ನಟಿ ನಮಿತಾ ಜೊತೆ 4ನೇ ಮದುವೆ ಆಗಿದ್ರಾ ಶರತ್ ಬಾಬು? ಪತಿ ವೀರೇಂದ್ರ ಚೌಧರಿ ಹೇಳಿದ್ದೇನು?

Published : May 23, 2023, 02:53 PM IST
ನಟಿ ನಮಿತಾ ಜೊತೆ 4ನೇ ಮದುವೆ ಆಗಿದ್ರಾ ಶರತ್ ಬಾಬು? ಪತಿ ವೀರೇಂದ್ರ ಚೌಧರಿ ಹೇಳಿದ್ದೇನು?

ಸಾರಾಂಶ

ನಟಿ ನಮಿತಾ ಜೊತೆ 4ನೇ ಮದುವೆ ಆಗಿದ್ರಾ ಶರತ್ ಬಾಬು? ವದಂತಿ ಬಗ್ಗೆ ಪತಿ ವೀರೇಂದ್ರ ಚೌಧರಿ ಪ್ರತಿಕ್ರಿಯೆ ನೀಡಿದ್ದರು.   

ದಕ್ಷಿಣ ಭಾರತೀಯ ಸಿನಿಮಾರಂಗದ ಖ್ಯಾತ ನಟ ಶರತ್ ಬಾಬು ಕೊನೆಯುಸಿರೆಳೆದಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ನಟ ಶರತ್ ಅವರನ್ನು ಕಳೆದ ಒಂದು ತಿಂಗಳ ಹಿಂದೆ ಆಸ್ಪತ್ರೆಗೆ ದಾಖಲಾಸಿಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ (ಮೇ 22) ಹೈದಾರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ್ದಾರೆ. ಇಂದು (ಮೇ 23) ಶರತ್ ಅವರ ಅಂತ್ಯಕ್ರಿಯೆ ಚೆನ್ನೈನಲ್ಲಿ ನೆರವೇರಲಿದೆ. ಶರತ್ ಬಾಬು ನಿಧನರಾದ ಬೆನ್ನಲ್ಲೆ ನಟಿ ನಮಿತಾ ಹೆಸರು ವೈರಲ್ ಆಗಿದೆ. ಅಂದಹಾಗೆ ಈ ಹಿಂದೆ ನಮಿತಾ ಮತ್ತು ಶರತ್ ಬಾಬು ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದರು.  

ನಟ ಶರತ್ ಬಾಬು ಅವರ ವೈಯಕ್ತಿಕ ಜೀವನ ಅಷ್ಟು ಸುಂದರವಾಗಿರಲಿಲ್ಲ. ಅವರು 3 ಮದುವೆಯಾಗಿದ್ದರು ಎನ್ನುವ ಸುದ್ದಿ ಇದೆ. ಮೊದಲು 1974ಲ್ಲಿ ತಮಗಿಂತ ದೊಡ್ಡವರಾದ ಹಾಸ್ಯ ನಟಿ ರಮಾಪ್ರಭ ಅವರನ್ನು ಮದುವೆ ಆಗಿದ್ದರು. ಆದರೆ ಮೊದಲ ಮದುವೆ ದೀರ್ಘಕಾಲ ನಿಲ್ಲಲಿಲ್ಲ. 1988ರಲ್ಲಿಇಬ್ಬರೂ ಬೇರೆ ಬೇರೆ ಆದರು. ನಂತರ ಸ್ನೇಹ ನಂಬಿಯಾರ್ ಎಂಬುವರನ್ನು ಶರತ್ ಬಾಬು ಮದುವೆಯಾದರು. ಆದರೆ ಅವರ ಜೊತೆಯೂ ಹೆಚ್ಚು ಸಮಯ ಸಂಸಾರ ಮಾಡಿಲ್ಲ. ಬಳಿಕ 3ನೇ ಮದುವೆಯಾಗಿದ್ದರು ಎನ್ನುವ ಸುದ್ದ ಕೂಡ ಇದೆ. ಇದೆಲ್ಲದರ ನಡುವೆ ನಟಿ ನಮಿತಾ ಜೊತೆ ಶರತ್ ಬಾಬು ಲಿವ್‌ಇನ್ ರಿಲೇಷನ್‌ಶಿಪ್‌ನಲ್ಲಿ ಇದ್ದಾರೆ, ಮದುವೆ ಕೂಡ ಆಗಿದ್ದಾರೆ ಎನ್ನುವ ವದಂತಿ ಜೋರಾಗಿತ್ತು. 

