ಇಂದು ನಾರ್ತ್‌-ಸೌತ್ ಸಿನಿಮಾ ಭೇದಭಾವವಿಲ್ಲ, ಭಾರತದ ಸಿನಿಮಾ ಎನ್ನಲಾಗುತ್ತಿದೆ; ಅಲ್ಲು ಅರ್ಜುನ್

By Shriram Bhat  |  First Published Mar 15, 2024, 4:29 PM IST

ಇಂದು ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗು ಹಿಂದಿ ಚಿತ್ರರಂಗಗಳ ಕಲಾವಿದರುಗಳು ತಮ್ಮತಮ್ಮ ಭಾಷೆಗೆ ಮಾತ್ರ ಸೀಮಿತವಾಗಿಲ್ಲ. ಎಲ್ಲಾ ಭಾಷೆಗಳಲ್ಲಿ ನಟಿಸುತ್ತಾರೆ ಅಥವಾ ತಮ್ಮ ಮಾತೃಭಾಷೆಯ ಜತೆ ಇನ್ನೊಂದೋ ಎರಡೋ ಭಾಷೆಯಲ್ಲಿ ನಟಿಸುತ್ತಾರೆ.


ತೆಲುಗು ಮೂಲದ ಪ್ಯಾನ್ ಇಂಡಿಯಾ ಸ್ಟಾರ್ ನಟ ಅಲ್ಲು ಅರ್ಜುನ್ (Allu Arjun) ಮಾತನಾಡಿರುವ ವೀಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅದರಲ್ಲಿ ನಟ ಅಲ್ಲು ಅರ್ಜುನ್ ಇಂದಇನ ಸಿನಿಮಾರಂಗದ ಬಗ್ಗೆ ಮಾತನಾಡಿದ್ದಾರೆ. 'ಇಂದು ಸಿನಿಮಾ ಉದ್ಯಮದಲ್ಲಿ ಎಲ್ಲರೂ ಮಿಕ್ಸ್ಡ್‌ ಅಪ್ ಆಗಿದ್ದೀವಿ. ಸೌತ್ ಸಿನಿಮಾ, ನಾರ್ತ್‌ ಸಿನಿಮಾ ಎಂಬ ಭೇದಭಾವ ಹೊರಟು ಹೋಗಿದೆ.

ಉದಾಹರಣೆಗೆ, ಕೆಜಿಎಫ್ ಸಿನಿಮಾವನ್ನೇ ನೋಡಿ, ಅದರಲ್ಲಿ ಹೀರೋ-ಹೀರೋಯಿನ್ ಕನ್ನಡದವರು. ನಟ ಸಂಜಯ್ ದತ್, ನಟಿ ರವೀನಾ ಟಂಡನ್ ಬಾಲಿವುಡ್‌ನವರು. ಇಂದು ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗು ಹಿಂದಿ ಚಿತ್ರರಂಗಗಳ ಕಲಾವಿದರುಗಳು ತಮ್ಮತಮ್ಮ ಭಾಷೆಗೆ ಮಾತ್ರ ಸೀಮಿತವಾಗಿಲ್ಲ. ಎಲ್ಲಾ ಭಾಷೆಗಳಲ್ಲಿ ನಟಿಸುತ್ತಾರೆ ಅಥವಾ ತಮ್ಮ ಮಾತೃಭಾಷೆಯ ಜತೆ ಇನ್ನೊಂದೋ ಎರಡೋ ಭಾಷೆಯಲ್ಲಿ ನಟಿಸುತ್ತಾರೆ.

Tap to resize

Latest Videos

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದಂದು 'ಜಾಕಿ' ಸಿನಿಮಾ ರೀ-ರಿಲೀಸ್

ಇಂದು ಭಾಷೆ, ರಾಜ್ಯಗಳ ಗಡಿ ದಾಟಿ ಸಿನಿಮಾ ಉದ್ಯಮ ಒಂದೇ ಎನ್ನುವ ಭಾವನೆ ಬಂದಿದೆ. ನಿಧಾನವಾಗಿ ಭಾರತದ ಸಿನಿಮಾ ಎಂಬ ಕಾನ್ಸೆಪ್ಟ್ ಇಂದು ನೆಲೆಗೊಂಡಿದೆ. ಈ ಮೊದಲು ಇದ್ದ ಸೌತ್ ಸಿನಿಮಾ ಮತ್ತು ನಾರ್ತ್‌ ಸಿನಿಮಾ ಎಂಬ ಎರಡು ವಿಭಾಗಗಳು ಇಂದು ಅಳಿಸಿಹೋಗಿವೆ. ಮುಂದುವರೆದ ಅಲ್ಲು ಅರ್ಜುನ್ 'ನಟ ರಣವೀರ್ ಸಿಂಗ್ (Ranveer Singh) ಹೇಳಿರುವಂತೆ ಇಂದು ನಾವು ಭಾರತದ ಸಿನಿಮಾ ಎಂಬ ಹೆಸರಿನಿಂದ ಜಾಗತಿಕ ಮಟ್ಟದಲ್ಲಿ ಮಿಂಚಬೇಕಿದೆ.

