ಎಸ್‌ಎಸ್ ರಾಜಮೌಳಿಯವರು ಬಾಹುಬಲಿ ಸಿನಿಮಾದ ಪ್ರತಿಯೊಂದು ದೃಶ್ಯವನ್ನು ಕೂಡ ತುಂಬಾ ಅಧ್ಯಯನ ಮಾಡಿ, ವಿಭಿನ್ನವಾಗಿ ಸೃಷ್ಟಿಸಿದ್ದಾರೆ. ಆದರೆ, ಅದರ ಹಿಂದಿನ ಪ್ರೇರಣೆ ಬಗ್ಗೆ ಮಾತನಾಡಿರುವುದು ತುಂಬಾ ಕಡಿಮೆ.
ಎಸ್‌ಎಸ್ ರಾಜಮೌಳಿ ನಿರ್ದೇಶನದ 'ಬಾಹುಬಲಿ' ಚಿತ್ರದಲ್ಲಿ ನಟ ರಾಣಾ ದಗ್ಗುಬಾಟಿ ಅವರು ಬಲ್ಲಾಳದೇವ ಹೆಸರಿನ ಪಾತ್ರದಲ್ಲಿ ಮಿಂಚಿದ್ದರು. ಆ ಚಿತ್ರದಲ್ಲಿ ನಟ ಪ್ರಭಾಸ್ ಬಾಹುಬಲಿ ಪಾತ್ರ ಮಾಡಿದ್ದು, ಅದರಲ್ಲಿನ ಒಂದು ದೃಶ್ಯದ ಬಗ್ಗೆ ರಾಣಾ ದಗ್ಗುಬಾಟಿ (Rana Daggubati)ಮಾತನಾಡಿದ್ದಾರೆ. ಆ ದೃಶ್ಯ ಬಾಹುಬಲಿ ಸಿನಿಮಾದಲ್ಲಿ ಹೇಗೆ ಬಂತು, ಅದರ ಹಿಂದಿನ ಇನಿಸ್ಪಿರೇಷನ್ ಏನು ಎಂಬ ಸೀಕ್ರೆಟ್ ರಿವೀಲ್ ಮಾಡಿದ್ದಾರೆ ರಾಣಾ ದಗ್ಗುಬಾಟಿ.
ಬಾಹುಬಲಿ ಸಿನಿಮಾ 10 ಜುಲೈ 2015ರಲ್ಲಿ ರಿಲೀಸ್ ಆಗಿತ್ತು. ಸಿನಿಮಾ ಅನಿರೀಕ್ಷಿತ ಗೆಲುವು ದಾಖಲಿಸಿ ಇಡೀ ಜಗತ್ತು ಭಾರತದ ಸಿನಿಮಾವನ್ನು ನೋಡಿ ಪ್ರಶಂಸೆ ವ್ಯಕ್ತಪಡಿಸಿತ್ತು. ಎಸ್‌ಎಸ್ ರಾಜಮೌಳಿಯವರು ಬಾಹುಬಲಿ ಸಿನಿಮಾದ ಪ್ರತಿಯೊಂದು ದೃಶ್ಯವನ್ನು ಕೂಡ ತುಂಬಾ ಅಧ್ಯಯನ ಮಾಡಿ, ವಿಭಿನ್ನವಾಗಿ ಸೃಷ್ಟಿಸಿದ್ದಾರೆ. ಆದರೆ, ಅದರ ಹಿಂದಿನ ಪ್ರೇರಣೆ ಬಗ್ಗೆ ಮಾತನಾಡಿರುವುದು ತುಂಬಾ ಕಡಿಮೆ. ಮಾತನಾಡಿದ್ದರೂ ಕೂಡ ಬಾಹುಬಲಿ ಸಿನಿಮಾದ ಪ್ರತಿಯೊಂದು ಸೀನ್ ಯಾವುದರಿಂದ ಪ್ರೇರಣೆ ಪಡೆದುಕೊಂಡಿದೆ ಎಂಬುದನ್ನು ಅವರು ಹೇಳಿರಲಿಲ್ಲ.
ಪೋಷಕರಿಗೆ ಥ್ಯಾಂಕ್ಸ್ ಹೇಳಿದ ಪ್ರಿಯಾಂಕಾ ಚೋಪ್ರಾ ಭಾರತದ ಬಗ್ಗೆ ಹಾಗ್ಯಾಕೆ ಹೇಳಿದ್ರೋ ಏನೋ!
