
ಇತ್ತೀಚೆಗೆ ಐಟಮ್ ಡ್ಯಾನ್ಸ್‌ಗಳ ಸ್ಟೆಪ್‌ಗಳು ಕೆಲವು ಟ್ರೋಲ್ ಆದರೆ, ಇನ್ನೂ ಕೆಲವು ವಿವಾದ ಹುಟ್ಟು ಹಾಕುತ್ತಿವೆ. ʼಪುಷ್ಪʼ ಸಿನಿಮಾದಲ್ಲಿ ಸಮಂತಾ- ಅಲ್ಲು ಅರ್ಜುನ್ ಡ್ಯಾನ್ಸ್, ʼಪುಷ್ಪ 2ʼ ಶ್ರೀಲೀಲಾ ಸ್ಟೆಪ್ಸ್, ಇನ್ನು ಶೆಹನಾಜ್ ಗಿಲ್ ಅವರ ʼಸಜನಾ ವೆ ಸಜನಾʼ ಹಾಡು ಕೂಡ ಭಾರೀ ವೈರಲ್ ಆಗಿತ್ತು. ಈಗ ಕೇತಿಕಾ ಶರ್ಮಾ ಡ್ಯಾನ್ಸ್ ಮಾತ್ರ ಭಾರೀ ವಿವಾದ ಹುಟ್ಟು ಹಾಕುವ ಎಲ್ಲ ಲಕ್ಷಣಗಳು ಕಾಣುತ್ತಿವೆ.
ನಿತಿನ್-ಶ್ರೀಲೀಲಾ ಸಿನಿಮಾ!
ನಿತಿನ್ ಹಾಗೂ ವೆಂಕಿ ಕುದುಮಲ ಕಾಂಬಿನೇಶನ್‌ನಲ್ಲಿ ʼರಾಬಿನ್‌ಹುಡ್ʼಎನ್ನುವ ಸಿನಿಮಾ ಮಾರ್ಚ್ 28ರಂದು ರಿಲೀಸ್‌ಆಗಲಿದೆ. ಇದು ಕ್ರೈಂ ಕಾಮಿಡಿ ಎಂಟರ್‌ಟೇನರ್ ಎನ್ನಬಹುದು. ಕನ್ನಡತಿ ಶ್ರೀಲೀಲಾ ಅವರು ಈ ಸಿನಿಮಾ ನಾಯಕಿ. ʼಎಕ್ಸ್ಟ್ರಾ ಆರ್ಡಿನರಿ ಮ್ಯಾನ್ʼ ಸಿನಿಮಾ ನಂತರದಲ್ಲಿ ಶ್ರೀಲೀಲಾ, ನಿತಿನ್ ಮತ್ತೆ ಈ ಚಿತ್ರದ ಮೂಲಕ ಜೊತೆಯಾಗಿದ್ದಾರೆ.
ಹಾಟ್ ಬಿಕಿನಿ ಲುಕ್‌ನಲ್ಲಿ ಕಾಣಿಸಿಕೊಂಡ ನಟಿ ಶೋಭಿತಾ
ʼಅದಿ ದಾ ಸರ್ಪ್ರೈಸುʼ ಎಂದ ಕೇತಿಕಾ ಶರ್ಮಾ!
ʼಅದಿ ದಾ ಸರ್ಪ್ರೈಸುʼ ಎನ್ನುವ ಹಾಡಿನಲ್ಲಿ ಕೇತಿಕಾ ಶರ್ಮಾ ಮಾದಕ ಡ್ಯಾನ್ಸ್ ಮಾಡಿದರು. ಶೇಖರ್‌ಮಾಸ್ಟರ್‌ಈ ಹಾಡಿಗೆ ನೃತ್ಯ ಸಂಯೋಜನೆ ಮಾಡಿದ್ದಾರೆ. ಆಸ್ಕರ್ ಪ್ರಶಸ್ತಿ ವಿಜೇತ ಚಂದ್ರ ಬೋಸ್‌ಅವರು ಈ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ನಿತಿನ್ ಶ್ರೀಲೀಲಾ ಅವರು ಕೂಡ ಈ ಐಟಂ ಡ್ಯಾನ್ಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಜಿವಿ ಪ್ರಕಾಶ್ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ.
