ಸಮಂತಾಳ 'ಖುಷಿ' ಚಿತ್ರಕ್ಕೆ ಪ್ರಚಾರ ಕೊಡಲು ಥೂ ಈ ಗಿಮಿಕ್ಕಾ ಎಂದು ನಾಗಚೈತನ್ಯ ಗರಂ!

By Suvarna News  |  First Published Aug 29, 2023, 4:31 PM IST

ಸಮಂತಾ ಅವರ ಖುಷಿ ಚಿತ್ರದ ಟ್ರೇಲರ್​ ಸಂದರ್ಭದಲ್ಲಿ ನಾಗಚೈತನ್ಯ ಚಿತ್ರಮಂದಿರ ಬಿಟ್ಟು ಹೋಗಿದ್ದು ನಿಜನಾ? ನಟ ಕೊಟ್ಟ ಪ್ರತಿಕ್ರಿಯೆ ಏನು? 
 


ತಾರಾ ಜೋಡಿಗಳು ಸಂಬಂಧದಲ್ಲಿದ್ದ ಎಷ್ಟು ಸುದ್ದಿಯಾಗುತ್ತದೆಯೋ, ಅವರ ವಿಚ್ಛೇದನ ಪಡೆದರೆ ಅವರ ಮೇಲೆ ಇನ್ನೂ ಹೆಚ್ಚಿಗೆ ಕಣ್ಣು ನೆಟ್ಟಿರುತ್ತದೆ. ಅಂಥ ಜೋಡಿಗಳಲ್ಲಿ ಒಂದು ನಾಗ ಚೈತನ್ಯ (Naga Chaitanya) ಹಾಗೂ ಸಮಂತಾ ರುತ್​ ಪ್ರಭು ಜೋಡಿ.  ಯೇ ಮಾಯಾ ಚೇಸಾವೆ ಸಿನಿಮಾ ಮೂಲಕ ಆತ್ಮೀಯರಾದ ನಾಗ ಚೈತನ್ಯ ಹಾಗೂ ನಟಿ ಸಮಂತಾ, ಸ್ನೇಹವನ್ನು ಪ್ರೇಮವಾಗಿ ಬದಲಾಯಿಸಿ ನಂತರ ಅದ್ಧೂರಿಯಾಗಿ ಮದುವೆಯಾದರು. ಇಬ್ಬರೂ ಕುಟುಂಬ ಸದಸ್ಯರ ಮನವೊಲಿಸಿ ಸಾಂಪ್ರದಾಯಿಕ ಹಿಂದೂ ಮತ್ತು ಕ್ರೈಸ್ತ ರೀತಿಯಲ್ಲಿ ವಿವಾಹವಾಗಿದ್ದರು.  ಮದುವೆಯ ಬಳಿಕ ಈ ಜೋಡಿ  ಸಂತೋಷದ ಕ್ಷಣಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡುತ್ತಲೇ ಇದ್ದರು. ಆದರೆ ಅದೇನಾಯಿತೋ ಗೊತ್ತಿಲ್ಲ, ಸಾಮಾಜಿಕ ಜಾಲತಾಣದ (Social Media) ಮೂಲಕವೇ  ವಿಚ್ಛೇದನ ಘೋಷಿಸಿದ್ದರು.   ಮದುವೆಯಾಗಿ ನಾಲ್ಕೇ ವರ್ಷಕ್ಕೆ ದಾಂಪತ್ಯ ಜೀವನ ಕೊನೆಗೊಳಿಸಿದ್ದರು. ಇದಾಗಿ  ಮೂರು ವರ್ಷ ಗತಿಸಿದರೂ ಜೋಡಿಯ ಬಗ್ಗೆ ಆಗಾಗ್ಗೆ ಸುದ್ದಿಯಾಗುತ್ತಲೇ ಇರುತ್ತದೆ.