ಪ್ರಭಾಸ್‌ಗೆ 'ಡಾರ್ಲಿಂಗ್' ಅಂತ ಕರೆಯೋ ಸೀಕ್ರೆಟ್ ಬಿಚ್ಚಿಟ್ರು ಮಲಯಾಳಂ ನಟ ಪೃಥ್ವಿರಾಜ್!

ಅಂತರಾಷ್ಟ್ರೀಯ ಮಟ್ಟದಲ್ಲಿ ಇಂದು ಭಾರತದ ಸಿನಿಮಾಗೆ ತುಂಬಾ ಗೌರವವಿದೆ. ಅದನ್ನು ನಾವು ಉಳಿಸಿಕೊಂಡು ಇನ್ನೂ ಹೆಚ್ಚುಹೆಚ್ಚು ಬೆಳೆಸಿಕೊಳ್ಳಬೇಕಿದೆ. ಕೆಜಿಎಫ್, ಬಾಹುಬಲಿ, ಆರ್‌ಆರ್‌ಆರ್, ಪುಷ್ಪಾ ಹಾಗೂ ಇನ್ನೂ ಹಲವು ಸಿನಿಮಾಗಳನ್ನು ಪ್ರಪಂಚದ ಹಲವು ದೇಶಗಳಲ್ಲಿ ಭಾರತದ ಸಿನಿಮಾ ಎಂದೇ ಹೆಸರಿಸಿ ನೋಡಿದ್ದಾರೆ, ಮೆಚ್ಚಿದ್ದಾರೆ' ಎಂದಿದ್ದಾರೆ ನಟ ಅಲ್ಲು ಅರ್ಜುನ್. 

ಬಾಲಿವುಡ್‌ ಆಫರ್ ಬಂದಿದ್ದು, ನಾನು ರಿಜೆಕ್ಟ್ ಮಾಡಿದ್ದೂ ನಿಜ; ನಟ ಮಹೇಶ್ ಬಾಬು ಶಾಕಿಂಗ್ ಹೇಳಿಕೆ!

ಅಂದಹಾಗೆ, ನಟ ಅಲ್ಲು ಅರ್ಜುನ್ ಸದ್ಯ 'ಪಷ್ಪಾ 2' ಸಿನಿಮಾ ಶೂಟಿಂಗ್‌ನಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಕನ್ನಡ ಮೂಲದ ನ್ಯಾಷನಲ್ ಕ್ರಶ್ ಖ್ಯಾತಿಯ ನಟಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸುತ್ತಿದ್ದಾರೆ. ಇದಕ್ಕೂ ಮೊದಲು ತೆರೆಗೆ ಬಂದಿದ್ದ ಅಲ್ಲು ಅರ್ಜುನ್-ರಶ್ಮಿಕಾ ಮಂದಣ್ಣ ನಟನೆಯ 'ಪುಷ್ಪಾ' ಸಿನಿಮಾ ಸೂಪರ್ ಹಿಟ್ ಆಗಿ ಪ್ಯಾನ್ ಇಂಡಿಯಾ ಸಿನಿಮಾ ಎನಿಸಿತ್ತು. ಈ ಕಾರಣಕ್ಕೆ 'ಪುಷ್ಪಾ 2' ಸಿನಿಮಾ ಮೇಲೆ ಕೂಡ ಸಿಕ್ಕಾಪಟ್ಟೆ ನಿರೀಕ್ಷೆ ಮನೆಮಾಡಿದೆ. ಈ ವರ್ಷವೇ 'ಪುಷ್ಪಾ 2' ಸಿನಿಮಾ ಬಿಡುಗಡೆಯಾಗುವ ನಿರೀಕ್ಷೆಯಿದೆ. 

click me!