ಆದರೆ, ಆ ಚಿತ್ರದ ಒಂದು ಸೀನ್ ಯಾವುದರಿಂದ ಸ್ಪೂರ್ತಿ ಪಡೆದಿದ್ದು ಎಂಬ ರಹಸ್ಯವನ್ನು ನಟ ರಾಣಾ ದಗ್ಗುಬಾಟಿ ಜಗತ್ತಿಗೇ ರಿವೀಲ್ ಮಾಡಿದ್ದಾರೆ. ಅಚ್ಚರಿ ಎಂದರೆ, ಅವರು ಹೇಳಿರುವ ಸಂಗತಿ ಸತ್ಯವಾದುದು ಎಂದು ಯಾರಾದರೂ ಹೇಳಬಹುದು. ಹಾಗಿದ್ದರೆ ಯಾವ ದೃಶ್ಯ, ಯಾವುದರ ಪ್ರೇರಣೆ ಎಂಬ ಬಗ್ಗೆ ಕುತೂಹಲವಿದ್ದರೆ ಮುಂದಕ್ಕೆ ಓದುವುದು ಅನಿವಾರ್ಯ. ನಟ ರಾಣಾ ದಗ್ಗುಬಾಟಿ 'ಬಾಹುಬಲಿ ಚಿತ್ರದಲ್ಲಿ ನಟ ಪ್ರಭಾಸ್ ಮರವೊಂದನ್ನು ಭೂಮಿಯಿಂದ ಎತ್ತುವ ಸೀನ್ ಇದೆ. ದೊಡ್ಡ ಮರವೊಂದನ್ನು ಭೂಮಿಯಿಂದ ಎತ್ತಿ ಬೇರೆ ಕಡೆ ಇಡುವ ಆ ದೃಶ್ಯ 'ಹನುಮಾನ್' ಕಾಮಿಕ್‌ನಿಂದ ಸ್ಪೂರ್ತಿ ಪಡೆದಿದ್ದು.
ಮೆಯೋಸಿಟಿಸ್ ಬಗ್ಗೆ ನಾನು ಬಹಿರಂಗವಾಗಿ ಹೇಳಿಕೊಳ್ಳುವ ಅನಿವಾರ್ಯತೆ ಇತ್ತು; ನಟಿ ಸಮಂತಾ
ಹನುಮಾನ್ ಶೋ ನಮ್ಮೆಲ್ಲರ ಜೀವನದಲ್ಲಿ ಬಹಳಷ್ಟು ಪರಿಣಾಮ ಬೀರಿದೆ. ಬ್ರಹ್ಮಾಂಡದಲ್ಲಿ ಅತ್ಯಂತ ಶಕ್ತಿಶಾಲಿ ವ್ಯಕ್ತಿ ಎಂದರೆ ಅದು ಹನುಮಾನ್ ಎಂಬ ಬಲವಾದ ಭಾವನೆ ನಮ್ಮೆಲ್ಲರ ಜೀವನದಲ್ಲಿ ನೆಲೆಗೊಂಡಿದೆ. ಪುರಾಣ, ಐತಿಹಾಸಿಕ ಕಥೆಗಳಿರಲಿ, ಮಹಾಕಾವ್ಯಗಳಿರಲಿ, ಹನುಮಾನ್ ಸಿನಿಮಾ ಇರಲಿ ಅಥವಾ ಸೀರಿಯಲ್ ಇರಲಿ, ಅದರಲ್ಲಿ ಆಂಜನೇಯ ದೊಡ್ಡ ದೊಡ್ಡ ಮರಗಳನ್ನು ಭೂಮಿಯಿಂದ ಎತ್ತುವುದು ಸಾಮಾನ್ಯ ದೃಶ್ಯ ಎನ್ನಬಹುದು. ಅಷ್ಟೇ ಅಲ್ಲ, ಹನುಮಾನ್ ದೊಡ್ಡ ದೊಡ್ಡ ಪರ್ವತಗಳನ್ನೇ ಒಂದು ಕಡೆಯಿಂದ ಇನ್ನೊಂದು ಕಡೆ ಎತ್ತಿ ಇಡುವ ದೃಶ್ಯಗಳು, ಐತಿಹ್ಯಗಳು ಸಾಕಷ್ಟಿವೆ.
ಅಮ್ಮನ ವಿರುದ್ಧವೇ ಹೋಗಿದ್ದೇಕೆ ಪ್ರಭಾಸ್; ಅತಿರೇಕಕ್ಕೆ ಹೋಗುವುದು ನನಗಿಷ್ಟ ಅಂದ್ಬಿಟ್ರು ಯಾಕೋ!
ಹನುಮಾನ್ ಮಹಾನ್ ಶಕ್ತಿಗೆ ಇನ್ನೊಂದು ಹೆಸರು ಎನ್ನಬಹುದು. ಸನಾತನ ಧರ್ಮ ಪಾಲಿಸುತ್ತಿರುವ ಪ್ರತಿಯೊಬ್ಬರಿಗೂ ಸಹಜವಾಗಿಯೇ ಹನುಮಾನ್ ಅಥವಾ ಆಂಜನೇಯ ಶಕ್ತಿ ಸಂಗತಿಗೆ ಸಹಜವಾಗಿಯೇ ಸ್ಪೂರ್ತಿಯಾಗಿದೆ. ಬಾಹುಬಲಿ ಸಿನಿಮಾದ ಒಂದು ದೃಶ್ಯ ಅದರಿಂದ ಸ್ಪೂರ್ತಿ ಪಡೆದಿದೆ ಎಂಬುದರಲ್ಲಿ ಯಾವುದೇ ಅಚ್ಚರಿಯಾಗಲೀ ಅಥವಾ ಅಸತ್ಯವಾಗಲೀ ಕಾಣಸಿಗಲು ಸಾಧ್ಯವಿಲ್ಲ ಎನ್ನಬಹುದು.
ಕೆಜಿಎಫ್ ನಿರ್ದೇಶಕರಿಗೆ ಗನ್ ಬಗ್ಗೆ ಶಾಕಿಂಗ್ ಪ್ರಶ್ನೆ ಕೇಳಿದ ರಾಜಮೌಳಿ; ಏನಂದ್ರು ಪ್ರಶಾಂತ್ ನೀಲ್?