
ಬಾಲಿವುಡ್ ಹಿರಿಯ ನಟಿ ನೀತು ಕಪೂರ್ (neetu kapoor) ಸದ್ಯ ದಾದಿ ಕಿ ಶಾದಿ ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಿದ್ದಾರೆ. 2020 ರಲ್ಲಿ ಪತಿ ರಿಷಿ ಕಪೂರ್ (rishi kapoor) ನಿಧನದ ನಂತ್ರ ನೀತು ಮತ್ತೆ ಸಿನಿಮಾ ಜಗತ್ತಿಗೆ ವಾಪಸ್ ಆಗಿದ್ದಾರೆ. ಇದೇ ವಿಚಾರಕ್ಕೆ ನೀತು ಕೆಲವರ ಅಪಹಾಸ್ಯಕ್ಕೆ ಗುರಿಯಾಗಿದ್ದರು. ಈ ಬಗ್ಗೆ ನೀತು ಪ್ರತಿಕ್ರಿಯೆ ನೀಡಿದ್ದಾರೆ. ರಿಷಿ ನಿಧನದ ನಂತ್ರ ಸಿನಿಮಾಕ್ಕೆ ವಾಪಸ್ ಆಗಲು ಕಾರಣವೇನು ಅನ್ನೋದನ್ನು ಹೇಳಿದ್ದಾರೆ.
ಸೋಹಾ ಅಲಿ ಖಾನ್ ಪಾಡ್ಕ್ಯಾಸ್ಟ್ನಲ್ಲಿ ನೀತು ಕಪೂರ್, ರಿಷಿ ಕಪೂರ್ ನಿಧನದ ನಂತ್ರ ಏನೆಲ್ಲ ಮಾನಸಿಕ ಸಮಸ್ಯೆ ಎದುರಿಸಬೇಕಾಯ್ತು ಎಂಬುದನ್ನು ಹೇಳಿದ್ದಾರೆ. ರಿಷಿ ಕಪೂರ್ ನಿಧನದ ನಂತ್ರ ನೀತು ಅವರಿಗೆ ನಿದ್ರೆ ಬರ್ತಿರಲಿಲ್ಲವಂತೆ. ಮನೆಯಲ್ಲಿ ಕಾಲ ಕಳೆಯೋದು ಕಷ್ಟವಾಗಿತ್ತಂತೆ. ಕುಡಿತ ಹೆಚ್ಚಾಯ್ತು. ಮದ್ಯಪಾನ ಮಾಡ್ದೆ ನಿದ್ರೆ ಬರ್ತಿರಲಿಲ್ಲ. ನೋವು, ಚಟದಿಂದ ಹೊರಗೆ ಬರಲು ಕೆಲ್ಸ ಅನಿವಾರ್ಯವಾಯ್ತು ಎಂದು ನೀತು ಕಪೂರ್ ಹೇಳಿದ್ದಾರೆ.
ಡೀಪ್‌ಫೇಕ್ ವಿಡಿಯೋ ವೈರಲ್ ಆದ್ಮೇಲೆ ಏನು ಮಾಡಬೇಕು? ಹರ್ಷಿಕಾ-ತನಿಶಾ ಕೊಟ್ಟ ಸಲಹೆ ವೈರಲ್
ರಿಷಿ ಕಪೂರ್ ನಿಧನದ ನಂತ್ರ ಮೂರ್ನಾಲ್ಕು ತಿಂಗಳು ನನಗೆ ನಿದ್ರೆ ಬರ್ತಿರಲಿಲ್ಲ. ಆರಂಭದಲ್ಲಿ ನಿದ್ರೆಗೆಡುತ್ತಿದ್ದೆ. ನಂತ್ರ ನಿದ್ರೆಗಾಗಿ ಕುಡಿತ ಕಲಿತೆ. ಕುಡಿಯದೆ ನಿದ್ರೆ ಬರ್ತಾ ಇರಲಿಲ್ಲ. ಆರೋಗ್ಯದ ಬಗ್ಗೆ ಕಾಳಜಿ ಹೊಂದಿರುವ ನನಗೆ ಇದು ಇಷ್ಟವಾಗ್ಲಿಲ್ಲ. ಈ ಚಟದಿಂದ ಹೊರಗೆ ಬರಲು ನಿರ್ಧರಿಸಿದೆ. ಡಾಕ್ಟರ್ ಗೆ ಕಾಲ್ ಮಾಡಿ, ನನ್ನ ಸ್ಥಿತಿ ವಿವರಿಸಿದ್ದಲ್ಲದೆ ಅದ್ರಿಂದ ಹೊರಗೆ ಬರಲು ಸಂಪೂರ್ಣ ಸಿದ್ಧತೆ ನಡೆಸಿದ್ದೆ ಎಂದು ನೀತು ಕಪೂರ್ ಹೇಳಿದ್ದಾರೆ.
