ನಟಿ ನಯನತಾರ ಹಾಗೂ ನಿರ್ದೇಶಕ ವಿಘ್ನೇಶ್ ಶಿವನ್ ಜೋಡಿ ಬಾಡಿಗೆ ತಾಯ್ತನದ ಮೂಲಕ ಅವಳಿ ಗಂಡು ಮಗು ಪಡೆದಿದ್ದಾರೆ. ಈ ಸಂಭ್ರಮನ್ನು ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡ ಬೆನ್ನಲ್ಲೇ ನಯನತಾರಾ ಜೋಡಿಗೆ ತನಿಖೆ ಸಂಕಷ್ಟ ಎದುರಾಗಿದೆ.
ಚೆನ್ನೈ(ಅ.10): ಸೌತ್ ಸ್ಟಾರ್ ನಯನತಾರಾ ಹಾಗೂ ವಿಘ್ನೇಶ್ ಶಿವನ್ ಜೋಡಿ ಮದುವೆಯ ದಿನದಿಂದ ಒಂದಲ್ಲ ಒಂದು ವಿವಾದ, ಸಂಕಷ್ಟಕ್ಕೆ ಸಿಲುಕುತ್ತಲೇ ಇದ್ದಾರೆ. ಇದೀಗ ಈ ಜೋಡಿ ಅತೀವ ಸಂತಸದಲ್ಲಿದೆ. ಆದರೆ ಈ ಸಂಭ್ರಮದ ನಗುವಿಗೆ ತಮಿಳುನಾಡು ಸರ್ಕಾರ ಬ್ರೇಕ್ ಹಾಕಿದೆ. ನಯನತಾರಾ ಹಾಗೂ ವಿಘ್ನೇಶ್ ಶಿವನ್ ಜೋಡಿ ಬಾಡಿಗೆ ತಾಯ್ತನದ ಮೂಲಕ ಅವಳಿ ಗಂಡು ಮಗು ಪಡೆದಿದ್ದಾರೆ. ಈ ಸಂತಸವನ್ನು ನಯನತಾರಾ ಜೋಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿತ್ತು. ಇದರ ಬೆನ್ನಲ್ಲೇ ಶುಭಾಶಯಗಳ ಮಹಾಪೂರವೇ ಹರಿದುಬಂದಿತ್ತು. ಮದುವೆಯಾದ ನಾಲ್ಕು ತಿಂಗಳಿಗೆ ಮಗು ಪಡೆದಿದ್ದರು. ಇದರ ಬೆನ್ನಲ್ಲೇ ಮತ್ತೊಂದು ವಿವಾದ ಹುಟ್ಟಿಕೊಂಡಿತ್ತು. ನಯನತಾರಾ ಜೋಡಿ ಬಾಡಿಗೆ ತಾಯ್ತನದ ಮೂಲಕ ಮಗು ಪಡೆಯುವಾಗ ಭಾರತೀಯ ಬಾಡಿಗೆ ತಾಯ್ತನದ ಕಾನೂನು ಉಲ್ಲಂಘಿಸಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿದೆ. ಇದರ ಬೆನ್ನಲ್ಲೇ ಇದೀಗ ತಮಿಳುನಾಡು ಸರ್ಕಾರ ನಯನತಾರಾ ಜೋಡಿಯ ಬಾಡಿಗೆ ತಾಯ್ತನದ ಕುರಿತು ತನಿಖೆಗೆ ಆದೇಶಿಸಿದೆ.
ಈ ಕುರಿತು ತಮಿಳುನಾಡು ಆರೋಗ್ಯ ಸಚಿವರು ಮಾಹಿತಿ ನೀಡಿದ್ದಾರೆ. ಭಾರತೀಯ ಬಾಡಿಗೆ ತಾಯ್ತನದ ನಿಯಮದ ಪ್ರಕಾರ 21 ವರ್ಷದಿಂದ 36 ವರ್ಷದೊಳಗಿನ ಮಹಿಳೆಯರು ಬಾಡಿಗೆ ತಾಯ್ತನ ಹೊಂದಲು ಅವಕಾಶವಿದೆ. ಆದರೆ ನಯನತಾರಾ ವಿಚಾರದಲ್ಲಿ ಕೆಲ ನಿಯಮ ಉಲ್ಲಂಘನೆಯಾಗಿರುವ ಕುರಿತು ಮಾಹಿತಿ ಲಭ್ಯವಾಗಿದೆ. ಈ ಕುರಿತು ಸರ್ಕಾರ ತನಿಖೆಗೆ ಆದೇಶಿಸಿದೆ ಎಂದು ಮಾ ಸುಬ್ರಮಣಿಯನ್ ಹೇಳಿದ್ದಾರೆ. ವೈದ್ಯಕೀಯ ಸೇವೆಗಳ ನಿರ್ದೇಶನಾಲಯ ಈ ತನಿಖೆ ನಡೆಸಲಿದೆ ಎಂದಿದ್ದಾರೆ.