ಈಗ ಅವರು ಖುಷಿ ಚಿತ್ರದ ಖುಷಿಯಲ್ಲಿದ್ದಾರೆ. ಇದಾಗಲೇ ಈ ಚಿತ್ರದ ಭರ್ಜರಿ ಪ್ರಚಾರ ನಡೆದಿದೆ. ಚಿತ್ರದ ನಾಯಕ ವಿಜಯ್​ ದೇವರಕೊಂಡ ಮತ್ತು ನಾಯಕಿ ಸಮಂತಾ ಅವರ ಜೊತೆಗಿನ ರೊಮ್ಯಾಂಟಿಕ್ ಫೋಟೋಗಳು ವೈರಲ್ ಆಗುತ್ತಿವೆ. ಸಮಂತಾ ಹಾಗೂ ವಿಜಯ್ ಅವರ ಸಿನಿಮಾದ ರೊಮ್ಯಾಂಟಿಕ್ ಹಾಡುಗಳು (Romantic Songs) ವೈರಲ್ ಆಗಿವೆ. ಸಿನಿಮಾದ ಟ್ರೈಲರ್​​ಗೂ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿರುವ ಬೆನ್ನಲ್ಲೇ,  ಖುಷಿ (Khushi) ಸಿನಿಮಾದ ನಟಿ ಸಮಂತಾ ರುತ್​ ಪ್ರಭು ತಮ್ಮ ಕ್ರಷ್​ ಎಂದು ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಇಲ್ಲಿಯವರೆಗೆ ರಶ್ಮಿಕಾ ಮಂದಣ್ಣ ಜೊತೆ ಡೇಟಿಂಗ್​ನಲ್ಲಿದ್ದ ವಿಜಯ್​ ದೇವರಕೊಂಡ ಅವರು,  ಈಗ ಸಮಂತಾ ತಮ್ಮ ಕ್ರಷ್​ ಎಂದಿದ್ದಾರೆ. ಸಾಲದು ಎನ್ನುವುದಕ್ಕೆ ಮೊನ್ನೆಯಷ್ಟೇ ಇವರ ನಡುವೆ ನಡೆದಿದ್ದ ಮಿಡ್​ನೈಟ್​ ವಿಡಿಯೋ ಕಾಲ್​ ಕೂಡ ವೈರಲ್​ ಆಗಿದೆ. ಇನ್ನೊಂದೆಡೆ ನಾಗಚೈತನ್ಯ ಹೆಸರು ನಟಿ ಶೋಭಿತಾ ಧೂಳಿಪಲ (Sobhita Dhulipala) ಅವರೊಂದಿಗೆ ತಳುಕು ಹಾಕಿಕೊಂಡಿದ್ದು ಅವರಿಬ್ಬರು ಡೇಟಿಂಗ್ ಮಾಡ್ತಿದ್ದಾರೆ ಎಂಬ ರೂಮರ್‌ಗಳಿವೆ. 

Tap to resize

Latest Videos

ವೇದಿಕೆಯಲ್ಲೇ ಸಮಂತಾ, ದೇವರಕೊಂಡ ರೊಮ್ಯಾನ್ಸ್: ಸಾಕಪ್ಪಾ ಸಾಕು ಎಂದ ಫ್ಯಾನ್ಸ್​!

