Oscar 2023; ಅಬ್ಬಾ...ಅಂತೂ ಸರಿಯಾಗಿ ಮಾತಾಡಿದ್ರು; Jr NTR ಇಂಗ್ಲಿಷ್‌ಗೆ ನೆಟ್ಟಿಗರ ಮೆಚ್ಚುಗೆ

By Shruthi KrishnaFirst Published Mar 13, 2023, 1:50 PM IST
Highlights

ಆಸ್ಕರ್ 2023ಕ್ಕೆ ಅದ್ದೂರಿ ತೆರೆ ಬಿದ್ದಿದೆ. ಈ ಬಾರಿಯ ಆಸ್ಕರ್ ಭಾರತೀಯರಿಗೂ ವಿಶೇಷವಾಗಿತ್ತು. 95ನೇ ಅಕಾಡೆಮಿ ಅವಾರ್ಡ್‌‌ನಲ್ಲಿ ಭಾರತ ಎರಡು ಪ್ರಶಸ್ತಿ ಗೆದ್ದು ಬೀಗಿದೆ. ಆರ್ ಆರ್ ಆರ್ ಸಿನಿಮಾ ನಾಟು ನಾಟು..ಹಾಡು ಮತ್ತು ಅತ್ಯುತ್ತಮ ಡಾಕ್ಯುಮೆಂಟರಿ ಶಾರ್ಟ್ ಫಿಲ್ಮ್ ವಿಭಾಗದಲ್ಲಿ ದಿ ಎಲಿಫೆಂಡ್ ವಿಸ್ಪರ್ಸ್ ಪ್ರಶಸ್ತಿ ಗೆದ್ದುಕೊಂಡಿದೆ. ನಾಟು ನಾಟು...ಹಾಡು ಆಸ್ಕರ್ ಗೆಲ್ಲುತ್ತಿದ್ದಂತೆ ಇಡೀ ಆರ್ ಆರ್ ಆರ್ ತಂಡ ಸಂಭ್ರಮಿಸಿದೆ. ಪ್ರಶಸ್ತಿ ಮುಡಿಗೇರಿಸಿಕೊಂಡ ಬಳಿಕ ರಾಮ್ ಚರಣ್ ಮತ್ತು ಜೂ.ಎನ್ ಟಿ ಆರ್ ಪ್ರತಿಕ್ರಿಯೆ ನೀಡಿದ್ದಾರೆ. ಆಸ್ಕರ್ ಅಂಗಳದಲ್ಲಿ ಇಬ್ಬರೂ ಸ್ಟಾರ್ಸ್ ಮಾತನಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅದರಲ್ಲೂ ಜೂ.ಎನ್ ಟಿ ಆರ್ ಮಾತಿಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. 

ಅಷ್ಟಕ್ಕೂ ಜೂ.ಎನ್ ಟಿ ಆರ್ ಇಂಗ್ಲಿಷ್ ಬಗ್ಗೆ ಯಾಕೆ ಮೆಚ್ಚುಗೆ ಅಂತ ಯೋಚಿಸುತ್ತಿದ್ದೀರಾ? ಈ ಮೊದಲು ಎಂದರೆ ಗೋಲ್ಡನ್ ಗ್ಲೋಬ್ಸ್ ಅವಾರ್ಡ್ ಸಮಾರಂಭದಲ್ಲಿ ಜೂ. ಎನ್ ಟಿ ಆರ್ ಪಾಶ್ಚಿಮಾತ್ಯ ಶೈಲಿಯಲ್ಲಿ ಇಂಗ್ಲಿಷ್ ಮಾತನಾಡಿ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದರು. ಗೋಲ್ಡನ್ ಗ್ಲೋಬ್ಸ್ ಕಾರ್ಪೆಟ್‌ನಲ್ಲಿ ಫಾರಿನ್ ಆ್ಯಕ್ಸೆಂಟ್‌ನಲ್ಲಿ ಮಾತನಾಡಿದ್ದರು. ಫೇಕ್ ಆ್ಯಕ್ಸೆಂಟ್‌ ಬೇಕಿತ್ತಾ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದರು. ಹಾಗಾಗಿ ಈ ಬಾರಿ ಆಸ್ಕರ್ ನಲ್ಲಿ ಹೇಗೆ ಮಾತನಾಡುತ್ತಾರೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಆದರೆ ಜೂ.ಎನ್ ಟಿ ಆರ್ ಮಾತು ಈಗ ಮೆಚ್ಚುಗೆ ಪಡೆದುಕೊಂಡಿದೆ. 

