
ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ಚೊಚ್ಚಲ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ(Lata Deenanath Mangeshkar Memorial Award) ಸ್ವೀಕರಿಸಿದರು. ಈ ಪ್ರಶಸ್ತಿ ಪಡೆದ ಮೊದಲ ವ್ಯಕ್ತಿ ಮೋದಿಯಾಗಿದ್ದಾರೆ. ಏಪ್ರಿಲ್ 24ರಂದು ಸಂಗೀತ ಲೋಕದ ಲೆಜೆಂಡ್ ಲತಾ ಮಂಗೇಶ್ಕರ್ ಅವರ ತಂದೆ ಮಾಸ್ಟರ್ ದೀನನಾಥ್ ಮಂಗೇಶ್ಕರ್ ಅವರ 80ನೇ ಪುಣ್ಯತಿಥಿ. ಅಂದೇ ಪ್ರಧಾನಿ ಮೋದಿ ಅವರಿಗೆ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಲತಾ ಮಂಗೇಶ್ಕರ್ ಅವರ ಗೌರವ ಸ್ಮರಣಾರ್ಥ ಈ ವರ್ಷದಿಂದ ಪ್ರಶಸ್ತಿ ನೀಡಲು ಕುಟುಂಬದವರು ನಿರ್ಧರಿಸಿ ಮೊದಲ ಪ್ರಶಸ್ತಿಯನ್ನು ಮೋದಿ ಅವರಿಗೆ ನೀಡಿ ಗೌರವಿಸಿದೆ.
'ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪ್ರಧಾನಿ ಮೋದಿ, ಲತಾ ದೀದಿಯಂತಹ ಹಿರಿಯ ಸಹೋದರಿ ಹೆಸರಿನಲ್ಲಿ ಪ್ರಶಸ್ತಿ ಬಂದಾಗ ಇದು ಏಕತೆ ಮತ್ತು ನನ್ನ ಮೇಲಿನ ಪ್ರೀತಿಯ ಸಂಕೇತವಾಗಿದೆ. ಹಾಗಾಗಿ ಸ್ವೀಕರಿಸದೇ ಇರಲು ಸಾಧ್ಯವಾಗಿಲ್ಲ. ಈ ಪ್ರಶಸ್ತಿಯನ್ನು ಎಲ್ಲಾ ದೇಶವಾಸಿಗಳಿಗೆ ಅರ್ಪಿಸುತ್ತೇನೆ' ಎಂದು ಹೇಳಿದರು. ಇನ್ನು ಪ್ರಶಸ್ತಿ ಸಮಾರಂಭದ ಸುಂದರ ಕ್ಷಣಗಳ ಫೋಟೋಗಳನ್ನು ಪ್ರಧಾನಿ ಮೋದಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.
PM Modi Visit ಕಾಶ್ಮೀರದ ಪಲ್ಲಿ ‘ದೇಶದ ಮೊದಲ ಇಂಗಾಲ ಮುಕ್ತ ಗ್ರಾಮ, 340 ಮನೆಗಳಿಗೂ ಸೌರ ವಿದ್ಯುತ್!
ಈ ಪ್ರಶಸ್ತಿಯನ್ನು ದಿವಂಗತ ಮಾಸ್ಟರ್ ದೀನನಾಥ್ ಮಂಗೇಶ್ಕರ್ ಸ್ಮೃತಿ ಪ್ರತಿಷ್ಠಾನ ಪುಣೆ ಮತ್ತು ಹೃದಯೇಶ್ ಆರ್ಟ್ಸ್ ಅವರ ಜಂಟಿ ಸಮಾರಂಭದಲ್ಲಿ ಮೋದಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ 92 ವರ್ಷದ ಗಾನಕೋಗಿಲೆ ಲತಾ ಮಂಗೇಶ್ಕರ್ ಫೆಬ್ರವರಿಯಲ್ಲಿ ಇಹಲೋಕ ತ್ಯಜಿಸಿದರು. ಅವರ ಸ್ಮರಣಾರ್ಥ ಈ ಪ್ರಶಸ್ತಿ ಈ ವರ್ಷದಿಂದ ಸ್ಥಾಪಿಸಲಾಗಿದೆ ಎಂದು ಕುಟುಂಬದವರು ಮಾಹಿತಿ ನೀಡಿದ್ದರು.
ಪ್ರಧಾನಿ ಮೋದಿ ಮತ್ತು ಲತಾ ಮಂಗೇಶ್ಕರ್ ಕುಟುಂಬದ ಜೊತೆ ಉತ್ತಮ ಸ್ನೇಹ ಬಾಂಧವ್ಯವಿದೆ. ಮೋದಿ ಅವರು ಲತಾ ಮಂಗೇಶ್ಕರ್ ಅವರನ್ನು ತನ್ನ ಹಿರಿಯ ಸಹೋದರಿ ಎಂದೇ ಪರಿಗಣಿಸಿದ್ದರು. ಲತಾ ಮಂಗೇಶ್ಕರ್ ಅವರ ಅಂತ್ಯಕ್ರಿಯೆಯಲ್ಲಿ ಪ್ರಧಾನಿ ಮೋದಿ ಸಹ ಭಾಗವಹಿಸಿದ್ದರು.
ಪ್ರಧಾನಿ ನರೇಂದ್ರ ಮೋದಿಗೆ ಚೊಚ್ಚಲ 'ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ'
ಪ್ರಶಸ್ತಿ ಬಗ್ಗೆ ಹೇಳುವುದಾರೆ ಈ ಪ್ರಶಸ್ತಿಯನ್ನು ಪ್ರತಿ ವರ್ಷ ರಾಷ್ಟ್ರಕ್ಕೆ, ಜನರಿಗೆ ಮತ್ತು ಸಮಾಜಕ್ಕೆ ಅದ್ಭುತವಾದ ಕೊಡುಗೆ ನೀಡಿದ ಒಬ್ಬ ವ್ಯಕ್ತಿಗೆ ಮಾತ್ರ ನೀಡಲಾಗುತ್ತದೆ. ಮೊದಲ ಪ್ರಶಸ್ತಿ ಪ್ರಕಟಿಸಿದ ಮಾಸ್ಟರ್ ದೀನನಾಥ್ ಮಂಗೇಶ್ಕರ್ ಸ್ಮೃತಿ ಪ್ರತಿಷ್ಠಾನ, ಮೊದಲ ಪ್ರಶಸ್ತಿ ಪುರಸ್ಕೃತರು ಬೇರೆ ಯಾರು ಅಲ್ಲ, ಭಾರತದ ಗೌರವಾನ್ವಿತ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಎಂದು ಘೋಷಣೆ ಮಾಡಲು ತುಂಬಾ ಸಂತೋಷವಾಗುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.