ನೀವು ಬಾಲಿವುಡ್‌ನ ಎರಡನೇ ಪೂನಂ ಪಾಂಡೆ ಎಂದು ಕಮೆಂಟ್ ಮಾಡುತ್ತಿದ್ದಾರೆ. ಪೂನಂ ಪಾಂಡೆ ಕಾಮ ಪ್ರಚೋದಕ ಸಿನಿಮಾಗಳಲ್ಲಿ (Erotic Movies) ನಟನೆ ಮಾಡುತ್ತಾರೆ.
ಮುಂಬೈ: ಬಾಲಿವುಡ್ ನಟಿ ಊರ್ವಶಿ ರೌತೆಲಾರದ್ದು (Bollywood Actress Urvashi Rautela)), ಎನ್ನಲಾದ ಸ್ನಾನದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Urvashi Video Leak) ಆಗುತ್ತಿದೆ. ವಿಡಿಯೋ ನೋಡಿದ ನೆಟ್ಟಿಗರು ನೀವು ಬಾಲಿವುಡ್‌ನ ಎರಡನೇ ಪೂನಂ ಪಾಂಡೆ ಎಂದು ಕಮೆಂಟ್ ಮಾಡುತ್ತಿದ್ದಾರೆ. ಪೂನಂ ಪಾಂಡೆ ಕಾಮ ಪ್ರಚೋದಕ ಸಿನಿಮಾಗಳಲ್ಲಿ (Erotic Movies) ನಟನೆ ಮಾಡುತ್ತಾರೆ. ಪೂನಂ ಪಾಂಡೆ (Poonam Pandey) ಸಹ ಆಗಾಗ್ಗೆ ಅರ್ಧಬಂರ್ಧ ಬಟ್ಟೆ ತೊಟ್ಟಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಕಳೆದ ನಾಲ್ಕೈದು ದಿನಗಳಿಂದ ಊರ್ವಶಿಯವರ ಈ ವಿಡಿಯೋ ಹರಿದಾಡುತ್ತಿದ್ದು, ಹೊಸ ಹೊಸ ಚರ್ಚೆಗಳು ಮುನ್ನಲೆಗೆ ಬಂದಿವೆ.
ಆರಂಭದಲ್ಲಿ ಇದೊಂದು ಸಿನಿಮಾದ ದೃಶ್ಯ ಇರಬಹುದು ಎಂದು ಊರ್ವಶಿ ಅಭಿಮಾನಿಗಳು ವಾದ ಮಂಡಿಸಿದ್ದರು. ವೈರಲ್ ಆಗಿರುವ ವಿಡಿಯೋ ಕ್ಲಿಪ್‌ನಲ್ಲಿ ಊರ್ವಶಿ ಕೊರಳಲ್ಲಿ ಮಾಂಗಲ್ಯ ಸರ ಇರೋದನ್ನು ಕಾಣಬಹುದು. ಹಾಗಾಗಿ ಇದೊಂದು ಸಿನಿಮಾದ ದೃಶ್ಯ ಎಂಬ ಮಾತುಗಳು ಕೇಳಿ ಬಂದಿದ್ದವು. ಈ ಎಲ್ಲಾ ಬೆಳವಣಿಗೆ ನಡುವೆ ಮ್ಯಾನೇಜರ್ ಜೊತೆ ಊರ್ವಶಿ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಕ್ಲಿಪ್ ಹೊರ ಬಂದಿದೆ. ಇದರಲ್ಲಿ ಆ ವಿಡಿಯೋ ಹೇಗೆ ಹೊರ ಬಂತು? ಏನಾಗುತ್ತಿದೆ ಎಂದು ಊರ್ವಶಿ ಪ್ರಶ್ನೆ ಮಾಡುತ್ತಾರೆ. ಅದಕ್ಕೆ ಫೋನ್‌ನಲ್ಲಿ ಎಲ್ಲವನ್ನೂ ಹೇಳಲು ಆಗಲ್ಲ. ನೇರವಾಗಿ ಮಾತನಾಡೋಣ ಎಂದು ಮ್ಯಾನೇಜರ್ ಹೇಳುತ್ತಾರೆ.
ಊರ್ವಶಿ ಸ್ನಾನದ ವಿಡಿಯೋ ಲೀಕ್ ಬೆನ್ನಲ್ಲೇ ಮ್ಯಾನೇಜರ್ ಜೊತೆಗಿನ ಆಡಿಯೋನೂ ಬಹಿರಂಗ! ನಟಿ ಹೇಳಿದ್ದೇನು?
ವಿಡಿಯೋ ಮತ್ತು ಆಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದರೂ ಊರ್ವಶಿ ರೌತೆಲಾ ಅಧಿಕೃತವಾಗಿ ಯಾವುದೇ ಸ್ಪಷ್ಟನೆ ನೀಡಿಲ್ಲ. ಹಲವು ಸಿನಿಮಾಗಳಲ್ಲಿಯೂ ಊರ್ವಶಿ ರೌತೆಲಾ ನಟಿಸಿದರೂ ದೊಡ್ಡಮಟ್ಟದ ಯಶಸ್ಸು ಸಿಕ್ಕಿಲ್ಲ. ಊರ್ವಶಿ ರೌತೆಲಾರಿಗೆ ಇದುವರೆಗೂ ಸ್ಟಾರ್ ಪಟ್ಟ ಸಿಕ್ಕಿಲ್ಲ. ದರ್ಶನ್ ಅಭಿನಯದ ಮಿ.ಐರಾವತ ಸಿನಿಮಾದಲ್ಲಿಯೂ ಊರ್ವಶಿ ನಟಿಸಿದ್ದಾರೆ.
