ನಟಿ ನತಾಶಾ, ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಬೆಡ್ರೂಂ ಕಿಸ್ಸಿಂಗ್ ಫೋಟೋ ವೈರಲ್!
ಕ್ರಿಕೆಟಿಗರಾದ ಹಾರ್ದಿಕ್ ಪಾಂಡ್ಯ (Hardik Pandya) ಮತ್ತು ನತಾಶಾ ಸ್ಟಾಂಕೋವಿಕ್ ಅವರ ವಿವಾಹದ ಕಳೆದ ಫೆಬ್ರುವರಿಯಲ್ಲಿ ನಡೆದಿದೆ. ಇದು ಹಿಂದೂ- ಕ್ರೈಸ್ತ ವಿವಾಹವಾಗಿದೆ. ಫೆಬ್ರವರಿ 14ರಂದು ದಂಪತಿ ಕ್ರೈಸ್ತ ಸಂಪ್ರದಾಯಗಳ ಪ್ರಕಾರ ವಿವಾಹವಾದರು. ಮರುದಿನವೇ ಫೆಬ್ರವರಿ 15ರಂದು ಇಬ್ಬರೂ ಹಿಂದೂ ಸಂಪ್ರದಾಯದ ಪ್ರಕಾರ ಮತ್ತೆ ವಿವಾಹವಾದರು. ಅಸಲಿಗೆ ಇದು ಇಬ್ಬರಿಗೂ ಮರು ವಿವಾಹ. ಅರ್ಥಾತ್ ಇವರಿಬ್ಬರೂ ಒಬ್ಬರನ್ನೊಬ್ಬರು ಮದುವೆಯಾಗಿದ್ದಾರೆ. ಮೂರು ವರ್ಷಗಳ ಹಿಂದೆ ಇಬ್ಬರೂ ತರಾತುರಿಯಲ್ಲಿ ವಿವಾಹವಾಗಿದ್ದರು. ಕೊರೋನಾ ಕಾರಣದಿಂದಾಗಿ ಯಾವುದೇ ಅದ್ಧೂರಿ ಸಂಭ್ರಮ ಇರಲಿಲ್ಲ. ಹಾರ್ದಿಕ್ ಮತ್ತು ನತಾಶಾ ಮದುವೆಯಲ್ಲಿ ತೀರಾ ಆಪ್ತರು ಮಾತ್ರ ಭಾಗಿಯಾಗಿದ್ದರು. ಹೀಗಾಗಿ ಈ ತಾರಾ ಜೋಡಿಯು ಕುಟುಂಬಸ್ಥರು ಮತ್ತು ಸ್ನೇಹಿತರನ್ನು ಸಾಕ್ಷಿಯಾಗಿ ಎರಡನೇ ಬಾರಿಗೆ ವಿವಾಹವಾಗಿದ್ದಾರೆ. ಹಾರ್ದಿಕ್-ನತಾಶಾ ಮದುವೆಗೆ ಅವರ ಎರಡೂವರೆ ವರ್ಷದ ಮಗ ಅಗಸ್ತ್ಯ ಸಾಕ್ಷಿಯಾಗಿದ್ದ. ಪೋಷಕರು ತಮ್ಮ ಮಗನೊಂದಿಗೆ ಸಿಹಿ ಚಿತ್ರಗಳನ್ನು ಪೋಸ್ಟ್ ಮಾಡಿದ್ದರು.
ಎರಡನೆಯ ಬಾರಿ ಮದುವೆಯಾದ ಮೇಲೆ ಇಬ್ಬರೂ ಮತ್ತೊಮ್ಮೆ ಫೋಟೋಶೂಟ್ ಮಾಡಿಸಿಕೊಂಡಿದ್ದು ಇದೀಗ ಸಕತ್ ವೈರಲ್ ಆಗಿದೆ. ಆದರೆ ಇದು ತೀರಾ ಅಶ್ಲೀಲ ಫೋಟೋಶೂಟ್ (Photoshoot) ಆಗಿರುವುದಾಗಿ ನೆಟ್ಟಿಗರು ಗರಂ ಆಗಿದ್ದಾರೆ. ಅಸಲಿಗೆ ಫೋಟೋದಲ್ಲಿ, ದಂಪತಿ ಮಂಚದ ಮೇಲೆ ಪೋಸ್ ನೀಡಿದ್ದಾರೆ. ಭಾವೋದ್ರಿಕ್ತ ಚುಂಬನ ಮಾಡುವ ಫೋಟೋ ಇದಾಗಿದೆ. ಹಾರ್ದಿಕ್ ಕಪ್ಪು ಶರ್ಟ್ ಧರಿಸಿ ಕಂಡುಬಂದರೆ, ನತಾಶಾ ಪಟ್ಟೆಯುಳ್ಳ ಕಪ್ಪು ಮತ್ತು ಬಿಳಿ ಉಡುಪನ್ನು ಧರಿಸಿದ್ದಾರೆ. ನತಾಶಾ ಪಾಂಡ್ಯಾ ಒಬ್ಬರಿಗೊಬ್ಬರು ಕಿಸ್ ಮಾಡುತ್ತಿರುವ ರೀತಿಯಲ್ಲಿ ಫೋಟೋಗಳಿಗೆ ಫ್ರೆಂಚ್‌ನಲ್ಲಿ ‘Je t'aime’ ಎಂದು ಬರೆದುಕೊಂಡಿದ್ದಾರೆ. ಇದರ ಅರ್ಥ ‘ಐ ಲವ್ ಯೂ’ ಎಂದು. ‘ಇದನ್ನು ಮನೆಯಲ್ಲಿ ಮಾಡಿ, ಊರಿಗೆಲ್ಲ ಏಕೆ ತೋರಿಸುತ್ತೀರಿ’ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ. ಭಾರತವನ್ನು ಪ್ರತಿನಿಧಿಸುವ ಆಟಗಾರನಿಗೆ ಇಂತಹ ವರ್ತನೆ ಸೂಕ್ತವಲ್ಲ. ಇದು ಭಾರತೀಯ ಸಂಸ್ಕೃತಿಯಲ್ಲ ಎಂದು ಹಾರ್ದಿಕ್ಗೆ ಕೆಲವರು ಬುದ್ಧಿ ಹೇಳಿದ್ದಾರೆ.
