'ಆ' ಟೈಪ್ ಸೀನ್‌ ಮಾಡಲು ಹುಡುಗರಿಗೆ ನಾಚಿಕೆ; ನಟಿ ತಮನ್ನಾ ಹೇಳಿಕೆಗೆ ಶಾಕ್ ಆದ ನೆಟ್ಟಿಗರು

Published : Dec 31, 2022, 12:32 PM IST
'ಆ' ಟೈಪ್ ಸೀನ್‌ ಮಾಡಲು ಹುಡುಗರಿಗೆ ನಾಚಿಕೆ; ನಟಿ ತಮನ್ನಾ ಹೇಳಿಕೆಗೆ ಶಾಕ್ ಆದ ನೆಟ್ಟಿಗರು

ಸಾರಾಂಶ

ಲಸ್ಟ್‌ ಸ್ಟೋರಿಸ್‌ ಸಿನಿಮಾದ ಸೆಕ್ಸ್‌ ದೃಶ್ಯದ ಬಗ್ಗೆ ಭೂಮಿ ಪಾಡ್ನೆಕರ್‌ ಮಾತನಾಡುವಾಗ ತಮನ್ನಾ ಕೊಟ್ಟ ಹೇಳಿಕೆ ಸಖತ್ ವೈರಲ್ ಆಗುತ್ತಿದೆ...

ಸಿನಿಮಾ ಅಂದ್ಮೇಲೆ ರೊಮ್ಯಾನ್ಸ್‌ ಫೈಟ್ ಆಂಡ್ ಡ್ರಾಮಾ ತುಂಬಾನೇ ಕಾಮನ್. ಅದರಲ್ಲೂ ಬಾಲಿವುಡ್‌ ಸಿನಿಮಾಗಳಲ್ಲಿ ತುಂಬಾನೇ ಇಂಟಿಮೇಟ್‌ ಸೀನ್‌ಗಳಿರುತ್ತದೆ. ಕಥೆ ಅಥವಾ ಹಾಡುಗಳಿಂದ ಸಿನಿಮಾ ಹಿಟ್ ಆಗುತ್ತೋ ಇಲ್ವೋ ಗೊತ್ತಿಲ್ಲ ಆದರೆ ರೊಮ್ಯಾಂಟಿಕ್ ಸೀನ್ ಜನರನ್ನು ಸೆಳೆಯುತ್ತದೆ. ಅದರಲ್ಲೂ 2018ರಲ್ಲಿ ಬಿಡುಗಡೆಯಾದ ಲಸ್ಟ್‌ ಸ್ಟೋರಿ ಓಟಿಟಿಯಲ್ಲಿ ಕ್ರಾಂತಿ ಸೃಷ್ಟಿ ಮಾಡಿತ್ತು. ಆ ದೃಶ್ಯಗಳ ಬಗ್ಗೆ ನಟಿ ಭೂವಿ ಮಾತನಾಡುವಾಗ ತಮನ್ನಾ ನೀಡಿದ ಹೇಳಿಕೆ ವೈರಲ್ ಆಗಿದೆ...

ಬಾಲಿವುಡ್ ಹಂಗಾಮ್ ನಡೆಸಿದ ರೌಂಡ್‌ ಟೇಬಲ್‌ ಸಂದರ್ಶನದಲ್ಲಿ 'ರೊಮ್ಯಾಂಟಿಕ್ ದೃಶ್ಯಗಳನ್ನು ಮಾಡಲು ಹೆಣ್ಣು ಮಕ್ಕಳು ಮಾತ್ರ ಗಂಡು ಮಕ್ಕಳು ಕೂಡ ಸಂಕೋಚ ಮಾಡಿಕೊಳ್ಳುತ್ತಾರೆ. uncomfortable or being awkward ಫೀಲ್ ಮಾಡಿಕೊಳ್ಳುತ್ತಾರೆ. ಈ ವಿಚಾರದಲ್ಲಿ ಹೆಣ್ಣು ಗಂಡು ಎಂದು ನೋಡಬಾರದು ಪ್ರತಿಯೊಬ್ಬ ಕಲಾವಿದನೂ ಮನುಷ್ಯ ಎಂದು ನೋಡಬೇಕು. ಕೆಲವೊಂದು ಸಲ ಪುರುಷರು ನಾಚಿಕೊಳ್ಳುತ್ತಾರೆ. ರೊಮ್ಯಾಂಟಿಕ್ ಸೀನ್‌ ಮಾಡುವಾಗ ಹೆಣ್ಣು ಮಕ್ಕಳು ಹೇಗೆ ಫೀಲ್ ಮಾಡಿಕೊಳ್ಳುತ್ತಾರೆಂದು ತೆಲೆ ಕೆಡಿಸಿಕೊಳ್ಳುತ್ತಾರೆ' ಎಂದು ತಮನ್ನಾ ಮಾತನಾಡಿದ್ದಾರೆ. ಈ ರೀತಿ ದೃಶ್ಯಗಳನ್ನು ನೋಡಲು ಮಾಧ್ಯಮ ಸ್ನೇಹಿತರನ್ನು ಕರೆಯುತ್ತಿದ್ದರು ಎಂದು ನಿರೂಪಕಿ ಹೇಳುತ್ತಾರೆ. ಇದು ಹೆಣ್ಣು ಮಕ್ಕಳ ಮೇಲಾಗುತ್ತಿರುವ ಶೋಷಕ ಎಂದು ಭೂಮಿ ಟಾಂಗ್ ಕೊಟ್ಟಿದ್ದಾರೆ. 

