ಕೇವಲ 3 ತಿಂಗಳಲ್ಲೇ 3 ಅಪಾರ್ಟ್‌ಮೆಂಟ್ ಮಾರಿದ ಅಕ್ಷಯ್ ಕುಮಾರ್! ದಿವಾಳಿಯಾಗ್ತಿದ್ದಾರಾ ನಟ?

Published : Mar 10, 2025, 08:23 PM ISTUpdated : Mar 10, 2025, 09:05 PM IST
 ಕೇವಲ 3 ತಿಂಗಳಲ್ಲೇ 3 ಅಪಾರ್ಟ್‌ಮೆಂಟ್ ಮಾರಿದ ಅಕ್ಷಯ್ ಕುಮಾರ್! ದಿವಾಳಿಯಾಗ್ತಿದ್ದಾರಾ ನಟ?

ಸಾರಾಂಶ

ನಟ ಅಕ್ಷಯ್ ಕುಮಾರ್ ಮುಂಬೈನ ಬೋರಿವಲಿ ಮತ್ತು ವರ್ಲಿಯಲ್ಲಿನ ಐಷಾರಾಮಿ ಅಪಾರ್ಟ್‌ಮೆಂಟ್‌ಗಳನ್ನು ಮಾರಾಟ ಮಾಡಿದ್ದಾರೆ. ಬೋರಿವಲಿಯ 'ಸ್ಕೈ ಸಿಟಿ' ಅಪಾರ್ಟ್‌ಮೆಂಟ್ ಅನ್ನು 4.35 ಕೋಟಿ ರೂಪಾಯಿಗಳಿಗೆ ಮಾರಾಟ ಮಾಡಿದ್ದು, ಜನವರಿಯಲ್ಲಿ ಮತ್ತೊಂದು ಅಪಾರ್ಟ್‌ಮೆಂಟ್ 4.25 ಕೋಟಿಗೆ ಮಾರಾಟವಾಗಿತ್ತು. ಇತ್ತೀಚೆಗೆ ವರ್ಲಿಯ ಮನೆಯನ್ನು 80 ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದಾರೆ. ಕಳೆದ ವರ್ಷ ಬೋರಿವಲಿಯಲ್ಲಿ 3,887 ಕೋಟಿ ರೂ.ಗಳ ಮಾರಾಟ ವಹಿವಾಟು ನಡೆದಿದೆ.

ಬಾಲಿವುಡ್ ನಟ ಅಕ್ಷಯ್ ಕುಮಾರ್ ಮುಂಬೈನ ಬೋರಿವಲಿ ಈಸ್ಟ್ ಏರಿಯಾದಲ್ಲಿದ್ದ ತನ್ನ ಒಂದು ಐಷಾರಾಮಿ ಅಪಾರ್ಟ್‌ಮೆಂಟ್‌ನ್ನ ಕೋಟಿ ಲೆಕ್ಕದಲ್ಲಿ ಮಾರಾಟ ಮಾಡಿದ್ದಾರೆ. ಮೊನ್ನೆ ಮಹಿಳಾ ದಿನಾಚರಣೆ ದಿನದಂದು ತಮ್ಮ ಅಪಾರ್ಟ್‌ಮೆಂಟ್ ಮಾರಾಟ ಮಾಡಿದ್ದಾರೆ. ಈ ಅಪಾರ್ಟ್‌ಮೆಂಟ್ 'ಸ್ಕೈ ಸಿಟಿ' ಬಿಲ್ಡಿಂಗ್‌ನಲ್ಲಿದೆ. ಇದನ್ನು ಓಬೆರಾಯ್ ರಿಯಾಲಿಟಿ ಕಟ್ಟಿದ್ದಾರೆ. ಈ ಕಮ್ಯೂನಿಟಿ ಅಪಾರ್ಟ್‌ಮೆಂಟ್‌ 25 ಎಕರೆ ಪ್ರದೇಶದಲ್ಲಿ ಹರಡಿಕೊಂಡಿದೆ. ಅಕ್ಷಯ್ ಅವರ ಈ ಐಷಾರಾಮಿ ಅಪಾರ್ಟ್‌ಮೆಂಟ್ 1,073 ಚದರ ಅಡಿ ವಿಸ್ತೀರ್ಣ ಹೊಂದಿದೆ. ಇದರಲ್ಲಿ 2 ಕಾರ್ ಪಾರ್ಕಿಂಗ್ ಸೌಲಭ್ಯ ಕೂಡ ಇದೆ. ಕಳೆದ ಮೂರು ತಿಂಗಳಲ್ಲಿ ಅಕ್ಷಯ್ ಕುಮಾರ್‌ 3 ಆಸ್ತಿಗಳನ್ನು ಮಾರಾಟ ಮಾಡಿದ್ದು, ಸಾಲದ ಸುಳಿಯಲ್ಲಿ ಸಿಲುಕಿದ್ದಾರಾ ಎಂದು ಈಗ ಅನುಮಾನ ಮೂಡಿದೆ.

