ಹಣವೇ ಸರ್ವಸ್ವ, ಇದೇ ಬದುಕು ಎನ್ನೋದೇ ಸತ್ಯ- ಮಕ್ಕಳಿಗೂ ಇದನ್ನೇ ಹೇಳಿಕೊಡಿ ಎಂದ ನಟಿ ನೀನಾ ಗುಪ್ತಾ!

By Suchethana D  |  First Published Nov 23, 2024, 6:02 PM IST

ಹಣವೇ ಸರ್ವಸ್ವ ಎನ್ನೋದೇ ಸತ್ಯ- ಮಕ್ಕಳಿಗೂ ಇದನ್ನು ತಿಳಿಸಿ ಎಂದಿದ್ದಾರೆ ನಟಿ ನೀನಾ ಗುಪ್ತಾ. ಇವರ ಈ ಹೇಳಿಕೆ ವಿರುದ್ಧ ಪರ- ವಿರೋಧ ಚರ್ಚೆ ಶುರುವಾಗಿದೆ. 
 


ವಯಸ್ಸು 65 ಆದ್ರೂ ಸಕತ್‌ ಆಕ್ಟೀವ್‌ ಆಗಿದ್ದಾರೆ ಬಾಲಿವುಡ್‌ ನಟಿ ನೀನಾ ಗುಪ್ತಾ. ಕೆಲ ದಶಕಗಳವರೆಗೆ ಚಿತ್ರರಂಗವನ್ನು ಆಳಿರುವ ಈ ನಟಿ ಹಲವಾರು ರೀತಿಯ ಪಾತ್ರಗಳನ್ನು ಮಾಡಿದ್ದಾರೆ. ತಮ್ಮ ವೃತ್ತಿಜೀವನದ ಆರಂಭಿಕ ದಿನಗಳಲ್ಲಿ ಮುಂಬೈಗೆ ಹೋದಾಗ, ಹಣ ಸಂಪಾದಿಸಲು ತಾನು ಬಯಸದ ಅನೇಕ ಪಾತ್ರಗಳನ್ನು ಮಾಡಬೇಕಾಯಿತು, ಅಶ್ಲೀಲ ಚಿತ್ರಗಳನ್ನೂ ಒಪ್ಪಿಕೊಳ್ಳಬೇಕಾಯಿತು ಎಂದು ಈ ಹಿಂದೆ ಹೇಳಿದ್ದರು. ಅಲ್ಲಿಂದ ಶುರುವಾದ ಹಣದ ಬಗೆಗಿನ ಅವರ ಅಭಿಪ್ರಾಯ ಇಂದು ಕೋಟ್ಯಧಿಪತಿಯಾದರೂ ನಿಂತಿಲ್ಲ. ಇದೀಗ ನಟಿ, ಕರೀನಾ ಕಪೂರ್‍‌ ಜೊತೆಗಿನ ಚಾಟ್‌ ಶೋನಲ್ಲಿ ಹಣದ ಬಗ್ಗೆ ಮಾತನಾಡಿದ್ದಾರೆ. ಹಣ ಎಂದರೆ ತಮ್ಮ ದೃಷ್ಟಿಯಲ್ಲಿ ಏನು ಎಂಬುದನ್ನು ಹೇಳಿದ್ದಾರೆ.

