
ಇತ್ತೀಚಿಗಷ್ಟೆ ನಡೆದ ಒರುಥಿ ಸಿನಿಮಾ ಪತ್ರಿಕಾಗೋಷ್ಠಿಯಲ್ಲಿ ನಟ ವಿನಾಯಕನ್ ನೀಡಿದ ಹೇಳಿಕೆ ತೀವ್ರ ವಿವಾದ ಸೃಷ್ಟಿ ಮಾಡಿದ ಬೆನ್ನಲ್ಲೇ ನಟಿ ನವ್ಯಾ ನಾಯರ್(Navya Nair) ಕ್ಷಮೆಯಾಚಿಸಿದ್ದಾರೆ. ಪುರುಷರು ಮಾಡಿದ ತಪ್ಪಿಗೆ ನನ್ನಂತಹ ಮಹಿಳೆಯರನ್ನು ಪ್ರಶ್ನೆ ಮಾಡಲಾಗುತ್ತಿದೆ, ನಮ್ಮನ್ನು ದೂಷಿಸಲಾಗುತ್ತಿದೆ ಎಂದು ಅಸಮಾಧಾನ ಹೊರಹಾಕಿದರು.
ಈ ಬಗ್ಗೆ ಹೇಗೆ ಪ್ರತಿಕ್ರಿಯೆ ನೀಡಬೇಕೆಂದು ತಿಳಿದಿಲ್ಲ ಎಂದು ಹೇಳಿದರು. ವಿನಾಯಕನ್ ತನ್ನ ಹೇಳಿಕೆಯನ್ನು ಯಾಕೆ ಹಿಂಪಡೆದಿಲ್ಲ ಎಂದು ಕೇಳಿದ ಪ್ರಶ್ನೆಗೆ ನವ್ಯಾ ನಾಯರ್, ಇದು ಅವರಿಗೆ ಕೇಳಬೇಕಾದ ಪ್ರಶ್ನೆ ಎಂದು ಅವರು ಹೇಳಿದರು. ಅಲ್ಲದೆ ವಿನಾಯಕನ್ ಹೇಳಿಕೆ ಸಂಪೂರ್ಣವಾಗಿ ತಪ್ಪು, ಈಗಾಗಲೇ ಅವರು ಕ್ಷಮೆ ಕೇಳಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಇಂತ ಘಟನೆ ನಡೆಯುತ್ತೆ ಎಂದು ನಾನು ನಿರೀಕ್ಷೆ ಮಾಡಿರಲಿಲ್ಲ ಎಂದು ನವ್ಯಾ ನಾಯರ್ ಹೇಳಿದ್ದಾರೆ. ವಿನಾಯಕನ್(Vinayakan) ಈ ರೀತಿ ಕಾಮೆಂಟ್ ಮಾಡುತ್ತಿರುವಾಗ ನಾನು ಅವರಿಂದ ಮೈಕ್ ಕಿತ್ತುಕೊಳ್ಳಲು ಪ್ರಯತ್ನಿಸಿದೆ. ಆದರೆ ಸಾಧ್ಯವಾಗಿಲ್ಲ ಎಂದು ಹೇಳಿದರು.
ನೀವೆಲ್ಲರೂ ಒಂದು ವಿಷಯವನ್ನು ಅರ್ಥಮಾಡಿಕೊಳ್ಳಬೇಕು ಅಲ್ಲಿ ಒಬ್ಬ ಪುರುಷ ನೀಡಿದ ಹೇಳಿಕೆಗೆ ಮಹಿಳೆಯರನ್ನು ದೂಷಿಸಲಾಗುತ್ತಿದೆ. ಅಲ್ಲಿ ಎಲ್ಲರೂ ಪುರುಷರಿದ್ದರು. ಆದರೆ ನೀವೆಲ್ಲರೂ ನನ್ನ ಪ್ರಶ್ಮಿಸುತ್ತಿದ್ದೀರಿ. ನಾನು ಇಲ್ಲ ಒರುಥಿ ಸಿನಿಮಾದ ಪ್ರಚಾರಕ್ಕಾಗಿ ಬಂದಿದ್ದೇನೆ ಎಂದಿದ್ದಾರೆ.
ಗಜದಲ್ಲಿ ದರ್ಶನ್‌ಗೆ ಜೋಡಿಯಾದ ಮಾಲಿವುಡ್ ಬೆಡಗಿ ಈಗೇನ್ಮಾಡ್ತಿದ್ದಾರೆ?
