ನಯನತಾರಾ- ವಿಘ್ನೇಶ್‌ ದಾಂಪತ್ಯಕ್ಕೆ ತೆರೆ ಬಿತ್ತಾ? ಇನ್‌ಸ್ಟಾಗ್ರಾಮ್‌ನಲ್ಲಿ ಅನ್‌ಫಾಲೋ, ಭಾವುಕ ಪೋಸ್ಟ್‌!

By Suvarna News  |  First Published Mar 2, 2024, 2:58 PM IST

ನಯನತಾರಾ ಮತ್ತು ವಿಘ್ನೇಶ್‌ ದಾಂಪತ್ಯಕ್ಕೆ ತೆರೆ ಬಿತ್ತಾ ಎನ್ನುವ ಪ್ರಶ್ನೆ ಕಾಡುತ್ತಿದೆ. ಇದಕ್ಕೆ ಕಾರಣ ನಟಿ ಪತಿಯನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಅನ್‌ಫಾಲೋ ಮಾಡಿ ಭಾವುಕ ಪೋಸ್ಟ್‌ ಹಾಕಿದ್ದಾರೆ.
 


ಸೌತ್ ಸಿನಿಮಾ ಇಂಡಸ್ಟ್ರಿಯ ಲೇಡಿ ಸೂಪರ್ ಸ್ಟಾರ್ ನಯನತಾರಾ ತಮಿಳು, ತೆಲುಗು, ಕನ್ನಡ ಹಾಗೂ ಹಿಂದಿಯಲ್ಲೂ ಅಭಿನಯಿಸಿ ಸೈಎನಿಸಿಕೊಂಡಿದ್ದಾರೆ. ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ನಯನತಾರಾ ಕೂಡ ಒಬ್ಬರು. ಶಾರುಖ್ ಖಾನ್ ಚಿತ್ರ ಜವಾನ್ ಸೂಪರ್ ಡೂಪರ್ ಯಶಸ್ಸಿನ ನಂತರ ನಯನತಾರಾಗೆ ಭಾರಿ ಬೇಡಿಕೆ ಬರುತ್ತಿದೆ.  ಇತ್ತೀಚೆಗಷ್ಟೇ ನಟಿ ಕಾಸ್ಟಿಂಗ್​ ಕೌಚ್​ ಕುರಿತು ಮಾತನಾಡಿದ್ದರು. ನನಗೂ ಆರಂಭದ ದಿನಗಳಲ್ಲಿ ಇದರ ಅನುಭವ ಆಗಿದೆ. ನನ್ನನ್ನೂ  ಕೆಲವರು ಕಮೀಟ್‌ಮೆಂಟ್ ಬಗ್ಗೆ ಕೇಳಿ ಏನೇನೋ ಮಾತನಾಡಿದ್ದಾರೆ. ಆದರೆ ನಾನು  ಇಂಡಸ್ಟ್ರಿಗೆ ಟ್ಯಾಲೆಂಟ್ ನಂಬಿ ಬಂದವಳು. ಇಂಥ ಘಟನೆಗಳನ್ನು ನನ್ನ ಹತ್ತಿರ ಸುಳಿಗೊಡಲಿಲ್ಲ.  ಬರೀ ಟ್ಯಾಲೆಂಟ್‌ನಿಂದಲೇ ಈ ಮಟ್ಟಕ್ಕೇರಿದ್ದೀನಿ. ಆದ್ದರಿಂದ ಇಂಥ ಪರಿಸ್ಥಿತಿ ಎದುರಿಸುವ ಕಲೆ ನಟಿಯರಿಗೆ ಗೊತ್ತಿರಬೇಕಷ್ಟೇ ಎಂದಿದ್ದರು. 

ಅಷ್ಟಕ್ಕೂ ನಯನತಾರಾ,  ಸಿನಿಮಾದ ಹೊರತಾಗಿ ಕೆಲವೊಂದು ಬ್ಯುಸಿನೆಸ್ ಮೂಲಕವೂ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ. ತಮ್ಮ ವೃತ್ತಿಜೀವನದ ಬಿಡುವಿಲ್ಲದ ಸಮಯದ ನಡುವೆಯೂ ವ್ಯಾಪಾರದ ಮೇಲೆ ಗಮನ ಕೊಡುವ ನಯನತಾರಾಗೆ, ಅವರ ಪತಿ ವಿಘ್ನೇಶ್ ಶಿವನ್ ಕೂಡ ಬೆಂಬಲ ನೀಡುತ್ತಾರೆ ಎನ್ನುತ್ತಲೇ ಇದ್ದರು. ಇನ್ನು ಸಿನಿಮಾ ಮತ್ತು ವ್ಯಾಪಾರದಿಂದ ನಯನತಾರಾ ಕೋಟಿಗಟ್ಟಲೆ ಆದಾಯ ಹೊಂದಿದ್ದಾರೆ. 2022ರಲ್ಲಿ ನಟಿ ನಯನತಾರಾ, ನಿರ್ದೇಶಕ ವಿಘ್ನೇಶ್ ಶಿವನ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದ್ವೆಯಾದ ಬೆನ್ನಲ್ಲೇ  ಅವಳಿ ಮಕ್ಕಳಿಗೆ ಪೋಷಕರಾದರು. ಬಾಡಿಗೆ ತಾಯ್ತನದ ಮೂಲಕ ನಯನತಾರಾ ಇಬ್ಬರು ಗಂಡು ಮಕ್ಕಳನ್ನು ಹೊಂದಿದರು.