ಕೆಲ ದಿನಗಳ ಹಿಂದೆ ನಟಿ ಉರ್ಫಿ ಜಾವೇದ್‌ ಹೇಳಿರುವ ಮಾತನ್ನೇ ನೀನಾ ಗುಪ್ತಾ ಕೂಡ ಪುನರುಚ್ಚರಿಸಿದ್ದಾರೆ. ಇವರ ಮಾತಿಗೆ ಕರೀನಾ ಕಪೂರ್ ಕೂಡ ಚಪ್ಪಾಳೆ ತಟ್ಟಿದ್ದು ಸಹಮತ ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ ನೀನಾ ಅವರು  ಈ ಶೋನಲ್ಲಿ ಹಣಕಾಸಿನ ಸ್ವಾತಂತ್ರ್ಯದ ಮಹತ್ವವನ್ನು ತಿಳಿಸಿದ್ದಾರೆ. ಹಣವೇ ಸರ್ವಸ್ವ.  ಹಣವು ಎಲ್ಲವನ್ನೂ ಖರೀದಿಸಬಹುದು, ಪ್ರೀತಿ ಕೂಡ ಎಂದು ನಟಿ ಹೇಳಿದ್ದಾರೆ. ಹಣದಿಂದ ಸಂತೋಷ ಖರೀದಿಸಲು ಸಾಧ್ಯವಿಲ್ಲ ಎನ್ನುವುದು ತಪ್ಪು ಮಾತು. ಈ ಸುಳ್ಳನ್ನು ಮಕ್ಕಳಿಗೆ ಕಲಿಸಬೇಡಿ. ಹಣವೇ ಸರ್ವಸ್ವ ಎನ್ನುವ ಸತ್ಯವನ್ನು ಕಲಿಸಿ, ಹಣ ಒಂದಿದ್ದರೆ ಜೀವನದಲ್ಲಿ ಏನುಬೇಕಾದರೂ ಮಾಡಬಹುದು. ಒಟ್ಟಿನಲ್ಲಿ ಹಣವೇ ಪ್ರಪಂಚ, ಹಣವೇ ಸರ್ವಸ್ವ ಎಂದು ನಟಿ ನೀನಾ ಗುಪ್ತಾ ಹೇಳಿದ್ದು, ಇದು ನಿಜವಾದ ಮಾತು ಎಂದು ಕರೀನಾ ಕಪೂರ್‍‌ ಸಂತೋಷದಿಂದ ಸಮ್ಮತಿ ಸೂಚಿಸಿದ್ದಾರೆ.

Tap to resize

Latest Videos

ಹಣವೇ ಜೀವನ, ಹಣವೇ ಸರ್ವಸ್ವ, ಹಣವೊಂದಿದ್ದರೆ... ಎನ್ನುತ್ತಲೇ ಬಟ್ಟೆಯ ಗುಟ್ಟನ್ನೂ ರಟ್ಟು ಮಾಡಿದ ಉರ್ಫಿ
 
"ನಾನು ಯಾವಾಗಲೂ ನನ್ನ ಹಣದ ಬಗ್ಗೆ ಹೆಚ್ಚು ನಿರ್ದಿಷ್ಟವಾಗಿರುತ್ತೇನೆ. ಏಕೆಂದರೆ ಹಣದಿಂದ ಎಲ್ಲವನ್ನೂ ಖರೀದಿಸಲು ಸಾಧ್ಯವಿಲ್ಲ ಎಂದು ನಮಗೆ ಕಲಿಸಲಾಗಿದೆ. ಆದರೆ ಅದು ಶುದ್ಧ ಸುಳ್ಳು. ನಾನು ನನ್ನ ಇಡೀ ಜೀವಮಾನದಲ್ಲಿ ಕಲಿತದ್ದು ಏನೆಂದರೆ,  ಹಣದಿಂದ ಎಲ್ಲವನ್ನೂ ಖರೀದಿಸಬಹುದು. ಹಣವು ನಿಮ್ಮ ಪ್ರೀತಿಯನ್ನು ಸಹ ಖರೀದಿಸಬಹುದು, ಆದ್ದರಿಂದ ಮಕ್ಕಳಿಗೆ ತಪ್ಪು ವಿಷಯಗಳನ್ನು ಕಲಿಸಬೇಡಿ ಎಂದಿದ್ದಾರೆ ನಟಿ. ಆಗ ಕರೀನಾ ಕಪೂರ್‍‌ ಶ್ಲಾಘನೆ ವ್ಯಕ್ತಪಡಿಸುತ್ತಾ,  ಇದನ್ನು ನಾನು ಕರಿಷ್ಮಾ ಕಪೂರ್‍‌  ಸೈಫ್ ಅಲಿ ಖಾನ್‌ಗೂ ಹೇಳುತ್ತೇನೆ. ನನ್ನ ಮಕ್ಕಳಿಗೂ ತಿಳಿಸುತ್ತೇನೆ ಎಂದರು.

