ದೀಪಿಕಾ-ರಣವೀರ್ ಮಗಳಿಗಿಟ್ಟ ಹೆಸರೇನು?, ಅಭಿಮಾನಿಗಳು ಸೂಚಿಸಿದ ಹೆಸರಿದು!

Published : Sep 08, 2024, 07:01 PM IST
ದೀಪಿಕಾ-ರಣವೀರ್  ಮಗಳಿಗಿಟ್ಟ ಹೆಸರೇನು?,  ಅಭಿಮಾನಿಗಳು ಸೂಚಿಸಿದ ಹೆಸರಿದು!

ಸಾರಾಂಶ

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ದಂಪತಿಗೆ ಹೆಣ್ಣು ಮಗು ಜನಿಸಿದೆ. ಸಾಮಾಜಿಕ ಮಾಧ್ಯಮದಲ್ಲಿ ಅಭಿಮಾನಿಗಳು ಮಗುವಿನ ಹೆಸರಿನ ಬಗ್ಗೆ ಊಹಾಪೋಹ ನಡೆಸುತ್ತಿದ್ದಾರೆ. ಬಾಲಿವುಡ್ ಸೆಲೆಬ್ರಿಟಿಗಳು ದಂಪತಿಗೆ ಶುಭಾಶಯಗಳನ್ನು ಕೋರಿದ್ದಾರೆ.

ಮುಂಬೈ (ಸೆ.8): ಬಾಲಿವುಡ್ ನಟಿ,  ಕನ್ನಡದ ಹುಡುಗಿ  ದೀಪಿಕಾ ಪಡುಕೋಣೆ (Deepika Padukone) ಮತ್ತು ರಣವೀರ್ ಸಿಂಗ್ (Ranveer Singh) ಅವರ ಮನೆಯಲ್ಲಿ ಭಾನುವಾರ ಸಂತೋಷದ ದಿನವಾಗಿತ್ತು. ದೀಪಿಕಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ರಣವೀರ್ ಸಿಂಗ್ ತಂದೆಯಾದ  ಸಂತೋಷದಲ್ಲಿದ್ದಾರೆ.  

ಸ್ಟಾರ್‌ ದಂಪತಿಗಳು  ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಮಗಳ ಆಗಮನದ ಸಂತೋಷದ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಇಬ್ಬರೂ ಒಂದು ಟೆಂಪ್ಲೇಟ್ ಅನ್ನು ಹಂಚಿಕೊಂಡಿದ್ದು, ಸ್ವಾಗತ ಮಗುವೇ 8.9.2024, ದೀಪಿಕಾ-ರಣವೀರ್ ಎಂದು ಬರೆದುಕೊಂಡಿದ್ದಾರೆ.

ನಾದಬ್ರಹ್ಮ ಹಂಸಲೇಖರ ಮಕ್ಕಳು ಏನ್ಮಾಡ್ತಿದ್ದಾರೆ? ಪ್ರೀತಿಯ ಮಗಳ ಸಾಧನೆ ಇದು

ಅಭಿಮಾನಿಗಳು ದೀಪ್‌ವೀರ್ ಅವರ ಮಗಳನ್ನು ನೋಡಲು ಉತ್ಸುಕರಾಗಿದ್ದು, ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದಾರೆ. ಬಾಲಿವುಡ್ ಸೆಲೆಬ್ರಿಟಿಗಳು ಕೂಡ ದಂಪತಿಗಳ ಪೋಸ್ಟ್‌ಗೆ ಕಾಮೆಂಟ್ ಮಾಡುವ ಮೂಲಕ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದಾರೆ. ನೆಟ್ಟಿಗರು ಈಗಾಗಲೇ ದೀಪಿಕಾ-ರಣವೀರ್‌ಗೆ ತಮ್ಮ ಮಗಳ ಹೆಸರನ್ನು ಹೀಗೆ ಇಡಿ ಎಂದು ಸೂಚಿಸಲು ಪ್ರಾರಂಭಿಸಿದ್ದಾರೆ.

ದೀಪಿಕಾ - ರಣವೀರ್ ಮಗಳ ಹೆಸರೇನು?
ದೀಪಿಕಾ ಪಡುಕೋಣೆ-ರಣವೀರ್ ಸಿಂಗ್ ಪೋಷಕರಾದ ತಕ್ಷಣ, ಸಾಮಾಜಿಕ ಮಾಧ್ಯಮದಲ್ಲಿ ಅಭಿಮಾನಿಗಳು ತಮ್ಮ ಮಗಳಿಗೆ ಹೆಸರನ್ನು ಸೂಚಿಸಲು ಪ್ರಾರಂಭಿಸಿದ್ದಾರೆ. ಅಭಿಮಾನಿಯೊಬ್ಬರು ಕಮೆಂಟ್ ಮಾಡಿ, ಈಗಾಗಲೇ ತಮ್ಮ ಮಗಳಿಗೆ ರಾವಿಕಾ ಎಂದು ಹೆಸರಿಟ್ಟಿದ್ದಾರೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.

