ಕಣ್ಣಿಗಾಗಿ ಮಗನ ಮೇಲೆ ಜೀವನಪೂರ್ತಿ ದ್ವೇಷ ಕಾರಿದ್ದ ನಾನಾ ಪಾಟೇಕರ್​​! ಪುತ್ರನ ಸಾವಿನ ಬಳಿಕ ಪಶ್ಚಾತ್ತಾಪ

By Suchethana DFirst Published Jun 25, 2024, 2:41 PM IST
Highlights

ಕಣ್ಣಿಗಾಗಿ ಮಗನ ಮೇಲೆ ಜೀವನಪೂರ್ತಿ ದ್ವೇಷ ಕಾರಿದ್ದ ನಾನಾ ಪಾಟೇಕರ್​​! ಪುತ್ರನ ಸಾವಿನ ಬಳಿಕ ಪಶ್ಚಾತ್ತಾಪ ಪಟ್ಟು ದಿನಕ್ಕೆ 60 ಸಿಗರೇಟ್​ ಸೇಯುತ್ತಿದ್ರಂತೆ.  ಆಗಿದ್ದೇನು? 
 

  ಹಲವು ದಶಕಗಳಿಂದ ಬಾಲಿವುಡ್​ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿವರು  ನಟ ನಾನಾ ಪಾಟೇಕರ್. ತಮ್ಮ ಕೆಲಸದಿಂದ ಜನರ ಹೃದಯದಲ್ಲಿ ವಿಶೇಷ ಸ್ಥಾನವನ್ನು ಗಳಿಸಿದ್ದಾರೆ.  ಎಲ್ಲಾ ಬಗೆಯ ಪಾತ್ರಗಳಿಗೂ ಇವರು ಸೈ ಎನಿಸಿಕೊಂಡಿದ್ದಾರೆ.  ಹಾಸ್ಯ ಮಾತ್ರವಲ್ಲದೆ ಭಾವನಾತ್ಮಕ ಮತ್ತು ಕಠಿಣ ನಟನೆಯನ್ನೂ ಚೆನ್ನಾಗಿ ಮಾಡುತ್ತಾರೆ. ಆದರೆ ಇದೀಗ ಖುದ್ದು ಅವರೇ ತಮ್ಮ ಜೀವನದ ಕರಾಳ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಪ್ರತಿ ದಿನವೂ 60 ಸಿಗರೇಟ್​ ಸೇದುವ ಅಭ್ಯಾಸ ಹೊಂದಿದ್ದ ಬಗ್ಗೆ ಅವರು ನೆನಪಿಸಿಕೊಂಡಿದ್ದಾರೆ. ತಮ್ಮ ಮಗನನ್ನು ಯಾಕೆ ದ್ವೇಷ ಮಾಡುತ್ತಿದ್ದೆ, ಅವನು ಸತ್ತ ಮೇಲೆ ತಮಗೆ ಉಂಟಾದ ಪಶ್ಚಾತ್ತಾಪ ಇತ್ಯಾದಿಗಳ ಕುರಿತು ನಟ ಈಗ ಹೇಳಿಕೊಂಡಿದ್ದಾರೆ.
 

 'ದಿ ಲಾಲಂಟಾಪ್' ಜೊತೆಗಿನ ಸಂಭಾಷಣೆಯಲ್ಲಿ, ಅವರು ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.  ನಾನಾ ಪಾಟೇಕರ್ ಅವರಿಗೆ ಮಗ ಹುಟ್ಟಿದಾಗ ಆತನಿಗೆ ಕಣ್ಣಿನ ಸಮಸ್ಯೆ ಜೊತೆ ಅನಾರೋಗ್ಯ ಸಮಸ್ಯೆ ಬಾಧಿಸುತ್ತಿತ್ತು. ಹುಟ್ಟುತ್ತಲೇ ಈ ಸಮಸ್ಯೆ ಇದ್ದುದರಿಂದ ಆತನನ್ನು ಕಂಡರೆ ಅಪ್ಪ ನಾನಾ ಪಾಟೇಕರ್​ಗೆ ಆಗುತ್ತಿರಲಿಲ್ಲವಂತೆ! ಮಗನಿಗೆ ದೂರ್ವಾಸ ಎಂದು  ಹುಟ್ಟಿನಿಂದಲೇ ಒಂದು ಕಣ್ಣಿನಲ್ಲಿ ಸಮಸ್ಯೆ ಇದ್ದುದರಿಂದ  ಅವನು ದೃಷ್ಟಿಹೀನನಾಗಿದ್ದ. ಆದ್ದರಿಂದ ನಾನು ಅವನನ್ನು ತುಂಬಾ ದ್ವೇಷಿಸಲು ಪ್ರಾರಂಭಿಸಿದೆ, ನಾನು ಅವನನ್ನು ನೋಡಿದಾಗ,  ಮಗನ ಬಗ್ಗೆ ಜನರು ಏನು ಯೋಚಿಸುತ್ತಾರೆ ಎಂದು ನಾನು ಯೋಚಿಸಿದೆ. ಆದರೆ, ಆ ಸಮಸ್ಯೆಯಿಂದ ಅವನಿಗೆ ಯಾವ ರೀತಿ ಸಂಕಟವಾಗುತ್ತಿತ್ತು, ಅವನು ಏನು ಯೋಚಿಸುತ್ತಿದ್ದ, ಅವನಲ್ಲಿ ಆಗುತ್ತಿದ್ದ ತುಮುಲಗಳ ಬಗ್ಗೆ ನಾನು ಯೋಚಿಸಲೇ ಇಲ್ಲ. ಆದರೆ ಸಮಾಜ ಅವನನ್ನು ಹೇಗೆ ನೋಡುತ್ತಲೇ ಎಂದು ಯೋಚಿಸುತ್ತಲೇ ಆತನನ್ನು ದ್ವೇಷಿಸಲು ಶುರು ಮಾಡಿದೆ. ಆತನ ಜೀವನಪೂರ್ತಿ ದ್ವೇಷಿಸುತ್ತಲೇ ಇದ್ದೆ ಎನ್ನುವುದನ್ನು ನೆನಪಿಸಿಕೊಂಡಿದ್ದಾರೆ. 

