Captain Marvel: ಡಿಪ್ಪಿ ಬದಲು ಪಿಗ್ಗಿನೇ ಬೇಕೆಂದ ರುಸೋ ಬ್ರದರ್ಸ್‌

Published : Jul 30, 2022, 01:29 PM IST
Captain Marvel: ಡಿಪ್ಪಿ ಬದಲು ಪಿಗ್ಗಿನೇ ಬೇಕೆಂದ ರುಸೋ ಬ್ರದರ್ಸ್‌

ಸಾರಾಂಶ

ತಮ್ಮ ಮುಂದಿನ ಯೋಜನೆಯಾದ ಹೊಸ ಕ್ಯಾಪ್ಟನ್ ಮಾರ್ವೆಲ್ ಶೋಗೆ ದೀಪಿಕಾ ಪಡುಕೋಣೆ ಹಾಗೂ ಪ್ರಿಯಾಂಕಾ ಛೋಪ್ರಾ ಈ ಇಬ್ಬರಲ್ಲಿ ಯಾರನ್ನೂ ಆಯ್ಕೆ ಮಾಡ್ತೀರಾ ಎಂದು ಸಂದರ್ಶಕರು ರುಸ್ಸೋ ಸಹೋದರರ ಬಳಿ ಕೇಳಿದ್ದು, ಈ ವೇಳೆ ತಾವು ಪ್ರಿಯಾಂಕಾ ಛೋಪ್ರಾ ಅವರನ್ನೇ ಆಯ್ಕೆ ಮಾಡುವುದಾಗಿ ಹೇಳಿಕೊಂಡಿದ್ದಾರೆ.

ತಮ್ಮ ಮುಂದಿನ ಯೋಜನೆಯಾದ ಹೊಸ ಕ್ಯಾಪ್ಟನ್ ಮಾರ್ವೆಲ್ ಶೋಗೆ ದೀಪಿಕಾ ಪಡುಕೋಣೆ ಹಾಗೂ ಪ್ರಿಯಾಂಕಾ ಛೋಪ್ರಾ ಈ ಇಬ್ಬರಲ್ಲಿ ಯಾರನ್ನೂ ಆಯ್ಕೆ ಮಾಡ್ತೀರಾ ಎಂದು ಸಂದರ್ಶಕರು ರುಸ್ಸೋ ಸಹೋದರರ ಬಳಿ ಕೇಳಿದ್ದು, ಈ ವೇಳೆ ತಾವು ಪ್ರಿಯಾಂಕಾ ಛೋಪ್ರಾ ಅವರನ್ನೇ ಆಯ್ಕೆ ಮಾಡುವುದಾಗಿ ಹೇಳಿಕೊಂಡಿದ್ದಾರೆ. ರುಸ್ಸೋ ಸಹೋದರರು ಪ್ರಿಯಾಂಕಾ ಛೋಪ್ರಾಗೆ ಒಳ್ಳೆಯ ಸ್ನೇಹಿತರಾಗಿದ್ದು, ಪ್ರಿಯಾಂಕಾ ಬದಲು ನಾವು ಬೇರೆ ಯಾರನ್ನೂ ಕೂಡ ಈ ಪಾತ್ರಕ್ಕೆ ಆಯ್ಕೆ ಮಾಡುವುದಿಲ್ಲ ಎಂದು ಸಹೋದರರು ಒಕ್ಕೊರಲಿನಿಂದ ನುಡಿದಿದ್ದಾರೆ. ಇವರಿಬ್ಬರು ಸೇರಿ ಪ್ರಿಯಾಂಕ ಅವರ ಚೊಚ್ಚಲ ವೆಬ್‌ ಸಿರೀಸ್‌ ಸಿಟಾಡೆಲ್ ಅನ್ನು ನಿರ್ದೇಶಿಸಿದ್ದರು.

ಇತ್ತೀಚೆಗೆ ಸಂದರ್ಶಕರು ಪ್ರಿಯಾಂಕಾ ಛೋಪ್ರಾ ಹಾಗೂ ದೀಪಿಕಾ ಪಡುಕೋಣೆ ಇವರಿಬ್ಬರಲ್ಲಿ ನೀವು ಯಾರನ್ನು ಆಯ್ಕೆ ಮಾಡಿಕೊಳ್ಳುತ್ತೀರಿ ಎಂದು ಕೇಳಿದ್ದು, ಇದಕ್ಕೆ ಅವರು ಕಣ್ಣು ಮಿಟುಕಿಸದೇ ಒಂದೇ ಕೊರಲಿನಿಂದ ಪ್ರಿಯಾಂಕಾ ಎಂದು ಹೇಳಿದ್ದಾರೆ. 