ಘಟನೆ ಹಿನ್ನಲ್ಲೆ
ನವ್ಯಾ ನಾಯರ್ ಮತ್ತೆ ಮಲಯಾಳಂ ಚಿತ್ರಕ್ಕೆ ಕಂಬ್ಯಾಕ್ ಮಾಡಿರುವ ವಿ.ಕೆ ಪ್ರಕಾಶ್ ನಿರ್ದೇಶನದ ಒರುಥಿ ಚಿತ್ರದ ಪ್ರಚಾರದ ವೇಳೆ ನಟ ವಿನಾಯಕನ್ ವಿವಾದ ಸೃಷ್ಟಿಸಿದ್ದರು. 'ಮೀ ಟೂ ಚಳುವಳಿಯನ್ನು ನಾನು ಅರ್ಥ ಮಾಡಿಕೊಂಡಿಲ್ಲ. ಅದರ ಅರ್ಥ ಮಹಿಳೆಯರನ್ನ ದೈಹಿಕ ಸಂಬಂಧದ ಬಗ್ಗೆ ಕೇಳುವುದೇ ಎಂದು ಹೇಳಿದ್ದರು. 10 ಮಹಿಳೆಯರ ಜೊತೆ ಲೈಂಗಿಕ ಸಂಬಂಧ ಹೊಂದಿದ್ದೇನೆ. ನನ್ನೊಂದಿಗೆ ಮಲಗುತ್ತೀರಾ ಎಂದು ನೇರವಾಗಿ ಕೇಳುತ್ತೇನೆ. ಓಕೆ ಎಂದರೆ ಓಕೆ ಇಲ್ಲವೆಂದರೆ ನಾನದನ್ನು ಅಲ್ಲಿಗೆ ಬಿಟ್ಟುಬಿಡುತ್ತೇನೆ. ಬಲವಂತ ಮಾಡುವುದಿಲ್ಲ ಎಂದಿದ್ದರು. ಮಹಿಳೆಯರಿಗೆ ಲೈಂಗಿಕತೆ ಕೇಳುವುದು ಮೀ ಟೂ ಎಂದಾದರೆ ನಾನು ಅದನ್ನು ಮುಂದುವರೆಸುತ್ತೇನೆ ಎಂದಿದ್ದರು. ಅದೇ ವೇಳೆ ಅಲ್ಲೇ ಇದ್ದ ಮಹಿಳಾ ಪತ್ರಕರ್ತೆಯನ್ನು ತೋರಿಸಿ ಅವರೊಂದಿಗೆ ಲೈಂಗಿಕ ಸಂಬಂಧ ಹೊಂದಲು ಬಯಸಿದರೆ ಅವರ ಒಪ್ಪಿಗೆಯನ್ನು ಕೇಳುತ್ತೇನೆ. ಆದರೆ ಒಪ್ಪಿಗೆ ಸೂಚಿಸುವುದು ಅಥವಾ ಬಿಡುವುದು ಅವರಿಗೆ ಬಿಟ್ಟಿದ್ದು' ಎನ್ನುವ ಮೂಲಕ ವಿವಾದ ಕಿಡಿ ಹೊತ್ತಿಸಿದ್ದರು.
ಕನ್ನಡಕ್ಕೆ ಬಂತು ದರ್ಶನ್ ಗಜ ಚಿತ್ರ ನಾಯಕಿ ನವ್ಯಾನಾಯರ್ ಪುಸ್ತಕ
ವಿನಾಯಕನ್ ಹೀಗೆ ಮಾತನಾಡುವ ವೇಳೆ ನಟಿ ನವ್ಯಾ ನಾಯರ್ ವಿದಿಕೆ ಮೇಲೆ ಇದ್ದರು. ಇಷ್ಟೆಲ್ಲ ಮಾತನಾಡಿದರು ನವ್ಯಾ ಯಾವುದೇ ಪ್ರತಿಕ್ರಿಯೆ ನೀಡದೆ ಮೌನ ವಹಿಸಿದ್ದಕ್ಕೆ ಭಾರಿ ಟೀಕೆಗೆ ಗುರಿಯಾಗಿದ್ದರು. ಬಳಿಕ ನವ್ಯಾ ನಾಯರ್ ಪ್ರತಿಕ್ರಿಯೆ ನೀಡಿ ಕ್ಷಮೆ ಕೇಳಿದ್ದಾರೆ.
ಇನ್ನು ನಟ ವಿನಾಯಕನ್ ತಮಿಳು ಮತ್ತು ಮಲಯಾಳಂ ಸಿನಿಮಾಗಳಲ್ಲಿ ಖಳನಟನ ಪಾತ್ರದಲ್ಲಿ ಮಿಂಚಿದ್ದಾರೆ. ವಿನಾಯಕನ್ ಮಾತಿಗೆ ಎಲ್ಲಡೆ ಆಕ್ರೋಶ ವ್ಯಕ್ತವಾಗುತ್ತಿದೆ. ವಿವಾದ ದೊಡ್ಡದಾಗುತ್ತಿದ್ದಂತೆ ವಿನಾಯಕನ್ ಕ್ಷಮೆ ಯಾಚಿಸುವ ಮೂಲಕ ವಿವಾದ ತಣ್ಣಗಾಸಿರುವ ಪ್ರಯತ್ನ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.