ಡಾಕ್ಟರ್ ರೀತು ಮನೆಗೆ ಪ್ರತಿ ದಿನ ಬರ್ತಿದ್ದರು. ನಿದ್ರೆ ಇಂಜೆಕ್ಷನ್ ನೀಡಿ, ನಿದ್ರೆ ಬರುವವರೆಗೆ ಕಾಯ್ತಿದ್ದರು. ಸುಮಾರು ಹತ್ತು ದಿನಗಳ ಕಾಲ ಇದು ನಡೆದಿತ್ತು. ಆ ನಂತ್ರ ನೀತು, ನಿದ್ರೆ ಇಂಜೆಕ್ಷನ್ ತೆಗೆದುಕೊಳ್ಳದಿರು ನಿರ್ಧಾರ ಮಾಡಿದ್ದರು. ಸಮಯದಲ್ಲಿ ಸಾಕಷ್ಟು ಭಯ ನನ್ನನ್ನು ಕಾಡಿತ್ತು ಎಂದು ನೀತು ಹೇಳಿದ್ದಾರೆ.
Upendra Movie: ಆಗ ಇದೊಂದು ಹುಚ್ಚು ಸಿನಿಮಾ ಅಂದ್ಕೊಂಡಿದ್ವಿ: ಆದ್ರೆ ಇದರೊಳಗಿನ ಲೈಫ್ ಲೆಸನ್ ಗೊತ್ತಾ?
ರಿಷಿ ಕಪೂರ್ ನಿಧನದ ನಂತ್ರ ನೀತು ಕೆಲ್ಸಕ್ಕೆ ಬರ್ತಿದ್ದಂತೆ ಸಾಕಷ್ಟು ಟ್ರೋಲ್ ಆಗಿದ್ರು. ಪತಿ ಸಾಯ್ತಿದ್ದಂತೆ ಪತ್ನಿ ಮನೆಯಿಂದ ಹೊರಗೆ ಬಂದು ಕೆಲ್ಸ ಶುರು ಮಾಡಿದ್ದಾರೆ ಅಂತ ಜನರು ನಾನಾ ರೀತಿ ಮಾತನಾಡಿದ್ದರು. ಆದ್ರೆ ಜನರಿಗೆ ನನ್ನ ಸ್ಥಿತಿ ಗೊತ್ತಿರಲಿಲ್ಲ. ನಾನು ಇಷ್ಟದಿಂದ ಬಂದಿದ್ದಲ್ಲ, ಅನಿವಾರ್ಯ, ಆತ್ಮವಿಶ್ವಾಸ ಮರಳಿಪಡೆಯಲು ಸಿನಿಮಾ ರಂಗಕ್ಕೆ ಕಾಲಿಟ್ಟಿದ್ದೆ ಎಂದು ನೀತು ಕಪೂರ್ ಹೇಳಿದ್ದಾರೆ.
ಸಿನಿಮಾ, ಶೂಟಿಂಗ್ ನಲ್ಲಿ ನನ್ನನ್ನು ನಾನು ತೊಡಗಿಸಿಕೊಂಡ್ಮೇಲೆ ನನ್ನ ಆಲೋಚನೆ ಬದಲಾಯ್ತು. ಒಂಟಿತನ ದೂರವಾಯ್ತು. ಆತ್ಮವಿಶ್ವಾಸ ಹೆಚ್ಚಾಯ್ತು. ಮಾಣಸಿಕ ತೊಳಲಾಟ, ನಿದ್ರಾಹೀನತೆಯಿಂದ ನಾನು ಸಂಪೂರ್ಣ ಹೊರಗೆ ಬಂದಿದ್ದೇನೆ ಎಂದು ನೀತು ಕಪೂರ್ ಹೇಳಿದ್ದಾರೆ. ಜನರು ನಮ್ಮ ಸ್ಥಿತಿ ತಿಳಿಯದೆ ಟ್ರೋಲ್ ಮಾಡ್ತಾರೆ. ಅವರ ಟ್ರೋಲ್ ನನಗೆ ಸಾಕಷ್ಟು ನೋವು ನೀಡಿದ್ರೂ ನಾನದನ್ನು ಗಂಭೀರವಾಗಿ ಪರಿಗಣಿಸಲಿಲ್ಲ ಅಂತ ನೀತು ಕಪೂರ್ ಹೇಳಿದ್ದಾರೆ.
ರಿಷಿ ಕಪೂರ್ ನಿಧನ
ರಿಷಿ ಕಪೂರ್ 2020 ರಲ್ಲಿ ಇಹಲೋಕ ತ್ಯಜಿಸಿದ್ದಾರೆ. 2018 ರಲ್ಲಿ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. ನ್ಯೂಯಾರ್ಕ್ನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಒಂದು ವರ್ಷದ ಚಿಕಿತ್ಸೆಯ ನಂತರ, ರಿಷಿ ಕಪೂರ್ ಚೇತರಿಸಿಕೊಂಡಿದ್ದರು. ಆದ್ರೆ 2020 ರಲ್ಲಿ ಅವರನ್ನು ಉಳಿಸಿಕೊಳ್ಳಲಾಗಲಿಲ್ಲ. ಏಪ್ರಿಲ್ 29, 2020 ರಂದು ರಿಷಿ ಕಪೂರ್ ಗೆ ಉಸಿರಾಟದ ಸಮಸ್ಯೆ ಕಾಡಿತ್ತು. ಏಪ್ರಿಲ್ 30ರಂದು ಇಹಲೋಕ ತ್ಯಜಿಸಿದ್ರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.