ಬಿಳಿ ಕೂದಲು ಕವರ್ ಮಾಡೋಕಾಗಲ್ವಾ ? ಪ್ರಶ್ನಿಸಿದ ನೆಟ್ಟಿಗರಿಗೆ ನಟಿಯ ಖಡಕ್ ಆನ್ಸರ್

Published : Apr 13, 2021, 11:40 AM ISTUpdated : Apr 13, 2021, 03:34 PM IST
ಬಿಳಿ ಕೂದಲು ಕವರ್ ಮಾಡೋಕಾಗಲ್ವಾ ? ಪ್ರಶ್ನಿಸಿದ ನೆಟ್ಟಿಗರಿಗೆ ನಟಿಯ ಖಡಕ್ ಆನ್ಸರ್

ಸಾರಾಂಶ

ಬಿಳಿ ಕೂದಲು ತೋರಿಸಿದ್ದಕ್ಕೆ ತಮಾಷೆ ಮಾಡಿದ ನೆಟ್ಟಿಗರು | ಸಮೀರಾ ಕೊಟ್ರು ಸೂಪರ್ ಆನ್ಸರ್

ಸಮೀರಾ ರೆಡ್ಡಿ ತನ್ನನ್ನು ಬಯ್‌ಛಾನ್ಸ್ ನಾನು ಸಾಮಾಜಿಕ ಮಾಧ್ಯಮದಲ್ಲಿ ಇನ್ಫ್ಲುಯೆನ್ಸರ್ ಎಂದು ಕರೆದುಕೊಂಡಿದ್ದಾರೆ. ಆದರೆ ಖಂಡಿತವಾಗಿಯೂ ತನ್ನ ಇಬ್ಬರು ಮಕ್ಕಳಿಗೆ ಪೂರ್ಣ ಸಮಯದ ತಾಯಿಯಾಗುವುದು ನಟಿಯ ಆಯ್ಕೆಯಾಗಿತ್ತು.

ಸಮೀರಾ ಸ್ವಲ್ಪ ಸಮಯದವರೆಗೆ ತೆರೆಯಿಂದ ದೂರವಿರಬಹುದು ಆದರೆ ಅದೇನು ಆಕೆಯನ್ನು ಲೇಝಿ ಮಾಡಿಲ್ಲ ಬದಲಾಗಿ ಆಕೆ ಮತ್ತಷ್ಟು ಆಕ್ಟಿವ್ ಆಗಿದ್ದಾರೆ. ಅವರು ಜೀವನದ ವಿವಿಧ ಅಂಶಗಳನ್ನು ಕೌಶಲ್ಯದಿಂದ ಆಸಕ್ತಿಯಿಂದ ಮಾಡುತ್ತಾರೆ.

ಬಾಲಿವುಡ್ ಸೆಲೆಬ್ರಿಟಿ ದಂಪತಿಯ ಮಗಳು ಯುವರತ್ನದ ನಾಯಕಿ

ಸಮೀರಾ ಮೊದಲ ಬಾರಿಗೆ ಪಂಕಜ್ ಉಧಾಸ್ ಅವರ ಮ್ಯೂಸಿಕ್ ವಿಡಿಯೋ ಔರ್ ಅಹಿಸ್ತಾದಲ್ಲಿ 1997 ರಲ್ಲಿ ಕಾಣಿಸಿಕೊಂಡರು. ಮೈನೆ ದಿಲ್ ತುಜ್ಕೊ ದಿಯಾ, ದರ್ಣ ಮನ ಹೈ, ಟ್ಯಾಕ್ಸಿ ನಂಬರ್ 9211, ರೇಸ್, ಡಿ ಡಾನಾ ಡಾನ್ ಮತ್ತು ತೇಜ್ ಸಿನಿಮಾಗಳಲ್ಲಿ ಕಾಣಿಸಿಕೊಂಡರು.

ನಟಿ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆದಾಗ ತಮಗಾದ ಕೆಟ್ಟ ಅನುಭವದ ಬಗ್ಗೆ ಮಾತನಾಡಿದ್ದಾರೆ. ನನಗಾದ ಕೆಟ್ಟ ಅನುಭವಗಳನ್ನು ನಿಜವಾಗಿಯೂ ಕೇರ್ ಮಾಡದ ಕಾರಣ ನನಗೆ ನಿಜವಾಗಿಯೂ ನೆನಪಿಲ್ಲ. ಆದರೆ ಬಹಳಷ್ಟು ಜನರು ನನ್ನ ಬಿಳಿ ಕೂದಲಿನ ಹಿಂದೆ ಓಡಿದರು ಎಂದಿದ್ದಾರೆ.

KGF ಗಾಯಕಿಯ ವಾಯ್ಸ್ ಕೇಳಿ ಹಿಯಾಳಿಸಿ ತನ್ನ ಕೆನ್ನೆಗೆ ತಾನೇ ಹೊಡೆದ ಖ್ಯಾತ ಗಾಯಕ

ಏಕೆ ಎಂದು ನನಗೆ ತಿಳಿದಿಲ್ಲ. ನೀವು ಬಿಳಿ ಕೂದಲು ಏಕೆ ಮುಚ್ಚಿಡುವುದಿಲ್ಲ? ಅಥವಾ ನಿಮ್ಮದೇನು ಸಮಸ್ಯೆ ಎಂಬಂತಹ ಕಾಮೆಂಟ್‌ಗಳನ್ನು ಕಂಡಿದ್ದೇನೆ ಎಂದಿದ್ದಾರೆ ನಟಿ. ಸಾಮಾಜಿಕ ಮಾಧ್ಯಮವು ನೀವು ಎಲ್ಲರನ್ನು ಮೆಚ್ಚಿಸುವ ವೇದಿಕೆಯಲ್ಲ. ಸೌಂದರ್ಯದ ಅವಾಸ್ತವ ಮಾನದಂಡಗಳನ್ನು ನಮಗೆ ನೀಡಲಾಗಿದೆ. ನಾವು ಈಗ ಬಲಿಪಶುಗಳಾಗಿದ್ದೇವೆ ಎಂದಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಮಾಧುರಿಗೆ 'ನಿನ್ನನ್ನು ತಾಯಿಯಾಗಿ ನೋಡುತ್ತೇನೆ' ಎಂದಿದ್ದ ಎಂಎಫ್ ಹುಸೇನ್; ಆದ್ರೆ ಮುಂದೆ ಆಗಿದ್ದೇನು?
ಮದುವೆ ಮುರಿದುಬಿದ್ದ ಬಳಿಕ ಸ್ಮೃತಿ ಮಂಧಾನ-ಪಲಾಶ್ ಲೈಫ್‌ ಸ್ಟೈಲ್‌ನಲ್ಲಿ ಏನೆಲ್ಲಾ ಆಗೋಯ್ತು ನೋಡಿ...!