ಸ್ತ್ರೀ 2 ಸಿನಿಮಾದ ಡಿಲೀಟೆಡ್ ಸೀನ್ ಪೋಸ್ಟ್ ಮಾಡಿದ ನಟ: ಫರ್ಹಾ ಖಾನ್ ಚಿಂದಿ ಕಾಮೆಂಟ್‌ಗೆ ನಕ್ಕು ಸುಸ್ತಾದ ನೆಟ್ಟಿಗರು

By Anusha Kb  |  First Published Aug 28, 2024, 2:14 PM IST

ಶ್ರದ್ಧಾ ಕಪೂರ್ ಹಾಗೂ ರಾಜ್‌ಕುಮಾರ್ ರಾವ್ ಅಭಿನಯದ ಸ್ತ್ರೀ 2 ಸಿನಿಮಾ ಥಿಯೇಟರ್‌ಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ.  ಹೀಗಿರುವಾಗ ಸಿನಿಮಾದಲ್ಲಿ ಡಿಲೀಟ್ ಆದ ಸೀನೊಂದನ್ನು ನಟ ರಾಜ್‌ ಕುಮಾರ್ ರಾವ್ ಅವರು ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.


ನವದೆಹಲಿ: ಶ್ರದ್ಧಾ ಕಪೂರ್ ಹಾಗೂ ರಾಜ್‌ಕುಮಾರ್ ರಾವ್ ಅಭಿನಯದ ಸ್ತ್ರೀ 2 ಸಿನಿಮಾ ಥಿಯೇಟರ್‌ಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ.  ಹೀಗಿರುವಾಗ ಸಿನಿಮಾದಲ್ಲಿ ಡಿಲೀಟ್ ಆದ ಸೀನೊಂದನ್ನು ನಟ ರಾಜ್‌ ಕುಮಾರ್ ರಾವ್ ಅವರು ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಫೋಟೋಗಳಲ್ಲಿ ನಟ ರಾಜ್‌ ಕುಮಾರ್  ಮಹಿಳೆಯಂತೆ ವೇಷ ಧರಿಸಿ ಉದ್ದವಾದ ತೆರೆದ ಕೂದಲಿನೊಂದಿಗೆ ಕಾಣಿಸಿಕೊಂಡಿದ್ದಾರೆ. ಈ ಫೋಟೋಗಳನ್ನು ಪೋಸ್ಟ್ ಮಾಡಿದ ನಟ, ಸ್ತ್ರೀ ಸಿನಿಮಾದಲ್ಲಿ ಇದೊಂದು ನನ್ನ ಇಷ್ಟದ ಸೀನ್ ಆಗಿತ್ತು. ಆದರೆ ಫೈನಲ್ ಕಟ್ ವೇಳೆ ಇದನ್ನು ಉಳಿಸಿಕೊಳ್ಳಲಾಗಲಿಲ್ಲ. ನೀವು ಈ ಸೀನ್‌ ಅನ್ನು ಸಿನಿಮಾದಲ್ಲಿ ನೋಡಲು ಬಯಸುವಿರಾ ಎಂದು  ಕ್ಯಾಪ್ಷನ್ ಬರೆದಿದ್ದಾರೆ ನಟ ರಾಜ್‌ಕುಮಾರ್ ರಾವ್, ಇದಕ್ಕೆ ಕಾಮೆಂಟ್ ಸೆಕ್ಷನ್‌ನಲ್ಲಿ ಪ್ರತಿಕ್ರಿಯೆ ನೀಡಿದ ಸಿನಿಮಾದ ನಿರ್ದೇಶಕ ಅಮರ್ ಕೌಶಿಕ್, ಕೆಲವೊಮ್ಮ ಸಿನಿಮಾದಲ್ಲಿ ಸ್ಕ್ರೀನ್‌ ಪ್ಲೇ ಕೆಲಸ ಮಾಡುವಂತೆ ಆಗಲು ನೀವು ನಿಮ್ಮ ಡಾರ್ಲಿಂಗ್ ಅನ್ನು ಹತ್ಯೆ ಮಾಡಬೇಕಾಗುತ್ತದೆ ಎಂದು ಪ್ರತಿಕ್ರಿಯಿಸಿದ್ದಾರೆ. ಆದರೆ ಇದೊಂದು ತಮಾಷೆಯ ಸೀನ್ ಆಗಿತ್ತು ಎಂಬುದನ್ನು ನಾನು ಒಪ್ಪಿಕೊಳ್ಳುತ್ತೇನೆ ಎಂದು ಪ್ರತಿಕ್ರಿಯಿಸಿದ್ದಾರೆ.