ಸ್ಕರ್ಟ್ ಎಳೆಯೋ ಸ್ಟೆಪ್ ಬೇಕಿತ್ತಾ?
ಮಲ್ಲಿಗೆ ಹೂವನ್ನೇ ಕೇತಿಕಾ ಶರ್ಮಾ ಡ್ರೆಸ್ ಮಾಡಿಕೊಂಡು ಹಾಕಿಕೊಂಡಿದ್ದಾರೆ. ಇನ್ನು ಸ್ಕರ್ಟ್ ಎಳೆಯುವ ಸ್ಟೆಪ್‌ಕೂಡ ಇಲ್ಲಿದೆ. ಈ ವಿಚಿತ್ರ ಸ್ಟೆಪ್ಸ್ ನೋಡಿ ಅನೇಕರು ಸೋಶಿಯಲ್‌ಮೀಡಿಯಾದಲ್ಲಿ ಕಿಡಿ ಕಾರಿದ್ದಾರೆ. ನಮ್ಮ ಸಂಸ್ಕೃತಿ ಎಲ್ಲಿಗೆ ಹೋಯ್ತು? ಬಟ್ಟೆಯಿಂದ ದೇಹ ಮುಚ್ಚಿಕೊಳ್ಳಬೇಕು, ಈಗ ಸ್ಕರ್ಟ್‌ಎಳೆಯುವ ಸ್ಟೆಪ್‌ಯಾಕೆ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ. ಈ ಹಾಡು ರಿಲೀಸ್ ಆಗಿ 17 ಗಂಟೆಯೊಳಗಡೆ 2.2 ಮಿಲಿಯನ್‌ಗೈ ಅಧಿಕ ವೀಕ್ಷಣೆ ಕಂಡಿದೆ. ಒಂದು ಸಿನಿಮಾದಿಂದ ಇನ್ನೊಂದು ಸಿನಿಮಾಕ್ಕೆ ಬೋಲ್ಡ್ ಅವತಾರ ತಾಳುವ ಕೇತಿಕಾ ಶರ್ಮಾ ಈ ಐಟಮ್ ಡ್ಯಾನ್ಸ್ ಮೂಲಕವೂ ಪಡ್ಡೆ ಹುಡುಗರ ನಶೆ ಏರುವಂತೆ ಮಾಡಿದ್ದಾರೆ.
ಶ್ರೀಲೀಲಾ ಕರೆದ 'ಓಜಿ' ಯಾರೆಂದು ಗೊತ್ತಾ? ಮಹಿಳಾ ದಿನದಂದು ಸರ್ಪ್ರೈಸ್, ಅನ್‌ಲಿಮಿಟೆಡ್ ಫುಡ್.. ಪೋಸ್ಟ್ ವೈರಲ್
ತಾರಾಗಣದಲ್ಲಿ ಯಾರಿದ್ದಾರೆ?
ಇನ್ನು ರಾಜೇಂದ್ರ ಪ್ರಸಾದ್, ಶೈನ್ ಥಾಮ್ ಚಾಕೋ, ವೆನ್ನೆಲ ಕಿಶೋರ್ , ಮೈಮ್ ಗೋಪಿ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ಈ ಸಿನಿಮಾಕ್ಕೆ ಹಣ ಹೂಡಿದ್ದಾರೆ. ಸಾಯಿ ಶ್ರೀರಾಮ್ ಅವರು ಈ ಸಿನಿಮಾಕ್ಕೆ ಸಿನಿಮಾಟೋಗ್ರಫಿ ಮಾಡಿದ್ದಾರೆ. ಕೋಟಿ ಅವರ ಸಂಕಲನ ಈ ಚಿತ್ರಕ್ಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.