NTR 30; ಜಾನ್ವಿ ಕಪೂರ್ ಬಳಿಕ ಜೂ.ಎನ್‌ಟಿಆರ್ ಚಿತ್ರಕ್ಕೆ ಮತ್ತೋರ್ವ ಬಾಲಿವುಡ್ ಸ್ಟಾರ್ ಎಂಟ್ರಿ

Published : Apr 15, 2023, 11:54 AM IST
NTR 30; ಜಾನ್ವಿ ಕಪೂರ್ ಬಳಿಕ ಜೂ.ಎನ್‌ಟಿಆರ್ ಚಿತ್ರಕ್ಕೆ ಮತ್ತೋರ್ವ ಬಾಲಿವುಡ್ ಸ್ಟಾರ್ ಎಂಟ್ರಿ

ಸಾರಾಂಶ

NTR 30; ಜಾನ್ವಿ ಕಪೂರ್ ಬಳಿಕ ಜೂ.ಎನ್‌ಟಿಆರ್ ಚಿತ್ರಕ್ಕೆ ಮತ್ತೋರ್ವ ಬಾಲಿವುಡ್ ಸ್ಟಾರ್ ಎಂಟ್ರಿ ಕೊಟ್ಟಿದ್ದಾರೆ. 

ಟಾಲಿವುಡ್ ಸ್ಟಾರ್ ಜೂ.ಎನ್ ಟಿ ಆರ್ ಬ್ಲಾಕ್‌ಬಸ್ಟರ್ ಆರ್ ಆರ್ ಆರ್ ಸಿನಿಮಾ ಬಳಿಕ ಹೊಸ ಸಿನಿಮಾ ಅನೌನ್ಸ್ ಮಾಡಿದ್ದಾರೆ. ಇನ್ನೂ ಹೆಸರಿಡದ ಚಿತ್ರಕ್ಕೆ ಸದ್ಯ NTR 30 ಎಂದು ಕರೆಯಲಾಗುತ್ತಿದೆ. ಈ ಸಿನಿಮಾ ಅನೌನ್ಸ್ ಆಗಿ ಈಗಾಗಲೇ ಶೂಟಿಂಗ್ ಕೂಡ ಪ್ರಾರಂಭವಾಗಿದೆ. ಅಂದಹಾಗೆ ಈ ಸಿನಿಮಾದಲ್ಲಿ ಬಾಲಿವುಡ್ ನಟಿ ಜಾನ್ವಿ ಕಪೂರ್ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಜೂ.ಎನ್‌ಟಿಆರ್ ಜೊತೆ ನಟಿಸುವ ಮೂಲಕ ಮೊದಲ ಬಾರಿಗೆ ಜಾನ್ವಿ ಸೌತ್ ಸಿನಿಮಾ ಇಂಡಿಸ್ಟ್ರಿಗೆ ಕಾಲಿಟ್ಟಿದ್ದಾರೆ. ಇದೀಗ ಮತ್ತೊಂದು ಸುದ್ದಿ ಕೇಳಿಬರುತ್ತಿದೆ. ಬಾಲಿವುಡ್‌ನ ಮತ್ತೋರ್ವ ಸ್ಟಾರ್ ಈ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. 

ಜೂ.ಎನ್‌ಟಿಆರ್ ಜೊತೆ ಕಾಣಿಸಿಕೊಳ್ಳುವ ಬಾಲಿವುಡ್ ಸ್ಟಾರ್ ಮತ್ಯಾರು ಅಲ್ಲ ಸೈಫ್ ಅಲಿ ಖಾನ್. ಹೌದು ಸೈಫ್ NTR 30 ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಸಿನಿಮಾತಂಡ ಇನ್ನೂ ಅಧಿಕೃತ ಮಾಹಿತಿ ಬಹಿರಂಗ ಪಡಿಸಿಲ್ಲ.  ಆದರೆ ಈಗಾಗಲೇ ಸೈಫ್ ಸಿನಿಮಾಗೆ ಸಹಿ ಮಾಡಿದ್ದಾರೆ ಎನ್ನಲಾಗಿದೆ. ಚಿತ್ರದ 3ನೇ ಹಂತದ ಚಿತ್ರೀಕರಣ ಸಮಯದಲ್ಲಿ ಸೈಫ್ ಅಲಿ ಖಾನ್ ಸೆಟ್ ಸೇರಿಕೊಳ್ಳಲಿದ್ದಾರೆ ಎನ್ನುವ ಮಾತು ಕೇಳಿಬಂದಿದೆ. ಇಬ್ಬರೂ ಸ್ಟಾರ್ ನಟರನ್ನು ಒಟ್ಟಿಗೆ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. 

