ಲಿಪ್ ಕಿಸ್ ವಿಡಿಯೋ ಮೂಲಕ ಮದುವೆ ಸುದ್ದಿ ಬಹಿರಂಗ ಪಡಿಸಿದ ಪವಿತ್ರಾ ಲೋಕೇಶ್-ನರೇಶ್

Published : Dec 31, 2022, 12:40 PM ISTUpdated : Dec 31, 2022, 04:25 PM IST
ಲಿಪ್ ಕಿಸ್ ವಿಡಿಯೋ ಮೂಲಕ ಮದುವೆ ಸುದ್ದಿ ಬಹಿರಂಗ ಪಡಿಸಿದ ಪವಿತ್ರಾ ಲೋಕೇಶ್-ನರೇಶ್

ಸಾರಾಂಶ

ಪವಿತ್ರಾ ಲೋಕೇಶ್ ಮತ್ತು ನರೇಶ್ ಇಬ್ಬರು ಮದುವೆ ಬಗ್ಗೆ ಬಹಿರಂಗ ಪಡಿಸಿದ್ದಾರೆ. ರೊಮ್ಯಾಂಟಿಕ್ ವಿಡಿಯೋ ಶೇರ್ ಮಾಡಿ ಸದ್ಯದಲ್ಲೇ ಮದುವೆ ಆಗುವುದಾಗಿ ಹೇಳಿದ್ದಾರೆ. 

2022ರಲ್ಲಿ ಸಿಕ್ಕಾಪಟ್ಟೆ ಸದ್ದು ಸುದ್ದಿಯಾದವರಲ್ಲಿ ಕನ್ನಡದ ನಟಿ ಪವಿತ್ರಾ ಲೋಕೇಶ್ ಮತ್ತು ತೆಲುಗು ನಟ ನರೇಶ್ ಲವ್ ಸ್ಟೋರಿ. ತೆಲುಗು ನಟ ನರೇಶ್ ಜೊತೆ ಕನ್ನಡ ನಟಿ ಪವಿತ್ರಾ ಲೋಕೇಶ್ ಮದುವೆಯಾಗಿದ್ದಾರೆ ಎನ್ನುವ ಸುದ್ದಿ ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿತ್ತು. ಇಬ್ಬರ ಮದುವೆ ಸುದ್ದಿ ವೈರ್ ಆದ ಬೆನ್ನಲ್ಲೇ ನರೇಶ್ ಅವರ ಪತ್ನಿ ರಮ್ಯಾ ರಘುಪತಿ ರೊಚ್ಚಿಗೆದ್ದಿದ್ದರು. ಪವಿತ್ರಾ ಲೋಕೇಶ್ ವಿರುದ್ಧ ಕಿಡಿ ಕಾರಿದ್ದರು.  ರಮ್ಯಾ, ನರೇಶ್ ಮತ್ತು ಪವಿತ್ರಾ ಲೋಕೇಶ್ ನಡುವಿನ ಕಿತ್ತಾಟ ಚಪ್ಪಲಿಯಲ್ಲಿ ಹೊಡೆಯುವ ಮಟ್ಟಕ್ಕೆ ಹೋಗಿತ್ತು. ದೊಡ್ಡ ವಿವಾದವನ್ನೇ ಸೃಷ್ಟಿಸಿದ್ದ ಪವಿತ್ರಾ ಮತ್ತು ನರೇಶ್ ಇದೀಗ ಸಿಹಿ ಸುದ್ದಿ ಹಂಚಿಕೊಂಡಿದ್ದಾರೆ. ವರ್ಷದ ಕೊನೆಯಲ್ಲಿ ಇಬ್ಬರೂ ಮದುವೆ ಬಗ್ಗೆ ಬಹಿರಂಗ ಪಡಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. 

