋಕ್ಷವಾಗಿ ಮತ್ತೊಬ್ಬರ ವಿರುದ್ಧ ಧ್ವನಿ ಎತ್ತುವಂತೆ ಮಾಡುವುದು ಕೂಡ ಸರಿ ಅಲ್ಲ. ನೀವು ಅರ್ಥ ಮಾಡಿಕೊಳ್ಳುತ್ತೀನಿ ಅಂದುಕೊಂಡಿದ್ದೀನಿ' ಎಂದಿದ್ದಾರೆ ಚೈತನ್ಯ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕೊನೆಗೂ ಅದಿತಿ ರಾವ್ ಹೈದರಿ ಗುಟ್ಟು ರಟ್ಟಾಯ್ತು.. ಎಷ್ಟು ದಿನ ಅಂತ ಮುಚ್ಚಿಡೋಕಾಗುತ್ತೆ ಹೇಳಿ..!?
ಸಾವಿರ ಕೋಟಿ ಕುಬೇರ 'ಮಹಾಪುರುಷ'ನಿಗೆ ಡಿವೋರ್ಸ್ ಕೊಡ್ತಾರಾ ಈ ನಟಿ? ಇದೆಂಥ ಶಾಕಿಂಗ್ ಮ್ಯಾಟರ್!