
ಸೂಪರ್ ಹಿಟ್ ಪುಷ್ಪ ಸಿನಿಮಾದ ಶ್ರೀವಲ್ಲಿ ಪಾತ್ರದ ಬಗ್ಗೆ ನಟಿ ಐಶ್ವರ್ಯಾ ರಾಜೇಶ್ ಹೇಳಿಕೆ ಈಗ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ರಶ್ಮಿಕಾಗಿಂತ ಶ್ರೀವಲ್ಲಿ ಪಾತ್ರಕ್ಕೆ ತಾನೆ ಫಿಟ್ ಆಗುತ್ತಿದ್ದೆ ಎಂದು ಐಶ್ವರ್ಯಾ ರಾಜೇಶ್ ಹೇಳಿಕೆಗೆ ರಶ್ಮಿಕಾ ಅಭಿಮಾನಿಗಳು ಗರಂ ಆಗಿದ್ದರು. ತನ್ನ ಹೇಳಿಕೆಯನ್ನು 'ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ' ಎಂದು ಐಶ್ವರ್ಯಾ ರಾಜೇಶ್ ದೀರ್ಘವಾದ ಪತ್ರ ಬರೆದಿದ್ದಾರೆ. ಆದರೂ ಸಹ ರಶ್ಮಿಕಾ ಅಭಿಮಾನಿಗಳು ಅಸಮಾಧಾನ ಹೊರಹಾಕಿದ್ದರು. ಈ ಬಗ್ಗೆ ನಟಿ ರಶ್ಮಿಕಾ ಮಂದಣ್ಣ ಕೊನೆಗೂ ಪ್ರತಿಕ್ರಿಯಿಸಿದ್ದಾರೆ.
ಐಶ್ವರ್ಯಾ ರಾಜೇಶ್ ತನ್ನ ಹೇಳಿಕೆಯಲ್ಲಿ, ತನ್ನ ಮಾತನ್ನು ತಪ್ಪಾಗಿ ಅರ್ಥೈಸಲಾಗಿದೆ. ರಶ್ಮಿಕಾ ಅವರ ಕೆಲಸದ ಬಗ್ಗೆ ಆಳವಾದ ಮೆಚ್ಚುಗೆಯನ್ನು ಹೊರತುಪಡಿಸಿ ಬೇರೇನೂ ಇಲ್ಲ ಎಂದು ಹೇಳಿದ್ದಾರೆ.
ಐಶ್ವರ್ಯಾ ರಾಜೇಶ್ ದೀರ್ಘ ಪತ್ರ
'ನನ್ನ ಕೆಲಸದ ಬಗ್ಗೆ ಮಾತನಾಡುತ್ತಾ, ತೆಲುಗು ಚಿತ್ರರಂಗದಲ್ಲಿ ನಾನು ಯಾವ ರೀತಿಯ ಪಾತ್ರಗಳನ್ನು ಮಾಡಲು ಬಯಸುತ್ತೇನೆ ಎಂದು ಇತ್ತೀಚಿನ ಸಂದರ್ಶನವೊಂದರಲ್ಲಿ ನನ್ನನ್ನು ಕೇಳಲಾಯಿತು. ನಾನು ತೆಲುಗು ಚಿತ್ರರಂಗವನ್ನು ತುಂಬಾ ಇಷ್ಟಪಡುತ್ತೇನೆ ಮತ್ತು ನನಗೆ ಇಷ್ಟವಾಗುವ ಪಾತ್ರಗಳು ಸಿಕ್ಕರೆ ನಾನು ಖಂಡಿತವಾಗಿಯೂ ತೆಲುಗು ಚಿತ್ರಗಳನ್ನು ಮಾಡುತ್ತೇನೆ ಎಂದು ಉತ್ತರಿಸಿದೆ. ಒಂದು ಉದಾಹರಣೆಯನ್ನು ಹೇಳುವುದಾದರೆ, ಪುಷ್ಪದಲ್ಲಿನ ಶ್ರೀವಲ್ಲಿ ಪಾತ್ರವು ನನಗೆ ತುಂಬಾ ಇಷ್ಟವಾಯಿತು, ಅಂತಹ ಪಾತ್ರಗಳು ನನಗೆ ಸರಿಹೊಂದುತ್ತವೆ ಎಂದು ನಾನು ಭಾವಿಸಿದೆ' ಎಂದು ತನ್ನ ಹೇಳಿಕೆಯಲ್ಲಿ ಹೇಳಿದ್ದಾರೆ.
