ಬಾಲಿವುಡ್ ನಿಂತಿರುವುದೇ ನಟಿಯ ಹಿಂದು-ಮುಂದಿನ ಸೈಜ್ ಮೇಲೆ ಎಂದ ಪ್ರಿಯಾಂಕಾ! ನೆಟ್ಟಿಗರು ಏನೆಂದ್ರು?

Published : Mar 15, 2024, 04:04 PM ISTUpdated : Mar 15, 2024, 04:05 PM IST
ಬಾಲಿವುಡ್ ನಿಂತಿರುವುದೇ ನಟಿಯ ಹಿಂದು-ಮುಂದಿನ ಸೈಜ್ ಮೇಲೆ ಎಂದ ಪ್ರಿಯಾಂಕಾ! ನೆಟ್ಟಿಗರು ಏನೆಂದ್ರು?

ಸಾರಾಂಶ

ಬಾಲಿವುಡ್ ನಿಂತಿರುವುದೇ ನಟಿಯ ಹಿಂದು-ಮುಂದಿನ ಸೈಜ್ ಮೇಲೆ ಎಂದ ನಟಿ ಪ್ರಿಯಾಂಕಾ ಚೋಪ್ರಾ. ಇದಕ್ಕೆ  ನೆಟ್ಟಿಗರು ಏನೆಂದ್ರು ನೋಡಿ...   

ಸದ್ಯ ಬಾಲಿವುಡ್​ಗೆ ಬೈ ಬೈ ಹೇಳಿರುವ ಪ್ರಿಯಾಂಕಾ ಹಾಲಿವುಡ್​ನಲ್ಲಿ ಭವಿಷ್ಯ ಕಂಡುಕೊಳ್ಳಲು ಹವಣಿಸುತ್ತಿದ್ದಾರೆ. ಸಿಟಾಡೆಲ್​ ವೆಬ್​ ಸೀರಿಸ್​ನ ಮೇಲೆ ನಟಿ ಭಾರಿ ಹೋಪ್ಸ್​ ಇಟ್ಟುಕೊಂಡಿದ್ದರು. ಆದರೆ ಅದು ನಿರೀಕ್ಷಿತ ಪ್ರಮಾಣದಲ್ಲಿ ಜನರ ಮೆಚ್ಚುಗೆ ಗಳಿಸಲು ವಿಫಲವಾಗಿದೆ. ಪಾಪ್ ಸಿಂಗರ್ ನಿಕ್​ ಜೋನಸ್​ ಅವರನ್ನು ಮದುವೆಯಾಗಿರೋ, ಪ್ರಿಯಾಂಕಾ ಚೋಪ್ರಾ, ಬಾಡಿಗೆ ತಾಯ್ತನದ ಮೂಲಕ ಮಾಲ್ತಿ ಮೇರಿ (Malti Marie)  ಮಗಳನ್ನು ಪಡೆದಿದ್ದಾರೆ.   ತಮಿಳು ಸಿನಿಮಾ ತಮಿಳನ್ (2002)ರ ಮೂಲಕ ಬಣ್ಣದ ಜಗತ್ತಿಗೆ ಕಾಲಿಟ್ಟ ನಟಿ, 2000ರಲ್ಲಿ ವಿಶ್ವಸುಂದರಿ ಕಿರೀಟ ಮುಡಿಗೇರಿಸಿಕೊಂಡ ಬಳಿಕ ಸಿನಿಮಾ ಅವಕಾಶವನ್ನು ಪಡೆದರು. ಬಾಲಿವುಡ್​ನಲ್ಲಿ ಹೀರೋ: ಲವ್ ಸ್ಟೋರಿ ಆಫ್ ಎ ಸ್ಪೈ ಎಂಬ ಸಿನಿಮಾದ (2003) ಮೂಲಕ ಸಿನಿಮಾ ಜರ್ನಿಯನ್ನು ಶುರು ಮಾಡಿದರು. ಸದ್ಯ ಹಾಲಿವುಡ್​ನಲ್ಲಿ ಬಿಜಿಯಾಗಿದ್ದು, ಮಗಳ ಜೊತೆ ಎಂಜಾಯ್​ ಮಾಡುತ್ತಿದ್ದಾರೆ. ಪತಿಯ ಜೊತೆ  ಅಮೆರಿಕದಲ್ಲಿ ಸೆಟ್ಲ್ ಆಗಿದ್ದಾರೆ. ಅವರು ಅಲ್ಲಿ ಹೋಟೆಲ್ ಉದ್ಯಮವನ್ನೂ ಆರಂಭಿಸಿದ್ದರು. ಪಾರ್ಟನರ್ ಜೊತೆ ಹೊಂದಾಣಿಕೆ ಆಗದ ಕಾರಣ ಅವರು ಉದ್ಯಮದಿಂದ ಹೊರ ಬಂದರು. 

