ಖ್ಯಾತ ನಿರೂಪಕಿ ಅಪರ್ಣಾ ಕೊನೆ ಆಸೆ ಹೇಳಿ ಭಾವುಕರಾದ ಪತಿ ನಾಗರಾಜ್ ವಸ್ತಾರೆ

By Ravi Janekal  |  First Published Jul 12, 2024, 8:28 AM IST

ಕಳೆದೆರಡು ವರ್ಷಗಳಿಂದ ಶ್ವಾಸಕೋಶದ ಕ್ಯಾನ್ಸರ್‌ನಿಂದ ಕನ್ನಡದ ಖ್ಯಾತ ನಿರೂಪಕಿ ಅಪರ್ಣಾ(58) ಗುರುವಾರ(ಜು.11) ರಾತ್ರಿ ಕ್ಯಾನ್ಸರ್ ವಿರುದ್ಧ ಹೋರಾಡುತ್ತಲೇ ಇಹಲೋಕ ತ್ಯಜಿಸಿದ್ದಾರೆ


ಬೆಂಗಳೂರು (ಜು.12): ಕಳೆದೆರಡು ವರ್ಷಗಳಿಂದ ಶ್ವಾಸಕೋಶದ ಕ್ಯಾನ್ಸರ್‌ನಿಂದ ಕನ್ನಡದ ಖ್ಯಾತ ನಿರೂಪಕಿ ಅಪರ್ಣಾ(58) ಗುರುವಾರ(ಜು.11) ರಾತ್ರಿ ಕ್ಯಾನ್ಸರ್ ವಿರುದ್ಧ ಹೋರಾಡುತ್ತಲೇ ಇಹಲೋಕ ತ್ಯಜಿಸಿದ್ದಾರೆ.

ಅಪರ್ಣಾ ಸಾವಿನ ಸುದ್ದಿಯಿಂದ ಕನ್ನಡಿಗರು ಆಘಾತಕ್ಕೆ ಒಳಗಾಗಿದ್ದಾರೆ. ಅವರ ಸಾವು ನಂಬಲು ಆಗುತ್ತಿಲ್ಲ. ಇನ್ನು ಅಪಾರವಾಗಿ ಪ್ರೀತಿಸುತ್ತಿದ್ದ ಅಪರ್ಣಾ ಪತಿ ನಾಗರಾಜ ವಸ್ತಾರೆ ಅವರಿಗೆ ಅಪರ್ಣಾ ಸಾವು ಅರಗಿಸಿಕೊಳ್ಳಲಾಗುತ್ತಿಲ್ಲ. ತೀವ್ರ ದುಃಖಿತರಾಗಿದ್ದಾರೆ. ಅಪರ್ಣಾ ಸಾವಿನ ಬಳಿಕ ನೋವಿನ ದಿನಗಳನ್ನು ಬಿಚ್ಚಿಟ್ಟಿದ್ದಾರೆ. ಎರಡು ವರ್ಷಗಳಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ವೈದ್ಯರು 'ಅಪರ್ಣಾ ಹೆಚ್ಚೆಂದರೆ ಇನ್ನು ಆರು ತಿಂಗಳು ಬದುಕಬಹುದು' ಎಂದು ಹೇಳಿದ್ದರು. ಆದರೆ ಒಂದು ವರ್ಷಗಳ ಕಾಲ ಬದುಕಿದೆ ದಿಟ್ಟೆ ಆಕೆ. ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ನಾವಿಬ್ಬರೂ ಕೊನೆಗೂ ಸೋತುಬಿಟ್ಟೆವು ಎಂದು ಗದ್ಗದಿತರಾಗಿದ್ದಾರೆ.

Tap to resize

Latest Videos

ಕಾದಿದ್ದೇನೆ ಮರಳಿ ಜೀವ ತಂದಾಳೆಂದು, ಅಪರ್ಣ ಸಾವಿಗೂ ಮುನ್ನ ಪತಿ ಬರೆದ ನೋವಿನ ಕವನ!