ಅಂದಹಾಗೆ ಸೈಫ್ ಈಗಾಗಲೇ ಟಾಲಿವುಡ್ ಸ್ಟಾರ್ ಪ್ರಭಾಸ್ ಜೊತೆ ಆದಿಪುರುಷ ಸಿನಿಮಾದಲ್ಲಿ ನಟಿಸಿದ್ದಾರೆ. ರಾವಣ ಪಾತ್ರದಲ್ಲಿ ಮಿಂಚಿದ್ದಾರೆ. ಈ ಸಿನಿಮಾ ಬಳಿಕ ಇದೀಗ ಮತ್ತೊಮ್ಮೆ ಸೌತ್ ಸ್ಟಾರ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. 

Jr.NTR ಜೊತೆ ನಟಿಸಲು ಸ್ಟಾರ್ ನಟಿಯರಿಗಿಂತ ಹೆಚ್ಚು ಸಂಭಾವನೆ ಪಡೆದ ಜಾನ್ವಿ ಕಪೂರ್

ದ್ವಿಪಾತ್ರದಲ್ಲಿ ಜೂ.ಎನ್ ಟಿ ಆರ್ 

RRR ಸಿನಿಮಾ ಬಳಿಕ ಜೂ.ಎನ್ ಟಿ ಆರ್ ಖ್ಯಾತಿ ಮತ್ತಷ್ಟು ಹೆಚ್ಚಿದೆ. ಭಾರತ ಮಾತ್ರವಲ್ಲದೇ ವಿದೇಶದಲ್ಲೂ ಜೂ.ಎನ್ ಟಿ ಆರ್ ಫೇಮಸ್. ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮಿರುವ ಜೂ.ಎನ್ ಟಿ ಆರ್ ಮುಂದಿನ ಸಿನಿಮಾಗಳ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಅಂದಹಾಗೆ ಸದ್ಯ ಕೇಳಿಬರುತ್ತಿರುವ ಮಾಹಿತಿ ಪ್ರಕಾರ ಈ ಸಿನಿಮಾದಲ್ಲಿ ದ್ವಿಪಾತ್ರದಲ್ಲಿ ಜೂ.ಎನ್ ಟಿ ಆರ್ ಮಿಂಚುತ್ತಿದ್ದಾರೆ ಎನ್ನಲಾಗಿದೆ. ತಂದೆ ಮತ್ತು ಮಗನಾಗಿ ಜೂ.ಎನ್ ಟಿ ಆರ್ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಮೀನುಗಾರ ಸಮುದಾಯದ ಕಥೆ ಇದಾಗಿದ್ದು ಅವರನ್ನು ಮಾಫಿಯಾದಿಂದ ರಕ್ಷಣೆ ಮಾಡುವ ಪಾತ್ರದಲ್ಲಿ ಜೂ.ಎನ್ ಟಿ ಆರ್ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.  

RRR ಸ್ಟಾರ್‌ಗಳ ನಡುವೆ ವೈಮನಸ್ಸು: ರಾಮ್ ಚರಣ್ ಬರ್ತಡೇ ಪಾರ್ಟಿಗೆ ಗೈರಾದ ಜೂ.ಎನ್‌ಟಿಆರ್

ಅಂದಹಾಗೆ NTR 30 ಚಿತ್ರಕ್ಕೆ ಕೊರಟಾಲ ಶಿವ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇತ್ತೀಚಿಗಷ್ಟೆ ಸಿನಿಮಾದ ಅದ್ದೂರಿ ಮಹೂರ್ತ ನೆರವೇದಿದ್ದು ಎಸ್ ಎಸ್ ರಾಜಮೌಳಿ ಸಿನಿಮಾಗೆ ಕ್ಯಾಪ್ ಮಾಡಿ ಶುಭಹಾರೈಸಿದ್ದರು. ಮುಹೂರ್ತದಲ್ಲಿ ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಕೂಡ ಭಾಗಿಯಾಗಿದ್ದರು. ಈಗಾಲೇ ಜಾನ್ವಿ ಕಪೂರ್ ಲುಕ್ ಕೂಡ ರಿಲೀಸ್ ಮಾಡಲಾಗಿದೆ. ಭಾರಿ ನಿರೀಕ್ಷೆ ಮೂಡಿಸಿರುವ ಈ ಸಿನಿಮಾ ಮುಂದಿನ ವರ್ಷ ರಿಲೀಸ್ ಆಗಲಿದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Body Shaming: 'ದಪ್ಪ ಆಗು, ಸಣ್ಣ ಆಗು ಅಂತಿದ್ರು': ನಿರ್ಮಾಪಕರ ಆ ಕಾಟ ಬಿಚ್ಚಿಟ್ಟ ನಟಿ ಕಾಜಲ್ ಅಗರ್ವಾಲ್!
Hrithik Roshan: ಬಾಲಿವುಡ್‌ 'ಗ್ರೀಕ್ ಗಾಡ್' ಕಣ್ಣೀರ ಕಥೆ.. ದೌರ್ಬಲ್ಯವನ್ನೇ ಬಲವನ್ನಾಗಿ ಮಾಡಿಕೊಂಡ ಹೃತಿಕ್ ರೋಷನ್‌