
ಬಾಲಿವುಡ್ ನಟಿ, ಡ್ಯಾನ್ಸರ್ ನೋರಾ ಫತೇಹಿ ದಿಲ್ಬರ್ ಡ್ಯಾನ್ಸ್ ವಿಡಿಯೋಗೆ 1 ಕೋಟಿಗೂ ಹೆಚ್ಚು ವೀಕ್ಷಣೆ ಪಡೆದ ಖುಷಿಯಲ್ಲಿದ್ದಾರೆ. ನಟಿ ಮುಂಬೈನ ಟಿ ಸಿರೀಸ್ ಆಫೀಸ್ನಲ್ಲಿ ಈ ಖುಷಿಯನ್ನು ಸಂಭ್ರಮಿಸಿದ್ದಾರೆ.
ಈ ಮೂಲಕ ನೋರಾ ಯೂಟ್ಯೂಬ್ನಲ್ಲಿ 1 ಬಿಲಿಯನ್ ವ್ಯೂಸ್ ಪಡೆದ ಮೊದಲ ಆಫ್ರಿಕನ್ ಅರಬ್ ಮಹಿಳಾ ಕಲಾವಿದೆಯಾಗಿ ಮೂಡಿಬಂದಿದ್ದಾರೆ. ಸಂಭ್ರಮಾಚರಣೆ ವಿಡಿಯೋ ಮತ್ತು ಫೋಟೋಗಳನ್ನು ನಟಿ ಶೇರ್ ಮಾಡಿಕೊಂಡಿದ್ದಾರೆ.
ದಿಲ್ಬರ್ ಹಾಡಿನ ಕುರಿತು:
ದಿಲ್ಬರ್ ವಿಡಿಯೋ ಸಾಂಗ್ನಲ್ಲಿ ನೋರಾ ಫತೇಹಿ ಪರ್ಫಾರ್ಮೆನ್ಸ್ ಎನ್ನಾ ದಾಖಲೆಗಳನ್ನು ಧೂಳಿಪಟ ಮಾಡಿದೆ. ಈ ಸಾಂಗ್ ರಿಲೀಸ್ ಆಗಿ ಬರೀ 24 ಗಂಟೆಯಲ್ಲಿ 21 ಮಿಲಿಯನ್ ವ್ಯೂಸ್ ದಾಟಿತ್ತು.
ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆವಾಗ ಹಸಿರು ಸೀರೆಯಲ್ಲಿ ನೋರಾ...
ಇದು ಭಾರತದಲ್ಲಿ ಅತ್ಯಧಿಕ ರೆಸ್ಪಾನ್ಸ್ ಪಡೆದ ಮೊದಲ ಹಿಂದಿ ಸಾಂಗ್. ಈ ಹಾಡು ಸತ್ಯಮೇವ ಜಯತೆ 2018ರ ಸಿನಿಮಾದ ಸಾಂಗ್. ಬೆಲ್ಲಿ ಮೂವ್ಸ್ ಮೂಲಕ ಈ ಹಾಡಿನಲ್ಲಿ ಮೋಡಿ ಮಾಡಿದ್ದರು ನೋರಾ. ಈ ಹಾಡನ್ನು ತನಿಷ್ಕ್ ಬಗ್ಚಿ ಕಂಪೋಸ್ ಮಾಡಿದ್ದು, ನೇಹಾ ಕಕ್ಕರ್, ಅಸೀಸ್ ಕೌರ್ ಮತ್ತು ಧ್ವನಿ ಭಾನುಶಾಲಿ ಹಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.