Item Song: 'ಪುಷ್ಪ' ಚಿತ್ರದ ಹಾಡಿಗೆ ಅಲ್ಲು ಅರ್ಜುನ್ ಜೊತೆ ಸೊಂಟ ಬಳುಕಿಸಲಿದ್ದಾರೆ ಸಮಂತಾ

By Suvarna News  |  First Published Dec 2, 2021, 6:30 PM IST

'ಪುಷ್ಪ' ಚಿತ್ರತಂಡ ಅಲ್ಲು ಅರ್ಜುನ್ ಹಾಗೂ ಸಮಂತಾ ಹೆಜ್ಜೆ ಹಾಕುವ ಹಾಡಿನ ಪೋಸ್ಟರ್‌ವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.  ಈ ಪೋಸ್ಟರ್‌ನಲ್ಲಿ ಸಮಂತಾ ಬೆನ್ನು ತೋರಿಸಿ ನಿಂತಿದ್ದು, ನೀಲಿ ಬಣ್ಣದ ಬಟ್ಟೆಯನ್ನು ಧರಿಸಿರುವುದನ್ನು ಕಾಣಬಹುದಾಗಿದೆ.


ಐಕಾನ್ ಸ್ಟಾರ್ ಅಲ್ಲು ಅರ್ಜುನ್ (Allu Arjun), ನ್ಯಾಷನಲ್ ಕ್ರಶ್‌ ರಶ್ಮಿಕಾ ಮಂದಣ್ಣ (Rashmika Mandanna) ಅಭಿನಯದ ಸುಕುಮಾರ್ (Sukumar) ನಿರ್ದೇಶನದ ಬಹುನಿರೀಕ್ಷಿತ  'ಪುಷ್ಪ' (Pushpa) ಚಿತ್ರ ಸಖತ್ ಕ್ರೇಜ್ ಕ್ರಿಯೇಟ್ ಮಾಡಿದ್ದು, 'ಬಾಹುಬಲಿ' (Bahubali), 'ಕೆಜಿಎಫ್' (KGF) ಹಾದಿಯಲ್ಲಿ ಸಾಗಿರುವ ಚಿತ್ರ 2 ಭಾಗಗಳಲ್ಲಿ ಬಿಡುಗಡೆಯಾಗಲಿದ್ದು, ಮೊದಲ ಭಾಗವು 'ಪುಷ್ಪ: ದಿ ರೈಸ್' (Pushpa: The Rise) ಎಂಬ ಹೆಸರಿನಲ್ಲಿ ತೆರೆಗೆ ಬರಲಿದೆ. ವಿಶೇಷವಾಗಿ ಈ ಚಿತ್ರದ ಹಾಡುಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ಸೌಂಡ್ ಮಾಡುತ್ತಿದೆ. 

ಈ ಹಿಂದೆ ಈ ಚಿತ್ರದ ಐಟಂ ಸಾಂಗ್​ಗೆ ಟಾಲಿವುಡ್ ನಟಿ ಸಮಂತಾ (Samantha) ಸೊಂಟ ಬಳುಕಿಸಲಿದ್ದಾರೆ ಎಂದು ಸುದ್ದಿಯಾಗಿತ್ತು. ಹಾಗೂ ಅವರ ಸಂಭಾವನೆಯ ವಿಚಾರಗಳೂ ಅಭಿಮಾನಿಗಳ ಕುತೂಹಲ ಮೂಡಿಸಿತ್ತು. ಇದೀಗ ಚಿತ್ರತಂಡ ಚಿತ್ರದ ಬಗ್ಗೆ ಹೊಸ ಮಾಹಿತಿಯನ್ನು ಹಂಚಿಕೊಂಡಿದ್ದು, ಸಿನಿರಸಿಕರ ಕುತೂಹಲವನ್ನು ಮತ್ತಷ್ಟು ಕೆರಳಿಸಿದೆ. ಹೌದು! 'ಪುಷ್ಪ' ಚಿತ್ರತಂಡ ಅಲ್ಲು ಅರ್ಜುನ್ ಹಾಗೂ ಸಮಂತಾ ಹೆಜ್ಜೆ ಹಾಕುವ ಹಾಡಿನ ಪೋಸ್ಟರ್‌ವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಹೈದರಾಬಾದ್‌ನ ರಾಮೋಜಿ ಫಿಲಂ ಸಿಟಿಯಲ್ಲಿ ಅದ್ಧೂರಿ ಸೆಟ್‌ ಹಾಕಲಾಗಿದ್ದು ಈ ಹಾಡಿನ ಶೂಟಿಂಗ್‌ ನಡೆಯಲಿದೆ.

