
ರೆಬೆಲ್ ನಿರ್ದೇಶಕ ಕಮ್ ಬರಹಗಾರ ವಿವೇಕ್ ಅಗ್ನಿಹೋತ್ರಿ ಸೋಷಿಯಲ್ ಮೀಡಿಯಾದಲ್ಲಿ 24/7 ಆ್ಯಕ್ಟಿವ್ ಇರುವ ವ್ಯಕ್ತಿ. ಅಪ್ಡೇಟ್ ನೀಡುತ್ತಾ ನೆಟ್ಟಿಗರ ನಾನ್ ಸ್ಟಾಪ್ ಕಾಮೆಂಟ್‌ಗೆ ಉತ್ತರ ನೀಡುತ್ತಿರುವ ವ್ಯಕ್ತಿ, ಇದ್ದಕ್ಕಿದ್ದಂತೆ ಪೋಸ್ಟ್ ಡಿಲೀಟ್ ಮಾಡಿರುವುದನ್ನು ನೋಡಿ ಫಾಲೋವರ್ಸ್ ಶಾಕ್ ಆಗಿದ್ದಾರೆ. ವಿವೇಕ್ ಪ್ರತಿಯೊಂದೂ ಪೋಸ್ಟ್ ತುಂಬಾನೇ ಮೆಮೊರೇಬಲ್ ಹಾಗೂ ಅದರ ಹಿಂದಿರುವ ಕಥೆಯನ್ನು ಕೂಡ ಹಂಚಿಕೊಳ್ಳುತ್ತಾರೆ. ಹಾಗಿದ್ದ ಮೇಲೆ ಯಾಕೆ ಎಲ್ಲವನ್ನೂ ಡಿಲೀಟ್ ಮಾಡಿದರು?
ಪೊಲೀಸ್ ಠಾಣೆ ಮೆಟ್ಟಿಲೇರಿದ ನಿಕ್ಕಿ ಗಲ್ರಾನಿ: 50 ಲಕ್ಷ ವಂಚನೆ, ನ್ಯಾಯ ಬೇಕು
ವಿವೇಕ್ ಫಾಲೋವರ್ಸ್ ಫ್ಯಾನ್ ಪೇಜ್‌ನಲ್ಲಿ ಈ ಬಗ್ಗೆ ಚರ್ಚೆ ಶುರುವಾಗಿದೆ. ನಮ್ಮ ನಿರ್ದೇಶಕರ ಖಾತೆ ಹ್ಯಾಕ್ ಆಗಿರಬೇಕು. ಅದಕ್ಕೆ ಎಲ್ಲಾ ಪೋಸ್ಟ್ ಡಿಲೀಟ್ ಅಗಿದೆ ಎಂದು ಕೆಲವರು ಹೇಳಿದ್ದರೆ, ಇನ್ನೂ ಕೆಲವರು, ಇಲ್ಲ ಇದು ಅವರ ಮುಂದಿನ ಚಿತ್ರ ಪ್ರಚಾರಕ್ಕೆ ಹೀಗೆ ಮಾಡಿದ್ದಾರೆ. ಅವರು ತುಂಬಾ ಕ್ಲೆವರ್ ನಿರ್ದೇಶಕ ಎಂದು ಹೇಳಿದ್ದಾರೆ ಮತ್ತೆ ಕೆಲವರು. ಖಾತೆಗೆ ಅಭಿಮಾನಿಗಳು ಮೆಸೇಜ್ ಕಳುಹಿಸುತ್ತಿದ್ದಾರೆ. ಆದರೆ ಉತ್ತರ ಮಾತ್ರ ಬರುತ್ತಿಲ್ಲವಂತೆ.
ಕೆಲವು ಮೂಲಗಳ ಪ್ರಕಾರ ವಿವೇಕ್ ಮೈಕ್ರೋ ಬ್ಲಾಗಿಂಗ್ ಸೈಟ್‌ವೊಂದರಲ್ಲಿ ಖಾತೆ ತೆರೆದು, ತಮ್ಮ ಪೋಸ್ಟ್‌ಗಳನ್ನು ಅದರಲ್ಲಿ ಅಡವಿಟ್ಟಿದ್ದಾರೆ. ಯಾವುದನ್ನೂ ಡಿಲೀಟ್ ಮಾಡಿಲ್ಲ. ಅಲ್ಲದೇ ಚರ್ಚೆ ಹೆಚ್ಚಾಗುತ್ತಿದ್ದಂತೆ, ಇಂಗ್ಲೀಷ್‌ನಲ್ಲಿ ಪದ್ಯವೊಂದನ್ನು ಬರೆದು ಶೇರ್ ಮಾಡಿಕೊಂಡಿದ್ದಾರೆ. 'ಕೆಲವೊಮ್ಮೆ ನಾನು ಮಾಡುತ್ತಿರುವುದರಲ್ಲಿ ಬದಲಾವಣೆ ಇಲ್ಲ ಎಂದೆನಿಸುತ್ತದೆ, ನಾನು ಈ ಹೊಸ Algorithmಗೆ ಬಲಿಯಾಗಿರುವೆ. ಅದಕ್ಕೆ ಹೊಸದಾಗಿ ಏನಾದರೂ ಮಾಡಬೇಕು, ಎಂದು ಹೀಗೆ ಮಾಡಿರುವೆ,' ಎಂದೂ ಬರೆದುಕೊಂಡಿದ್ದಾರೆ.
ಬೋಲ್ಡ್ ನಟಿ ಸ್ವರಾಗೆ ಸಿಕ್ಕಿದ್ದು ಅಂತಿಂಥ ಗೆಲುವಲ್ಲ!
ಇನ್ನು ವಿವೇಕ್ ನಿರ್ದೇಶನದ 'The Kashmir Files'ಈ ವರ್ಷ ಬಿಡುಗಡೆಯಾಗಲು ಸಿದ್ಧವಾಗುತ್ತಿದೆ. ಕಾಶ್ಮೀರಿ ಹಿಂದುಗಳ ಬಗ್ಗೆ ಇರುವ ಈ ಸಿನಿಮಾ ರಿಲೀಸ್ ಸಮಯದಲ್ಲಿ ಯಾವುದೇ ತೊಂದರೆ ಆಗದಿರಲಿ ಎಂದು ಸಿನಿಮಾ ತಂಡ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.