ಮ್ಯಾಗಝಿನ್ ಮಾಡೆಲ್‌ಗಳಂತೆ ಇರಬೇಕಿಲ್ಲ, ನಾನೂ ಹಾಗೆ ಇಲ್ಲ; ಪ್ರಿಯಾಂಕಾ ಮಾತಿಗೆ ಬಾಲಿವುಡ್ ಶೇಕ್!

By Shriram BhatFirst Published Mar 1, 2024, 9:41 PM IST
Highlights

ನಾನು ನನ್ನ ಜೀವನದ ಬಹುಪಾಲು ಸಮಯವನ್ನು 'ಬೇರೆಯವರೊಂದಿಗೆ ನನ್ನನ್ನು ಹೋಲಿಸುವ, ಅವಮಾನಿಸುವ, ಝೀರೋ ಸೈಜ್ ಸೈಜ್‌ ಮೆಂಟಾಲಿಟಿಯ ಸಮಾಜದ ಮಧ್ಯೆಯೇ ಕಳೆದಿದ್ದೇನೆ. ನಾನು ಇನ್ಯಾಯರದೋ ತರಹ ಇರಬೇಕಾಗಿತ್ತು..

ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಹೇಳಿದ್ದಾರೆ.. 'ಸದ್ಯದ ಟ್ರೆಂಡ್ ಹೇಗಿದೆ ಎಂದರೆ 'ಯಾರಾದರೊಬ್ಬರು ಮಹಿಳೆಯನ್ನು ನೋಡಿದರೆ '36-24-36' ಸೈಜ್‌ ಇರ್ಬೇಕು ಎಂದೆಲ್ಲಾ ಅಪೇಕ್ಷಿಸುತ್ತಾರೆ. ಅದು ಹೆಣ್ಣಿನ ಸೌಂದರ್ಯವನ್ನು ಅಳೆಯುವ ಮಾನದಂಡವಾಗಿದೆ. ಮ್ಯಾಗಝಿನ್‌ ಫೋಟೋದಲ್ಲಿ ಇರುವ ಮಾಡೆಲ್‌ಗಳಂತೆ, ಪ್ರಪಂಚದಲ್ಲಿ ಯಾರೋ ಒಬ್ಬರು ಇರುವಂತೆ ಎಲ್ಲರೂ ಇರಬೇಕೆಂದು ಬಯಸುವುದು ಮೂರ್ಖತನದ ಪರಮಾವಧಿ ಎನ್ನಬಹುದು. ನಾನೇನೂ ಮ್ಯಾಗಝಿನ್‌ನಲ್ಲಿನ ಮಾಡೆಲ್‌ಗಳಂತೆ ಇಲ್ಲ. ಸೌಂದರ್ಯದ ಮಾನದಂಡವೇ ತಪ್ಪಾಗಿದೆ. ಅದು ಇರಬೇಕಾಗಿದ್ದು ಹಾಗೆ ಅಲ್ಲವೇ ಅಲ್ಲ.

Latest Videos

ನೀವು ನಿಮ್ಮ ಬೆಸ್ಟ್‌ ವರ್ಷನ್ ಆಗಿದ್ದರೆ ಸಾಕು. ಆರೋಗ್ಯಪೂರ್ಣವಾಗಿ, ಚೈತನ್ಯಪೂರ್ಣವಾಗಿ, ನೀವು ಮಾಡುವ ಕೆಲಸವನ್ನು ಗಮನವಿಟ್ಟು ಮಾಡುವಂತಿದ್ದರೆ ಸಾಕು, ಅದೇ ಸೌಂದರ್ಯ. ನಿಮ್ಮ ಆಂತರಿಕ ಶಕ್ತಿಗಳು ಶಕ್ತಿಯುತವಾಗಿದ್ದರೆ ಬಾಹ್ಯ ಸೌಂದರ್ಯ ಸಹಜ ಎನ್ನುವಂತೆ ಇರುತ್ತವೆ. ನಿಮಗೆ ಅನಾವಶ್ಯಕ ದಣಿವಾಗದಿದ್ದರೆ ಸಾಕು, ನಿಮಗೆ ಅನಗತ್ಯ ಆತಂಕ, ಖಿನ್ನತೆ ಕಾಡದಿದ್ದರೆ ಸಾಕು. ನೀವು ಬೇರೆ ಯಾರಂತೆಯೋ ಇರಬೇಕಾದ ಅಗತ್ಯವಿಲ್ಲ. ನನಗೆ ಇಷ್ಟು ವರ್ಷದ ಬಳಿಕ ಈ ಸಂಗತಿ ಅರ್ಥವಾಗಿದೆ. 

ಸೋಷಿಯಲ್ ಮೀಡಿಯಾದಲ್ಲಿ ದೀಪಿಕಾ ದಾಸ್ ಮದುವೆ ಸುದ್ದಿ ವೈರಲ್; ಕಾಮೆಂಟ್ ಸೆಕ್ಷನ್ ಆಫ್ ಮಾಡಿದ್ದೇಕೆ?

