ಇದೇ 5ರಂದು ನಟಿ ರಶ್ಮಿಕಾ ಮಂದಣ್ಣ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು, ಅವರ ಗರ್ಲ್ಫ್ರೆಂಡ್ ಆಗಮವಾಗುವ ನಿರೀಕ್ಷೆ ಇದೆ. ಯಾರೀ ಗರ್ಲ್ಫ್ರೆಂಡ್?
ನಟಿ ರಶ್ಮಿಕಾ ಮಂದಣ್ಣ ಅನಿಮಲ್ನ ಹಸಿಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಂಡ ಬಳಿಕ ಸಕತ್ ಫೇಮಸ್ ಆಗಿದ್ದಾರೆ. ಅದೇ ಇನ್ನೊಂದೆಡೆ ನಟ ವಿಜಯ್ ದೇವರಕೊಂಡ ಅವರ ಜೊತೆಗಿನ ಸಂಬಂಧದ ಬಗ್ಗೆ ಹಲವಾರು ತಿಂಗಳುಗಳಿಂದ ಸುದ್ದಿ ಓಡಾಡುತ್ತಲೇ ಇದೆ. ಇವರಿಗೆ ಬಾಲಿವುಡ್ನಲ್ಲಿಯೂ ಸಕತ್ ಬೇಡಿಕೆ ಬರುತ್ತಿದೆ. ಹಣ, ಹೆಸರು ಜೊತೆಗೆ ರಶ್ಮಿಕಾ ವಿವಾದಗಳಲ್ಲೂ ಸಿಲುಕಿದ್ದಾರೆ. ಕನ್ನಡವನ್ನು ಮರೆತಿದ್ದಾರೆ, ತಾವು ಹತ್ತಿ ಬಂದ ಏಣಿಯನ್ನೇ ಒದ್ದಿದ್ದಾರೆ ಎಂಬ ಆರೋಪ ರಶ್ಮಿಕಾ ಮೇಲಿದೆ. ಇದೇನೇ ಆದ್ರೂ, ಮೊದಲ ಸಿನಿಮಾಗೂ ಈಗಿನ ಚಿತ್ರಕ್ಕೂ ರಶ್ಮಿಕಾ ಸ್ಟೇಟಸ್ ಬಹಳ ಬದಲಾಗಿದೆ. 'ಕಿರಿಕ್ ಪಾರ್ಟಿ'ಯ ಸಾನ್ವಿ ಪಾತ್ರದಿಂದ 'ಮಿಷನ್ ಮಜ್ನು' ಚಿತ್ರದ ನಸ್ರೀನ್‌ವರೆಗೂ ರಶ್ಮಿಕಾ, ವಿಭಿನ್ನ ಪಾತ್ರಗಳು ಹಾಗೂ ಅನೇಕ ಸ್ಟಾರ್ ನಟರ ಜೊತೆ ನಟಿಸಿ ಹೆಸರು ಮಾಡಿದ್ದಾರೆ. ರಶ್ಮಿಕಾ ಚಿತ್ರರಂಗದಲ್ಲಿ 8 ವರ್ಷಗಳನ್ನು ಪೂರೈಸಿದ್ದಾರೆ. ಇದರ ಜೊತೆಗೇ ಇವರ ಮದ್ವೆ ಸುದ್ದಿ ಸದ್ದು ಮಾಡುತ್ತಲೇ ಇದೆ.