 ಸದ್ಯ ನಟಿ ಪ್ರಿಯಾಂಕಾ ಚೋಪ್ರಾ ಯಾವುದೇ ಹಿಂದಿ ಚಿತ್ರದಲ್ಲಿ ನಟಿಸುತ್ತಿಲ್ಲ, ಯಾವುದೇ ಬಾಲಿವುಡ್ ಚಿತ್ರದ ಆಫರ್‌ಅನ್ನು ಅವರು ಒಪ್ಪಿಕೊಂಡಿಲ್ಲ. ಹಾಲಿವುಡ್‌ ಸಿನಿಮಾ, ಸೀರಿಯಲ್‌ ಹಾಗೂ ವೆಬ್‌ ಸಿರೀಸ್‌ನಲ್ಲಿ ಮಾತ್ರ ನಟಿಸುತ್ತಿದ್ದಾರೆ. ಆಗಾಗ ಹಾಲಿವುಡ್ ಪಾಡ್‌ಕಾಸ್ಟ್‌ ಮತ್ತು ಸಂದರ್ಶನಗಳಲ್ಲಿ ಭಾಗಿಯಾಗುವ ಪ್ರಿಯಾಂಕಾ ತಮ್ಮ ಲೈಫ್ ಜರ್ನಿ ಬಗ್ಗೆ ಹೇಳಿಕೊಳ್ಳುತ್ತಾರೆ. ಈ ಹಿಂದೆ ಬಾಲಿವುಡ್​ ಬಗ್ಗೆ ನಟಿ ಹೇಳಿರುವ ವಿಡಿಯೋ ಒಂದು ಇದೀಗ ಸೋಷಿಯಲ್​ ಮೀಡಿಯಾದಲ್ಲಿ ಪುನಃ ಹಲ್​ಚಲ್​ ಸೃಷ್ಟಿಸುತ್ತಿದೆ.  ಪ್ರಿಯಾಂಕ ಚೋಪ್ರಾ 'ಎಮಿ ಅವಾರ್ಡ್‌ 2016'ರ ಕಾರ್ಯಕ್ರಮದಲ್ಲಿ ವರದಿಗಾರರ ಜತೆ ಮಾತನಾಡುತ್ತ ಹೇಳಿರುವ ಮಾತೊಂದು ಪುನಃ ವೈರಲ್​ ಆಗಿದೆ. ಭಾರತೀಯ ಸಿನಿಮಾಗಳ ಬಗ್ಗೆ ಈಕೆ ಹೇಳಿರುವ ಮಾತುಗಳ ಬಗ್ಗೆ ಟೀಕೆ ಹಾಗೂ ಆಕ್ರೋಶ ವ್ಯಕ್ತವಾಗುತ್ತಿದೆ.

ಒಂದೊಂದೇ ಬಟ್ಟೆ ಕಳಚಿ ಲವ್‌ ಮಾಡಬೇಕು, ಅದಕ್ಕಾಗಿ ಅಂಡರ್‌ವೇರ್‌ ನೋಡಬೇಕು ಎಂದ್ರು ಆ ನಿರ್ದೇಶಕ! ಪ್ರಿಯಾಂಕಾ ಹೇಳಿದ್ದೇನು?