ವೈಯಕ್ತಿವಾಗಿ ನಾನು ಅಪರ್ಣಾ ತುಂಬಾ ಖಾಸಗಿಯಾಗಿ ಬದುಕಿದವರು. ಅಷ್ಟೇ ಖಾಸಗಿಯಾಗಿ ನಾನು ಅವಳನ್ನು ಬಿಳ್ಕೊಡಲಿಕ್ಕೆ ಇಷ್ಟಪಡ್ತೀನಿ. ಹಾಗಂತ ಆಕೆ ನನಗೆ ಸೇರೋಕೆ ಮುಂಚೆನೇ ಹೆಚ್ಚಾಗಿ ಕರ್ನಾಟಕಕ್ಕೆ ಸೇರಿದವಳು. ಅಪರ್ಣಾಗೆ ಒಂದು ಆಶಯ ಇತ್ತು. ಸಾವಿನ ಬಳಿಕ ಮಾಧ್ಯಮಗಳ ಮುಂದೆ‌ ಎಲ್ಲವನ್ನು ಹೇಳುವಂತೆ ತಿಳಿಸಿದ್ರು. ಎರಡು ವರ್ಷಗಳ ಹಿಂದೆ ಜುಲೈನಲ್ಲಿ ಶ್ವಾಸಕೋಶ ಕ್ಯಾನ್ಸರ್ ಅಂತಾ ಗೊತ್ತಾಯ್ತು. ಮೊದಲು ನೋಡಿದ ವೈದ್ಯರು ಇನ್ನೂ ಆರು ತಿಂಗಳು ಬದುಕಬಹುದು ಅಂತಾ ಹೇಳಿದ್ರು. ಅವರ ಛಲಗಾತಿ ನಾನು ಬದುಕ್ತಿನಿ ಅಂತಾ ಹೇಳ್ತಿದ್ಳು. ಅಲ್ಲಿಂದ ಜನೆವರಿತನಕ ಶಕ್ತಿಮೀರಿ ಕ್ಯಾನ್ಸರ್ ವಿರುದ್ಧ ಹೋರಾಟ ಮಾಡಿದ್ಳು. ಫೆಬ್ರವರಿಯಿಂದ ಕೈಚೆಲ್ಲಿದಳು. ಕ್ಯಾನ್ಸರ್ ಅಂತಾ ಗೊತ್ತಿದ್ದರೂ ಅವಳು  ಒಂದೂವರೆ ವರ್ಷದಿಂದ ಛಲದಿಂದ ಬದುಕಿದ್ಳು. ನಿಜಕ್ಕೂ ಅವಳು ಧೀರೆ. ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ನಾವಿಬ್ಬರೂ ಸೋತಿದ್ದೀವಿ. ಬರೋ ಅಕ್ಟೋಬರ್ ಗೆ ಅವಳಿಗೆ 58 ವರ್ಷ ತುಂಬ್ತಿತ್ತು ಕಣ್ಣೀರಾಗಿದ್ದಾರೆ. 

ಮನೆ ಬಳಿ ಅಂತಿಮ ದರ್ಶನ:

ಬೇರೆ ಎಲ್ಲೂ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲು ಆಗುತ್ತಿಲ್ಲ. ಕನ್ನಡ ಆಸಕ್ತರು, ಅಪರ್ಣಾ ಅಭಿಮಾನಿಗಳು, ಸ್ನೇಹಿತರು ಮನೆ ಬಳಿಯೇ ಅಂತಿಮ ದರ್ಶನ ಪಡೆಯುವಂತೆ ಮನವಿ ಮಾಡಿದ ಅಪರ್ಣಾ ಪತಿ ನಾಗರಾಜ್ ವಸ್ತಾರೆ.

ಇಂದು 12 ಗಂಟೆವರೆಗೆ ರಾಹುಕಾಲವಿದೆ. ಅನಂತರ ಮನೆಯಲ್ಲಿ ಕೆಲ ಮನೆಯ ಆಚರಣೆ ಇರಲಿವೆ. ಬಳಿಕ ಬನಶಂಕರಿ ವಿದ್ಯುತ್ ಚಿತಗಾರದಲ್ಲಿ ಅಂತಿಮ ವಿಧಿವಿಧಾನ ಮಾಡಲಿದ್ದೇವೆ. ಯಾವ ಸಂಪ್ರಾದಯ ಪ್ರಕಾರ ಅನ್ನೋದು ಮನೆಗೆ ಇರಲಿ. ಅದು ಒಳಮನೆಯ ಸಂಪ್ರದಾಯ. ಅದನ್ನ ಬೀದಿಗೆ ತರೋದು ಬೇಡ. ಒಳಮನೆಯ ಆಚರಣೆ ಬಗ್ಗೆ ಹೊರಗೆ ತಿಳಿಸೋದು ಬೇಡ ಎಂದು ಮನವಿ ಮಾಡಿದ ನಾಗರಾಜ ವತ್ಸಾರೆ.