ಆದರೆ ಇದುವರೆಗೆ ರಶ್ಮಿಕಾ ಮತ್ತು ವಿಜಯ್ ಜೋಡಿ ತಮ್ಮ ರಿಲೇಷನ್ಷಿಪ್ ಮತ್ತು ಮದುವೆಯ ಬಗ್ಗೆ ಯಾವುದೇ ವಿಷಯ ಪ್ರಸ್ತಾಪ ಮಾಡುತ್ತಿಲ್ಲ. ಆದರೆ ಇದೀಗ ವಿಜಯ್ ದೇವರಕೊಂಡ ಅವರು ಸಂದರ್ಶನವೊಂದರಲ್ಲಿ ಆದಷ್ಟು ಬೇಗ ತಾವು ಮದುವೆಯಾಗುತ್ತಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಹೆಚ್ಚಿಗೆ ಅವರು ಏನನ್ನೂ ಹೇಳದೇ ಇದ್ದರೂ ರಶ್ಮಿಕಾ ಬಿಟ್ಟು ಬೇರೆ ಯಾರನ್ನೂ ಅವರು ಮದುವೆಯಾಗುವುದು ಸುಳ್ಳು ಎಂಬ ಕಾರಣದಿಂದಾಗಿಯೇ ಇವರಿಬ್ಬರ ಮದುವೆ ಶೀಘ್ರದಲ್ಲಿ ನೆರವೇರಲಿದೆ ಎಂದು ಫ್ಯಾನ್ಸ್ ಕಾತರದಿಂದ ಕಾಯುತ್ತಿದ್ದಾರೆ. ಈ ಜೋಡಿ ಹೋದಲ್ಲಿ, ಬಂದಲ್ಲಿ ಇದೇ ಪ್ರಶ್ನೆ ಎದುರಾಗುತ್ತಿದೆ. ಈ ಹಿನ್ನೆಲೆಯಲ್ಲಿ, ವಿಜಯ ದೇವರಕೊಂಡ ಮದುವೆಯ ವಿಷಯ ಪ್ರಸ್ತಾಪ ಮಾಡಿದ್ದಾರೆ. ಈ ಮೂಲಕ ರಶ್ಮಿಕಾ ಜೊತೆ ತಾವು ರಿಲೇಷನ್ಷಿಪ್ನಲ್ಲಿ ಇರುವುದು ನಿಜ ಎಂಬುದನ್ನು ಹೇಳಿದ್ದಾರೆ. ಇಷ್ಟೇ ಅಲ್ಲದೇ ಇವರಿಬ್ಬರೂ ತಮ್ಮ ತಮ್ಮ ಸೋಷಿಯಲ್ ಮೀಡಿಯಾದ ಖಾತೆಯಲ್ಲಿ ಸುಂದರ ಫೋಟೋಗಳನ್ನು ಶೇರ್ ಮಾಡಿರುವ ಹಿನ್ನೆಲೆಯಲ್ಲಿ, ಶೀಘ್ರದಲ್ಲಿಯೇ ಜೋಡಿ ಗುಡ್ ನ್ಯೂಸ್ ಕೊಡಲಿದೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.
ಸನ್ನಿ ಲಿಯೋನ್ ಮೇಲೆರಗಿದ ಹಾವು: ಜೀವ ಭಯದಿಂದ ಹಾರಿದ ನಟಿ- ವಿಡಿಯೋ ವೈರಲ್
ಅದೇನೇ ಇರಲಿ, ಸದ್ಯದಲ್ಲಿಯೇ ನಟಿ ಅಂದರೆ ಇದೇ ಏಪ್ರಿಲ್ 5ರಂದು 28ನೇ ವರ್ಷಕ್ಕೆ ಕಾಲಿಡಲಿದ್ದಾರೆ. ಈ ದಿನವೇ ಇವರ ಗರ್ಲ್ಫ್ರೆಂಡ್ ಕೂಡ ಬರಲಿದ್ದಾಳೆ ಎಂದು ಹೇಳಲಾಗುತ್ತಿದೆ. ಅಷ್ಟಕ್ಕೂ ಗರ್ಲ್ಫ್ರೆಂಡ್ ಎನ್ನುವುದು ರಶ್ಮಿಕಾ ನಟನೆಯ ಬಹು ನಿರೀಕ್ಷಿತ ಚಿತ್ರ. ಈ ಚಿತ್ರದ ಟೀಸರ್ ಇನ್ನೂ ಬಿಡುಗಡೆಯಾಗಿಲ್ಲ. ಅದನ್ನು ರಶ್ಮಿಕಾ ಅವರ ಹುಟ್ಟುಹಬ್ಬದ ದಿನ ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದೆ. ವರದಿಗಳ ಪ್ರಕಾರ, ‘ಗರ್ಲ್ಫ್ರೆಂಡ್’ ಸಿನಿಮಾ ತಂಡದಿಂದ ಹೊಸ ಟೀಸರ್ ಬಿಡುಗಡೆ ಆಗುವ ಸಾಧ್ಯತೆ ಇದೆ. ಇದು ಆಕ್ಷನ್ ಭರಿತ ಲವ್ ಸ್ಟೋರಿ ಸಿನಿಮಾ ಎಂಬ ಸುದ್ದಿ ಇದೆ. ಏಪ್ರಿಲ್ 5ರಂದು ಈ ಸಿನಿಮಾದ ಟೀಸರ್ ಬಿಡುಗಡೆ ಆದರೆ ಆಗ ಕಥಾಹಂದರದ ಬಗ್ಗೆ ಒಂದು ಸುಳಿವು ಸಿಕ್ಕಂತಾಗಲಿದೆ. ಈ ಸಿನಿಮಾ ದಕ್ಷಿಣದ ಎಲ್ಲ ಭಾಷೆಗಳಿಗೆ ಡಬ್ ಆಗಿ ಬಿಡುಗಡೆ ಆಗಲಿದೆ.