ಮತ್ತೊಬ್ಬರು ಮಗುವಿನ ಹೆಸರು ದೀಶಾನಿ ಪಡುಕೋಣೆ ಸಿಂಗ್ ಎಂದು ಇರಬೇಕು. ಇನ್ನು ಕೆಲವರು ಮಗಳಿಗೆ ರುವಾಂಶಿ ಅಥವಾ ಶಿವಾನಿ ಎಂದು ಹೆಸರಿಸಬೇಕೆಂದು ಸೂಚಿಸಿದ್ದಾರೆ. ಇದರ ಜೊತೆಗೆ ಮಗಳಿಗೆ ರಶ್ಮಿಕಾ, ರಿಧ್ವಿ, ರಣ್ವಿಕಾ ಎಂದು ಹೆಸರಿಡಬೇಕು. ಅದೇ ರೀತಿ  ದಿರಾ, ವಿದಾತ್ರಿ, ರಾನಿಕಾ, ಧೀನವಿರಾಕಾ ಎಂದು ಹೆಸರಿಸಬೇಕೆಂದು ಸೂಚಿಸಿದ್ದಾರೆ. ಅಭಿಮಾನಿಗಳು ನಿರಂತರವಾಗಿ ದಂಪತಿಗಳಿಗೆ ತಮ್ಮ ಮಗಳಿಗೆ ಹೆಸರುಗಳನ್ನು ಸೂಚಿಸುತ್ತಲೇ ಇದ್ದಾರೆ.

ಹಂಸಲೇಖ ಇದ್ರೆ ಶೋ ನೋಡಲ್ಲ, ಸರಿಗಮಪ ಬಹಿಷ್ಕಾರಕ್ಕೆ ಸೋಷಿಯಲ್‌ ಮೀಡಿಯಾದಲ್ಲಿ ಕರೆ!

ಬಾಲಿವುಡ್ ಸೆಲೆಬ್ರಿಟಿಗಳ ಅಭಿನಂದನೆ: ಮಗಳ ಪೋಷಕರಾದ ದೀಪಿಕಾ ಪಡುಕೋಣೆ-ರಣವೀರ್ ಸಿಂಗ್‌ಗೆ ಬಾಲಿವುಡ್ ಸೆಲೆಬ್ರಿಟಿಗಳು ನಿರಂತರವಾಗಿ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಕರೀನಾ ಕಪೂರ್  , ಸೈಫ್ ಮತ್ತು ಮಕ್ಕಳ ಪರವಾಗಿ ಅಮ್ಮ ಮತ್ತು ಅಪ್ಪನಿಗೆ ಅಭಿನಂದನೆಗಳು. ದೇವರು ಪುಟ್ಟ ದೇವತೆಗೆ ಆಶೀರ್ವಾದ ಮಾಡಲಿ ಎಂದು ಬರೆದಿದ್ದಾರೆ. ಶ್ರದ್ಧಾ ಕಪೂರ್, ಅನನ್ಯಾ ಪಾಂಡೆ, ಪ್ರಿಯಾಂಕಾ ಚೋಪ್ರಾ ಮತ್ತು ಕೃತಿ ಸನನ್  ಮಗಳು ಹುಟ್ಟಿದ ಸಂತೋಷಕ್ಕೆ ಅಭಿನಂದನೆಗಳೂ ಎಂದಿದ್ದು, ಶಾಹಿದ್ ಕಪೂರ್ ಅವರ ಪತ್ನಿ ಮೀರಾ ರಾಜಪೂತ್  ಅಭಿನಂದನೆಗಳು ಅತ್ಯುತ್ತಮ ಕ್ಲಬ್‌ಗೆ ಸುಸ್ವಾಗತ ಎಂದು ಬರೆದಿದ್ದಾರೆ.

ಅರ್ಜುನ್ ಕಪೂರ್ ಬರೆದು- ಲಕ್ಷ್ಮಿ ಬಂದಿದ್ದಾಳೆ, ರಾಣಿ ಇಲ್ಲಿದ್ದಾಳೆ. ಅದೇ ರೀತಿ ಪರಿಣೀತಿ ಚೋಪ್ರಾ, ಆಲಿಯಾ ಭಟ್, ಸೋನಾಕ್ಷಿ ಸಿನ್ಹಾ, ಮಲೈಕಾ ಅರೋರಾ, ರೂಬಿನಾ ದಿಲೈಕ್ ಸೇರಿದಂತೆ ಹಲವು ಸೆಲೆಬ್ರಿಟಿಗಳು ದಂಪತಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಶನಿವಾರ ಮುಂಬೈನ ಗಿರ್ಗಾಂವ್ ಪ್ರದೇಶದ H. N. ರಿಲಯನ್ಸ್ ಆಸ್ಪತ್ರೆಗೆ ದೀಪಿಕಾ ದಾಖಲಾಗಿದ್ದರು.  ಹೆರಿಗೆಗೆ ಮುನ್ನ, ಶುಕ್ರವಾರ, ದಂಪತಿ ಮುಂಬೈನ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದಿದ್ದರು.

ಸೆಪ್ಟೆಂಬರ್ 28ರಂದು ದೀಪಿಕಾಗೆ ಡೆಲಿವರಿ ಡೇಟ್ ಇತ್ತು. ಆದರೆ ನಿಗದಿಗಿಂತ 20 ದಿನ ಮೊದಲೇ ದೀಪಿಕಾ ಜನ್ಮ ನೀಡಿದ್ದಾರೆ. 38 ವರ್ಷದ ದೀಪಿಕಾ 2018ರಲ್ಲಿ  ನಟ ರಣವೀರ್ ಸಿಂಗ್ ಅವರನ್ನು ಮದುವೆಯಾದರು. ಮದುವೆಯಾದ 6 ವರ್ಷಗಳ ನಂತರ ದಂಪತಿಗೆ ಹೆಣ್ಣು ಮಗು ಜನಿಸಿದೆ.
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
ದೇಶಮುದುರು ಹೊಡೆತಕ್ಕೆ ಅಡ್ರೆಸ್ ಇಲ್ಲದಂತಾದ ಪ್ರಭಾಸ್ ಸಿನಿಮಾ.. ಒಂದೇ ವರ್ಷ ಬ್ಯಾಕ್ ಟು ಬ್ಯಾಕ್ ಫ್ಲಾಪ್