ಸಿನಿಮಾಗಳಲ್ಲಿ ರೊಮ್ಯಾನ್ಸ್‌ ಮಾಡುವದು ತುಂಬಾನೇ ಮೆಕ್ಯಾನಿಕಲ್ ಆಗಿರುತ್ತದೆ ನಾವು ಸೆಕೆಂಡ್ಸ್‌ಗಳನ್ನು ಲೆಕ್ಕೆ ಮಾಡಬೇಕು ಎಂದು ರಕುಲ್ ಹೇಳಿದ್ದಾರೆ. ಈ ವೇಳೆ ಲಸ್ಟ್‌ ಸ್ಟೋರಿಸ್‌ ಚಿತ್ರೀಕರಣ ಸಮಯವನ್ನು ನೆನಪು ಮಾಡಿಕೊಂಡಿದ್ದಾರೆ. ಲಸ್ಟ್‌ ಸ್ಟೋರಿ ಸಿನಿಮಾದ ಸೆಕ್ಸ್‌ ಸೀನ್ ದೃಶ್ಯ ಚಿತ್ರೀಕರಣದಲ್ಲಿ ನಾಯಕ ನೀಲ್ ಭೂಪಾಲಂ ಎದುರಿಗಿದ್ದರು ಹೀಗಾಗಿ ಆತಂಕ ಹೆಚ್ಚಾಗುತ್ತಿತ್ತು. ನಿರ್ದೇಶಕ ಜೋಯಾ ಅಖ್ತರ್ ತಕ್ಷಣವೇ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ನೀಲ್‌ ಜೊತೆ ಮಾತನಾಡಿ ಸೀನ್‌ ಲಿಮಿಟ್‌ನ ಅರ್ಥ ಮಾಡಿಸಿದ್ದರು. ಅಲ್ಲಿದ್ದ ಹುಮಾ ಖುರೇಷಿ ಕೂಡ Badlapur ಚಿತ್ರದಲ್ಲಿದ್ದ ರೇಪ್‌ ಸೀನ್ ನೆನಪಿಸಿಕೊಂಡಿದ್ದಾರೆ. ಚಿತ್ರೀಕರಣ ಮಾಡುವ ಮುನ್ನ ತುಂಬಾನೇ ಭಯವಿತ್ತು...ಸಂಪೂರ್ಟ್‌ ಸೀನ್ ನಡೆದ ನಂತರವೂ ಕೈ-ಕಾಲು ನಡುಗುತ್ತಿತ್ತು ಎಂದಿದ್ದಾರೆ. 

ಚಿತ್ರವೂ ಇಲ್ಲ, ಆ್ಯಡೂ ಇಲ್ಲ, ಆದರೂ ರಾಣಿಯಂತಿದ್ದಾರೆ ರೇಖಾ!