ಈ ಚಿತ್ರಕ್ಕಾಗಿ ರಶ್ಮಿಕಾ ಅವರು ಮಾರ್ಷಲ್ ಆರ್ಟ್ಸ್ ಕಲಿತಿದ್ದಾರೆ ಎನ್ನಲಾಗಿದೆ. ‘ದಿ ಗರ್ಲ್ಫ್ರೆಂಡ್’ ಎಂದ ತಕ್ಷಣ ಇದು ಅಪ್ಪಟ ಪ್ರೇಮಕಥೆಯುಳ್ಳ ಸಿನಿಮಾ ಎಂದು ಪ್ರೇಕ್ಷಕರು ಊಹಿಸುವುದು ಸಹಜ. ಆದರೆ ವಾಸ್ತವ ಆ ರೀತಿ ಇಲ್ಲವಂತೆ. ಈ ‘ದಿ ಗರ್ಲ್ಫ್ರೆಂಡ್’ ನೀವಂದುಕೊಂಡ ರೀತಿಯಲ್ಲಿ ಇಲ್ಲ. ಈ ಸಿನಿಮಾದ ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ ರಶ್ಮಿಕಾ ಮಂದಣ್ಣ ಅವರು ಫೈಟಿಂಗ್ ಕೂಡ ಮಾಡಲಿದ್ದಾರೆ. ಅಂದಹಾಗೆ ಇದರ ಶೂಟಿಂಗ್ ಹೈದರಾಬಾದ್ನ ಹೊರವಲಯದಲ್ಲಿ ನಡೆದಿದೆ. ಮುಂಬೈ, ಬೆಂಗಳೂರು ಮುಂತಾದ ನಗರಗಳಲ್ಲಿ ‘ಅನಿಮಲ್’ ಸಿನಿಮಾದ ಪ್ರಮೋಷನ್ ಮಾಡಿದ ಬಳಿಕ ರಶ್ಮಿಕಾ ಮಂದಣ್ಣ ಅವರು ನೇರವಾಗಿ ‘ದಿ ಗರ್ಲ್ಫ್ರೆಂಡ್’ ಸಿನಿಮಾದ ಶೂಟಿಂಗ್ ಸೆಟ್ಗೆ ಬಂದಿದ್ದರು. ಮೊದಲ 20 ದಿನದ ಚಿತ್ರೀಕರಣದಲ್ಲಿ ಆ್ಯಕ್ಷನ್ ದೃಶ್ಯಗಳನ್ನು ಶೂಟ್ ಮಾಡಿರುವ ನಟಿ, ಸಾಹಸ ಮೆರೆದಿದ್ದಾರೆ. ಇದರಿಂದ ಈ ಚಿತ್ರದಲ್ಲಿ ಇವರು ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳದ್ದು.
ಪ್ರಶಸ್ತಿಯನ್ನೇ ಹರಾಜು ಮಾಡಿದ ವಿಜಯ್ ದೇವರುಕೊಂಡ: ಅಷ್ಟಕ್ಕೂ ನಟ ಹೇಳಿದ್ದೇನು ಕೇಳಿ...