ಮದುವೆಯಾದ 4 ತಿಂಗಳಿಗೆ ಮುದ್ದಾದ ಅವಳಿ ಗಂಡು ಮಗು ಸ್ವಾಗತಿಸಿದ ನಯನತಾರ ಜೋಡಿ!
ಭಾರತೀಯ ತಾಯ್ತನದ ನಿಯಮದ ಪ್ರಕಾರ, ವಾಣಿಜ್ಯ ಬಾಡಿಗೆ ತಾಯ್ತನಕ್ಕೆ ಅವಕಾಶವಿಲ್ಲ. ಅಂದರೆ ಸೆಲೆಬ್ರೆಟಿಗಳು, ಉದ್ಯಮಿಗಳು ಅಥವಾ ಯಾರೇ ಆದರೂ ಹಣ ನೀಡಿ ಬಾಡಿಗೆ ತಾಯ್ತನದ ಮಗು ಪಡೆಯಲು ಸಾಧ್ಯವಿಲ್ಲ. ಬಾಡಿಗೆ ತಾಯ್ತನದ ಮೂಲಕ ಮಗುವಿಗೆ ಜನ್ಮ ನೀಡುವ ಮಹಿಳೆ, ದಂಪತಿಗಳಿಂದ ಹಣ ಪಡೆಯುವಂತಿಲ್ಲ. ಈ ನಿಯವನ್ನು ನಯನತಾರಾ ಜೋಡಿ ಉಲ್ಲಂಘಿಸಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿದೆ. ವೈದ್ಯಕೀಯ ವೆಚ್ಚ, ವಿಮೆ, ಔಷಧಿ ವೆಚ್ಚ ಮಾತ್ರ ಭರಿಸಬೇಕು. ಇನ್ನುಳಿದಂತೆ ಯಾವುದೇ ಮೊತ್ತವನ್ನು ಬಾಡಿಗೆ ತಾಯ್ತನ ಮಹಿಳೆ ಪಡೆಯುವಂತಿಲ್ಲ. ದಂಪತಿಗಳು ನೀಡುವಂತಿಲ್ಲ. ಬಾಡಿಗೆ ತಾಯ್ತನದ ಹೊಸ ನೀತಿ ಜನವರಿ 25, 2022ರಿಂದ ಜಾರಿಗೆ ಬಂದಿದೆ.
ಇನ್ನು ನಿರ್ದಿಷ್ಟ ನಿಯಮಗಳನ್ನು ಪಾಲಿಸಬೇಕು. ಆದರೆ ನಯನತಾರಾ ಜೋಡಿ ನಿಯಮಗಳನ್ನು ಉಲ್ಲಂಘಿಸಿರುವುದಾಗಿ ಆರೋಪ ಕೇಳಿಬಂದಿದೆ. ಹೀಗಾಗಿ ತಮಿಳುನಾಡು ಸರ್ಕಾರ ತನಿಖೆಗೆ ಆದೇಶಿಸಿದೆ.
ಪ್ರೀ ರಿಲೀಸ್ ಕಾರ್ಯಕ್ರಮಕ್ಕೆ ಗೈರಾದ ನಯನತಾರಾ
ಕಳೆದ ಜೂನ್ 9ರಂದಷ್ಟೇ ಮದುವೆ ಆಗಿದ್ದ ಖ್ಯಾತ ತಮಿಳು ನಟಿ ನಯತಾರಾ ಹಾಗೂ ಚಿತ್ರ ನಿರ್ದೇಶಕ ವಿಘ್ನೇಶ್ ಶಿವನ್ ದಂಪತಿಗೆ ಬಾಡಿಗೆ ತಾಯ್ತನದ ಮೂಲಕ ಅವಳಿ ಮಕ್ಕಳ ಜನನವಾಗಿದೆ. ಇನ್‌ಸ್ಟಾಗ್ರಾಂನಲ್ಲಿ ಈ ವಿಷಯ ಹಂಚಿಕೊಂಡಿರುವ ಶೀವನ್, ‘ನಯನ್ ಮತ್ತು ನಾನು ಅಮ್ಮ-ಅಪ್ಪ ಆಗಿದ್ದೇವೆ. ನಮಗೆ ಅವಳಿ ಮಕ್ಕಳ ಜನನವಾಗಿದೆ. ಜೀವನ ಹೆಚ್ಚು ಪ್ರಕಾಶಮಾನವಾಗಿ ಹಾಗೂ ಸುಂದರವಾಗಿ ಕಾಣುತಿದೆ. ಇದಕ್ಕೆಲ್ಲ ಹಿರಿಯರ ಆಶೀರ್ವಾದ ಕಾರಣ’ ಎಂದಿದ್ದಾರೆ. ಇದರ ಜತೆಗೆ ಇಬ್ಬರೂ ಮಕ್ಕಳ ಕಾಲಿಗೆ ಮುತ್ತಿಕ್ಕುತ್ತಿರುವ ಚಿತ್ರ ಹಾಕಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಅಭಿಮಾನಿಗಳು ಇಬ್ಬರಿಗೂ ಅಭಿನಂದನೆಗಳ ಮಳೆ ಸುರಿಸಿದ್ದಾರೆ.