ಅಪಾರ್ಟ್‌ಮೆಂಟ್ ಮಾರಾಟ ಮಾಡಿ ಅಕ್ಷಯ್ ಕುಮಾರ್‌ಗೆ ಇಷ್ಟು ಕೋಟಿ ಲಾಭನಾ?
ಅಕ್ಷಯ್ ಕುಮಾರ್ 2017ರಲ್ಲಿ ಈ ಅಪಾರ್ಟ್‌ಮೆಂಟ್‌ ಅನ್ನು 2.37 ಕೋಟಿಗೆ ಖರೀದಿಸಿದ್ರು. ಈಗ 2025ರಲ್ಲಿ ಅದನ್ನ 4.35 ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದಾರೆ. ಇದರಿಂದ ಅವರಿಗೆ ಈ ಡೀಲ್‌ನಲ್ಲಿ 183.54% ಲಾಭ ಸಿಕ್ಕಿದೆ. ಈ ವ್ಯವಹಾರಕ್ಕೆ ಅಕ್ಷಯ್ ಕುಮಾರ್ 26.1 ಲಕ್ಷ ಸ್ಟಾಂಪ್ ಡ್ಯೂಟಿ ಮತ್ತು 30,000 ರೂಪಾಯಿ ರಿಜಿಸ್ಟ್ರೇಷನ್ ಶುಲ್ಕ ಕಟ್ಟಿದ್ದಾರೆ. ಆದರೆ ಇದುವರೆಗೆ ಅಕ್ಷಯ್ ಕುಮಾರ್ ಇದರ ಬಗ್ಗೆ ಏನೂ ಹೇಳಿಲ್ಲ.

ಸಂಕಷ್ಟಕ್ಕೆ ಸಿಲುಕಿದ್ರಾ ಅಕ್ಷಯ್ ಕುಮಾರ್? ಬೊರಿವಿಲಿ ಬಳಿಕ ವರ್ಲಿ ಮನೆ ₹80 ಕೋಟಿಗೆ ಮಾರಾಟ

ಇನ್ನು ಅಕ್ಷಯ್ ಕುಮಾರ್ ಜನವರಿ 2025ರಲ್ಲಿ ಇದೇ ಸೊಸೈಟಿಯಲ್ಲಿ ಇದ್ದ ತನ್ನ ಇನ್ನೊಂದು ಅಪಾರ್ಟ್‌ಮೆಂಟ್‌ನ್ನೂ ಕೂಡ ಮಾರಾಟ ಮಾಡಿದ್ರು. ಆ ಫ್ಲ್ಯಾಟ್ ಅನ್ನು ಕೂಡ ನವೆಂಬರ್ 2017ರಲ್ಲಿ 2.38 ಕೋಟಿ ರೂಪಾಯಿಗೆ ಖರೀದಿಸಿದ್ರು. ಜನವರಿಯಲ್ಲಿ ಅದನ್ನ 4.25 ಕೋಟಿ ರೂಪಾಯಿಗೆ ಮಾರಾಟ ಮಾಡಿದ್ರು.