Tap to resize

Latest Videos

undefined

Pushpa: 'ಏ ಮಗಾ ಇದು ನನ್ನ ಜಾಗ' ಎಂದು ಅಬ್ಬರಿಸಿದ ಅಲ್ಲು ಅರ್ಜುನ್

ಈ ಬಗ್ಗೆ ಚಿತ್ರತಂಡ ಟ್ವೀಟರ್‌ನಲ್ಲಿ, 'ಈ ವರ್ಷದ ರಾಕಿಂಗ್ ಹಾಡಿಗೆ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಮತ್ತು ಸಮಂತಾ ಪ್ರಭು ದೈತ್ಯಾಕಾರದ ಸೆಟ್‌ನಲ್ಲಿ ಹೆಜ್ಜೆ ಹಾಕಿರುವುದನ್ನು ಚಿತ್ರೀಕರಿಸಲಾಗಿದೆ. ಶೀಘ್ರದಲ್ಲಿಯೇ ಈ ವರ್ಷದ ರಾಕಿಂಗ್ ಹಾಡನ್ನು ನೋಡಲು ಸಿದ್ಧರಾಗಿ' ಎಂದು ಕ್ಯಾಪ್ಷನ್ ಬರೆದು ಪೋಸ್ಟರ್‌ವೊಂದನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟರ್‌ನಲ್ಲಿ ಸಮಂತಾ ಬೆನ್ನು ತೋರಿಸಿ ನಿಂತಿದ್ದು, ನೀಲಿ ಬಣ್ಣದ ಬಟ್ಟೆಯನ್ನು ಧರಿಸಿರುವುದನ್ನು ಕಾಣಬಹುದಾಗಿದೆ. ಈ ಪೆಪ್ಪಿ ಹಾಡಿಗೆ ಗಣೇಶ್ ಆಚಾರ್ಯ (Ganesh Acharya) ಮತ್ತು ದೇವಿ ಶ್ರೀ ಪ್ರಸಾದ್‌ (Devi Sri Prasad) ನೃತ್ಯ ಸಂಯೋಜಿಸಿದ್ದಾರೆ.

'ಪುಷ್ಪ' ಚಿತ್ರದ ಮೊದಲ ಹಾಡು 'ಜೋಕೆ ಜೋಕೆ', ಎರಡನೇ ಹಾಡು 'ಶ್ರೀವಲ್ಲಿ' ಮೂರನೇ ಹಾಡು 'ಸಾಮಿ ಸಾಮಿ' ಹಾಗೂ ನಾಲ್ಕನೇ ಹಾಡು 'ಏ ಮಗಾ ಇದು ನನ್ನ' ಹಾಡು ಈಗಾಗಲೇ 250 ಮಿಲಿಯನ್‌ಗೂ ಹೆಚ್ಚು ವೀವ್ಸ್‌ ದಾಟಿ ಮುನ್ನುಗ್ಗುತ್ತಿದೆ.  ವಿಶೇಷವಾಗಿ ಈ ಚಿತ್ರದಲ್ಲಿ ಮಂಗಲಮ್ ಶ್ರೀನು ಹೆಸರಿನ ಪಾತ್ರದಲ್ಲಿ ನಟ ಸುನೀಲ್ (Sunil) ಕಾಣಿಸಿಕೊಳ್ಳುತ್ತಿದ್ದು, ದಾಕ್ಷಾಯಿಣಿ ಪಾತ್ರದಲ್ಲಿ ಅನಸೂಯ ಭಾರಧ್ವಾಜ್ (Anasuya Bharadwaj) ಅಭಿನಯಿಸುತ್ತಿದ್ದಾರೆ. ಮಲಯಾಳಂ ನಟ ಫಾಹದ್ ಫಾಸಿಲ್ (Fahadh Faasil) ಮುಖ್ಯ ಖಳ ನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 

ಪಂಚಭಾಷೆಗಳಲ್ಲೂ Pushpa ಹಾಡುಗಳು ಸಕ್ಸಸ್: ಧನ್ಯವಾದ ಅರ್ಪಿಸಿದ ದೇವಿಶ್ರೀ ಪ್ರಸಾದ್

ಇನ್ನು ಮೈತ್ರಿ ಮೂವೀ ಮೇಕರ್ಸ್ ಸಂಸ್ಥೆ (Mythri Movie Makers) ಈ ಚಿತ್ರವನ್ನು ಅದ್ದೂರಿಯಾಗಿ ನಿರ್ಮಾಣ ಮಾಡುತ್ತಿದ್ದು, ಅಲ್ಲು ಅರ್ಜುನ್ ರಕ್ತ ಚಂದನ ಕಳ್ಳಸಾಗಾಣಿಕೆ ಮಾಡುವ ಲಾರಿ ಚಾಲಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಡಿಗ್ಲಾಮರಸ್ ಪಾತ್ರದಲ್ಲಿ ಶ್ರೀವಲ್ಲಿಯಾಗಿ ನ್ಯಾಷನಲ್ ಕ್ರಷ್‌ ರಶ್ಮಿಕಾ ಮಂದಣ್ಣ ಅಲ್ಲು ಅರ್ಜುನ್‌ಗೆ ಜೋಡಿಯಾಗಿ ನಟಿಸಿದ್ದಾರೆ. ಡಾಲಿ ಧನಂಜಯ್ (Dolly Dhananjay), ಟಾಲಿವುಡ್ ವಿಲನ್ ಜಗಪತಿ ಬಾಬು (Jagapati Babu), ಪ್ರಕಾಶ್ ರಾಜ್ (Prakash Raj), ವೆನ್ನೆಲ್ಲಾ ಕಿಶೋರ್ ಸೇರಿದಂತೆ ಚಿತ್ರದಲ್ಲಿ ದೊಡ್ಡ ತಾರಾಬಳಗವಿದೆ. 'ಪುಷ್ಪ: ದಿ ರೈಸ್' ಎಂಬ ಶೀರ್ಷಿಕೆಯ ಮೊದಲ ಭಾಗವು ಡಿಸೆಂಬರ್ 17ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.
 

A Rocking Number with Icon Star & being shot in a gigantic set 🔥

Get ready to witness the 'Sizzling Song of The Year' soon💥 🤙 pic.twitter.com/Y1PbbAmoIm

— Pushpa (@PushpaMovie)
click me!