ರಶ್ಮಿಕಾಗಿಂತ 'ಪುಷ್ಪ' ಸಿನಿಮಾಗೆ ನಾನೆ ಫಿಟ್ ಆಗ್ತಿದ್ದೆ; ನಟಿ ಐಶ್ವರ್ಯಾ ರಾಜೇಶ್ ಶಾಕಿಂಗ್ ಹೇಳಿಕೆ
'ಆದರೆ ದುರದೃಷ್ಟವಶಾತ್ ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಚಿತ್ರದಲ್ಲಿ ನಟಿ ರಶ್ಮಿಕಾ ಮಂದಣ್ಣ ಅವರ ಅದ್ಭುತ ಕೆಲಸವನ್ನು ನಾನು ಅವಹೇಳನ ಮಾಡುತ್ತಿದ್ದೇನೆ ಎಂಬ ಭಾವನೆಯನ್ನು ಮೂಡಿಸಲು ಈ ರೀತಿಯಲ್ಲಿ ವರದಿ ಮಾಡಲಾಗುತ್ತಿದೆ' ಎಂದು ಅವರು ಹೇಳಿದರು.
ಸೋತರೂ ಕಮ್ಮಿಯಾಗಿಲ್ಲ ರಶ್ಮಿಕಾ ಹವಾ; ರಿಜೆಕ್ಟ್ ಮಾಡಿದ್ದ ಸ್ಟಾರ್ ಜೊತೆಯೇ ಮಂದಣ್ಣ ರೊಮ್ಯಾನ್ಸ್
ರಶ್ಮಿಕಾ ಮಂದಣ್ಣ ಪ್ರತಿಕ್ರಿಯೆ
ಐಶ್ವರ್ಯಾ ಅವರ ದೀರ್ಘ ಪೋಸ್ಟ್‌ಗೆ ರಶ್ಮಿಕಾ ಪ್ರತಿಕ್ರಿಯಿಸಿದ್ದಾರೆ. 'ಹಾಯ್ ಲವ್.. ಈಗ ತಾನೇ ಇದನ್ನು ನೋಡಿದೆ. ಏನೆಂದರೆ ನೀವು ಏನು ಹೇಳಿದ್ದೀರಿ ಎನ್ನುವುದನ್ನು ನಾನು ಸಂಪೂರ್ಣವಾಗಿ ಅರ್ಥಮಾಡಿಕೊಂಡಿದ್ದೇನೆ ಮತ್ತು ನಮ್ಮನ್ನು ವಿವರಿಸಲು ನಮಗೆ ಯಾವುದೇ ಕಾರಣಗಳಿಲ್ಲ ಎಂದು ನಾನು ಬಯಸುತ್ತೇನೆ. ನಿಮಗೆ ತಿಳಿದಿರುವಂತೆ ನಾನು ಮಾತ್ರ ಮತ್ತು ನಿಮ್ಮ ಬಗ್ಗೆ ಪ್ರೀತಿ ಮತ್ತು ಗೌರವವನ್ನು ಹೊಂದಿದ್ದೇನೆ. ನಿಮ್ಮ ಫರ್ಹಾನಾ ಲವ್ ಚಿತ್ರಕ್ಕೆ ಮತ್ತೊಮ್ಮೆ ಆಲ್ ದಿ ಬೆಸ್ಟ್' ಎಂದು ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.