'ಮೆಟ್ರೋ'ಗೆ ಕಳೆ ಅಂತ ಬಂದಿದ್ದೇ ಇವರ ಧ್ವನಿಯಿಂದ: ಭಾಷೆಗೆ ತಕ್ಕ ಭಾವನೆ ಎಂದರೆ ಅದು ಅಪರ್ಣಾ!

ನಟನೆ, ನಿರೂಪಣೆ ಮೂಲಕ ಖ್ಯಾತಿ:
1984ರಲ್ಲಿ ತೆರೆಕಂಡ ಮಸಣದ ಹೂವು ಚಿತ್ರದ ಮೂಲಕ ಸಿನಿಮಾ ರಂಗ ಪ್ರವೇಶಿಸಿದ್ದ ಅಪರ್ಣಾ ಅವರು, 90ರ ದಶಕದಲ್ಲಿ ಚಂದನ ವಾಹಿನಿಯಲ್ಲಿ ಕಾರ್ಯಕ್ರಮಗಳ ನಿರೂಪಣೆ, ನಂತರದಲ್ಲಿಯು ರೇಡಿಯೋ ಮತ್ತು ಅನೇಕ ಖಾಸಗಿ ಟಿವಿ ಕಾರ್ಯಕ್ರಮಗಳ ನಿರೂಪಣೆಯನ್ನು ನಡೆಸಿಕೊಟ್ಟಿದ್ದರು. ಸಿನಿಮಾ, ಧಾರವಾಹಿಗಳಲ್ಲಿ ನಟನೆ, ಸಂಗೀತ, ನೃತ್ಯ ಸೇರಿದಂತೆ ವಿವಿಧ ಪ್ರಶಸ್ತಿ ಪ್ರದಾನ ಕಾರ್ಯಕ್ರಮಗಳು, ಸರ್ಕಾರಿ ಕಾರ್ಯಕ್ರಮಗಳಲ್ಲಿ ನಿರೂಪಣೆ ಮಾಡುತ್ತಿದ್ದ ಅಪರ್ಣಾ ಅವರ ಸೌಮ್ಯವಾದ ಧ್ವನಿಯೇ ಆಕರ್ಷಣೆಯಾಗಿತ್ತು.

ಬೆಂಗಳೂರು ಮೆಟ್ರೋ ರೈಲಿನಲ್ಲಿ ಘೋಷಣೆಗಳಿಗೆ ಹಾಗೂ ಹಲವಾರು ಬಸ್‌ ನಿಲ್ದಾಣಗಳಲ್ಲಿನ ಘೋಷಣೆಗಳಿಗೆ ಅಪರ್ಣಾ ಅವರು ಧ್ವನಿ ನೀಡಿದ್ದಾರೆ. ಕನ್ನಡದ ಕೆಲವು ರಿಯಾಲಿಟಿ ಶೋಗಳಲ್ಲೂ ಭಾಗವಹಿಸಿದ್ದಾರೆ. ಕಿರುತೆರೆಗಳಲ್ಲಿ ಮೂಡಲಮನೆ, ಮುಕ್ತ ಧಾರವಾಹಿಗಳಲ್ಲಿ ನಟಿಸಿ ರಾಜ್ಯದ ಮನೆ ಮಾತಾಗಿದ್ದರು. 1998ರಲ್ಲಿ ದೀಪಾವಳಿ ಕಾರ್ಯಕ್ರಮವೊಂದನ್ನು ಸತತವಾಗಿ 8 ತಾಸುಗಳ ಕಾಲ ನಿರೂಪಣೆ ಮಾಡುವ ಮೂಲಕ ವಿಶಿಷ್ಟ ದಾಖಲೆಯನ್ನು ಅಪರ್ಣಾ ನಿರ್ಮಿಸಿದ್ದರು.

click me!