
ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ನಾರಾಯಾಣ ಮೂರ್ತಿ ಮತ್ತು ಪತಿ ಸಹ-ಸಂಸ್ಥಾಪಕ ನಾರಾಯಣ ಮೂರ್ತಿ ಇತ್ತೀಚೆಗಷ್ಟೆ ಬಾಲಿವುಡ್ ನಟಿ ಕರೀನಾ ಕಪೂರ್ ಬಗ್ಗೆ ಹೇಳಿರುವ ಮಾತುಗಳು ವೈರಲ್ ಆಗಿವೆ. ನಾರಾಯಣ ಮೂರ್ತಿ ಬಾಲಿವುಡ್ ಸ್ಟಾರ್ ಕರೀನಾ ಕಪೂರ್ ಅವರ ಒಂದು ಘಟನೆಯನ್ನು ಬಹಿರಂಗ ಪಡಿಸಿದರು. ಅಭಿಮಾನಿಗಳ ಜೊತೆ ನಡೆದುಕೊಂಡಿದ್ದು ಸರಿ ಇರಲಿಲ್ಲ ಕರೀನಾ ಕಪೂರ್ ವರ್ತನೆ ಇಷ್ಟವಾಗಿಲ್ಲ ಎಂದು ಹೇಳಿದ್ದಾರೆ. ಪತಿಯ ಮಾತನ್ನು ಕೇಳಿ ತಕ್ಷಣ ಸುಧಾ ಮೂರ್ತಿ ಕರೀನಾ ಬೆಂಬಲಕ್ಕೆ ನಿಂತರು.
ಈ ವರ್ಷದ ಆರಂಭದಲ್ಲಿ ಐಐಟಿ ಕಾನ್ಪುರದಲ್ಲಿ ನಡೆದ ಸಂವಾದದ ಸಂದರ್ಭದಲ್ಲಿ, ಬಿಲಿಯನೇರ್ ದಂಪತಿ ಕರೀನಾ ಕಪೂರ್ ಬಗ್ಗೆ ಮಾತನಾಡಿದರು. ಕರೀನಾ ಯಾಕೆ ಈ ರೀತಿ ವರ್ತಿಸಿದರು ಎಂದು ಚರ್ಚಿಸಿದರು. ಕರೀನಾ ವರ್ತನೆ ಕ್ಷಮಿಸಲು ಸಾಧ್ಯವಿಲ್ಲ ಎಂದು ನಾರಾಯಣ ಮೂರ್ತಿ ಹೇಳಿದರೆ, ಕರೀನಾ ಸುಸ್ತಾಗಿರಬಹುದು ಎಂದು ಸುಧಾ ಮೂರ್ತಿ ಬೆಂಬಲಕ್ಕೆ ನಿಂತರು. ನಾರಾಯಾಣ ಮೂರ್ತಿ ಅವರು ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ ಕರೀನಾ ಕಪೂರ್ ಅವರ ಪಕ್ಕದಲ್ಲೇ ಕುಳಿತಿದ್ದರು ಆಗ ನಡೆದ ಒಂದು ಘಟನೆಯನ್ನು ಬಹಿರಂಗ ಪಡಿಸಿ ಕರೀನಾ ವರ್ತನೆ ಇಷ್ಟವಾಗಿಲ್ಲ ಎಂದು ಹೇಳಿದರು.
ನಾರಾಯಣ ಮೂರ್ತಿ, 'ನಾನು ಲಂಡನ್‌ನಿಂದ ಬರುತ್ತಿದ್ದೆ ಆಗ ನನ್ನ ಪಕ್ಕದಲ್ಲಿ ಕರೀನಾ ಕಪೂರ್ ಕುಳಿತಿದ್ದರು. ತುಂಬಾ ಜನರು ಅವರ ಬಳಿ ಬಂದು ಹಲೋ ಹೇಳುತ್ತಿದ್ದರು. ಆದರೆ ಅವರು ಒಂದು ಪ್ರತಿಕ್ರಿಯೆ ಕೂಡ ನೀಡಿಲ್ಲ. ನನೆಗ ಅದು ಆಶ್ಚರ್ಯವಾಯಿತು. ಯಾರೇ ನನ್ನ ಬಳಿ ಬಂದರೂ ನಾನು ಎದ್ದು ನಿಂತು ನಾವು ಒಂದು ನಿಮಿಷ ಅಥವಾ ಅರ್ಧ ನಿಮಿಷ ಮಾತನಾಡಿದೆವು. ಅದನ್ನೇ ಅವರು ನಿರೀಕ್ಷಿಸುತ್ತಿದ್ದರು' ಎಂದು ಹೇಳಿದರು.