ಈ ಆಸ್ತಿಯು ಒಬೆರಾಯ್ ರಿಯಾಲ್ಟಿ ಅಭಿವೃದ್ಧಿಪಡಿಸಿದ ಸ್ಕೈ ಸಿಟಿಯಲ್ಲಿದೆ ಮತ್ತು 25 ಎಕರೆಗಳಲ್ಲಿ ಹರಡಿಕೊಂಡಿದೆ. ಇದು 3BHK, 3BHK+ಸ್ಟುಡಿಯೋ ಮತ್ತು ಡ್ಯೂಪ್ಲೆಕ್ಸ್ ಅಪಾರ್ಟ್‌ಮೆಂಟ್‌ಗಳನ್ನು ನೀಡುವ ರೆಡಿ-ಟು-ಮೂವ್-ಇನ್ ವಸತಿ ಯೋಜನೆಯಾಗಿದೆ.

ಸ್ಕ್ವೇರ್ ಯಾರ್ಡ್ಸ್ ಡೇಟಾ ಇಂಟೆಲಿಜೆನ್ಸ್ ಪ್ರಕಾರ, ಒಬೆರಾಯ್ ಸ್ಕೈ ಸಿಟಿ ಮಾರ್ಚ್ 2024 ಮತ್ತು ಫೆಬ್ರವರಿ 2025 ರ ನಡುವೆ 208 ಮಾರಾಟ ನೋಂದಣಿಗಳನ್ನು ದಾಖಲಿಸಿದ್ದು, ಒಟ್ಟು ವಹಿವಾಟು ಮೌಲ್ಯ 818 ಕೋಟಿ ರೂ. ಆಗಿದೆ. ಈ ಯೋಜನೆಯಲ್ಲಿ ಸರಾಸರಿ ಮರುಮಾರಾಟದ ಆಸ್ತಿ ಬೆಲೆ ಪ್ರತಿ ಚದರ ಅಡಿಗೆ 44,577 ರೂ. ಆಗಿದೆ.

 ಫೆಬ್ರವರಿಯಲ್ಲಿ ವರ್ಲಿಯಲ್ಲಿರುವ ಮನೆ ಮಾರಾಟ ಮಾಡಿದ್ದರು.  ವರ್ಲಿಯಲ್ಲಿರುವ ಮನೆಯನ್ನು 80 ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದಾರೆ. ಮುಂಬೈನ ವರ್ಲಿಯಲ್ಲಿರುವ ಪ್ರತಿಷ್ಠಿತ ಅಪಾರ್ಟ್‌ಮೆಂಟ್‌ನಲ್ಲಿ ಈ ಮನೆ ಇದೆ. ಟವರ್ ಬಿನಲ್ಲಿರುವ ಈ ಮನೆ 39ನೇ ಮಹಡಿಯಲ್ಲಿದೆ. 6830 ಚದರ ಅಡಿ ವಿಸ್ತೀರ್ಣದ ಐಷಾರಾಮಿ ಮನೆ ಇದಾಗಿದೆ. ಇಂಟಿರೀಯರ್ ಸೇರಿದಂತೆ ಎಲ್ಲವೂ ಅಚ್ಚಕಟ್ಟಾಗಿದೆ. ಇನ್ನು ನಾಲ್ಕು ಕಾರು ಪಾರ್ಕಿಂಗ್ ಸ್ಥಳವಕಾಶವೂ ಇದರಲ್ಲಿದೆ. 360 ವೆಸ್ಟ್ ಭಾಗದಲ್ಲಿರುವ ಈ ಮನೆ, ಮುಂಬೈ ನಗರದ ವಿಹಂಗಮ ನೋಟ ಸಿಗಲಿದೆ. ಸಮುದ್ರ ತೀರ, ಸಿಟಿಯ ಉತ್ತಮ ನೋಟ ಕಾಣಸಿಗಲಿದೆ. ಈ ಮನೆಯನ್ನು ಪಲ್ಲವಿ ಜೈನ್ ಹಾಗೂ ಇತರರು ಖರೀದಿಸಿದ್ದಾರೆ. 

ಅಕ್ಷಯ್ ಕುಮಾರ್ Fitness ಗುಟ್ಟು ಬಹಿರಂಗ: ಹೀಗೆಲ್ಲಾ ಮಾಡ್ತಾರಾ ಆ ನಟ..?!