ಇನ್ನು ನಟಿಯ ಪರ್ಸನಲ್‌ ಲೈಫ್‌ ಬಗ್ಗೆ ಬರುವುದಾದರೆ,  ದೆಹಲಿ ಮೂಲದ ಚಾರ್ಟರ್ಡ್ ಅಕೌಂಟೆಂಟ್ ವಿವೇಕ್ ಮೆಹ್ರಾ ಅವರನ್ನು ವಿವಾಹವಾಗಿದ್ದಾರೆ ನೀನಾ. ಈ ಸಂದರ್ಭದಲ್ಲಿ ಹಣದ ಬಗ್ಗೆ ಹೇಳಿದ ಅವರು, ಹೆಣ್ಣುಮಕ್ಕಳಿಗೆ ಹಣದ ಸ್ವಾತಂತ್ರ ಇರಬೇಕು. ನಮ್ಮದೇ ಆದ ಆರ್ಥಿಕ ಭದ್ರತೆಯನ್ನು ಹೊಂದಬೇಕು.  ನನಗೆ ನನ್ನ ಹಣ ಬೇಕು; ಅದು ನನಗೆ ಬಹಳ ಮುಖ್ಯ. ನನ್ನ ಪತಿ ತುಂಬಾ ಒಳ್ಳೆಯವರಾದರೂ, ಅವರು ನನಗೆ ಎಷ್ಟೆ ದುಡ್ಡು ಕೊಟ್ಟರೂ, ನನಗಾಗಿ ಎಲ್ಲವನ್ನೂ ಮಾಡಿದರೂ ನನಗೆ ನನ್ನ ಹಣವೇ ಮುಖ್ಯ.  ನಾನು ಪತಿಯನ್ನು ನಂಬುತ್ತೇನೆ, ಅವರ ಮೇಲೆ ಸಂಪೂರ್ಣ ವಿಶ್ವಾಸವೂ ಇದೆ. ಹಾಗೆಂದು  ಬ್ಯಾಂಕ್‌ನಲ್ಲಿರುವ ನನ್ನ ಹಣ ನನಗೇ ಸಲ್ಲಬೇಕು. ನನ್ನ ಪತಿ ನನಗಾಗಿ ಬ್ಯಾಂಕ್‌ನಲ್ಲಿ  ಎಫ್‌ಡಿ ಮಾಡುವ ಅಗತ್ಯವಿಲ್ಲ ಎಂದಿರುವ ನಟಿ,  ಎಫ್‌ಡಿ ಇಡುವುದು  ಅತ್ಯಂತ ಮೂರ್ಖತನವಾಗಿದೆ. ಆದರೆ ಹಣ ನಮ್ಮ ಬಳಿ ಇದ್ದರೆ, ಶಾಂತಿ, ನೆಮ್ಮದಿ ಎಲ್ಲವೂಸಿಗುತ್ತದೆ ಎಂದಿದ್ದಾರೆ. ಆದರೆ ಇದರ ಬಗ್ಗೆ ಪರ-ವಿರೋಧದ ನಿಲುವು ವ್ಯಕ್ತವಾಗುತ್ತಿದೆ. ಕೆಲವರು ನಟಿಯ ಮಾತನ್ನು ಒಪ್ಪಿಕೊಂಡಿದ್ದರೆ, ಮತ್ತೆ ಕೆಲವರು ಇದನ್ನು ಒಪ್ಪಲಿಲ್ಲ. ಒಮ್ಮೆ ಅನಾರೋಗ್ಯ ಪೀಡಿತರಾಗಿ ವಾಸಿಯಾಗದ ಖಾಯಿಲೆ ಬಂದರೆ ಹಣ ಮುಖ್ಯವೋ, ಆರೋಗ್ಯ ಮುಖ್ಯವೋ ಎನ್ನುವ ಅರಿವಾಗುತ್ತದೆ, ಹಣ ಬಲದಿಂದ ಎಲ್ಲವೂ ಸಾಧ್ಯ ಎನ್ನುವುದು ಸರಿಯಲ್ಲ ಎಂದು ಮತ್ತೆ ಕೆಲವರು ಹೇಳಿದ್ದಾರೆ. 

ಪತ್ನಿಯನ್ನು ಪ್ರವಾಸಕ್ಕೆ ಕರೆದೊಯ್ದು ಶೇಖ್‌ಗೆ ಮಾರಿ ತಲಾಖ್‌ ನೀಡಿದ ಭೂಪ! ಯುವತಿಯ ಕಣ್ಣೀರ ಕಥೆ ಕೇಳಿ..

click me!