ಪವಿತ್ರಾ ಲೋಕೇಶ್ ಮತ್ತು ನರೇಶ್ ಸದ್ಯದಲ್ಲೇ ಹಸೆಮಣೆ ಏರುತ್ತಿದ್ದಾರೆ. ಈ ಮೂಲಕ ಇಬ್ಬರ ನಡುವಿನ ಸಂಬಂಧವನ್ನು ಅಧಿಕೃತಗೊಳಿಸುತ್ತಿದ್ದಾರೆ. ಅಂದಹಾಗೆ ಮದುವೆ ಬಗ್ಗೆ ಸ್ವತಃ ನರೇಶ್ ಅವರೇ ಬಹಿರಂಗ ಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ರೊಮ್ಯಾಂಟಿಕ್ ವಿಡಿಯೋ ಶೇರ್ ಮಾಡುವ ಮೂಲಕ ಮದುವೆ ಬಗ್ಗೆ ಬಹಿರಂಗವಾಗಿ ಹೇಳಿಕೊಂಡಿದ್ದಾರೆ.  

ನರೇಶ್ ಶೇರ್ ಮಾಡಿರುವ ವಿಡಿಯೋದಲ್ಲಿ ತನ್ನ ಪ್ರಪಂಚಕ್ಕೆ ಪವಿತ್ರಾ ಲೋಕೇಶ್‌ ಅವರಿಗೆ ಸ್ವಾಗತ ಕೋರಿದ್ದಾರೆ. ಕೇಕ್ ಕತ್ತರಿ ಇಬ್ಬರೂ ಒಬ್ಬರಿಗೊಬ್ಬರು ತಿನಿಸಿ ಲಿಪ್ ಕಿಸ್ ಮಾಡಿದ್ದಾರೆ. ವಿಡಿಯೋ ಕೊನೆಯಲ್ಲಿ ಸದ್ಯದಲ್ಲಿ ಇಬ್ಬರೂ ಮದುವೆಯಾಗುತ್ತಿರುವುದಾಗಿ ಹೇಳಿದ್ದಾರೆ. ಜೊತೆಗೆ ಪವಿತ್ರಾನರೇಶ್ (#PavitraNaresh) ಎಂದು ಹ್ಯಾಟ್ ಕೂಡ ಹಾಕಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗಿದೆ. ಈ ಮೂಲಕ ಇಬ್ಬರೂ ಮದುವೆ ಬಗ್ಗೆ ಇದ್ದ ಗೊಂದಲಕ್ಕೆ ತೆರೆ ಎಳೆಯುತ್ತಿದ್ದಾರೆ.

ನರೇಶ್ ಜೊತೆ ಮದುವೆ ವಿವಾದ ಬೆನ್ನಲ್ಲೇ ದೊಡ್ಡ ಸಿನಿಮಾಗಳಿಂದ ಪವಿತ್ರಾ ಲೋಕೇಶ್ ಔಟ್?

ಅಂದಹಾಗೆ ಈ ಬಗ್ಗೆ ನರೇಶ್ ಪತ್ನಿ ರಮ್ಯಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ನರೇಶ್ ಮತ್ತು ಪವಿತ್ರಾ ಲೋಕೇಶ್ ಮದುವೆ ಬಗ್ಗೆ ರಮ್ಯಾ ಏನು ಹೇಳುತ್ತಾರೆ ಅವರ ಮುಂದಿನ ನಿರ್ಧಾರ ಏನು ಎನ್ನುವ ಕುತೂಹಲ ಮೂಡಿಸಿದೆ. ನರೇಶ್ ಮತ್ತು ಪವಿತ್ರಾ ಲೋಕೇಶ್ ಇಬ್ಬರೂ 2023ರಲ್ಲಿ ಹಸಮಣೆ ಏರುವುದು ಕನ್ಫರ್ಮ್ ಆಗಿದೆ. ಮದುವೆ ದಿನಾಂಕ ಮತ್ತು ಸ್ಥಳ ಸದ್ಯದಲ್ಲೇ ಬಹಿರಂಗ ಪಡಿಸುವ ಸಾಧ್ಯತೆ ಇದೆ.  

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?
10 ಭಾಷೆಗಳಲ್ಲಿ 90 ಸಿನಿಮಾಗಳು, ಗಂಗೂಲಿ ಜೊತೆ ಅಫೇರ್ ವದಂತಿ.. 50 ವರ್ಷವಾದರೂ ಮದುವೆಯಾಗದ ನಟಿ ಯಾರು?