ಲಂಡನ್‌ನಲ್ಲಿ ಸುಧಾಮೂರ್ತಿ ವಿಳಾಸ ನೋಡಿ ನಂಬಲು ನಿರಾಕರಿಸಿದ ವಲಸೆ ಅಧಿಕಾರಿ
ನಾರಾಯಣ ಮೂರ್ತಿ ಕರೀನಾ ಕಪೂರ್ ಅವರನ್ನು ಟೀಕಿಸುತ್ತಿದ್ದಂತೆ ಪತ್ನಿ ಸುಧಾ ಮೂರ್ತಿ ಮಧ್ಯ ಬಂದು ಕರೀನಾ ಬೆಂಬಲಕ್ಕೆ ನಿಂತರು. 'ಅವರಿಗೆ ಮಿಲಿಯನ್ ಗಟ್ಟಲೇ ಅಭಿಮಾನಿಗಳು ಇರುತ್ತಾರೆ. ಅವರು ಸುಸ್ತಾಗಿರಬಹುದು' ಎಂದು ಹೇಳಿದರು. ಪ್ರೇಕ್ಷಕರು ಸುಧಾ ಮೂರ್ತಿ ಅವರನ್ನು ಶ್ಲಾಘಿಸಿದರ. ಆಗ ಮಾತನಾಡಿ, 'ಅದು ಸಮಸ್ಯೆಯಲ್ಲ' ಎಂದು ಹೇಳಿದರು. 'ಸುಧಾ ಮೂರ್ತಿ, ಸಂಸ್ಥಾಪಕಿ, ಸಾಫ್ಟ್‌ವೇರ್ ವ್ಯಕ್ತಿ, ಬಹುಶಃ 10,000 ಅಭಿಮಾನಿಗಳನ್ನು ಹೊಂದಿರಬಹುದು, ಆದರೆ ಅವರು ಸಿನಿಮಾ ನಟಿ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುತ್ತಾರೆ' ಎಂದು ಹೇಳಿದರು.
ನಾರಾಯಾಣ ಮೂರ್ತಿ ಮಾತನಾಡಿ, 'ಅದರಿಂದ ಏನು ಸಮಸ್ಯೆ ಇಲ್ಲ. ಯಾರಾದರೂ ಪ್ರೀತಿ ತೋರಿಸಿದಾಗ, ನೀವು ಒಳಗೆ ಹೇಗೆ ಇದ್ದರೂ ವಾಪಾಸ್ ಕೊಡಬೇಕು. ಇದು ಬಹಳ ಮುಖ್ಯ ಎಂದು ನಾನು ಭಾವಿಸುತ್ತೇನೆ. ಇವೆಲ್ಲವೂ ನಿಮ್ಮ ಅಹಂಕಾರವನ್ನು ಕಡಿಮೆ ಮಾಡುವ ಮಾರ್ಗಗಳು, ಅಷ್ಟೆ' ಎಂದು ಹೇಳಿದರು.
ಸಲ್ಮಾನ್ ಖಾನ್‌ನನ್ನು ಹಾಡಿ ಹೊಗಳಿದ ಸುಧಾ ಮೂರ್ತಿ; 'ವಾವ್' ಎಂದ ಕಪಿಲ್ ಶರ್ಮಾ
ಸಲ್ಮಾನ್ ಖಾನ್ ಬಗ್ಗೆ ಹೇಳಿಕೆ
ಸುಧಾ ಮೂರ್ತಿ ಕಳೆದ ಕೆಲವು ದಿನಗಳಿಂದ ಸುದ್ದಿಯಲ್ಲಿದ್ದಾರೆ. ಇತ್ತೀಚೆಗಷ್ಟೆ ಜನಪ್ರಿಯ ದಿ ಕಪಿಲ್ ಶರ್ಮಾ ಶೋನಲ್ಲಿ ಕಾಣಿಸಿಕೊಂಡ ನಂತರ ಸುದ್ದಿ ಮಾಡುತ್ತಿದ್ದಾರೆ. ಸಲ್ಮಾನ್ ಖಾನ್ ಬಗ್ಗೆ ಮಾತನಾಡಿ ಬಜರಂಗ್ ಭಾಯಿಜಾನ್ ಸಿನಿಮಾಗೆ ಸಲ್ಮಾನ್ ಖಾನ್ ಯಾಕೆ ಸೂಕ್ತ ಎಂದು ವಿವರಿಸಿದ್ದರು. 'ಮಗುವಿನ ಮುಗ್ದಯ ಸಲ್ಮಾನ್ ಖಾನ್ ಮಾತ್ರ ತೆರೆಮೇಲೆ ಅಂತ ಪಾತ್ರ ತರಬಲ್ಲರು. ಅವರು ಬಜರಂಗಿ ಭಾಯಿಜಾನ್ ಮಾಡಲು ಫಿಟ್ ಆಗಿದ್ದಾರೆ' ಎಂದು ಸುಧಾ ಮೂರ್ತಿ ಹೇಳಿದ್ದರು. ಸುಧಾ ಮೂರ್ತಿ ಮಾತಿಗೆ ಕಪಿಲ್ ಶರ್ಮಾ ವಾವ್ ಎಂದು ಸಂತಸ ವ್ಯಕ್ತಪಡಿಸಿದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.