ಈ ವಿಡಿಯೋವನ್ನು ಇನ್ಸ್ಟಾಗ್ರಾಮ್‌ನಲ್ಲಿ ಪ್ರಿಯಾಂಕಾ ಫ್ಯಾನ್ ಪೇಜ್ ಪೋಸ್ಟ್ ಮಾಡಿದೆ. ತಮಿಳು ನಟ ಧನುಷ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ದ ಗ್ರೇ ಮ್ಯಾನ್‌ ಸಿನಿಮಾಕ್ಕೆ ಸಂಬಂಧಿಸಿದಂತೆ ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಧ್ಯಮಗಳು ಈ ರುಸ್ಸೋ ಸಹೋದರರನ್ನು ಪ್ರಶ್ನಿಸಿದ್ದಾರೆ. ತಮ್ಮ ಮುಂದಿನ ಯೋಜನೆ ಕ್ಯಾಪ್ಟನ್ ಮಾರ್ವೆಲ್‌ಗಾಗಿ ಪ್ರಿಯಾಂಕಾ ಹಾಗೂ ದೀಪಿಕಾ ನಡುವೆ ಆಯ್ಕೆ ಮಾಡಿ ಎಂದು ಕೇಳಿದ್ದಾರೆ. ಈ ವೇಳೆ ಅವರು ನಾವು ಪ್ರಿಯಾಂಕಾ ಅವರನ್ನು ಆಯ್ಕೆ ಮಾಡುತ್ತೇವೆ. ನಾವು ಅವರ ದೊಡ್ಡ ಅಭಿಮಾನಿಗಳು, ಜೊತೆಗೆ ಒಳ್ಳೆಯ ಸ್ನೇಹಿತರು. ನಾವು ಪ್ರಾಜೆಕ್ಟ್ ಒಂದಕ್ಕೆ ಕೆಲಸ ಮಾಡಿದ್ದೇವೆ. ಜೊತೆಗೆ ನಾವು ಶೋ ಒಂದನ್ನು ನಿರ್ಮಿಸಿದ್ದೇವೆ ಎಂದು ರುಸ್ಸೋ ಸಹೋದರರು ಹೇಳಿದ್ದಾರೆ. 

 

ತಮ್ಮ ಸಂದರ್ಶನಗಳಲ್ಲಿ ಈ ರುಸ್ಸೋ ಸಹೋದರರು ಯಾವಾಗಲೂ ಪ್ರಿಯಾಂಕಾ ಛೋಪ್ರಾ ಅವರನ್ನು ಹೊಗಳುತ್ತಿರುತ್ತಾರೆ. ಕಳೆದ ವರ್ಷ ಇಂಡಿಯನ್‌ ಎಕ್ಸ್‌ಪೆಸ್‌ಗೆ ಮಾತನಾಡಿದ ಜೋಯ್ ರುಸ್ಸೋ, ಪ್ರಿಯಾಂಕಾ ಒಬ್ಬ ನಂಬಲಸಾಧ್ಯವಾದ ನಟಿ ಅವರೊಬ್ಬ ಅಭೂತಪೂರ್ವ ನಟನಾ ಸಾಮರ್ಥ್ಯ ಹೊಂದಿರುವವರು ಎಂದು ಹೇಳಿಕೊಂಡಿದ್ದರು. ಅಂಥೋನಿ ರುಸ್ಸೋ ಹಾಗೂ ಜೊಯ್ ರುಸ್ಸೋ ಕ್ಯಾಪ್ಟನ್ ಮಾರ್ವೆಲ್‌ನಲ್ಲಿ ಮಿಡ್‌ ಕ್ರೆಡಿಟ್ ಸೀನ್‌ಗಳನ್ನು ನಿರ್ದೇಶಿಸಿದ್ದಾರೆ. ಅದು ಅವೆಂಜರ್ಸ್ ಅನ್ನು ಭೇಟಿಯಾಗುವ ನಾಮಸೂಚಕ ಪಾತ್ರವನ್ನು ಹೊಂದಿತ್ತು. ಬ್ರೀ ಲಾರ್ಸನ್ ಅವರು 2019 ರ ಕ್ಯಾಪ್ಟನ್ ಮಾರ್ವೆಲ್ ಸಿನಿಮಾದಲ್ಲಿ ಕ್ಯಾಪ್ಟನ್‌ ಮಾರ್ವೆಲ್ ಪಾತ್ರವನ್ನು ನಿರ್ವಹಿಸಿದ್ದರು.

ಪ್ರಿಯಾಂಕಾ ಅವರು ಕೆಲ ವಾರಗಳ ಹಿಂದಷ್ಟೇ ಸಿಟಾಡೆಲ್‌ಗೆ ತಮ್ಮ ಪಾತ್ರದ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ. ಸಿಟಾಡೆಲ್ ಬಗ್ಗೆ ಕಳೆದ ಡಿಸೆಂಬರ್‌ನಲ್ಲಿ ಮಾತನಾಡಿದ ಪ್ರಿಯಾಂಕಾ, ಟೆಲಿವಿಷನ್‌ನಲ್ಲಿ ಸಿಟಾಡೆಲ್‌ನಂತೆ ಏನೂ ಇಲ್ಲ ಎಂದು ನಾನು ಭಾವಿಸುತ್ತೇನೆ. ಇದು ಅತ್ಯಂತ ಉನ್ನತ ಮಟ್ಟದ, ಅತ್ಯಂತ ಸೂಕ್ಷ್ಮವಾದ ಕ್ರಿಯೆ, ಸಾಹಸಗಳು, ಆದರೆ ಅದೇ ಸಮಯದಲ್ಲಿ ಇದು ನಾಟಕೀಯವೂ ಆಗಿದೆ. ಅಂತಹದೊಂದು ಟಿವಿಯಲ್ಲಿ ಏನೂ ಇಲ್ಲ ಎಂದು ನಾನು ಭಾವಿಸುತ್ತೇನೆ  ಎಂದು ಹೇಳಿಕೊಂಡಿದ್ದರು. 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

3 idiots 2 : ಬಾಕ್ಸ್ ಆಫೀಸ್ ನಲ್ಲಿ ಸುನಾಮಿ, ಬರ್ತಿದೆ 3 ಈಡಿಯಟ್ಸ್ ಸೀಕ್ವೆಲ್
ಚಿರಂಜೀವಿ ನಂತರ ಜೂ.ಎನ್‌ಟಿಆರ್ ಟಾರ್ಗೆಟ್? ಸಂಚಲನ ಮೂಡಿಸಿದ ನಿರ್ಧಾರ, ಇನ್ಮುಂದೆ ಹೀಗೆ ಮಾಡಿದ್ರೆ ಕಷ್ಟ!