ನಾನು ನನ್ನ ಜೀವನದ ಬಹುಪಾಲು ಸಮಯವನ್ನು 'ಬೇರೆಯವರೊಂದಿಗೆ ನನ್ನನ್ನು ಹೋಲಿಸುವ, ಅವಮಾನಿಸುವ, ಝೀರೋ ಸೈಜ್ ಸೈಜ್‌ ಮೆಂಟಾಲಿಟಿಯ ಸಮಾಜದ ಮಧ್ಯೆಯೇ ಕಳೆದಿದ್ದೇನೆ. ನಾನು ಇನ್ಯಾಯರದೋ ತರಹ ಇರಬೇಕಾಗಿತ್ತು ಎಂದು ಚಿಂತಿಸಿ ಖಿನ್ನತೆಗೆ ಜಾರಿಬೇಕಾದ ಉದ್ಯಮದಲ್ಲಿ ಕಾಲ ಕಳೆದು ಬಂದಿದ್ದೇನೆ.

ಕಪ್ಪಗಿದ್ದರೆ ಕಪ್ಪು ಎಂದು, ದಪ್ಪಗಿದ್ದರೆ ದಪ್ಪ ಎಂದು ಸದಾ ಕಾಲ ನಾವು ನಾವಾಗಿರಬಾರದು ಎಂದು ಹೇಳುತ್ತಲೇ ಇದ್ದ ಜಾಗದಿಂದ ಬಂದಿದ್ದೇನೆ. ಲೈಫ್‌ನಲ್ಲಿ ಒಂದು ಸಂಗತಿ ಅರ್ಥ ಮಾಡಿಕೊಳ್ಳಿ, 'ಜಗತ್ತಿನಲ್ಲಿ ನಮ್ಮಂತೆ ಇನ್ನೊಬ್ಬರು ಇರುವುದಿಲ್ಲ. ನಾವೂ ಇನ್ನೊಬ್ಬರಂತೆ ಇರಬೇಕಾದ ಅಗತ್ಯವಿಲ್ಲ'. 

ಒಂದೇ ಫ್ರೇಮಲ್ಲಿ 80-90ರ ದಶಕದ ಹೀರೋಯಿನ್ಸ್, ನಿಮ್ಮ ನೆಚ್ಚಿನ ನಟಿ ಯಾರು?

ನಟಿ ಪ್ರಿಯಾಂಕಾ ಚೋಪ್ರಾ ಆಗಾಗ ತಮ್ಮ ಸಂದರ್ಶನಗಳಲ್ಲಿ ಹೇಳುತ್ತಲೇ ಇರುತ್ತಾರೆ. ಬಾಲಿವುಡ್‌ನಲ್ಲಿ ತಮಗಾದ  ಕಹಿ ಅನುಭವಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ತಾವು ಸ್ಟಾರ್ ನಟಿಯಾಗಿ ಬೆಳೆಯುವ ಮೊದಲು 'ಕಪ್ಪಗಿದ್ದೀಯಾ, ಸಿನಿಮಾಗೆ ಬರುವ ಮುಖವಲ್ಲ, ಹಾಗೆ ಹೀಗೆ ಎಂದು ಹೀಯಾಳಿಸಿದವರೇ ಹೆಚ್ಚು. ಅವರೆಲ್ಲ ಹೇಳಿದಂತೆ ನಾನು ಬದಲಾಗಬೇಕೆಂದು ಪ್ರಯತ್ನಪಟ್ಟು, ಅದು ಅಸಾಧ್ಯವಾದಾಗ ಅದೆಷ್ಟೋ ಅತ್ತಿದ್ದೇನೆ. ಜಗತ್ತಿನಲ್ಲಿ 'ನಾಯಿಗೆ ಒಂದು ಸ್ಥಾನ, ನವಿಲಿಗೆ ಇನ್ನೊಂದು ಸ್ಥಾನ ಇದ್ದೇ ಇದೆ. ಯಾರೂ ಯಾರ ಸ್ಥಾನಕ್ಕೂ ಬರಲಾಗುವುದಿಲ್ಲ, ಬರಬೇಕಾಗಿಯೂ ಇಲ್ಲ' ಎಂದಿದ್ದಾರೆ ನಟಿ ಪ್ರಿಯಾಂಕಾ ಚೋಪ್ರಾ. ಪ್ರಿಯಾಂಕಾ ಮಾತು ಕೇಳಿ ಹಲವರು ಮೆಚ್ಚುಗೆ ಸೂಚಿಸಿದ್ದಾರೆ. 

ಪ್ರಭಾಸ್‌ಗೆ ಶ್ರದ್ಧಾ ಕಪೂರ್‌ ಮೇಲೆ ಲವ್ ಆಗಿದ್ಯಾ; ಡೌಟ್‌ಗೆ ಸಾಕ್ಷಿ ಕೊಡ್ತೀವಿ ಅಂತಿದಾರಲ್ಲ ನೆಟ್ಟಿಗರು!

click me!