7 ವರ್ಷಗಳ ಹಿಂದೆ ಶರತ್ ಬಾಬು ಮತ್ತು ನಮಿತಾ ಮದುವೆ ಆಗಿದ್ದಾರೆ ಎನ್ನುವ ಸುದ್ದಿ ಜೋರಾಗಿ ಕೇಳಿಬಂದಿತ್ತು. ಆದರೆ ಈ ಬಗ್ಗೆ ಶರತ್ ಬಾಬು ಸಂದರ್ಶನವೊಂದರಲ್ಲಿ ಬೇಸರ ವ್ಯಕ್ತಪಡಿಸಿದ್ದರು. ಸುಳ್ಳು ಸುದ್ದಿ ಎಂದು ಪ್ರತಿಕ್ರಿಯೆ ನೀಡಿದ್ದರು. ಅಷ್ಟೆಯಲ್ಲದೇ ಮತ್ತೆ ಮದುವೆ ಆಗುವ ಉದ್ದೇಶವಿಲ್ಲ ಎಂದು ಖಡಕ್ ಆಗಿಯೇ ಹೇಳಿದ್ದರು. 

Sarath Babu Death: ಖ್ಯಾತ ನಟನ ನಿಧನಕ್ಕೆ ಪ್ರಧಾನಿ ಮೋದಿ, ರಜನಿಕಾಂತ್, ಚಿರಂಜೀವಿ ಸೇರಿ ಅನೇಕ ಗಣ್ಯರ ಸಂತಾಪ

ಇನ್ನು ಈ ಬಗ್ಗೆ ನಟಿ ನಮಿತಾ ಅವರ ಪತಿ ಕೂಡ ಪ್ರತಿಕ್ರಿಯೆ ನೀಡಿದ್ದರು. 2017ರಲ್ಲಿ ನಮಿತಾ ಉದ್ಯಮಿ ವೀರೇಂದ್ರ ಚೌಧರಿ ಅವರನ್ನು ಮದುವೆ ಆಗಿದರು. ಇಬ್ಬರ ಮದುವೆ ಸಮಯದಲ್ಲೂ ಶರತ್ ಬಾಬು ಜೊತೆಗಿನ ಮದುವೆ ಸುದ್ದಿ ಭಾರೀ ಸದ್ದು ಮಾಡಿತ್ತು. ನಂತರ ಸಂದರ್ಶನವೊಂದರಲ್ಲಿ ವೀರೇಂದ್ರ ಚೌಧರಿ ಮಾತನಾಡಿದ್ದರು. 'ಆಕೆಯ ಬಗ್ಗೆ ಸಾಕಷ್ಟು ಗಾಸಿಪ್ ಬಂದಿದೆ. ಸತ್ಯ ಏನು ಎನ್ನುವುದು ನಮಗೆ ಗೊತ್ತು. ಅದನ್ನು ಕೇಳಿ ಸುಮ್ಮನಾಗುತ್ತೇವೆ. ಇಂತಹ ಗಾಸಿಪ್ ಕೇಳಿ ನಕ್ಕು ಸುಮ್ಮನಾಗುತ್ತೇವೆ' ಎಂದು ಹೇಳಿದ್ದರು. 

Sarath Babu Death: ಫಲಿಸದ ಪ್ರಾರ್ಥನೆ, 'ಅಮೃತವರ್ಷಿಣಿ' ನಟ ಶರತ್ ಬಾಬು ಇನ್ನಿಲ್ಲ

'ಗಾಸಿಪ್ ಹೇಗೆ ಹುಟ್ಟಿತು ಗೊತ್ತಿಲ್ಲ. ಶರತ್ ಬಾಬು ಯಾರು ಅನ್ನೋದು ನಮಗೆ ಗೊತ್ತಿಲ್ಲ. ಅದನ್ನು ನಾವು ಸೀರಿಯಸ್ ಆಗಿ ತೆಗೆದುಕೊಂಡಿಲ್ಲ. ಆದರೆ ಅದು ಜೋರಾಗಿ ಸದ್ದು ಮಾಡಿತ್ತು. ನನಗೆ ಗೊತ್ತಿರುವಂತೆ ಶರತ್ ಬಾಬು ಅವರು ಕೂಡ ಈ ವಿಚಾರದಲ್ಲಿ ಬೇಸರಗೊಂಡಿರುತ್ತಾರೆ. ಅವರು ಹಿರಿಯ ನಟ. ಅವರ ಬಗ್ಗೆ ಇಂತಹ ಸುದ್ದಿ ಹರಡುವುದು ಸರಿಯಲ್ಲ' ಎಂದು ಹೇಳಿದ್ದರು. ಅಲ್ಲಿಗೆ ನಮಿತಾ ಮತ್ತು ಶರತ್ ಬಾಬು ಅವರ ಮದುವೆ ವದಂತಿಗೆ ಬ್ರೇಕ್ ಬಿದ್ದಿತ್ತು. 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?