ಬಟ್ಟೆ ಬದಲಿಸಿದ ವಿಭೀಷಣನ ಪತ್ನಿ: ಆದಿಪುರುಷನೋ, ಕಾಮಸೂತ್ರವೋ ಇದು ಎಂದು ನೆಟ್ಟಿಗರು ಗರಂ!
ನತಾಶಾ ಅವರು ಈ ಪೋಸ್ಟ್ ಹಂಚಿಕೊಂಡಿದ್ದಾರೆ. ಕೂಡಲೇ, ಅಭಿಮಾನಿಗಳು ಸಹಸ್ರಾರು ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ. ಹಲವರು ಹೃದಯ ಮತ್ತು ಬೆಂಕಿಯ ಎಮೋಜಿ (Emoji) ಹಾಕಿದ್ದರೆ, ಈ ಫೋಟೋ ಸಕತ್ ಟ್ರೋಲ್ ಕೂಡ ಆಗಿದೆ. ನಾಲ್ಕು ಗೋಡೆಗಳ ಮಧ್ಯೆ ನಡೆಯಬೇಕಿರುವ ಈ ಚುಂಬನದ ದೃಶ್ಯವನ್ನು ಸಾರ್ವಜನಿಕವಾಗಿ ತೋರಿಸಿರುವುದು ಸರಿಯಲ್ಲ ಎಂದಿದ್ದಾರೆ. ಇದೇನು ಮುಂದಿನ ಮಗುವಿನ ಯೋಜನೆಯಾ ಎಂದು ಹಲವರು ಪ್ರಶ್ನಿಸಿದ್ದಾರೆ. ಅಂದಹಾಗೆ, ಬಾಲಿವುಡ್ನಲ್ಲಿ ನತಾಶಾ ಅವರು ಗುರುತಿಸಿಕೊಂಡಿದ್ದಾರೆ. ‘ಬಿಗ್ ಬಾಸ್ 8’ರಲ್ಲಿ ಸ್ಪರ್ಧಿ ಆಗಿದ್ದರು. ಕೆಲವು ಹಿಂದಿ ಚಿತ್ರಗಳಲ್ಲಿ ಅವರು ನಟಿಸಿದ್ದಾರೆ.
ಇತ್ತೀಚೆಗೆ ಮದುವೆಯಾದ ಬೆನ್ನಲ್ಲೇ ನತಾಶಾ ಸ್ಟಾಂಕೋವಿಕ್ (Natasa Stankovic) ಮತ್ತಷ್ಟು ಹಾಟ್ ಆಗಿ ಕಾಣಿಸಿಕೊಂಡು ಫೊಟೋಶೂಟ್ ಮಾಡಿಸಿಕೊಂಡು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದರು. ನತಾಶಾ ಶೇರ್ ಮಾಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಗೋಲ್ಡ್ ಶೈನ್ ಮ್ಯಾಕ್ಸಿ ಧರಿಸಿರುವ ನತಾಶಾ ಮಸ್ತ್ ಪೋಸ್ ನೀಡಿದ್ದರು. ಅಂದಹಾಗೆ, ನತಾಶಾ ಮಾಡೆಲ್ ಆಗಿ ಖ್ಯಾತಿಗಳಿಸಿದ್ದರು. ಬಳಿಕ ಕೆಲವು ಸಿನಿಮಾಗಳಲ್ಲೂ ಮಿಂಚಿದ್ದರು. ಕನ್ನಡ ಸಿನಿಮಾದಲ್ಲೂ ನಟಿಸಿದ್ದಾರೆ. ಕೆಲವೇ ಸಿನಿಮಾಗಳಲ್ಲಿ ನಟಿಸುತ್ತಿದ್ದಂತೆ ಹಾರ್ದಿಕ್ ಪಾಂಡ್ಯ ಜೊತೆ ಪ್ರೀತಿಯಲ್ಲಿ ಬಿದ್ದರು. ಇಬ್ಬರೂ ಲಾಕ್ ಡೌನ್ ಸಮಯದಲ್ಲಿ ಸರಳವಾಗಿ ವಿವಾಹವಾದರು. ಮೂರು ವರ್ಷದ ಹಿಂದೆ ಹಾರ್ದಿಕ್ ಪಾಂಡ್ಯ ಹಾಗೂ ನತಾಶಾ ಸ್ಟಾಂಕೋವಿಕ್ ನಿಶ್ಚಿತಾರ್ಥ ಮಾಡಿಕೊಂಡ 6 ತಿಂಗಳಿಗೆ ಮೊದಲ ಮಗುವಿಗೆ ಜನ್ಮ ನೀಡಿದ್ದರು. ಮಗನಿಗೆ ಅಗಸ್ತ್ಯ ಎಂದು ಹೆಸರಿಟ್ಟಿದ್ದಾರೆ.
ಅತ್ತೆ ತೊಡೆ ಮೇಲೆ ಶಾರುಖ್: ಪತಿ ಮೇಲೆ ಕಾಲಿಟ್ಟು ಕೂತ ಗೌರಿ- ಇದೆಂಥ ಸಂಸ್ಕಾರ ಎಂದ ನೆಟ್ಟಿಗರು!