ರಾಜ್ ಕುಮಾರ್ ಅವರ ಈ ಪೋಸ್ಟ್‌ಗೆ ಕಾಮೆಂಟ್ ಸೆಕ್ಷನ್‌ನಲ್ಲಿ ಹಾಸ್ಯಮಯ ಕಾಮೆಂಟ್‌ಗಳು ತುಂಬಿ ತುಳುಕುತ್ತಿವೆ. ಅಲ್ಲದೇ ಸಿನಿಮಾದಲ್ಲಿ ರಾಜ್‌ ಕುಮಾರ್ ರಾವ್ ಅವರ ಕಾಮ್‌ ಡೌನ್ ವರ್ಷನ್‌ ಬಗ್ಗೆ ಈ ಕಾಮೆಂಟ್‌ಗಳಲ್ಲಿ ಪ್ರತಿಕ್ರಿಯಿಸಿದ ನಟಿ ಶ್ರದ್ಧಾ ಕಾಪೂರ್ ದಯವಿಟ್ಟು  ಹೌದು ವಿಕ್ಕಿ, ದಯವಿಟ್ಟು ಡಾಲ್ ದೊ ದೊ ದೊ ದೊ ಲೊ ಲೊ ಲೊ ಲೊ ಒಬ್ಬರು ಇಷ್ಟು ಸುಂದರವಾಗಿ ಕಾಣಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ. ಯಾವಾಗಲೂ ಎಲ್ಲರ ಫೋಟೋಗಳಿಗೆ ಫನ್ನಿ ಆಗಿ ಕಾಮೆಂಟ್ ಮಾಡುವ ಫರ್ಹಾ ಖಾನ್ ಕೂಡ ನಾನು ನಿಮ್ಮ ಮನೆಯಲ್ಲಿ ಆಯೋಜಿಸುವ ಮುಂದಿನ ಡಿನ್ನರ್‌ನಲ್ಲಿ ನಿಮ್ಮನ್ನು ಇದೇ ರೀತಿ ನೋಡಲು ಬಯಸುವೆ ಎಂದು ಕಾಮೆಂಟ್ ಮಾಡಿದ್ದಾರೆ. ಹಾಗೆಯೇ ನಟ ವಿಜಯ್ ವರ್ಮಾ ಕೂಡ ಕಾಮೆಂಟ್ ಮಾಡಿದ್ದು, ನಾನು ಇದನ್ನು ನೋಡುವುದಕ್ಕೆ ಹಣ ಪಾವತಿ ಮಾಡುವೆ ಎಂದಿದ್ದಾರೆ. ಹಾಗೆಯೇ ಭೂಮಿ ಪಡ್ನೆಕರ್ ಅವರು ನಾನು ಇದನ್ನು ನೋಡಲೇಬೇಕು ಎಂದು ಕಾಮೆಂಟ್ ಮಾಡಿದ್ದಾರೆ. 

Tap to resize

Latest Videos

ಬರೋಬ್ಬರಿ 5 ಕೋಟಿ ಸಂಭಾವನೆ, ಚಿತ್ರದ ಯಶಸ್ಸು, ದೇಶದ 2ನೇ ಪ್ರಬಲ ವ್ಯಕ್ತಿ ಪಟ್ಟಕ್ಕೇರಿದ ನಟಿ ಶ್ರದ್ಧಾ!

ಹಾಗೆಯೇ ಗುನಿತ್ ಮೊಂಗಾ ಅವರು ಹೌದು ನಾವು ಇದನ್ನು ನೋಡಲು ಹಣ ಪಾವತಿ ಮಾಡುತ್ತೇವೆ ಎಂದು ಪ್ರತಿಕ್ರಿಯಿಸಿದ್ದಾರೆ. ಹಾಗೆಯೇ ತೃಪ್ತಿ ದಿಮ್ರಿ ಕೂಡ ಕಾಮೆಂಟ್ ಮಾಡಿದ್ದು, ಯು ಕಿಲ್ಲಿಂಗ್ ಇಟ್ ಎಂದಿದ್ದಾರೆ. ಹುಮಾ ಖುರೇಷಿ ಕೂಡ ಪ್ರತಿಕ್ರಿಯಿಸಿದ್ದು, ಸ್ತ್ರೀ 2ನ ಡಿಲೀಟೆಡ್ ಸೀನ್ ರಿಲೀಸ್ ಮಾಡಿ ಎಂದು ಕಾಮೆಂಟ್ ಮಾಡಿದ್ದಾರೆ. 

ರಾಜ್‌ ಕುಮಾರ್ ರಾವ್‌ ಹಾಗೂ ಶ್ರದ್ಧಾ ಕಾಪೂರ್ ನಟನೆಯ ಸ್ತ್ರೀ 2 ಸಿನಿಮಾದಲ್ಲಿ ಪಂಕಜ್ ತ್ರಿಪಾಠೀ, ಅಭಿಷೇಕ್ ಬ್ಯಾನರ್ಜಿ,  ಅಪಾರಶಕ್ತಿ ಖುರಾನಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದರ ಜೊತೆಗೆ ಅಕ್ಷಯ್ ಕುಮಾರ್ ಹಾಗೂ ವರುಣ್ ಧವನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾವನ್ನು ದಿನೇಶ್ ವಿಜಾನ್ ಹಾಗೂ ಜ್ಯೋತಿ ದೇಶಪಾಂಡೆ  ಅವರು ಮಡ್ಡೊಕ್ ಪಿಲಂಸ್ ಹಾಗೂ ಜಿಯೋ ಸ್ಟುಡಿಯೋ ಅಡಿ ಜಂಟಿಯಾಗಿ ನಿರ್ಮಿಸಿದ್ದಾರೆ. 

ಸಕ್ಸಸ್‌ ನೋಡಿ ಮೆಣಸು ಇಟ್ಟಂಗಾಗ್ತಿದೆ ಅಲ್ವಾ? ಶ್ರದ್ಧಾ ಕಪೂರ್ ವಿರುದ್ಧ ಟ್ರೋಲ್‌ಗೆ ನಟಿಯ ಆಕ್ರೋಶ


 

click me!