ಮಿಸ್ ಟೀನ್ ಇಂಡಿಯಾ, ಮಿಸ್ ದಿವಾ-ಮಿಸ್ ಯುನಿವರ್ಸ್ ಇಂಡಿಯಾ ಕಿರೀಟ
15ನೇ ವಯಸ್ಸಿನಲ್ಲಿಯೇ ಮಾಡೆಲಿಂಗ್ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ ಊರ್ವಶಿ, 2009ರ ಮಿಸ್ ಟೀನ್ ಇಂಡಿಯಾ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದರು. 2015ರ ಮಿಸ್ ದಿವಾ-ಮಿಸ್ ಯುನಿವರ್ಸ್ ಇಂಡಿಯಾ ಸ್ಪರ್ಧೆಯ ವಿಜೇತ ಊರ್ವಶಿ ರೌತೆಲಾ. 2015ರಲ್ಲಿ ಮಿಸ್ ಯುನಿವರ್ಸ್ ನಲ್ಲಿಯೂ ಊರ್ವಶಿ ಭಾಗವಹಿಸಿದ ನಂತರ ಸಿನಿಮಾ ಲೋಕ ಕೈ ಬೀಸಿ ಕರೆದಿತ್ತು. 2013ರಲ್ಲಿ ಸಿಂಗ್ ಸಾಬ್ ದಿ ಗ್ರೇಟ್ ಚಿತ್ರದ ಮೂಲಕ ಊರ್ವಶಿ ಸಿನಿಮಾ ಅಂಗಳಕ್ಕೆ ಕಾಲಿಟ್ಟರು. ತದನಂತರ ಸನಮ್ ರೇ, ಗ್ರೇಟ್ ಗ್ರ್ಯಾಂಡ್ ಮಸ್ತಿ, ಹೇಟ್ ಸ್ಟೋರಿ-4, ಪಾಗಲ್‌ಪಂತಿ ಸಿನಿಮಾಗಳಲ್ಲಿ ಊರ್ವಶಿ ನಟಿಸಿದ್ದಾರೆ. ತಮಿಳಿನ ದಿ ಲೆಜೆಂಡ್ ಸಿನಿಮಾದಲ್ಲಿಯೂ ಊರ್ವಶಿ ಕಾಣಿಸಿಕೊಂಡಿದ್ದಾರೆ.
ಶ್ರೀದೇವಿ ಮೂರನೇ ಮಗಳ ಬಗ್ಗೆ ನಿಮಗೆ ಗೊತ್ತಿದೆಯಾ? ಈ ಸೀಕ್ರೆಟ್ ರಿವೀಲ್ ಆಗಿದ್ದೇಗೆ?
ಮ್ಯೂಸಿಕ್ ಅಲ್ಬಂನಲ್ಲಿಯೂ ಕಾಣಿಸಿಕೊಂಡಿರುವ ನಟಿ
ಸಿನಿಮಾಗಳ ಜೊತೆಯಲ್ಲಿಯೇ ಮ್ಯೂಸಿಕ್ ಅಲ್ಬಂಗಳಲ್ಲಿಯೂ ಊರ್ವಶಿ ರೌತೆಲಾ ನಟಿಸಿದ್ದಾರೆ. ಲವ್ ಡೋಸ್, ಲಾಲ್ ದುಪ್ಪಟ್ಟಾ, ಗಲ್ ಬನ್ ಗಯಿ, ಬಿಜ್ಲಿ ಕಿ ತಾರಾ, ಏಕ್ ಡೈಮಂಡ್ ದಿ ಹಾರ್, ವೋ ಚಾಂದ್ ಕಹಾ ಸೆ ಲಾಯೋಗಿ, ಡುಬ್ ಗಯೆ ಸೇರಿದಂತೆ ಹಲವು ಮ್ಯೂಸಿಕ್ ಅಲ್ಬಂಗಳಲ್ಲಿ ಕಾಣಿಸಿದ್ದಾರೆ.
ಬಹು ನಿರೀಕ್ಷಿತ ಎನ್‌ಬಿಕೆ 109ರಲ್ಲಿ ಊರ್ವಶಿ ಬ್ಯೂಸಿ
ತೆಲುಗಿನ ಸೂಪರ್ ಸ್ಟಾರ್ ಬಾಲಕೃಷ್ಣ ನಂದಮೂರಿ ನಟನೆಯ ಎನ್‌ಬಿಕೆ 109 ಚಿತ್ರದ ಪ್ರಮುಖ ಪಾತ್ರದಲ್ಲಿ ಊರ್ವಶಿ ರೌತೆಲಾ ನಟಿಸಿದ್ದಾರೆ. ಸಿನಿಮಾದ ಚಿತ್ರೀಕರಣದಲ್ಲಿ ಊರ್ವಶಿ ಗಾಯಗೊಂಡಿದ್ದರು. ಇದೇ ಸಿನಿಮಾದಲ್ಲಿ ಬಾಬಿ ದಿಯೋಲ್, ದಲ್ಕರ್ ಸಲ್ಮಾನ್, ಅಫ್ತಾಬ್ ಶಿವದಾಸನಿ ಸೇರಿದಂತೆ ದೊಡ್ಡ ತಾರಾ ಬಳಗವನ್ನ ಎನ್‌ಬಿಕೆ 109 ಹೊಂದಿದೆ.