ಅಷ್ಟಕ್ಕೂ ನಟಿ ಹೇಳಿದ್ದೇನೆಂದರೆ, ಬಾಲಿವುಡ್​ನ ಎಲ್ಲಾ ಡ್ಯಾನ್ಸ್‌ಗಳಲ್ಲಿ ಎಲ್ಲ ಮೂವ್‌ಮೆಂಟ್‌ಗಳು ಸೇರಿದಂತೆ ಇಂಡಸ್ಟ್ರಿ ಹಿಪ್ಸ್‌ ಮತ್ತು ಬೂಬ್ಸ್‌ (ಸೊಂಟ ಮತ್ತು ಸ್ತನಗಳು) ಮೇಲೆ ನಿಂತಿವೆ ಎಂದಿದ್ದರು. ಹೀಗೆ ಹೇಳುತ್ತಲೇ ಅದರ ಕುರಿತು  ಒಂದೆರಡು ಹೆಜ್ಜೆ ಹಾಕಿ ತೋರಿಸಿದ್ದರು. ಈಕೆ ನೀಡಿರುವ ಈ ಹೇಳಿಕೆ  ಇದೀಗ ಪುನಃ ಸಾಮಾಜಿಕ ತಾಣಗಳಲ್ಲಿ ಟ್ರೋಲ್‌ ಆಗುತ್ತಿದೆ. ಬಾಲಿವುಡ್​ನಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದು ನಿಜವೇ. ಆದರೆ ಬಾಲಿವುಡ್​ ನಟಿಯೊಬ್ಬಳು ಇಷ್ಟು ವರ್ಷ ಬಾಲಿವುಡ್​ನಲ್ಲಿ ಕೆಲಸ ಮಾಡಿದ ಬಳಿಕ ಈ ರೀತಿ ಇಂಡಸ್ಟ್ರಿಯ ಹೆಸರನ್ನು ಕೆಡಿಸುತ್ತಿರುವುದು ಸರಿಯಲ್ಲ ಎಂದು ಹಲವಾರು ಮಂದಿ ಹೇಳುತ್ತಿದ್ದಾರೆ. ಆದರೆ ಕೆಲವರು ನಟಿಯ ಪರವಾಗಿದ್ದು, ಪ್ರಿಯಾಂಕಾ ಏನೂ ತಪ್ಪು ಹೇಳಿಲ್ಲ, ಇರುವ ವಿಷಯವನ್ನೇ ಹೇಳಿದ್ದಾರೆ. ಈಕೆ ಹೇಳಿದ್ದರಲ್ಲಿ ತಪ್ಪೇನಿದೆ ಎನ್ನುತ್ತಿದ್ದಾರೆ. ಇವತ್ತಿನ ನಟಿಯರು ವೇಷ ಭೂಷಣ ನೋಡಿದರೆ ಪ್ರಿಯಾಂಕಾ ಹೇಳಿರುವುದರಲ್ಲಿ ಏನಾದರೂ ತಪ್ಪು ಕಾಣಿಸ್ತಿದೆಯಾ ಎಂದು ಪ್ರಶ್ನಿಸುತ್ತಿದ್ದಾರೆ. ಇನ್ನು ಕೆಲವರು ಇಷ್ಟು ವರ್ಷ ನೀವೇನು ಮಾಡಿದ್ದು ಇದೇ ಅಲ್ವಾ ಎಂದು ಪ್ರಶ್ನಿಸುತ್ತಿದ್ದಾರೆ. 

ಅಂದಹಾಗೆ 2017ರಲ್ಲಿ, ಹಾಲಿವುಡ್‍ನಲ್ಲಿ ವಿಶ್ವದ ಎರಡನೇ ಅತ್ಯಂತ ಸುಂದರ ಮಹಿಳೆಯಾಗಿ ಪ್ರಿಯಾಂಕಾ ಚೋಪ್ರಾ ಆಯ್ಕೆಯಾಗಿದ್ದರು. ಹಾಲಿವುಡ್‌ ನಟಿಯರಾದ ಏಂಜಲಿನಾ ಜೋಲಿ, ಎಮ್ಮಾ ವಾಟ್ಸನ್‌, ಬ್ಲೆಕ್‌ ಲೈವ್ಲಿ ಹಾಗೂ ಮಿಶೆಲ್‌ ಒಬಾಮ ಅವರನ್ನು ಹಿಂದಿಕ್ಕಿ ಈ ಸಾಧನೆಗೆ ಪಾತ್ರರಾಗಿದ್ದರು. ಹಿಂದೊಮ್ಮೆ ಕಪ್ಪು ಬಣ್ಣದಿಂದಾಗಿ ಸಾಕಷ್ಟು ಬಾಡಿ ಶೇಮಿಂಗ್​ಗೆ ಒಳಗಾಗಿದ್ದ ಪ್ರಿಯಾಂಕಾ ಈಗ ಇಷ್ಟರ ಮಟ್ಟಿಗೆ ಸಾಧನೆ ಮಾಡಿದ್ದಾರೆ. ಇದರ ಬೆನ್ನಲ್ಲೇ ಬಾಲಿವುಡ್​ ಕುರಿತು ನೀಡಿರುವ ಈ ಹೇಳಿಕೆಗೆ ಪರ-ವಿರೋಧ ನಿಲುವು ವ್ಯಕ್ತವಾಗುತ್ತಿದೆ. 
ಕೊನೆಯ ವಿಡಿಯೋ ಮಾಡಿ ಕರ್ನಾಟಕದಲ್ಲಿ ಸಾಯಲು ಹೊರಟಿರುವೆ: ನಟಿ ವಿಜಯಲಕ್ಷ್ಮಿ ಶಾಕಿಂಗ್‌ ಹೇಳಿಕೆ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೈದ್ಯರ ವರದಿ ಬಳಿಕ ಜೈಲಿನಲ್ಲಿ ನಟ ದರ್ಶನ್‌ಗೆ ಫಿಸಿಯೋಥೆರಪಿ ಚಿಕಿತ್ಸೆ ಸ್ಥಗಿತ
ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?