Tap to resize

Latest Videos

100 ಕೋಟಿ ಕೊಟ್ಟರೂ ಈ ನಟನ ಜೊತೆ ನಟಿಸಿಲ್ಲ ಎನ್ನುತ್ತಲೇ ಭಾರಿ ಆಫರ್​ ರಿಜೆಕ್ಟ್​ ಮಾಡಿದ ನಯನತಾರಾ!

ಆದರೆ ಈಗ ಅದೇನಾಗಿದ್ಯೋ ತಿಳಿಯುತ್ತಿಲ್ಲ. ನಯನತಾರಾ- ವಿಘ್ನೇಶ್‌ ದಂಪತಿ ಡಿವೋರ್ಸ್‌ ಪಡೆದುಕೊಳ್ತಿದ್ದಾರಾ? ಅವರ ನಡುವೆ ಬಿರುಕು ಉಂಟಾಗಿದ್ಯಾ ಎಂದೆಲ್ಲಾ ಸುದ್ದಿಗಳು ಹರಿದಾಡುತ್ತಿವೆ. ಇದಕ್ಕೆ ಕಾರಣ, ನಯನತಾರಾ ಅವರು, ಪತಿ ವಿಘ್ನೇಶ್‌ ಅವರನ್ನು ಇನ್‌ಸ್ಟಾಗ್ರಾಮದಲ್ಲಿ ಅನ್‌ಫಾಲೋ ಮಾಡಿದ್ದಾರೆ. ಇಷ್ಟೇ ಆಗಿದ್ದರೂ ಪರವಾಗಿರಲಿಲ್ಲ. ಕಣ್ಣಲ್ಲಿ ನೀರು ಬರುತ್ತಿದ್ದರೂ ‘ಇದು ನನಗೆ ಸಿಕ್ಕಿತು’ ಎಂದು ಬರೆದುಕೊಂಡಿದ್ದು ಅವರಿಗೆ ಏನು ಆಗಿದ್ಯೋ ಎಂದು ಅಭಿಮಾನಿಗಳು ಶಾಕ್‌ ಆಗಿದ್ದಾರೆ.

ಅಷ್ಟಕ್ಕೂ ನಯನತಾರಾ ಅವರು,  ‘ಜವಾನ್’ ಚಿತ್ರದ ಸಮಯದಲ್ಲಿ ಇನ್‌ಸ್ಟಾಗ್ರಾಮ್‌ ಖಾತೆ ತೆರೆದಿದ್ದರು. ಅಲ್ಲಿಯವರೆಗೂ ಪತಿ ವಿಘ್ನೇಶ್ ಅವರ ಇನ್‌ಸ್ಟಾ ಪುಟದಿಂದಲೇ ಮಾಹಿತಿ ಶೇರ್‌ ಮಾಡುತ್ತಿದ್ದರು. ಆದರೆ ಇದೀಗ ಏಕಾಏಕಿ ಮೆಸೇಜ್‌ ಶೇರ್‌ ಮಾಡಿ ಪತಿಯನ್ನು ಅನ್‌ಫಾಲೋ ಮಾಡಿದ್ದಾರೆ.  ನಯನತಾರಾ ಅವರನ್ನು ಕೆಲವು ಸಮಸ್ಯೆಗಳು ಕಾಡುತ್ತಿದೆ ಎನ್ನಲಾಗಿದೆ. ಅಂದಹಾಗೆ ಮಕ್ಕಳ ಹೆಸರು  ಹೆಸರು ಉಯಿರ್ ಮತ್ತು ಉಲಕಮ್. ಇಬ್ಬರಿಗೂ ಒಂದೂವರೆ ವರ್ಷವಾಗಿದೆ.  

ಒಳ್ಳೆ ನಟಿ ಆಗ್ಬೇಕು ಎಂದ್ರೆ ಸ್ವಲ್ಪ ಅಡ್ಜಸ್ಟ್‌ ಮಾಡ್ಕೋ ಎಂದ್ರು... ಆದ್ರೆ... ಕಾಸ್ಟಿಂಗ್‌ ಕೌಚ್‌ ಅನುಭವ ಹೇಳಿದ ನಯನತಾರಾ
 

click me!