ಕಿಸ್ಸಿಂಗ್ ಬಗ್ಗೆ ಅಂಜಲಿ ಮಾತು:

. 'ತಮ್ಮ ಎದುರು ನಟಿಸುತ್ತಿರುವ ನಟರು ಇಷ್ಟವಾಗದಿದ್ದರೂ ಅವರ ಜೊತೆ ಚುಂಬನ ದೃಶ್ಯಗಳಲ್ಲಿ ಕಾಣಿಸಿಕೊಳ್ಳಲೇ ಬೇಕಿತ್ತು, ಅದು ತುಂಬಾ ಕಷ್ಟವಾಗುತ್ತಿತ್ತು' ಎಂದು ಹೇಳಿದ್ದಾರೆ. 'ಕಿಸ್ಸಿಂಗ್ ಅಥವಾ ತುಂಬಾ ಇಂಟಿಮೇಟ್ ದೃಶ್ಯಗಳನ್ನು ಮುಗಿಸಿದ ನಂತರ ಕ್ಯಾರವಾನ್‌ಗೆ ಓಡುತ್ತಿದ್ದೆ. ಅಲ್ಲಿ ಕುಳಿತು ಜೋರಾಗಿ ಅಳುತ್ತಿದ್ದೆ' ಎಂದು ಅಳಲು ತೋಡಿಕೊಂಡಿದ್ದಾರೆ. 'ಆದರೆ ದೃಶ್ಯ ಚೆನ್ನಾಗಿ ಬರಬೇಕೆಂದರೆ ಕಲಾವಿದರು ದಿ ಬೆಸ್ಟ್ ಕೊಡಲೇ ಬೇಕು' ಎಂದು ನಟಿ ಅಂಜಲಿ ಹೇಳಿದ್ದಾರೆ. ನಟಿ ಅಂಜಲಿ ತಮಿಳು ಮತ್ತು ತೆಲುಗಿನಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸೀತಮ್ಮ ವಾಕಿಟ್ಲೋ ಸಿರಿಮಲ್ಲೆ ಚೆಟ್ಟು ಸಿನಿಮಾ ದೊಡ್ಡ ಖ್ಯಾತಿ ತಂದುಕೊಟ್ಟಿತ್ತು. ಈ ಸಿನಿಮಾ ಬಳಿಕ ನಟಿ ಅಂಜಲಿ ಬೇಡಿಕೆ ಮತ್ತಷ್ಟು ಹೆಚ್ಚಾಯಿತು. ಅಂಜಲಿ ಅನೇಕ ಸಿನಿಮಾಗಳಲ್ಲಿ ಹಾಟ್ ಮತ್ತು ಇಂಟಿಮೇಟ್ ದೃಶ್ಯಗಳಲ್ಲಿ ನಟಿಸಿದ್ದಾರೆ. ಆದರೆ ಯಾರ ಬಗ್ಗೆ ಹೇಳುತ್ತಿದ್ದಾರೆ ಎನ್ನುವುದನ್ನು ಬಹಿರಂಗ ಪಡಿಸಿಲ್ಲ. ಸತಿ ಲೀಲಾವತಿ, ಪಾವ ಕದೈಗಳ್ ಸಿನಿಮಾಗಳಲ್ಲಿ ಬೋಲ್ಡ್ ಆಗಿ ನಟಿಸಿದ್ದರು. ಪಾವ ಕದೈಗಳ್ ಸಿನಿಮಾದಲ್ಲಿ ನಟಿ ಅಂಜಲಿ ಬಾಲಿವುಡ್ ನಟಿ ಕಲ್ಕಿ ಕೊಚ್ಚಿನ್ ಜೊತೆ ಲಿಪ್ ಲಾಕ್ ದೃಶ್ಯಗಳಲ್ಲಿ ನಟಿಸಿದ್ದರು. ಇನ್ನು ತಮಿಳು ನಟ ಆರ್ಯ ಜೊತೆಯೂ ನಟಿ ಅಂಜಲಿ ಕಿಸ್ಸಿಂಗ್ ದೃಶ್ಯದಲ್ಲಿ ಕಾಣಿಸಿಕೊಂಡಿದ್ದರು. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಆರ್ಯನ್ ಖಾನ್‌ಗೆ ಝೈದ್ ಖಾನ್ ಸಪೋರ್ಟ್; ಆದ್ರೂ ಪಬ್ಲಿಕ್‌ ಪ್ಲೇಸ್‌ನಲ್ಲಿ 'ಮಿಡ್ಲ್ ಫಿಂಗರ್' ಎತ್ತಿದ್ದು ತಪ್ಪು ಅಂತಿರೋ ನೆಟ್ಟಿಗರು!
ವೈದ್ಯರ ವರದಿ ಬಳಿಕ ಜೈಲಿನಲ್ಲಿ ನಟ ದರ್ಶನ್‌ಗೆ ಫಿಸಿಯೋಥೆರಪಿ ಚಿಕಿತ್ಸೆ ಸ್ಥಗಿತ