ಇದರ ನಡುವೆಯೇ ಈಗ ಹೊಸ ವಿಷಯವೊಂದು ಬಂದಿದೆ. ಅದೇನೆಂದರೆ, ನಾಗಚೈತನ್ಯ ಅವರು ನಿನ್ನೆ ಸಿನಿಮಾವೊಂದರ ವೀಕ್ಷಣೆಗೆ ಥಿಯೇಟರ್‌ಗೆ ತೆರಳಿದ್ದು, ಈ ವೇಳೆ ಸಮಂತಾ  ನಟನೆಯ ಖುಷಿ ಸಿನಿಮಾದ ಟ್ರೈಲರ್ ಪ್ಲೇ ಆಗಿದೆ.  ಖುಷಿ ಟ್ರೈಲರ್ ಪ್ಲೇ (Khushi Movie Trailer) ಆಗುತ್ತಿದ್ದಂತೆ ನಾಗಚೈತನ್ಯ ಥಿಯೇಟರ್‌ನಿಂದ ಹೊರ ನಡೆದಿದ್ದಾರೆ ಎಂದು ಸುದ್ದಿಯಾಗಿದೆ. ವಿಜಯ್​ ದೇವರಕೊಂಡ ಅವರ ಮಡಿಲಿನಲ್ಲಿ ತಮ್ಮ ಮಾಜಿ ಪತ್ನಿ ಇರುವುದನ್ನು ನಾಗಚೈತನ್ಯ ಅವರಿಗೆ ನೋಡಲು ಆಗದೇ ಹೊರನಡೆದಿದ್ದಾರೆ ಎನ್ನಲಾಗಿದೆ.  ಆದರೆ ಅವರು ನಿಜವಾಗಿಯೂ ಏಕೆ ಥಿಯೇಟರ್‌ನಿಂದ ಅರ್ಧದಲ್ಲೇ ಹೊರಟು ಹೋದರು ಎಂದು ಯಾವುದೇ ಮಾಧ್ಯಮಗಳು ವರದಿ ಮಾಡಿಲ್ಲ, ಆದರೆ ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಮಂತಾ ಹಾಗೂ ನಾಗಚೈತನ್ಯ ಇಬ್ಬರ ಅಭಿಮಾನಿಗಳು ಈ ವಿಚಾರವಾಗಿ ಸೋಶಿಯಲ್ ಮೀಡಿಯಾಗಳಲ್ಲಿ ಕಚ್ಚಾಡುತ್ತಿದ್ದಾರೆ. 

ಇದು ವೈರಲ್​ ಆಗುತ್ತಿದ್ದಂತೆಯೇ ನಾಗಚೈತನ್ಯ  (Naga Chaitanya) ಅವರು ಗರಂ ಆಗಿದ್ದಾರೆ. ಟೈಮ್ಸ್ ನೌಗೆ ನೀಡಿರೋ ಸಂದರ್ಶನದಲ್ಲಿ ನಾಗಚೈತನ್ಯ ಅವರು, ಈ ತಾವು ಹೊರ ನಡೆದ ರೂಮರ್​ ಕುರಿತು ಕೆಂಡಾಮಂಡಲವಾಗಿದ್ದಾರೆ. ಇದೊಂದು ಕೆಟ್ಟ ಸಂಸ್ಕೃತಿ. ನಾನು ಹಾಗೆ ಮಾಡಲೇ ಇಲ್ಲ. ವಿನಾ ಕಾರಣ ಈ ಸುದ್ದಿ ಸೃಷ್ಟಿಸಲಾಗಿದೆ. ದಯವಿಟ್ಟು ಇಂಥ ಸುದ್ದಿಯನ್ನು ಮೊದಲು ತೆಗೆದು ಹಾಕಿ ಎಂದಿದ್ದಾರೆ. ಇದೇ ವೇಳೆ ಖುಷಿ ಚಿತ್ರತಂಡದ ವಿರುದ್ಧವೂ ಕೋಪಗೊಂಡಿರುವ ನಾಗಚೈತನ್ಯ ಅವರು ನನಗೆ ಗೊತ್ತು ಇದು ಖುಷಿ ತಂಡದ ಗಿಮಿಕ್ಕೇ. ಅದನ್ನು ನೋಡುವವರೂ ಯಾರೂ ಇಲ್ಲ. ಅದಕ್ಕಾಗಿ ಪ್ರಚಾರಕ್ಕಾಗಿ ನನ್ನನ್ನು ಎಳೆದುತರುವ ಚೀಪ್​ ಗಿಮಿಕ್​ ಮಾಡಲಾಗುತ್ತಿದೆ, ಥೂ ಎಂದು ಆಕ್ರೋಶ ಹೊರಹಾಕಿದ್ದಾರೆ. 

ಮದ್ವೆಯ ಮಾತನಾಡುತ್ತಲೇ ಸಮಂತಾ ನನ್ನ ಕ್ರಷ್​ ಎಂದ ವಿಜಯ ದೇವರಕೊಂಡ; ರಶ್ಮಿಕಾ ಶಾಕ್​!

click me!