Oscar 2023; ಆಸ್ಕರ್ ಗೆದ್ದ ಬಳಿಕ ರಾಮ್ ಚರಣ್, ಜೂ.ಎನ್‌ಟಿಆರ್ ಫಸ್ಟ್ ರಿಯಾಕ್ಷನ್ ವಿಡಿಯೋ ವೈರಲ್

Latest Videos

ಸಂದರ್ಶನದಲ್ಲಿ ಜೂ.ಎನ್ ಟಿ ಆರ್ ತನ್ನ ಉಡುಪಿನ ಬಗ್ಗೆ ವಿವರಿಸಿದರು. ಹುಲಿ ಡಿಸೈನ್ ಬಗ್ಗೆ ಪ್ರತಿಕ್ರಿಯಿಸಿದ ಜೂ.ಎನ್ ಟಿ ಆರ್, 'ನೀವು RRR ನಲ್ಲಿ ನೋಡಿದ್ದೀರಿ. ಅದು ನನ್ನ ಮೇಲೆ ಹಾರಿದೆ. ಇದನ್ನು ವಿನ್ಯಾಸಗೊಳಿಸಿದ್ದು ಗೌರವ್ ಗುಪ್ತಾ.  ನಾವು ರೆಡ್ ಕಾರ್ಪೆಟ್ ಮೇಲೆ ನಡೆಯಲು ಹೋಗುವುದಲ್ಲ, ಇದು ಭಾರತ. ಹಾಗಾಗಿ ನಾನು ಭಾರತದ ಉಡುಪಿನಲ್ಲಿ ಇದ್ದೀನಿ. ಹುಲಿ ಭಾರತದ ರಾಷ್ಟ್ರ ಪ್ರಾಣಿಯಾಗಿದೆ' ಎಂದು ಹೇಳಿದರು.  'ನಾನು ಟಿವಿಯಲ್ಲಿ ಕಾರ್ಪೆಟ್ ನೋಡುತ್ತಿದ್ದೆ. ಆದರೀಗ ನಾನು ಕಾರ್ಪೆಟ್‌ನಲ್ಲಿ ನಡೆಯುತ್ತಿದ್ದೇನೆ, ಎಷ್ಟು ಅದ್ಭುತ' ಎಂದು ಹೇಳಿದರು. 

ಪಾಶ್ಚಿಮಾತ್ಯರ ಸ್ಟೈಲಿನಲ್ಲಿ ಜೂ.ಎನ್‌ಟಿಆರ್ ಮಾತು; ಟ್ರೋಲ್‌ಗೆ RRR ಸ್ಟಾರ್ ಹೇಳಿದ್ದೇನು?

ಜೂ.ಎನ್ ಟಿ ಆರ್  ಮಾತು ಅಭಿಮಾನಿಗಳ ಹೃದಯ ಗೆದ್ದಿದೆ. ಅವರ ಮಾತಿನ ಶೈಲಿಗೆ ಎಲ್ಲರ ಮೆಚ್ಚುಗೆ ವ್ಯಕ್ತವಾಗುತ್ತಿದೆ. ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿ, ಜೂ.ಎನ್ ಟಿ ಆರ್ ಆ್ಯಕ್ಸೆಂಟ್ ಇಷ್ಟವಾಯಿತು. ಸದ್ಯ ಅವರು ಫೇಕ್ ಮಾತನಾಡಿಲ್ಲ' ಎಂದು ಹೇಳಿದರು. ಮತ್ತೋರ್ವ ವ್ಯಕ್ತಿ ಕಾಮೆಂಟ್ ಮಾಡಿ ಆ್ಯಕ್ಸೆಂಟ್‌ಗೆ ಧನ್ಯವಾದ ಎಂದು ಹೇಳಿದ್ದಾರೆ.

 
 
 
 
 
 
 
 
 
 
 
 
 
 
 

A post shared by The Academy (@theacademy)

ಕೊನೆಗೂ ಆರ್ ಆರ್ ಆರ್ ತಂಡದ ಕನಸು ನನಸಾಗಿದೆ. ಪ್ರತಿಷ್ಠಿತ ಆಸ್ಕರ್ ಗೆದ್ದು ಬೀಗುವ ಜೊತೆಗೆ ಮುಂದಿನ ಸಿನಿಮಾಗಳ ಮೇಲೆ ನಿರೀಕ್ಷೆ ಮತ್ತು ಕುತೂಹಲ ಹೆಚ್ಚಿಸಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುತ್ತಿದ್ದ ರಾಜಮೌಳಿ ಈಗ ಜಾಗತಿಗ ಮಟ್ಟದಲ್ಲಿ ಗಮನ ಸೆಳೆಯುತ್ತಿದ್ದಾರೆ. ಹಾಗಾಗಿ ಮುಂದಿನ ಸಿನಿಮಾಗಳ ಮೇಲೆ ಇಡೀ ಜಗತ್ತು ಎದುರು ನೋಡುವಂತಾಗಿದೆ. 

click me!