ಕಳೆದ ವರ್ಷದಲ್ಲಿ, ಬೋರಿವಲಿ ಪೂರ್ವ ಪ್ರದೇಶದಲ್ಲಿ 2,778 ಮಾರಾಟ ವಹಿವಾಟುಗಳನ್ನು ಕಂಡಿದ್ದು, ಒಟ್ಟು ಮಾರಾಟ ಮೌಲ್ಯ 3,887 ಕೋಟಿ ರೂ.ಗಳಾಗಿದ್ದು, ಸರಾಸರಿ ಆಸ್ತಿ ದರ ಸುಮಾರು 35,523 ರೂ.ಗಳಷ್ಟಿದೆ ಎಂದು ಸ್ಕ್ವೇರ್ ಯಾರ್ಡ್ಸ್ ಡೇಟಾ ಇಂಟೆಲಿಜೆನ್ಸ್ ತಿಳಿಸಿದೆ.

ಇನ್ನು ಬಾಲಿವುಡ್ ನಟರಾದ ಅಮಿತಾಬ್ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ಮೇ 2024 ರಲ್ಲಿ ಒಬೆರಾಯ್ ಸ್ಕೈ ಸಿಟಿಯಲ್ಲಿ ಬಹು ಆಸ್ತಿಗಳನ್ನು ಹೊಂದಿದ್ದಾರೆ. ಮಾತ್ರವಲ್ಲ ಬಾಲಿವುಡ್‌ ಕೆಲವು ಸ್ಟಾರ್‌ ನಟರು ಇಲ್ಲಿ ಆಸ್ತಿ ತೆಗೆದಿದ್ದಾರೆ. ಜೊತೆಗೆ ಇವರೆಲ್ಲ ರಿಯಲ್‌ ಎಸ್ಟೇಟ್‌ ಬಿಸಿನೆಸ್‌ ನಲ್ಲಿ ಹೂಡಿಕೆ ಮಾಡಿದ್ದಾರೆಂಬುದು ಸುಳ್ಳಲ್ಲ.

ಅಕ್ಷಯ್ ಕುಮಾರ್ ಅಭಿನಯದ ಬಿಡುಗಡೆಯಾಗುವ ಚಿತ್ರಗಳು
ಅಕ್ಷಯ್ ಕುಮಾರ್ ಅವರ 2025ರ ಮೊದಲ ಸಿನಿಮಾ 'ಸ್ಕೈ ಫೋರ್ಸ್' ಜನವರಿ 24ರಂದು ಥಿಯೇಟರ್‌ನಲ್ಲಿ ರಿಲೀಸ್ ಆಗಿದೆ. ಈ ಸಿನಿಮಾ ತುಂಬಾ ಜನರಿಗೆ ಇಷ್ಟವಾಗಿದೆ. ಈ ಸಿನಿಮಾದಲ್ಲೇ ವೀರ್ ಪಹಾರಿಯಾ ಬಾಲಿವುಡ್‌ಗೆ ಪರಿಚಯವಾಗಿದ್ದಾರೆ. ಈ ಸಿನಿಮಾದಲ್ಲಿ ಅಕ್ಷಯ್, ವೀರ್ ಜೊತೆಗೆ ಸಾರಾ ಅಲಿಖಾನ್, ನಿಮ್ರತ್ ಕೌರ್, ಶರದ್ ಕೇಲ್ಕರ್ ಇವರು ಕೂಡ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

3 idiots 2 : ಬಾಕ್ಸ್ ಆಫೀಸ್ ನಲ್ಲಿ ಸುನಾಮಿ, ಬರ್ತಿದೆ 3 ಈಡಿಯಟ್ಸ್ ಸೀಕ್ವೆಲ್
ಚಿರಂಜೀವಿ ನಂತರ ಜೂ.ಎನ್‌ಟಿಆರ್ ಟಾರ್ಗೆಟ್? ಸಂಚಲನ ಮೂಡಿಸಿದ ನಿರ್ಧಾರ, ಇನ್ಮುಂದೆ ಹೀಗೆ ಮಾಡಿದ್ರೆ ಕಷ್ಟ!