Latest Videos

ಸ್ಟಾರ್​ ನಟನ ಅಡುಗೆಯವನಿಗೆ ದಿನಕ್ಕೆ 2 ಲಕ್ಷ ರೂ. ಸಂಬಳ! ಹಕ್ಕಿ ತಿನ್ನುವ ಆಹಾರ ಇದಂತೆ...

ಒಂದು ದಿನ ಆತ ಇಹಲೋಕ ತ್ಯಜಿಸಿದ. ಆತನ ಸಾವಿನ ಬಳಿಕ ನನಗೆ ಪಶ್ಚಾತ್ತಾಪವಾಯಿತು. ನಾನು ಮಾಡಿದ್ದು ತಪ್ಪು ಎನ್ನಿಸತೊಡಗಿತು. ಮಗನ ಸಾವು ನನ್ನನ್ನು ಬಾಧಿಸಿತು. ಅದಕ್ಕಾಗಿ ಸಿಗರೇಟ್​ ಸೇಯುವ ಅಭ್ಯಾಸ ರೂಢಿಸಿಕೊಂಡುಬಿಟ್ಟೆ. ದಿನಕ್ಕೆ 60 ಸಿಗರೇಟ್​ ಸೇದಲು ಶುರು ಮಾಡಿದೆ.  ಸ್ನಾನ ಮಾಡುವಾಗಲೂ ಸಿಗರೇಟ್ ಸೇದುತ್ತಿದ್ದೆ. ಆ ಸಮಯದಲ್ಲಿ ನಾನು ದಿನಕ್ಕೆ ಸುಮಾರು 60 ಸಿಗರೇಟ್ ಸೇದುತ್ತಿದ್ದೆ. ವಾಸನೆಯಿಂದಾಗಿ ನನ್ನ ಕಾರಿನಲ್ಲಿ ಯಾರೂ ಕುಳಿತುಕೊಳ್ಳುತ್ತಿರಲಿಲ್ಲ.  ನಾನು ಎಂದಿಗೂ ಮದ್ಯ ಸೇವಿಸಿಲ್ಲ, ಆದರೆ ಮಗನ ನೆನಪಾದಾಗಲೆಲ್ಲಾ ಹೆಚ್ಚು ಧೂಮಪಾನ ಮಾಡುತ್ತಿದ್ದೆ ಎಂದಿದ್ದಾರೆ.

ಕೊನೆಗೆ ನನ್ನ ತಂಗಿಯ ಕೆಲವು ಮಾತುಗಳು ನನ್ನನ್ನು ಈ ಕೆಟ್ಟ ಚಟದಿಂದ ಶಾಶ್ವತವಾಗಿ ಬಿಡುವಂತೆ ಮಾಡಿತು. ನನ್ನ ತಂಗಿಯೂ ಒಬ್ಬನೇ ಮಗನನ್ನು ಕಳೆದುಕೊಂಡಿದ್ದಾಳೆ. ಒಂದು ದಿನ ನಾನು  ಧೂಮಪಾನದ ನಂತರ ಕೆಮ್ಮುವುದನ್ನು ಆಕೆ ನೋಡಿದಳು. ಬುದ್ಧಿಮಾತು ಹೇಳಿದಳು. ಧೂಮಪಾನದಿಂದ ಆಗುವ ಸಮಸ್ಯೆಗಳ ಕುರಿತು ಹೇಳಿದಳು. ಅವಳು ಬುದ್ಧಿ ಹೇಳಿದ ಮೇಲೆ ನಾನು ಸಿಗರೇಟ್​ ಬಿಟ್ಟುಬಿಟ್ಟೆ ಎಂದಿದ್ದಾರೆ. 

ಮದ್ವೆ ದಿನವೇ ಸೋನಾಕ್ಷಿ ಪತಿ ಫುಲ್​ ಟೈಟ್​ ? ವಿಡಿಯೋ ನೋಡಿ... ಮುಗೀತು ನಿನ್​ ಕಥೆ ಅಂತಿರೋ ಫ್ಯಾನ್ಸ್​!

click me!